BBK9 ಬಿಗ್ ಬಾಸ್ ಮನೆಯಿಂದ ಸೈಕ್ ನವಾಜ್ ಔಟ್; ಜೀವನದ ಪಾಠ ಹೇಳಿದ ಕಿಚ್ಚ!

Published : Oct 09, 2022, 10:31 PM IST
BBK9 ಬಿಗ್ ಬಾಸ್ ಮನೆಯಿಂದ ಸೈಕ್ ನವಾಜ್ ಔಟ್; ಜೀವನದ ಪಾಠ ಹೇಳಿದ ಕಿಚ್ಚ!

ಸಾರಾಂಶ

ಬಿಬಿ ಮನೆಯಿಂದ ನವಾಜ್ ಎಲಿಮಿನೇಟ್. ಹೊರಗಡೆ ಶುರುವಾಯ್ತು ಅಬ್ಬರ....

ಬಿಗ್ ಬಾಸ್ ಸೀಸನ್ 9 ಎರಡನೇ ವಾರ ಮುಕ್ತಾಯವಾಗಿದೆ. ಇಂದು ನಡೆದ ಎಲಿಮಿನೇಷನ್‌ನಲ್ಲಿ ಸೈಕ್ ನವಾಜ್ ಹೊರ ಬಂದಿದ್ದಾರೆ. ಮೊದಲ ವಾರಕ್ಕೂ ಎರಡನೇ ವಾರಕ್ಕೂ ಸಂಪೂರ್ಣ ಬದಲಾಗಿರುವ ನವಾಜ್‌ ಉಳಿದುಕೊಳ್ಳಲು ಮತ್ತೊಂದು ಅವಕಾಶ ನೀಡಬೇಕಿತ್ತು ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಮನೆಯಿಂದ ಹೊರ ಬರುವಾಗ ವಿಶೇಷ ಪವರ್ ಬಳಸಿಕೊಂಡು ಬಂದಿದ್ದಾರೆ.

'ಜನರಿಗೆ ನಾನು ಇಷ್ಟ ಅಗಿರುವುದಿಲ್ಲ ನನ್ನ ಕ್ಯಾರೆಕ್ಟರ್ ಇಷ್ಟ ಆಗಿಲ್ಲ ಅನ್ಸುತ್ತೆ. ಮನೆಯಲ್ಲಿ ಉಳಿದುಕೊಳ್ಳು ಕಷ್ಟ ಆಯ್ತು ಜನರನ್ನು ಹೇಗೆ ಮಾತನಾಡಿಸಬೇಕು ಯಾವ ಸಮಯ ಸಂದರ್ಭದಲ್ಲಿ ಇರಬೇಕು ಎಂದು ಜೀವನದಲ್ಲಿ ಪಾಠ ಕಲಿತಿರುವೆ. ಮೊದಲ ವಾರ ಜನರು ಸೇಫ್ ಮಾಡಿದ್ದಾರೆ. ಎರಡನೇ ವಾರ ಟಾಸ್ಕ್‌ ಮಾಡಲು ಅವಕಾಶ ಸಿಕ್ಕಿಲ್ಲ ಇದೇ ನನಗೆ ದೊಡ್ಡ ಮೈನ್ಸ್‌. ಈಗ ಬಿಗ್ ಬಾಸ್‌ ಮನೆ ಮಿಸ್ ಮಾಡಿಕೊಳ್ಳುತ್ತಿರುವೆ. ಈ ಸೀಸನ್‌ನಲ್ಲಿ ಅರುಣ್ ಸಾಗರ್, ರಾಕೇಶ್ ಅಡಿಗ ಮತ್ತು ರೂಪೇಶ್‌ ಟಾಪ್ 3 ಸ್ಥಾನದಲ್ಲಿ ನಿಲ್ಲುತ್ತಾರೆ. ಈ ವೇದಿಕೆ ಮೇಲೆ ನನ್ನ ತಂದೆಗೆ ಕ್ಷಮೆ ಕೇಳಬೇಕು ಅಪ್ಪ ಇಲ್ಲಿ ನಾನು ಸಾಧನೆ ಮಾಡಿಲ್ಲ ಆದರೆ ಹೊರಗಡೆ ಏನಾದರೂ ಸಾಧನೆ ಮಾಡೇ ಮಾಡುತ್ತೀನಿ' ಎಂದು ವೇದಿಕೆ ಮೇಲೆ ಕಿಚ್ಚ ಸುದೀಪ್‌ ಜೊತೆ ನವಾಜ್ ಮಾತನಾಡಿದ್ದಾರೆ.

'ಬಿಗ್ ಬಾಸ್ ದಿನ ನೋಡುತ್ತಿದ್ದೆ. ನವಾಜ್‌ಗೆ ವೋಟ್ ಹಾಕಿದ ಪ್ರತಿಯೊಬ್ಬರಿಗೂ ನಾನು ಥ್ಯಾಂಕ್ಸ್‌ ಹೇಳುವೆ. ಅರುಣ್ ಸಾಗರ್ ಅವರಿಗೆ ಥ್ಯಾಂಕ್ಸ್‌ ಹೇಳಬೇಕು' ಎಂದು ನವಾಜ್ ತಂದೆ ಮಾತನಾಡಿದ್ದಾರೆ. 'ನವಾಜ್ ಅನ್ನೋ ಸ್ಪರ್ಧಿ ಇದ್ದಾರೆ ಅವರಲ್ಲಿ ಟ್ಯಾಲೆಂಟ್ ಇದೆ ಅನ್ನೋದನ್ನ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ. ನಿಮಗೆ ಆಲ್‌ ದಿ ಬೆಸ್ಟ್ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ. ಜೀವನದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ನೀವು ಏನು ಕೋಪ ಬದಲಾಯಿಸಿಕೊಂಡು ಬಂದಿದ್ದೀರಿ ಅದನ್ನು ಉಳಿಸಿಕೊಳ್ಳಿ ಜೀವನದಲ್ಲಿ ಪ್ರೀತಿ ಮತ್ತು ತಾಳ್ಮೆ ಬಹಳ ಮುಖ್ಯ' ಎಂದು ಸುದೀಪ್ ಸಲಹೆ ಕೊಟ್ಟಿದ್ದಾರೆ.

ಬಿಬಿ ಮನೆಯಿಂದ ಹೊರ ಬರುವಾಗ ಅಮೂಲ್ಯ ಗೌಡರನ್ನು ನೇರವಾಗಿ 3ನೇ ವಾರಕ್ಕೆ ನಾಮಿನೇಟ್ ಮಾಡಿದ್ದಾರೆ.

ಕಣ್ಣೀರಿಟ್ಟ ನವಾಜ್:

ವೀಕೆಂಡ್ ಆರಂಭವಾಗುವ ಮುನ್ನ ರೂಪೇಶ್ ಶೆಟ್ಟಿ ತಂದೆಯ ಬಗ್ಗೆ ಹಾಡು ಬರೆಯುತ್ತಾರೆ. ಪ್ರತಿಯೊಬ್ಬರೂ ಭಾವುಕರಾಗುತ್ತಾರೆ ಮನಸ್ಸಿನಲ್ಲಿ ತಂದೆಯನ್ನು ನೆನಪಿಸಿಕೊಂಡು ಸುಮ್ಮನಾಗುತ್ತಾರೆ. ಆದರೆ ಸೈಕ್ ನವಾಜ್ ಮಾತ್ರ ಒಂದು ಮೂಲೆಯಲ್ಲಿ ಕುಳಿತುಕೊಂಡು ಕಣ್ಣೀರಿಡುತ್ತಾರೆ. ಇದನ್ನು ಗಮನಿಸಿದ ನೇಹಾ ಗೌಡ ಮತ್ತು ರೂಪೇಶ್ ಮಾತನಾಡಿಸುವ ಪ್ರಯತ್ನ ಮಾಡುತ್ತಾರೆ. ಆಗ ತಂದೆ ಮಾಡಿರುವ ತ್ಯಾಗ, ಶ್ರಮ ನೆನಪಿಸಿಕೊಳ್ಳುತ್ತಾರೆ ನವಾಜ್.

BBK9 100 ಚಡ್ಡಿ ಕೊಡ್ಸು ಅಂದ್ರೆ ಬರೀ 6 ಚಡ್ಡಿ ಕೊಡ್ಸಿದ್ದಾರೆ ನಮ್ಮಪ್ಪ: ಸೈಕ್ ನವಾಜ್

ರೂಪೇಶ್: ಯಾಕೆ ಅಳುತ್ತಿರುವೆ? ಇಷ್ಟೊಂದು ಒಳ್ಳೆಯ ಮನಸ್ಸು ಇದೆ ನಿನಗೆ. ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಅಪ್ಪಂಗೆ ಒಂದು hug ಕೊಡಬೇಕು. ಐ ಲವ್ ಯು ಅಪ್ಪ ಅಂತ ಹೇಳಬೇಕು ಅಷ್ಟೆ.
ನೇಹಾ ಗೌಡ: ಮೊನ್ನೆ ಹೇಳುತ್ತಿದ್ದರು ಅವರ ಅಪ್ಪ ಎಷ್ಟು ಕಷ್ಟ ಪಡುತ್ತಾರೆ ಏನೆಲ್ಲಾ ಮಾಡುತ್ತಾರೆ ಅಂತ ಪಾಪ.
ನವಾಜ್: ಜೀವನದಲ್ಲಿ ಎಷ್ಟೇ ಕಷ್ಟ ಬಂದ್ರೂ...ನಮ್ಮ ಅಪ್ಪ ಯಾವಾಗ ಸಾಯ್ತಾರೆ ಗೊತ್ತಿಲ್ಲ ಆದರೆ ಸಾಯೋವರೆಗೂ ಮಸ್ತಾಗಿ ರಾಜನ ತರ ನೋಡಿಕೊಳ್ಳಬೇಕು.
ವಿನೋದ್: ನಿಮ್ಮ ತಂದೆ ಕೂಡ ನಿನ್ನನ್ನು ರಾಜನ ತರ ಸಾಕಿದ್ದಾರೆ. ನೀನು ರಾಜನೇ ಅಂದುಕೊಂಡಿರುವುದು ಅವ್ರುನೂ. ನನ್ನ ಮಗ ರಾಜ ಅಂತ ಯಾವತ್ತಿದ್ದರೂ ಒಬ್ಬ ಅಪ್ಪನೇ ಹೇಳೋದು.
ನೇಹಾ ಗೌಡ: ಎಷ್ಟು ಕ್ಯೂಟ್ ಆಗಿ ನವಾಜ್ ಅಳುತ್ತಾನೆ ನೋಡಿ.
ರೂಪೇಶ್: ಚುಚ್ಚುತ್ತೀನಿ ಕೊಚ್ಚುತ್ತೀನಿ ಅಂತಾನೆ ಅಪ್ಪನ ಬಗ್ಗೆ ಹೇಳಿದ ತಕ್ಷಣ ಅಳುತ್ತಾನೆ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!