Mukesh Gowda: ಹೊಂಗನಸು ಸೀರಿಯಲ್ ಆಂಗ್ರಿ ಯಂಗ್‌ ಮ್ಯಾನ್ ರಿಷಿ ಇವ್ರೇ ನೋಡಿ!

By Suvarna News  |  First Published Nov 5, 2022, 1:50 PM IST

ತೆಲುಗಿನಲ್ಲಿ ಗುಪ್ಪೆಡಂಥಾ ಮನಸು, ಕನ್ನಡದಲ್ಲಿ ಹೊಂಗನಸು ಅನ್ನೋ ಹೆಸರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರದಲ್ಲಿ ಆಗ್ತಿದೆ. ಇದು ತೆಲುಗಿನಲ್ಲಿ ಸೂಪರ್ ಡೂಪರ್ ಹಿಟ್ ಸೀರಿಯಲ್. ಇದರಲ್ಲಿ ರಿಷಿ ಅನ್ನೋ ಆಂಗ್ರಿ ಯಂಗ್ ಮ್ಯಾನ್ ಅಂತೂ ಅನೇಕ ಹುಡುಗೀರ ನಿದ್ದೆ ಕದ್ದ ಹುಡುಗ. ಇಂಥಾ ರಿಷಿ ಪಾತ್ರದಲ್ಲಿ ನಟಿಸಿರೋದು ಕನ್ನಡಿಗ, ಮುಕೇಶ್ ಗೌಡ.


ತೆಲುಗಿನಲ್ಲಿ ಸ್ಟಾರ್ ಮಾ ಚಾನೆಲ್‌ನಲ್ಲಿ ಗುಪ್ಪೆಡಂಥಾ ಮನಸು ಅನ್ನೋ ಸೀರಿಯಲ್‌ ಪ್ರಸಾರವಾಗುತ್ತೆ. ಹಾಟ್‌ ಸ್ಟಾರ್ ನಲ್ಲೂ ಇದನ್ನು ನೋಡಬಹುದು. ಇದು ಕನ್ನಡಕ್ಕೂ ಡಬ್ ಆಗಿ 'ಹೊಂಗನಸು' ಅನ್ನೋ ಹೆಸರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿದೆ. ಈ ಸೀರಿಯಲ್ ಹೀರೋ ರಿಷಿ ಅದೆಷ್ಟೋ ಹೆಣ್ಮಕ್ಕಳ ಎದೆ ಬಡಿತ ಹೆಚ್ಚಿಸಿದಾತ. ಈ ನಟನಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಈತನ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ಳಬೇಕು ಅಂತ ಅನೇಕ ಹುಡುಗೀರು ಚಡಪಡಿಸ್ತಾರೆ. ಪ್ರತಿಷ್ಠಿತ ಕಾಲೇಜೊಂದರ ಎಂಡಿ, ಶಾರ್ಟ್ ಟೆಂಪರ್ಡ್, ಆದರೆ ಸ್ವೀಟ್ ಹಾರ್ಟ್, ಇಗೋ ಇದ್ದರೂ ಒಳಗೆ ಬೆಣ್ಣೆಯಂಥಾ ಮನಸು. ಈತನ ಜೊತೆಗೆ ಈತನ ಸ್ಟೂಡೆಂಟ್ ವಸುಧಾರಾಗೆ ಪ್ರೀತಿ, ಸಿಟ್ಟು ಎಲ್ಲ ಇದೆ. ಹುಡುಗಾಟಿಕೆಯ ಆದರೆ ಕಷ್ಟದಲ್ಲಿ ಮೇಲೆಬಂದ ಪ್ರತಿಭಾವಂತ ಹುಡುಗಿ ವಸು ಈ ಮೇಷ್ಟ್ರ ಕನಸಲ್ಲಿ ಬರ್ತಾಳೆ. ಇವರಿಬ್ಬರ ಲವ್, ಜಗಳ, ಹುಸಿಮುನಿಸಿದ ಕಥೆಯೇ ಗುಪ್ಪೆಡಂಥಾ ಮನಸು ಸೀರಿಯಲ್‌. ಇದರಲ್ಲಿ ಹೀರೋ ರಿಷಿ ಆಗಿ ನಟಿಸಿ ಅದೆಷ್ಟೋ ಹುಡುಗೀರ ನಿದ್ದೆ ಕದ್ದಿರೋ ಹುಡುಗ ಕನ್ನಡದವರು. ಹೆಸರು ಮುಕೇಶ್ ಗೌಡ.

ಮುಕೇಶ್ ಗೌಡ ನಮ್ಮ ಮೈಸೂರಿನ ಹುಡುಗ. ಮಂಡ್ಯ ರಮೇಶ್ ಅವರ ಪ್ರಸಿದ್ಧ ರಂಗಶಾಲೆ 'ನಟನ' ದಲ್ಲಿ ಒಂದಿಷ್ಟು ಕಾಲ ನಟನೆಯ ಸ್ಕಿಲ್ ಅರಿತವರು. ಕನ್ನಡದ ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಅದಿತಿ ಪ್ರಭುದೇವ ಜೊತೆಗೆ 'ನಾಗ ಕನ್ನಿಕಾ' ಸೀರಿಯಲ್‌ನಲ್ಲಿ ಪ್ರೀತಂ ಅನ್ನೋ ಹೆಸರಿನ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರ ನಟನೆಗೆ ಸಾಕಷ್ಟು ಜನ ಶಹಭಾಸ್ ಅಂದಿದ್ದರು. ಕನ್ನಡದಲ್ಲಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ನಿಜಕ್ಕೂ ಪಾಪ್ಯುಲಾರಿಟಿ ತಂದುಕೊಟ್ಟಿರೋದು 'ಗುಪ್ಪೆಡಂಥಾ ಮನಸು' ಸೀರಿಯಲ್. ಅದರಲ್ಲಿನ ಇವರ ಪಾತ್ರವನ್ನು ಜನ ಗೀಳು ಹಿಡಿಸಿಕೊಂಡವರ ಹಾಗೆ ನೋಡ್ತಾರೆ.

Tap to resize

Latest Videos

undefined

ಮುಕೇಶ್ ಅವರ ಪರ್ಸನಲ್ ಡೀಟೇಲ್ಸ್ ಗೆ ಬರೋದಾದ್ರೆ ವಯಸ್ಸು ಹತ್ತರತ್ತಿರ ಇಪ್ಪತ್ತೆಂಟರ ಆಸುವಾಸು. ಇನ್ನೂ ಸಿಂಗಲ್. ಗರ್ಲ್ ಫ್ರೆಂಡ್ಸ್ ಬಗ್ಗೆ ಪಬ್ಲಿಕ್ಕಾಗಿ ಎಲ್ಲೂ ಹೇಳಿಕೊಳ್ಳದೇ ಇರೋ ಕಾರಣ ಅವರ ಆ ಮ್ಯಾಟರ್ ಇನ್ನೂ ಗೊತ್ತಿಲ್ಲ. ಚಾಮುಂಡೇಶ್ವರಿಯ ಮಹಾನ್ ಭಕ್ತ. ಕುದುರೆ ಸವಾರಿ ಅಂದರೆ ಹುಚ್ಚು ಪ್ರೀತಿ. ಇದರ ಜೊತೆಗೆ ಸೌತ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಳ್ಳಬೇಕು. ಸ್ಟಾರ್ ನಟನಾಗಿ ಹೆಸರು ಮಾಡಬೇಕು ಅನ್ನೋ ಕನಸು ಈ ಹುಡುಗನ ಕಣ್ಣುಗಳಲ್ಲಿ ಎದ್ದು ಕಾಣುತ್ತೆ.

 

ನೋಡೋದಕ್ಕೆ ಯಾವುದೋ ಆಂಗಲ್ ನಲ್ಲಿ ತಮಿಳು ಹೀರೋ ಸೂರ್ಯನ ಥರ ಕಾಣೋ ಮುಕೇಶ್ ಅವರ ಕಣ್ಣೇ ಮೇನ್ ಅಟ್ರಾಕ್ಷನ್. ಅವರು ಪಾತ್ರಕ್ಕೆ ಜೀವ ತುಂಬೋ ರೀತಿಯೂ ಚೆಂದ. ಮನಸ್ಸಲ್ಲೇ ವಸುವನ್ನು ಆರಾಧಿಸುವ, ಅವಳ ತುಂಟಾಟಗಳನ್ನು ಎನ್ ಜಾಯ್ ಮಾಡುವ, ಆದರೆ ಬಾಲ್ಯದಲ್ಲೇ ಬಿಟ್ಟು ಹೋದ ಅಮ್ಮನ ಬಗ್ಗೆ ನೋವು, ಸಿಟ್ಟನ್ನು ಇಟ್ಟುಕೊಂಡಿರುವ, ಆಕೆಯನ್ನು ಮೇಡಂ ಎಂದೇ ಸಂಭೋಧಿಸುವ ಮುಂಗೋಪದ ಹುಡುಗನಾಗಿ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ.

BBK9 ನಕ್ಕರೆ ಬೈಯುತ್ತಿದ್ದರು, ಆಗ ತಾಯಿಗೆ ಆಗೋ ನೋವು ಅಷ್ಟಿಷ್ಟಲ್ಲ: ವಿನೋದ್ ಗೊಬ್ಬರಗಾಲ

ಸೆಟ್‌ನಲ್ಲಿದ್ದಾಗ ಇವರು ಮತ್ತು ನಾಯಕಿ ವಸು ಪಾತ್ರ ಮಾಡುವ ರಕ್ಷಾ ಗೌಡ ಟಾಮ್ ಆಂಡ್ ಜೆರ್ರಿಯಂತೆ ಹೊಡೆದಾಡುತ್ತಾ, ಕಾಲೆಳೆಯುತ್ತಾ ಇರುತ್ತಾರೆ. ಇವರ ತಾಯಿ ಜಗತಿ ಪಾತ್ರ ಮಾಡುವ ಜ್ಯೋತಿ ರೈ ಅವರೂ ಕನ್ನಡದವರೇ. ಕಳೆದ ವರ್ಷ ಒಂದು ಸಿನಿಮಾದಲ್ಲವರು ನಾಯಕಿಯಾಗಿ ನಟಿಸಿದ್ದರು. ರಿಯಲ್‌ನಲ್ಲಿ ರಿಷಿಗಿಂತ ಎಂಟೊಬ್ಬತ್ತು ವರ್ಷ ದೊಡ್ಡವರಷ್ಟೇ. ಆದರೆ ಫ್ಯಾನ್ಸ್(Fans) ಇವರನ್ನು ರಿಷಿಯ ಅಮ್ಮ ಅಂತ ತುಂಬ ಗೌರವದಿಂದ ನೋಡ್ತಾರೆ. ಇತ್ತೀಚೆಗೆ ಮುಕೇಶ್ ಮತ್ತು ಜ್ಯೋತಿ ಸೆಟ್(Set) ನಲ್ಲಿ ತರಲೆ ಮಾಡುವ ವೀಡಿಯೋವೊಂದು ವೈರಲ್(Viral) ಆಗಿತ್ತು.

BBK9; ಕಣ್ಣೀರು ಹಾಕುತ್ತಾ ಕನ್ನಡ ಹೋರಾಟಗಾರರಿಗೆ ಕ್ಷಮೆ ಕೇಳಿದ ಪ್ರಶಾಂತ್ ಸಂಬರಗಿ

ಮುಕೇಶ್ ಅವರಿಗೆ ಸದ್ಯ ಕನ್ನಡದಲ್ಲಿ ಸಿನಿಮಾಗಳಲ್ಲಿ ನಟಿಸುವ ಕನಸಿದೆ. ಅವರ ಟ್ಯಾಲೆಂಟ್‌(Talent) ಗೆ ತಕ್ಕನಂಥಾ ಪಾತ್ರ ಸಿಕ್ಕರೆ ಸ್ಯಾಂಡಲ್ ವುಡ್ ಅಥವಾ ಸೌತ್ ಇಂಡಿಯನ್ ಸಿನಿಮಾದಲ್ಲಿ ಸ್ಟಾರ್ ನಟನಾಗಿ ಮಿಂಚುವ ಎಲ್ಲ ಪ್ರತಿಭೆಯೂ ಮುಕೇಶ್ ಗಿದೆ. ಆದರೆ ಅದೃಷ್ಟ ಬಾಗಿಲು ತೆರೀಬೇಕಷ್ಟೇ.

click me!