ಸತ್ಯಾ ಸೀರಿಯಲ್‌ನಲ್ಲಿ ಅಮೂಲ್ ಬೇಬಿ ವರ್ತನೆ ಬದಲಾಗಿದೆ. ಸತ್ಯಾಳನ್ನ ಕಂಡರೆ ಮುಖ ತಿರುಗಿಸುತ್ತಿದ್ದ ಕಾರ್ತಿಕ್ ಈಗ ಮಾದರಿ ಗಂಡ ಆಗಿ ಬದಲಾಗ್ತಿದ್ದಾನೆ. ಪೀರೆಯೆಡ್ಸ್ ವೇಳೆ ಗಂಡ ತನ್ನ ಹೆಂಡ್ತಿ ಜೊತೆ ಹೇಗಿರ್ಬೇಕು ಅನ್ನೋದನ್ನು ಕಾರ್ತಿಕ್ ನೋಡಿ ಕಲೀಬೇಕು ಅಂತಿದ್ದಾರೆ ಫ್ಯಾನ್ಸ್. ಜೊತೆಗೆ ಪೀರಿಯಡ್ಸ್ ಬಗ್ಗೆ ಮುಜುಗರ ಬೇಡ, ಅದು ನಿಸರ್ಗ ಸಹಜ ಕ್ರಿಯೆ ಅನ್ನೋದನ್ನೂ ಈ ಸೀರಿಯಲ್ ಹೇಳಲಿಕ್ಕೆ ಹೊರಟಿದೆ.
ಸತ್ಯಾ ಸೀರಿಯಲ್ ದಿನೇ ದಿನೇ ಹೊಸ ಬಗೆಯಲ್ಲಿ ಮೂಡಿಬರುತ್ತಿದೆ. ಅದರಲ್ಲೂ ಈಗ ಬರ್ತಿರೋ ಎಪಿಸೋಡ್ ಅಂತೂ ಎಲ್ಲರ ಮನ ಗೆದ್ದಿದೆ. ಪೀರಿಯೆಡ್ಸ್ ಟೈಮಲ್ಲಿ ಗಂಡ ತನ್ನ ಹೆಂಡತಿ ಜೊತೆಗೆ ಹೇಗಿರ್ಬೇಕು ಅನ್ನೋದನ್ನು ಕಾರ್ತಿಕ್ ಮತ್ತು ಸತ್ಯಾ ಪಾತ್ರಗಳ ಮೂಲಕ ತೋರಿಸಿದ್ದಾರೆ. ಸತ್ಯಾ ಮತ್ತು ಕಾರ್ತಿಕ್ ಮದುವೆ ನಡೆದಿದ್ದು ಆಕಸ್ಮಿಕವಾಗಿ. ಇದಕ್ಕೂ ಮೊದಲು ಕಾರ್ತಿಕ್ ಮದುವೆ ದಿವ್ಯಾ ಜೊತೆಗೆ ಫಿಕ್ಸ್ ಆಗಿತ್ತು. ಆದರೆ ಹಣಕ್ಕಾಗಿ ಹಾತೊರೆಯುವ ದಿವ್ಯಾನೂ ತಾನು ಪ್ರೀತಿಸುತ್ತಿದ್ದ ಬಾಲುವನ್ನು ಬಿಟ್ಟು ಆಸ್ತಿ, ಐಷಾರಾಮಕ್ಕಾಗಿ ಕಾರ್ತಿಕ್ ನನ್ನು ಮದುವೆ ಆಗಲು ಮುಂದಾಗಿದ್ದಳು. ಈ ವೇಳೆ ವಿಧಿ ಇಲ್ಲದೇ ಬಾಲು ತಾನು ಶ್ರೀಮಂತನ ಹಾಗೆ ನಾಟಕ ಆಡಿದ್ದ. ಆದರೆ ಒಂದು ಹಂತದ ನಂತರ ದಿವ್ಯಾ ಬಾಲು ಹಳ್ಳಿಗೆ ಹೋಗಿ ನೆಲೆಸಬೇಕಾಯ್ತು. ಅಲ್ಲಿ ದಿವ್ಯಾ ಪಡುತ್ತಿರುವ ಕಷ್ಟ ಅಷ್ಟಿಷ್ಷಲ್ಲ. ಇನ್ನೊಂದೆಡೆ ಅತ್ತೆ, ಗಂಡ, ಅತ್ತಿಗೆಯ ವಿರೋಧದ ನಡುವೆ ಸತ್ಯಾ ಕಾರ್ತಿಕ್ ಮನೆಗೆ ಬರುತ್ತಾಳೆ. ಬಹಳಷ್ಟು ಕಾಲ ಅತ್ತೆಯ ಕಟು ಮಾತಿಗೆ ನೋಯುತ್ತಾ, ತನ್ನದಲ್ಲದ ತಪ್ಪಿಗೆ ಗಂಡನಿಂದ ಬೈಯಿಸಿಕೊಳ್ಳುತ್ತಾ ಬದುಕುತ್ತಾಳೆ. ಆದರೆ ಯಾವಾಗ ಅತ್ತೆ ಅವಳಿಂದ ಡಿವೋರ್ಸ್ ಪೇಪರ್ ಗೆ ಸಹಿ ಹಾಕಿಸಿದ್ರೂ ಆಗಿನಿಂದ ಅವಳ ವರ್ತನೆ ಬದಲಾಗಿದೆ. ಮಾವನ ಬೆಂಬಲ ಜೊತೆ ಅವಳೀಗ ಗಂಡನ ಮನಸ್ಸನ್ನೂ ಗೆದ್ದಿದ್ದಾಳೆ.
ಸತ್ಯಾಳನ್ನು ಕಂಡಾಗ ಉರಿದು ಬೀಳುತ್ತಿದ್ದ ಅಮೂಲ್ ಬೇಬಿ ಕಾರ್ತಿಕ್ ಈಗ ಸಂಪೂರ್ಣ ಬದಲಾಗಿದ್ದಾನೆ. ಅವಳ ಬೆಂಬಲಕ್ಕೆ (Support) ನಿಲ್ಲುತ್ತಾನೆ. ಅವಳ ಸಹಾಯಕ್ಕೂ ಬರುತ್ತಾನೆ. ಈ ಸಲದ ಎಪಿಸೋಡ್‌ನಲ್ಲಂತೂ ಅಮೂಲ್ ಬೇಬಿ ಬಿಹೇವಿಯರ್ (Behaviour) ಕಂಡ ಜನ ಶಬ್ಬಾಸ್ ಮಗನೇ, ಇದ್ರೆ ನಿನ್ ಥರ ಇರ್ಬೇಕು ಅಂತಿದ್ದಾರೆ. ಸದಾ ಹರಳೆಣ್ಣೆ ಕುಡಿದವನ ಹಾಗಿರ್ತಾನೆ ಕಾರ್ತಿಕ್ ಅಂತ ದೂರುತ್ತಿದ್ದವರೂ ಕಾರ್ತಿಕ್‌ನಲ್ಲಾಗಿರುವ ಹೊಸ ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ಇದರಲ್ಲಿ ಸತ್ಯಾಗೆ ಪೀರಿಯಡ್ಸ್ ನೋವು (Periods Pain). ಬೆನ್ನುನೋವು (Back Pain), ಸೊಂಟನೋವು, ಹೊಟ್ಟೆನೋವಲ್ಲಿ ಮಲಗಲೂ ಆಗದೇ ಕೂರಲೂ, ಆಗದೇ ಸತ್ಯಾ ಒದ್ದಾಡುತ್ತಿದ್ದಾಗ ಕಾರ್ತಿಕ್ ಗೆ ಗಾಬರಿ ಆಗುತ್ತೆ. ಅವಳಿಗೆ ಹುಷಾರಿಲ್ಲ ಅಂದುಕೊಂಡು ಡಾಕ್ಟರ್ ಹತ್ರ ಹೋಗಲು ಒತ್ತಾಯಿಸುತ್ತಾನೆ. ಕೊನೆಗೂ ಆತನಿಗೆ ಸತ್ಯಾ ತನಗೆ ಪಿರಿಯಡ್ಸ್ ಆಗಿರೋದನ್ನು ಮುಜುಗರದಲ್ಲೇ ಹೇಳ್ತಾಳೆ, ಆ ಕ್ಷಣಕ್ಕೆ ಸಿಟ್ಟಾದಂತೆ ಕಂಡರೂ ಮರುಕ್ಷಣ ಸತ್ಯಾಗೆ ಸ್ಯಾನಿಟರಿ ಪ್ಯಾಡ್ (Sanitary Pad), ತಿಂಡಿ ಎಲ್ಲ ತಂದುಕೊಡ್ತಾನೆ ಕಾರ್ತಿಕ್. ಪೀರಿಯಡ್ಸ್ ಸಹಜ ಕ್ರಿಯೆ. ಅದರ ಬಗ್ಗೆ ಮುಜುಗರ ಪಡೋದ್ಯಾಕೆ? ಅಕ್ಕ ತಂಗಿಯರ ಜೊತೆಗೆ ಬೆಳೆದ ತನಗೆ ಆ ಕಷ್ಟದ ಬಗ್ಗೆ ಗೊತ್ತು ಅನ್ನುತ್ತಾ ಸಂಪೂರ್ಣ ಬದಲಾದವನ ಹಾಗೆ ಮಾತಾಡ್ತಾನೆ.
ಸೀದೋಗಿರೋ ಚಿಕನ್: Niveditha Gowda ಅಡುಗೆ ನೋಡಿ ತಲೆ ಸುತ್ತಿಬಿದ್ದ ಪತಿ ಚಂದನ್ ಶೆಟ್ಟಿ?
ಕಾರ್ತಿಕ್ ತನ್ನ ಬಗ್ಗೆ ಇಷ್ಟೊಂದು ಕಾಳಜಿಯಿಂದ ನಡೆದುಕೊಳ್ತಿರೋದು ಸತ್ಯಾಗೆ ಆತನ ಮೇಲೆ ಹೆಚ್ಚೆಚ್ಚು ಲವ್ವಾಗೋ (Love) ಹಾಗಾಗಿದೆ. ಅಜ್ಜಿ ಹತ್ರ ಮಾತಾಡಿ ಕಷಾಯ ಮಾಡಿಕೊಡು ಅಂತ ಕೇಳ್ತಾಳೆ. ಕಾರ್ತಿಕ್‌ಗೆ ಇದೆಲ್ಲ ಹೊಸತು. ಮನಸ್ಸಿಲ್ಲದ ಮನಸ್ಸಿಂದ ಕಷಾಯ ಮಾಡಿಕೊಡುತ್ತಾನೆ. ಆದರೆ ಅಜ್ಜಿ ಗಿರಿಜಮ್ಮ ಹೇಳಿದಂತೆ ಅದನ್ನು ಸತ್ಯಾಗೆ ಕುಡಿಸೋಕೆ ಮುಜುಗರ ಪಡ್ತಾನೆ. ಆದರೆ ರೌಡಿ ಬೇಬಿ ಸತ್ಯಾ ಅವನಿಂದ ಕಷಾಯ ಕುಡಿಸಿಕೊಳ್ತಾಳೆ. ಜೊತೆಗೆ ರೊಮ್ಯಾಂಟಿಕ್ (Romantic) ಆಗಿ ಬಿಹೇವ್ ಮಾಡ್ತಾಳೆ. ಎಲ್ಲವನ್ನೂ ಡೈರೆಕ್ಟ್ ಆಗಿಯೇ ಹೇಳುವ ಸತ್ಯಾ 'ಐ ಲವ್ ಯೂ' ಅನ್ನೋದನ್ನೂ ಓಪನ್ ಆಗಿಯೇ ಹೇಳ್ತಾಳೆ. ಆದರೆ ಇದಕ್ಕೆಲ್ಲ ಗುರ್ರ್ ಅನ್ನೋ ಕಾರ್ತಿಕ್ ಇನ್ನೂ ಬಾಬ್ ಕಟ್‌ನ ರೌಡಿ ಬೇಬಿಯ ಪ್ರೀತಿ ಒಪ್ಕೊಳ್ಳೋದಕ್ಕೆ ರೆಡಿ ಇಲ್ಲ. ಆದರೆ ಸತ್ಯಾನೂ ಬಿಡ್ತಿಲ್ಲ.
ಸಣ್ಣಗಿದ್ದೆ ಎಂದು ಸ್ಕೂಲಲ್ಲಿ ಹ್ಯಾಂಗರ್ ಎನ್ನುತ್ತಿದ್ದರು: Body Shamming ಬಗ್ಗೆ ತೇಜಸ್ವಿ ಮಾತು
ಸತ್ಯಾ ಪಾತ್ರದಲ್ಲಿ ಗೌತಮಿ ಜಾಧವ್, ಕಾರ್ತಿಕ್ ಪಾತ್ರದಲ್ಲಿ ಸಾಗರ್ ಬಿಳೆಗೌಡ, ಅಜ್ಜಿ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟಿಸುತ್ತಿದ್ದಾರೆ.