Lakshana serial: ಭೂಪತಿ ಮನೆ ಏನು ಧರ್ಮಛತ್ರನಾ? ಶ್ವೇತಾ ಯಾಕಿನ್ನೂ ಆ ಮನೇಲಿದ್ದಾಳೆ?

By Suvarna News  |  First Published Mar 3, 2023, 1:34 PM IST

ಲಕ್ಷಣ ಸೀರಿಯಲ್‌ನಲ್ಲಿ ಭೂಪತಿ ಮತ್ತು ನಕ್ಷತ್ರ ನಡುವೆ ಶ್ವೇತಾ ಕರಡಿ ಥರ ಬರ್ತಿದ್ದಾಳೆ. ಅವಳಿನ್ನೂ ಅವರ ಮನೆಯಲ್ಯಾಕೆ ಇದ್ದಾಳೆ?


ಲಕ್ಷಣ ಸೀರಿಯಲ್‌ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನಲ್ಲಿ ಇದೀಗ ಒಂದು ಪ್ರಶ್ನೆ ವೀಕ್ಷಕರ ಸೈಡಿಂದ ಪದೇ ಪದೇ ಕೇಳಿ ಬರ್ತಿದೆ. ಡೈರೆಕ್ಟರು ಬೇಕು ಅಂತಲೇ ಹೀಗ್ ಮಾಡ್ತಿದ್ದಾರ ಅಥವಾ ಇದು ಅವರ ಗಮನಕ್ಕೆ ಬಂದಿಲ್ವಾ ಅನ್ನೋದು ಪ್ರಶ್ನೆ. ವಿಸ್ಯ ಮತ್ತೇನಲ್ಲ, ಭೂಪತಿ ಮನೆ ಅಂದ್ರೆ ಅದೇನು ಧರ್ಮ ಛತ್ರನಾ, ಇಷ್ಟೆಲ್ಲ ಡ್ರಾಮಾ ಆಗಿ ಭೂಪತಿ ಮತ್ತು ನಕ್ಷತ್ರಾ ಒಂದಾಗ್ತಿರೋ ಟೈಮಲ್ಲಿ ಈ ಶ್ವೇತಾ ಯಾಕೆ ಮಧ್ಯೆ ಕರಡಿ ಥರ ಇದ್ದಾಳೆ? ಅವಳಿಗೂ ಭೂಪತಿ ಮನೆಗೂ ಏನು ಸಂಬಂಧ? ಏನೂ ಸಂಬಂಧ ಇಲ್ಲದೇ ಇರೋ ಅವಳು ಈ ಮನೆಯಲ್ಲಿ ಯಾಕಿದ್ದಾಳೆ? ಅನ್ನೋದೇ ವೀಕ್ಷಕರು ಕೇಳ್ತಿರೋ ಪ್ರಶ್ನೆ. ಇದಕ್ಕೆ ಉತ್ತರ ಅಂತ ಸೀರಿಯಲ್‌ನಲ್ಲಿ ಏನೂ ಬರ್ತಿಲ್ಲ. ಹೋಗ್ಲಿ ಅವಳಲ್ಲಿ ಇರೋದಕ್ಕೆ ಸ್ಟ್ರಾಂಗ್ ಕಾರಣನಾದ್ರೂ ಇದೆಯಾ ಅಂದ್ರೆ ಊಹೂಂ ಅದೂ ಇಲ್ಲ. ಮತ್ತೆ ಅಲ್ಲಿ ಅವಳ ಅಸ್ತಿತ್ವಕ್ಕೆ ಕಾರಣ ಏನು ಅನ್ನೋ ಪ್ರಶ್ನೆ ಬಂದೇ ಬರುತ್ತಲ್ವಾ ಡೈರೆಕ್ಟರ್ ಸಾಹೇಬ್ರೇ ಅಂತ ನಾವಲ್ಲ, ಜನ ಕೇಳ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷಣ’. ಡ್ರಾಮಾ ಮೇಲೆ ಡ್ರಾಮಾ ಆಗ್ತಿರೋದಕ್ಕೋ ಅಥವಾ ಕಥೆಲಿ ಒಂದು ಹೊಸತನ ಇರೋದಿಕ್ಕೋ ಏನೋ ಬಹಳ ಜನ ಈ ಸೀರಿಯಲ್‌ನ ಇಷ್ಟಪಟ್ಟು ನೋಡ್ತಿದ್ದಾರೆ. ಹೀಗಿರುವಾಗ ಒಂದಾದ್ಮೇಲೆ ಒಂದು ಟ್ವಿಸ್ಟ್ ಇರಲೇ ಬೇಕಲ್ವಾ, ಸೋ ‘ಲಕ್ಷಣ’ ಧಾರಾವಾಹಿಗೆ ಇದೀಗ ಹೊಸ ತಿರುವು ಲಭಿಸಿದೆ. ಒಂದ್ಕಡೆ ಭೂಪತಿ ಹಾಗೂ ನಕ್ಷತ್ರ ಹತ್ತಿರವಾಗುತ್ತಿದ್ದಾರೆ. ಇನ್ನೊಂದ್ಕಡೆ ಭೂಪತಿ ಹಾಗೂ ನಕ್ಷತ್ರ ನಡುವೆ ಬಿರುಕು ಮೂಡಿಸಲು ಭಾರ್ಗವಿ ಅಲಿಯಾಸ್ ಡೆವಿಲ್ ಮತ್ತು ಶ್ವೇತಾ ಒಂದಾದ ಮೇಲೆ ಒಂದು ಪ್ಲಾನ್ ಮಾಡ್ತಿದ್ದಾರೆ. ಹೇಗಾದರೂ ಮಾಡಿ ಭೂಪತಿಯನ್ನ ಮದುವೆಯಾಗಲೇಬೇಕು ಅಂತ ಶ್ವೇತಾ ನಿರ್ಧರಿಸಿಬಿಟ್ಟಿದ್ದಾಳೆ. ಮದ್ವೆ ಮಾಡೇ ಮಾಡಿಸ್ತೀನಿ ಅಂತ ಡೆವಿಲ್ ಬೇರೆ ಪ್ರಯತ್ನ ಮಾಡ್ತದ್ದಾಳೆ. ಇವ್ರ ಪ್ಲಾನ್ ಒಂದು ಲೆವೆಲ್‌ಗೆ ಸಕ್ಸಸ್ ಆದರೂ ಅದೇ ಫೈನಲ್ ಆಗೋ ಚಾನ್ಸ್ ಅಂತೂ ಇಲ್ಲ. ಸೋ ಅವರೇನು ಪ್ಲಾನ್ ಮಾಡ್ತಾರೆ, ಮತ್ತೆ ಅದು ಹೇಗೆ ಬ್ರೇಕ್ ಆಗುತ್ತೆ ಅನ್ನೋದೆ ಕುತೂಹಕ.

Tap to resize

Latest Videos

500 ರೂ.ನಲ್ಲಿ ಇಡೀ ಜಯನಗರ ಸುತ್ತಿದ 'ಲಕ್ಷಣ' ಶ್ವೇತಾ- ನಕ್ಷತ್ರಾ; ಚೌಕಾಸಿ ಶಾಪಿಂಗ್ ಹೇಗ್ಮಾಡಿದ್ರು ನೋಡಿ!

ಇನ್ನೊಂದು ಕಡೆ ಭೂಪತಿಗೆ ಹತ್ತಿರವಾಗುವ ಸಲುವಾಗಿ ಶ್ವೇತಾ ಅನಾವಶ್ಯಕವಾಗಿ ಆತನನ್ನು ಮಾತಿಗೆಳೆಯುತ್ತಾಳೆ, ಆತ ಮತ್ತು ನಕ್ಷತ್ರ ಜೊತೆಗಿದ್ದಾಗ ಉರಿದುಕೊಂಡು ಅವರಿಬ್ಬರನ್ನು ದೂರ ಮಾಡೋ ಪ್ರಯತ್ನ ಮಾಡ್ತಿದ್ದಾಳೆ. ಸಹಿಸೋವಷ್ಟು ಸಹಿಸಿದ ಭೂಪತಿ ಒಂದು ಹಂತದಲ್ಲಿ ಶ್ವೇತಾಗೆ ಚೆನ್ನಾಗಿ ಕ್ಲಾಸ್(Class) ತಗೊಂಡಿದ್ದಾನೆ. 'ಎಲ್ಲೆ ಮೀರಿ ವರ್ತಿಸಬೇಡ. ಗಡಿ ದಾಟಿ ಬಂದರೆ ಪರಿಣಾಮ ನೆಟ್ಟಗೆ ಇರಲ್ಲ' ಎಂದು ಶ್ವೇತಾಗೆ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾನೆ. ಹಾಗೇ ನಕ್ಷತ್ರ ಬಗ್ಗೆ ಭೂಪತಿಗಿದ್ದ ಮಿಸ್ ಅಂಡರ್‌ಸ್ಟಾಂಡಿಂಗ್ ಮಾಯವಾಗಿದೆ. ಹೀಗಾಗಿ, ಪತ್ನಿ ನಕ್ಷತ್ರ ಜೊತೆ ಭೂಪತಿ ಕ್ಲೋಸ್(Close) ಆಗಿದ್ದಾನೆ. ನಕ್ಷತ್ರ ಹಾಗೂ ಭೂಪತಿ ಮಧ್ಯೆ ರೊಮ್ಯಾನ್ಸ್ ಶುರುವಾಗಿದೆ. ಇಬ್ಬರ ರೊಮ್ಯಾನ್ಸ್ ನೋಡಿ ಶ್ವೇತಾ ಹೊಟ್ಟೆಗೆ ಬೆಂಕಿ ಬಿದ್ದಿದೆ.

ಇಷ್ಟೆಲ್ಲ ಆದಮೇಲೂ ವೀಕ್ಷಕರು ಡೈರೆಕ್ಟರಿಗೆ ಕ್ಲಾಸ್ ತಗೊಳ್ಳೋಕೆ ಮುಂದಾಗಿದ್ದಾರೆ. ನಕ್ಷತ್ರಾ ಮತ್ತು ಭೂಪತಿ ನಡುವೆ ಯಾರಾದ್ರೊಬ್ರು ಮೂಗು ತೂರಿಸಬೇಕು ಅನ್ನೋ ಕಾರಣಕ್ಕೇ ಶ್ವೇತಾನ ಭೂಪತಿ ಮನೇಲಿ ಬಿಟ್ಟಿದ್ದೀರಾ? ಅವಳಲ್ಲಿ ಇರೋದಕ್ಕೆ ಸಿಂಗಲ್ ರೀಸನ್ನಾದ್ರೂ ಬೇಡ್ವಾ? ಅವಳಿಗೂ ಆ ಮನೆಗೂ ಏನು ಸಂಬಂಧ(Relation) ಇದೆ? ಆ ಕಡೆ ಭೂಪತಿ ತಾಯಿ ಶಕುಂತಳಾ ದೇವಿ ಈಕೆಯನ್ನು ತನ್ನ ಸೊಸೆ ಅಲ್ಲ ಅಂತ ರಿಜೆಕ್ಟ್ (Reject)ಮಾಡಿದ್ದಾರೆ. ದ್ರೋಹಿ ಶ್ವೇತಾನ ಕಂಡ್ರೆ ಭೂಪತಿಗೂ ಆಗಲ್ಲ, ನಕ್ಷತ್ರಗೂ ಆಗಲ್ಲ. ಮತ್ಯಾಕೆ ಅವಳಲ್ಲಿ ಇದ್ದಾಳೆ ಅನ್ನೋ ಪ್ರಶ್ನೆ. ಒಂದು ಪಾತ್ರ ಅಲ್ಲಿರಬೇಕು ಅಂದರೆ ಅದಕ್ಕೊಂದು ಕಾರಣ ಇರ್ಬೇಕಲ್ವಾ, ಡೈರೆಕ್ಟರ್ ಈ ಬಗ್ಗೆನೂ ಕೊಂಚ ಗಮನಹರಿಸಲಿ ಅನ್ನೋದು ಈ ಸೀರಿಯಲ್ ಫ್ಯಾನ್ಸ್ ಅಭಿಪ್ರಾಯ.

ನಾನು ನಿಜಕ್ಕೂ ಕಪ್ಪು, ಧಾರಾವಾಹಿಗೋಸ್ಕರ ನನ್ನನ್ನು ಕಪ್ಪು ಮಾಡಿಲ್ಲ: 'ಲಕ್ಷಣ' ನಕ್ಷತ್ರಾ

click me!