ಚಾರು ಪ್ರಪಾತಕ್ಕೆ ಬೀಳೋಕೆ ಹೋಗಿ ಮಧ್ಯೆ ಸಿಕ್ಕಾಕಿಕೊಂಡಿರೋದು, ಅದನ್ನು ನೋಡಿ ರಾಮಾಚಾರಿ ಗಾಬರಿಯಾಗಿರೋದು ಎಲ್ಲ ಓಕೆ. ಆದರೆ ನಂತರ ಚಾರು ಉಳಿಸೋಕೆ ಆತ ಮಾಡೋ ಸಾಹಸ ನೋಡಿ ಜನ ಬಿದ್ದೂ ಬಿದ್ದೂ ನಗ್ತಿದ್ದಾರೆ. ಕಾರಣ ಈ ಸೀನ್‌ಗೆ ಬಳಸಲಾಗಿರುವ ವಿಎಫ್‌ಎಕ್ಸ್. ಇದು ಎಷ್ಟು ಫನ್ನಿ ಆಗಿದೆ ಅಂದರೆ ಅಂಥಾ ಸೀರಿಯಸ್ ಸನ್ನಿವೇಶದಲ್ಲೂ ನಗು ತರಿಸುತ್ತೆ ಅಂತಿದ್ದಾರೆ ವೀಕ್ಷಕರು.
ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುತ್ತೆ. ಈಗ ಸೀರಿಯಲ್‌ನಲ್ಲಿ ಈಗ ಸ್ಪೆಷಲ್ ಎಪಿಸೋಡ್‌ಗಳು ಪ್ರಸಾರ ಆಗ್ತಿವೆ. ಅದು ಚಿತ್ರದುರ್ಗದ ಕೋಟೆಯ ವಿಶೇಷ ಸೀನ್. ಬಬ್ಲಿ ಸಾರ್ ಯಾವುದೋ ಪ್ರಾಜೆಕ್ಟ್ ವರ್ಕ್ ನೆವದಲ್ಲಿ ರಾಮಾಚಾರಿ ಮತ್ತು ಚಾರುಲತಾರನ್ನು ಚಿತ್ರದುರ್ಗದ ಕೋಟೆಗೆ ಕರ್ಕೊಂಡು ಬಂದಿದ್ದಾರೆ. ಅಲ್ಲಿ ಚಿತ್ರದುರ್ಗದ ಕೋಟೆಯ ಕತೆಯನ್ನು ರೀಕ್ರಿಯೇಟ್ ಮಾಡಲಾಗಿದ್ದು, ಇದು ಉತ್ತಮ ಸ್ಪಂದನೆ ಜನರಿಂದ ವ್ಯಕ್ತವಾಗಿದೆ. ಈ ಸೀನ್‌ನಲ್ಲಿ ಚಾರುಲತಾ ಓವಬ್ಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ದೃಶ್ಯ 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಟೂರಿಸ್ಟ್ ಗೈಡ್ ಆಗಿ ಚಿತ್ರದುರ್ಗ ಕೋಟೆಯ ಇತಿಹಾಸ ಹೇಳುವ ದೃಶ್ಯವನ್ನು ನೆನಪಿಸುತ್ತದೆ. ಅದೇ ರೀತಿ ಜಯಂತಿ ಒನಕೆ ಓಬವ್ವನಾಗಿ ಕಾಣಿಸಿಕೊಂಡಂತೆ ಚಾರುವಿನ ಲುಕ್ ಇದೆ. ಆದರೆ ನಿರ್ದೇಶಕ ರಾಮ್‌ಜೀ ಇದನ್ನ ಇಷ್ಟಕ್ಕೇ ನಿಲ್ಲಿಸಿಲ್ಲ. ಇದರಲ್ಲೊಂದು ಸಾಹಸ ದೃಶ್ಯವನ್ನೂ ಇಟ್ಟಿದ್ದಾರೆ. ಆ ದೃಶ್ಯದಲ್ಲಿ ಚಾರು ಪ್ರಪಾತಕ್ಕೆ ಬೀಳುತ್ತಿದ್ದಾಳೆ. ಅವಳನ್ನು ರಕ್ಷಿಸಲು ರಾಮಾಚಾರಿ ಮುಂದಾಗಿದ್ದಾನೆ. ವಿಎಫ್‌ಎಕ್ಸ್ ಬಳಸಿ ಸಂಯೋಜಿಸಿರುವ ಈ ದೃಶ್ಯ ಕಂಡು ಸೀರಿಯಲ್ ಆಗಿ ಈ ಸೀರಿಯಲ್ ನೋಡ್ತಿರುವವರೂ ಬಿದ್ದೂ ಬಿದ್ದೂ ನಗ್ತಿದ್ದಾರೆ. ಅದಕ್ಕೂ ಕಾರಣವಿದೆ.
ರಾಮಾಚಾರಿ ಸೀರಿಯಲ್‌ನ ಚಿತ್ರದುರ್ಗ ಎಪಿಸೋಡ್‌ನಲ್ಲಿ ವಿಎಫ್‌ಎಕ್ಸ್ ಸಾಹಸ ದೃಶ್ಯಗಳಿವೆ. ಅದನ್ನು ಹಾಲಿವುಡ್ ಲೆವೆಲಲ್ಲಿ ಚಿತ್ರೀಕರಿಸಲು ನಿರ್ದೇಶಕ ರಾಮ್ ಜೀ ಮುಂದಾಗಿದ್ದಾರೆ. ಈ ದೃಶ್ಯದಲ್ಲಿ ಪ್ರಪಾತಕ್ಕೆ ಬೀಳುತ್ತಿರುವ ಚಾರುವಿಗೆ ಮೊದಲಿಗೆ ಒಂದು ಮರದ ರೆಂಬೆ ಸಿಕ್ಕಿದೆ. ಅದನ್ನೇ ಭದ್ರವಾಗಿ ಹಿಡಿದು ನಿಂತಿದ್ದಾಳೆ. ಅವಳನ್ನು ಕಾಣದೇ ಗಾಬರಿ ಬಿದ್ದಿರುವ ರಾಮಾಚಾರಿಗೆ ಕೊಂಬೆ ಹಿಡ್ಕೊಂಡು ಪ್ರಪಾತದಲ್ಲಿ ನೇತಾಡುತ್ತಿರುವ ಚಾರು ಕಾಣ್ತಿದ್ದಾಳೆ. ಇದಕ್ಕೂ ಮುನ್ನ ತೋರಿಸಿದ ದೃಶ್ಯದಲ್ಲಿ ಚಾರು ಪ್ರಪಾತದ ಮಧ್ಯದಲ್ಲೆಲ್ಲೋ ಸಿಕ್ಕಾಕ್ಕೊಂಡಿದ್ದಾಳೆ ಅನ್ನೋ ಥರದ ಫೀಲ್ ಇತ್ತು. ಆದರೆ ಇದರಲ್ಲಿ ರಾಮಾಚಾರಿ ತನ್ನ ಕೈ ಚಾಚಿ ಅವಳನ್ನು ಹಿಡಿಯೋ ಪ್ರಯತ್ನ ಮಾಡಿದ್ದಾನೆ. ಹಾಗೆ ಅವಳ ಕೈ ಹಿಡಿದು ಅವಳನ್ನು ಮೇಲಕ್ಕೆಳೆಯಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಚಾರು ಕೈ ಜಾರಿದ್ದಾಳೆ. ಹಾಗೆ ಜಾರುತ್ತಿರುವಾಗ ಅಲ್ಲಿ ಮರದ ಬಿಳಲೊಂದು ಪ್ರತ್ಯಕ್ಷವಾಗಿದೆ. ಅದನ್ನ ಸಪೋರ್ಟ್ ಗೆ ಚಾರು ಹಿಡಿದಿದ್ದಾಳೆ. ಚಾರು ಬೀಳ್ತಿರೋದು ನೋಡಿ ಅವಳನ್ನು ಕಾಪಾಡಲೆಂದು ಚಾರಿಯೂ ಪ್ರಪಾತಕ್ಕೆ ನೆಗೆದಿದ್ದಾನೆ. ಅವನಿಗೂ ಒಂದು ಮರದ ಬಿಳಲು ಸಿಗುತ್ತೆ.
ಇದನ್ನೂ ಓದಿ: Ramachari Serial: ದೊಡ್ಡ ಪ್ರಪಾತಕ್ಕೆ ಬಿದ್ದ ಚಾರು! ಇದ್ಯಾಕೋ ಓವರಾಯ್ತು ಅಂತಿದ್ದಾರೆ ನೆಟ್ಟಿಗರು
ಮರದ ಬಿಳಲನ್ನು ಹಿಡಿದೇ ಇಬ್ಬರೂ ಪ್ರಪಾತದಲ್ಲಿ ಜೀಕುತ್ತಿದ್ದಾರೆ. ಇಷ್ಟೊತ್ತಿಗೆ ಚಾರು ಹಿಡಿದುಕೊಂಡಿದ್ದ ಬಿಳಲು ಕಟ್ (Cut)ಆಗೋದ್ರಲ್ಲಿದೆ. ರಾಮಾಚಾರಿ ಅವಳತ್ತ ಹೋಗಿ ಅವಳನ್ನು ತನ್ನ ಬಳಿ ಎಳೆಯಲು ನೋಡಿದ್ದಾನೆ. ಆದರೆ ಚಾರು ಇದನ್ನು ವಿರೋಧಿಸುತ್ತಾಳೆ. ನನ್ನ ಮುಟ್ಬೇಡ, ನಾನು ಸತ್ತರೂ ಪರ್ವಾಗಿಲ್ಲ ಅಂತ ಕಿರುಚಾಡುತ್ತಾಳೆ. ರಾಮಾಚಾರಿ ನೀವು ಹಿಡ್ಕೊಂಡಿರೋ ಬಿಳಲು ಕಟ್ ಆಗ್ತಿದೆ, ನೀವು ಸತ್ತೋಗ್ತೀರಿ (Die) ಅಂತ ಕಿರುಚ್ತಿದ್ದರೂ ಅವಳು ಅವನ ಕಡೆ ಬರಲು ತಯಾರಿಲ್ಲ.
ಎಲ್ಲರ ಊಹೆಯಂತೆ ಚಾರು ಹಿಡಿದ ಬಿಳಲು ಕಟ್ ಆಗಿ ಚಾರು ಪ್ರಪಾತಕ್ಕೆ ಸ್ಲೋ ಮೋಶನ್‌ನಲ್ಲಿ ಬೀಳುತ್ತಿದ್ದಾಳೆ.
ಇದನ್ನೂ ಓದಿ: ದಪ್ಪಗಿದ್ದೀಯಾ ತಾಯಿ ಪಾತ್ರಕ್ಕೆ ಲಾಯಕ್ಕು: ಬಾಡಿ ಶೇಮಿಂಗ್ ಬಗ್ಗೆ Aparna Balamurali ಬೇಸರ
ಈ ದೃಶ್ಯದಲ್ಲಿ ವಿಎಫ್‌ಎಕ್ಸ್ ತಂತ್ರಜ್ಞಾನ ಹೋಗಿ ನಿರ್ದೇಶಕ ರಾಮ್ ಜೀ ನಗೆಪಾಟಲಿಗೆ ಗುರಿಯಾಗಿದ್ದಾರೆ ಅಂತಲೇ ಹೇಳಬಹುದು. ಏಕೆಂದರೆ ಇದು ಸಹಜತೆಗೆ ಹತ್ತಿರವಾಗಿಲ್ಲ. ಆಕ್ಟಿಂಗ್ ಸಹ ಇಲ್ಲಿ ಸಹಜವಾಗಿ ಬಂದಿಲ್ಲ. ಬಹಳ ಸ್ಲೋ ಮೋಶನ್(Slow motion)ನಲ್ಲಿ ಚಾರು ಬೀಳೋದನ್ನು ತೋರಿಸಿದ್ದಾರೆ. ಇದು ಈ ಸನ್ನಿವೇಶದ ಸೀರಿಯಸ್‌ನೆಸ್ ಹೆಚ್ಚಿಸುವ ಬದಲು ಜನ ಬಿದ್ದೂ ಬಿದ್ದೂ ನಗೋ ಹಾಗೆ ಮಾಡಿದೆ. ಸಿನಿಮಾವನ್ನು ಅನುಕರಿಸುವ, ಸೀರಿಯಲ್‌ನಲ್ಲಿ ಬೇರೇನನ್ನೋ ಹೇಳಬೇಕೆನ್ನುವ ಭರದಲ್ಲಿ ನಿರ್ದೇಶಕ ರಾಮ್ ಜೀ ಅದನ್ನು ಪರಿಣಾಮಕಾರಿಯಾಗಿ ಸ್ಕ್ರೀನ್ (Screen) ಮೇಲೆ ತರೋದನ್ನೇ ಮರ್ತಿದ್ದಾರೆ ಅಂತ ಜನ ಮಾತಾಡ್ಕೊಳ್ತಿದ್ದಾರೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಜನ ರಾಮ್ ಜೀ ಅವರ ವಿಎಫ್‌ಎಕ್ಸ್(VFX) ಲವ್ ಬಗ್ಗೆ ತಮಾಷೆಯಾಗಿ ಕಮೆಂಟ್(Comment) ಮಾಡ್ತಿದ್ದಾರೆ. ಈ ಕಾಲದ ಪ್ರೇಕ್ಷಕರು ತಂತ್ರಜ್ಞಾನವನ್ನು ಚೆನ್ನಾಗಿ ತಿಳಿದುಕೊಂಡವರು, ಏನೋ ಒಂದು ದೃಶ್ಯ ಹೆಣೆದು ಅವರನ್ನು ಯಾಮಾರಿಸೋದು ಸುಲಭ ಅಲ್ಲ ಅನ್ನೋದು ಪ್ರೂವ್ ಆಗ್ತನೇ ಇದೆ. ಅದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ರಾಮಾಚಾರಿ. ರಿತ್ವಿಕ್ ಕೃಪಾಕರ್, ಮೌನಾ ಗುಡ್ಡೆ ಮನೆ ಮೊದಲಾದವರ ನಟನೆ ಇದೆ.