ಡವ್ ರಾಜಾ- ಕಳ್ ಸ್ವಾಮಿಜೀ: Sonu Gowda ವಿರುದ್ಧ ತಿರುಗಿ ಬಿದ್ದ ಆರ್ಯವರ್ಧನ್ ಗುರೂಜೀ

Published : Sep 13, 2022, 12:24 PM IST
ಡವ್ ರಾಜಾ- ಕಳ್ ಸ್ವಾಮಿಜೀ: Sonu Gowda ವಿರುದ್ಧ ತಿರುಗಿ ಬಿದ್ದ ಆರ್ಯವರ್ಧನ್ ಗುರೂಜೀ

ಸಾರಾಂಶ

ಸೋನು ಶ್ರೀನಿವಾಸ್‌ ಗೌಡ ಬಾಯಿಗೆ ಬೀಗ ಹಾಕುವರಿಲ್ಲವೇ? ಸೋನು ನಡವಳಿಕೆ ಸರಿ ಇಲ್ಲ ಎಂದ ಗರಂ ಆದ ನೆಟ್ಟಿಗರು...

ಬಿಗ್ ಬಾಸ್ ಓಟಿಟಿ (Bigg boss Ott) ಫಿನಾಲೆ ವಾರಕ್ಕೆ ಟ್ರೋಲ್ ಕ್ವೀನ್ ಮಾತಿನ ಮಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎಂಟ್ರಿ ಕೊಟ್ಟಿದ್ದಾರೆ. ಫಿನಾಲೆ ಟ್ರೋಫಿ ಹಿಡಿಯುವ ಹಕ್ಕಿರುವ ನಂದಿನಿ ಮನೆಯಿಂದ ಹೊರ ಬಂದ ನಂತರ ಬಿಬಿ ನಡೆಯುತ್ತಿರುವ ರೀತಿ ಮೇಲೆ ನೆಟ್ಟಿಗರಿಗೆ ಬೇಸರವಿದೆ. ಸೋನು ಗೌಡ ಟ್ರೋಪ್‌ ಪೇಜ್‌ಗಳಲ್ಲಿ ಹಾವಳಿ ಹೆಚ್ಚಿಸುತ್ತಿರಬಹುದು ಆದರೆ ಇನ್ನಿತ್ತರ ಸ್ಪರ್ಧಿಗಳ ಜೊತೆ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಬೇಸರ ವ್ಯಕ್ತ ಆಗುತ್ತಿದೆ. ಆರ್ಯವರ್ಧನ್‌ ಗುರೂಜೀ (Aryavardhan Guruji) ಕಳ್ ಸ್ವಾಮಿಜೀ ಎಂದಿದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಆರ್ಯವರ್ಧನ್‌ ಗುರೂಜೀಗೆ  ರೂಪೇಶ್‌ (Roopesh) ಎಣ್ಣೆ ಹಾಕಿ ತಲೆ ಮತ್ತು ಬಾಡಿ ಮಸಾಜ್ ಮಾಡುತ್ತಿರುವಾಗ ಸೋನು ಡೌವ್ ರಾಜಾ ಎಂದು ಕಾಲೆಳೆಯುತ್ತಾರೆ. ತಮಾಷೆಯನ್ನು ಸ್ವೀಕರಿಸಿದ ಆರ್ಯವರ್ಧನ್ ಈ ರೀತಿ ಮಾತನಾಡಬೇಡ ಮನೆ ಹಾಳು ಮಾಡುತ್ತದೆ ಇಲ್ಲಿ ಮಾತ್ರವಲ್ಲ ಹೊರಗಡೆನೂ ಹುಷಾರಾಗಿರಬೇಕು ನೀನು. ನೀನು ಹುಟ್ಟುವಾಗ ಬ್ರಹ್ಮಾ ಏನು ಮಾಡುತ್ತಿದ್ದಾ? ನಾಲಿಗೆ ತನಕ ಬರಲೇ ಇಲ್ಲ ಅನಿಸುತ್ತದೆ ಎಂದು ಹೇಳುತ್ತಾರೆ. ಮಾತನ್ನು ಅಲ್ಲಿಗೆ ನಿಲ್ಲಿಸಿದ ಸೋನು ಹಾಗಿದ್ರೆ ನಿಮ್ಮನ್ನು ನಾನು ಕಳ್ ಸ್ವಾಮಿಜೀ ಎಂದು ಕರೆಯಬೇಕು ಎನ್ನುತ್ತಾಳೆ. 

ಸೋನು ಗೌಡ ಮಾತುಗಳು ಅರ್ಯವರ್ಧನ್‌ ವೃತ್ತಿ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಒಂದು ಪದ ಸೋನು ಹೇಳುತ್ತಿದ್ದಂತೆ ಅಲ್ಲಿದ್ದ ಸಾನ್ಯಾ ಐಯ್ಯರ್ (Sanya Iyer), ಜಯಶ್ರೀ (Jayashree Ardhya) ಮತ್ತು ರೂಪೇಶ್ ಬೇಸರ ವ್ಯಕ್ತ ಪಡಿಸುತ್ತಾರೆ. 'ಸೋನು ಹಾಗೆ ಮಾತನಾಡಬಾರದು ಅವರಿಗೆ ಬೇಸರ ಅಗಿದೆ ಅವರು ನೊಂದಿದ್ದಾರೆ ಕ್ಷಮೆ ಕೇಳು ಎಂದು' ಸಾನ್ಯಾ ಹೇಳಿದ್ದರೂ 'ನೀನು ಸುಮ್ಮನೆ ಇರುವ ಸಾನ್ಯಾ ಎಲ್ಲಾ ವಿಚಾರದ ಬಗ್ಗೆನೂ ಮಾತನಾಡಬೇಡ. ಇಲ್ಲಿ ಅವರಿಗೆ ಏನೂ ಅನಿಸಿಲ್ಲ ನೀವು ತುಪ್ಪ ಹಾಕುತ್ತಿದ್ದೀರಾ. ಅವರು ಎಲ್ಲರ ಜೊತೆ ಹೀಗೆ ಮಾತನಾಡುವುದು ಅದಿಕ್ಕೆ ನಾನು ಅವರ ಜೊತೆ ಹೀಗೆ ಮಾತನಾಡಿದ್ದು. ಅವರು ಮಾತನಾಡಿರುವುದನ್ನು ನೀವು ಕೇಳಿದ್ದರೆ ನಿಮಗೆ ತಲೆ ಕೆಡುತ್ತೆ' ಎಂದು ಸೋನು ಹೇಳುತ್ತಾಳೆ.

ಇಟ್ಕೊಂಡಿಲ್ಲ ಬಿಡೋಕೆ ಲವ್‌ನಿಂದ ಏನ್ ಸಿಗುತ್ತೆ ಅಸಹ್ಯ: ಕನಸಿನ ರಾಜನ ಬಗ್ಗೆ ಸೋನು ಗೌಡ ಟ್ವಿಸ್ಟ್‌

'ನೀನು ಮಾತನಾಡಿದ್ದು ಸರಿ ಇಲ್ಲ ಇದರಿಂದ ನನ್ನ ಫಾಲೋವರ್ಸ್ ಬೇಸರ ಮಾಡಿಕೊಳ್ಳುತ್ತಾರೆ. ಅವರು ನೊಂದಿಕೊಳ್ಳುತ್ತಾರೆ. ನನ್ನ ಬದುಕು ಇರುವುದೇ ಇದರಲ್ಲಿ. ಒಬ್ರು ಬಂದ್ರೆ ಮಾತನಾಡಿ ಕಳುಹಿಸಬೇಕು ಆಮೇಲೆ ಮತ್ತೊಬ್ಬರು ಬರುತ್ತಾರೆ ಅವರನ್ನು ಮಾತನಾಡಿಸಬೇಕು ಹೀಗಾಗಿ ಏನೇ ಇದ್ದರೂ ನೋಡಿಕೊಂಡು ಮಾತನಾಡುತ್ತೀನಿ. ನೀನು ಬಳಸುವ ಪದಗಳು ಸರಿಯಿಲ್ಲ ನಾನು ಯಾರ ಜೊತೆನೂ ನಿನ್ನ ರೀತಿ ಮಾತನಾಡಿಲ್ಲ ರೂಪೇಶ್‌ ಏನೋ ಹೇಳಿದ್ದಾಗ ನಾನು ಬೇಡ ಮಾತನಾಡಬಾರದು ಅವನನ್ನು ನನ್ನ ಮನಗ ರೀತಿ ನೋಡುತ್ತಿರುವ ಅಂದುಕೊಂಡು ಸುಮ್ಮನೆ ಆಗಿದ್ದೀನಿ' ಎಂದು ಅರ್ಯವರ್ಧನ ಗುರೂಜೀ ಬೇಸರದಲ್ಲಿ ಮಾತನಾಡುತ್ತಾರೆ. 

ಜಯಶ್ರೀ ಮತ್ತು ಸಾನ್ಯಾ ಕ್ಷಮೆ ಕೇಳುವಂತೆ ಒತ್ತಾಯ ಮಾಡುತ್ತಾರೆ. 'ಆಯ್ತು ಬಿಡಿ ಗುರೂಜೀ ಕ್ಷಮೆ ಕೇಳುತ್ತೀನಿ ತಪ್ಪಾಯ್ತು' ಎಂದು ಹೇಳುತ್ತಾರೆ. ಸಾನ್ಯಾ ಬೇಸರ ವ್ಯಕ್ತ ಪಡಿಸಿದ್ದಾಗ 'ಯೇ ಶ್ ಶ್' ಎಂದು ಹೇಳುತ್ತಾರೆ. ಈ ಪದಗಳನ್ನು ಕೇಳಿ ಕೋಪ ಮಾಡಿಕೊಂಡು ಸಾನ್ಯಾ 'ಏನ್ ನನ್ನ ಶ್ ಶ್ ಅಂತೀಯಾ? ನಾನೇನು ನಿಮ್ಮ ಮನೆ ನಾಯಿ ನಾ? ಶ್ ಶ್ ಎಲ್ಲಾ ನಿಮ್ಮ ಅಜ್ಜಿಗೆ ಇಟ್ಕೋ ಜಾಸ್ತಿ ಮಾತನಾಡಬೇಡ. ಬಾಯಿ ಮುಚ್ಕೊಂಡು ಹೋಗೇ ಬಾಯಿ ಮುಚ್ಕೊಂಡು ಹೋಗು' ಎಂದು ಪದೇ ಪದೇ ಸಾನ್ಯಾ ಹೇಳಿದಕ್ಕೆ ಸೋನು ಸುಮ್ಮನಾಗುತ್ತಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?