ಚೈತ್ರಾ ಕುಂದಾಪುರ ಅವರದ್ದು ಇದೆಂಥ ಅವತಾರ! ತಲೆಗೆ ಹುಳು ಬಿಟ್ಕೊಂಡ ವೀಕ್ಷಕರು

By Roopa Hegde  |  First Published Nov 7, 2024, 11:17 AM IST

ಬಿಗ್ ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕುಂದಾಪುರ ಈಗ ತಮ್ಮ ವಿಚಿತ್ರ ವರ್ತನೆಯಿಂದ ಸುದ್ದಿಯಲ್ಲಿದ್ದಾರೆ. ಚೈತ್ರಾ ಮಾಡಿದ ಕೆಲಸ ವೀಕ್ಷಕರ ತಲೆ ತಿರುಗಿಸಿದೆ. ಹೀಗೆಲ್ಲ ಮಾಡ್ತಾರಾ ಅಂತ ವೀಕ್ಷಕರು ಪ್ರಶ್ನೆ ಕೇಳ್ತಿದ್ದಾರೆ. 
 


ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ (Bigg Boss Kannada Season 11 contestant Chaitra Kundapur), ತಮ್ಮ ಕೂಗಾಟದಿಂದಲೇ ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ. ಚೈತ್ರಾ ಕುಂದಾಪುರ, ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿಷ್ಯಕ್ಕೆ ಚರ್ಚೆಯಲ್ಲಿರ್ತಾರೆ. ಕ್ಯಾಮರಾ ಕಣ್ಣಿಗೆ ಅವರು ಬೀಳದಿರಲು ಸಾಧ್ಯವೇ ಇಲ್ಲ. ಈಗ  ಚೈತ್ರಾ ಕುಂದಾಪುರ್, ಹೊಸ ಅವತಾರ ನೋಡಿ ವೀಕ್ಷಕರು ದಂಗಾಗಿದ್ದಾರೆ. ದೇವರಿಗೆ ಪೂಜೆ ಮಾಡುವ ಬದಲು ಚೈತ್ರಾ, ತಮಗೆ ತಾವೇ ಪೂಜೆ ಮಾಡ್ಕೊಂಡಿದ್ದಾರೆ. ಇದೆಂಥ ಪೂಜೆ ಅಂತ ವೀಕ್ಷಕರು ತಲೆಗೆ ಹುಳು ಬಿಟ್ಕೊಂಡಿದ್ದಾರೆ.

ಮನೆಯಿರಲಿ ಇಲ್ಲ ದೇವಸ್ಥಾನವಿರಲಿ, ಅಲ್ಲಿ ದೇವರಿಗೆ ಪೂಜೆ ನಡೆಯುತ್ತದೆ. ಬಿಗ್ ಬಾಸ್ ಮನೆಯಲ್ಲೂ ಒಂದು ದೇವರ ವಿಗ್ರಹವಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ವೇಳೆ, ದೇವರಿಗೆ ಕೈಮುಗಿಯುವ ಸ್ಪರ್ಧಿಗಳು, ಪ್ರತಿ ದಿನ ಸ್ನಾನವಾದ್ಮೇಲೆ,  ಅಗರಬತ್ತಿ ಹಚ್ಚಿ, ಪೂಜೆ ಮಾಡ್ತಾರೆ. ಆದ್ರೆ ಚೈತ್ರಾ ಮಾತ್ರ, ದೇವರಿಗೆ ಅಗರಬತ್ತಿ ಹಚ್ಚುವ ಬದಲು, ತಮಗೆ ಪೂಜೆ ಮಾಡ್ಕೊಂಡಿದ್ದಾರೆ. ಒಂದು ಕೈನಲ್ಲಿ ಅಗರಬತ್ತಿ (incense sticks) ಹಿಡಿದು, ಇನ್ನೊಂದು ಕೈನಲ್ಲಿ ಗಂಟೆ ಬಾರಿಸ್ತಾ, ತಮಗೆ ತಾವೇ ಪೂಜೆ ಮಾಡಿಕೊಳ್ತಿದ್ದಾರೆ. ನಂತ್ರ ಅಗರಬತ್ತಿಯನ್ನು ಆರಿಸಿ, ಅಲ್ಲಿಯೇ ಇಡ್ತಾರೆ. ಇದನ್ನು ನೋಡಿದ ಶಿಶಿರ್ (Shishir) ದಂಗಾಗ್ತಾರೆ. ಬೆಕ್ಕಸ ಬೆರಗಾಗಿ  ಚೈತ್ರಾ ಕುಂದಾಪುರ ಅವರನ್ನು  ಶಿಶಿರ್ ನೋಡ್ತಿದ್ದಾರೆ. 

Tap to resize

Latest Videos

undefined

ಬಾಲಿವುಡ್ ನಟಿ ಸತ್ತಿದ್ದು ಹೇಗೆ? 21 ವರ್ಷಗಳ ನಂತರ ಬಹಿರಂಗವಾಯ್ತು ರಹಸ್ಯ

ಇನ್ಸ್ಟಾದಲ್ಲಿ ಚೈತ್ರಾ ಕುಂದಾಪುರ್ ಈ ವಿಡಿಯೋ ವೈರಲ್ ಆಗಿದೆ. ಚೈತ್ರಾ ಕೆಲಸ ನೋಡಿ ಜನರು ಶಾಕ್ ಗೆ ಒಳಗಾಗಿದ್ದಾರೆ. ಇದೇನ್ ಮಾಡ್ತಿದ್ದಾರೆ ಅವರು ಅಂತ ಪ್ರಶ್ನೆ ಕೇಳ್ತಿದ್ದಾರೆ. ಸತ್ತ ಮೇಲೆ ನಮಗೆ ಬೇರೆಯವರು ಪೂಜೆ ಮಾಡ್ತಾರೆ. ಆದ್ರೆ ಇವರು ಬದುಕಿದ್ದಾಗಲೇ ಪೂಜೆ ಮಾಡ್ಕೊಳ್ತಿದ್ದಾರೆಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಚೈತ್ರಾ, ಬಿಗ್ ಬಾಸ್ ಮನೆಯಲ್ಲಿ ಮಾಟ, ಮಂತ್ರ ಮಾಡ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಂಥ ಜನವೂ ಇರ್ತಾರಾ, ದೇವರಿಗೆ ಪೂಜೆ ಮಾಡುವ ಬದಲು ತಮಗೆ ತಾವೇ ಪೂಜೆ ಮಾಡಿಕೊಳ್ತಿರುವ ಚೈತ್ರಾ, ದೇವರೆ ಎಲ್ಲಿದ್ದೀಯಾ ಅಂತ ಕೇಳಿದ್ದಾರೆ ವೀಕ್ಷಕರು. ಚೈತ್ರಾ ಯಾಕೆ ತಮಗೆ ತಾವೇ ಪೂಜೆ ಮಾಡ್ಕೊಂಡ್ರು ಎಂಬುದು ಗೊತ್ತಾಗದೆ ಅನೇಕರು ತಲೆಕಡಿಸಿಕೊಂಡಿದ್ದಾರೆ. ರಾತ್ರಿ ಪೂರ್ತಿ ಈ ಬಗ್ಗೆ ಯೋಚನೆ ಮಾಡಿದ್ದೇನೆ ಅಂತ ಮತ್ತೊಬ್ಬರು ಬರೆದಿದ್ದಾರೆ. 

ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್ ಎಂದ ಉಪೇಂದ್ರ ಡೈಲಾಗನ್ನು ಚೈತ್ರಾ ಗಂಭೀರವಾಗಿ ತೆಗೆದುಕೊಂಡಿದ್ದಾರೆಂದು ಕಾಣುತ್ತೆ, ಚೈತ್ರಾ ವೀಕ್ಷಕರ ಗಮನ ಸೆಳೆಯಲು ಇದೆಲ್ಲ ಮಾಡ್ತಿದ್ದಾರೆ, ಚೈತ್ರಾ ನಾಗವಲ್ಲಿ ಆಗ್ತಿದ್ದಾರೆ ಅಂತೆಲ್ಲ ಬಳಕೆದಾರರು ಕಮೆಂಟ್ ಹಾಕಿದ್ದಾರೆ. 

40 ವರ್ಷಗಳ ಸಿನಿ ಜೀವನದಲ್ಲಿ ಈ ಒಬ್ಬಳೇ ನಟಿ ಮಾತ್ರ ಚಿರಂಜೀವಿಗೆ ಹೆಂಡತಿ ಮತ್ತು ತಂಗಿಯಾಗಿ ನಟಿಸಿರೋದು?

ಜೈಲಿನ ಜೀವನ ನೋಡಿಯೇ ಬಂದಿರುವ ಚೈತ್ರಾ ಕುಂದಾಪುರ ಗೆ, ಬಿಗ್ ಬಾಸ್ ಮನೆ ನರಕ ವಿಶೇಷವಾಗಿರಲಿಲ್ಲ. ಆರಂಭದಿಂದಲೂ ಸಿಡಿಯುತ್ತಲೇ ಇರುವ ಚೈತ್ರಾ, ತಮ್ಮಾಟವನ್ನು ಬಹಳ ಬುದ್ಧಿವಂತಿಕೆಯಿಂದ ಆಡ್ತಿದ್ದಾರೆ. ಮೊನ್ನೆ, ಅನುಷಾ ರೈ ತಲೆಗೆ ಹೊಡೆದಿದ್ದ ಚೈತ್ರಾ ಕುಂದಾಪುರ ಚರ್ಚೆಗೆ ಬಂದಿದ್ದರು. ನಾಮಿನೇಷನ್ ವಿಚಾರದಲ್ಲಿ ಇಬ್ಬರ ಮಧ್ಯೆ ನಡೆದ ಸಣ್ಣ ಮುನಿಸಿನ ಮಧ್ಯೆ ಚೈತ್ರಾ, ತಮಾಷೆಯಾಗಿ ಅನುಷಾ ತಲೆ ಮೇಲೆ ಹೊಡೆದಿದ್ದರು. ಇದನ್ನು ಅನುಷಾ ಗಂಭೀರವಾಗಿ ಪರಿಗಣಿಸಿದ್ದಲ್ಲದೆ ಚೈತ್ರಾ ಜೊತೆ ಗಲಾಟೆ ಮಾಡಿದ್ದರು. ನಿನ್ನೆ ಕ್ಯಾಪ್ಟನ್ ಹನುಮಂತ (Captain Hanumanta)ನ ನಿಯತ್ತಿನ ಬಗ್ಗೆ ಪ್ರಶ್ನೆ ಮಾಡಿ, ಮಾತಿನ ಸಮರ ಶುರು ಮಾಡಿದ್ದರು ಚೈತ್ರಾ. 27 ವರ್ಷದ ಚೈತ್ರಾಗೆ ಬಿಗ್ ಬಾಸ್ ಮನೆಯಲ್ಲೂ ಮಾತೇ ಬಂಡವಾಳವಾಗಿದ್ದು, ಟಾಪ್ ಸ್ಪರ್ಧಿಯಲ್ಲಿ ಅವರು ಇರ್ತಾರೆ ಎನ್ನುವ ನಿರೀಕ್ಷೆ ಅವರ ಅಭಿಮಾನಿ ಬಳಗದಲ್ಲಿದೆ. 

click me!