
ಕಿರುತೆರೆಯ ಜನಪ್ರಿಯ 'ಬಾಲಿಕಾ ವಧು' ಧಾರಾವಾಹಿಯಲ್ಲಿ ಆನಂದಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಅವಿಕಾ ಗೋರ್ ಕೆಲವು ದಿನಗಳಿಂದ ಲೈಮ್‌ಲೈಟ್‌ನಿಂದ ದೂರ ಉಳಿದಿದ್ದರು. ಯಾಕೆ ಮೇಡಂ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ, ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾ ಮೂಲಕ ನಟಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಈಗ ಫೋಟೋ ರಿವೀಲ್ ಮಾಡುವ ಮೂಲಕ ಎಲ್ಲರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಬರೋಬ್ಬರಿ 10ಕೆಜಿ ತೂಕ ಇಳಿಸಿಕೊಂಡ 'ಭೂಪತಿ' ಚಿತ್ರದ ನಟಿ; ಹೇಗಿದ್ದಾರೆ ನೋಡಿ!
ತೂಕ ಇಳಿಸಿಕೊಂಡ ಅವಿಕಾ:
ಇದ್ದಕ್ಕಿದ್ದಂತೆ ಅವಿಕಾ ತೂಕ ಹೆಚ್ಚಾದ ಕಾರಣ ಬಣ್ಣದ ಲೋಕದ ಜನರು ಸಂಪರ್ಕಿಸುವುದನ್ನೇ ನಿಲ್ಲಿಸಿದ್ದರಂತೆ. ಅವಕಾಶಗಳು ಮಿಸ್ ಮಾಡಿಕೊಂಡರಂತೆ. ಇದೀಗ ಬರೋಬ್ಬರಿ 13 ಕೆಜಿ ತೂಕ ಇಳಿಸಿಕೊಂಡು, ತಮ್ಮ ಫಿಟ್ನೆಸ್ ಜರ್ನಿ ಬಗ್ಗೆ ಫೋಸ್ಟ್ ಹಾಕಿದ್ದಾರೆ.
'ಈಗಲೂ ನನಗೆ ಜ್ಞಾಪಕವಿದೆ. ಒಂದು ದಿನ ರಾತ್ರಿ ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಅಳಲು ಪ್ರಾರಂಭಿಸಿದೆ. ನಾನು ಅಂದುಕೊಳ್ಳದ ಬದಲಾವಣೆ ನನ್ನಲ್ಲಿ ಆಗಿತ್ತು. ದೊಡ್ಡ ತೋಳುಗಳು, ದಪ್ಪ ಕಾಲುಗಳು ಹಾಗೂ ಹೊಟ್ಟೆ... ಇವೆಲ್ಲಾ ಥೈರಾಡ್, ಪಿಸಿಓಡಿಯಿಂದ ಆಗಿದ್ದರೆ ಓಕೆ. ಆದರೆ ನನಗೆ ಕಂಟ್ರೋಲ್ ತಪ್ಪಿ, ಹೀಗೆ ಆಗಲು ಕಾರಣವಾಯ್ತು ಅಂದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಕಾರಣವೇ ನಾನು ಏನು ಬೇಕಾದರೂ ಹೊತ್ತಿಲ್ಲದ ಹೊತ್ತಲ್ಲಿ ತಿನ್ನುತ್ತಿದ್ದೆ. ಕರಗಿಸಲು ವರ್ಕೌಟ್ ಮಾಡುತ್ತಲೇ ಇರಲಿಲ್ಲ. ನಮ್ಮ ದೇಹವನ್ನು ನಾವು ಚನ್ನಾಗಿ ನೋಡಿಕೊಂಡು ಕಾಪಾಡಿ ಕೊಳ್ಳಬೇಕು. ಆದರೆ ನಾನುಅದನ್ನು ಮಾಡಲಿಲ್ಲ,' ಎಂದು ಬರೆದುಕೊಂಡಿದ್ದಾರೆ.
ತಲೈವಿಗಾಗಿ ತೂಕ ಹೆಚ್ಚಿಸ್ಕೊಂಡ ನಟಿಗೆ ಈಗ ತೂಕ ಇಳಿಸೋ ಕಷ್ಟ
ಬದಲಾವಣೆಗಳನ್ನು ಕಂಡು ಅವಿಕಾ ತಮ್ಮನ್ನು ತಾವೇ ಜಡ್ಜ್ ಮಾಡಲು ಪ್ರಾರಂಭಿಸಿದ್ದರಂತೆ. 'ತುಂಬಾ ದಪ್ಪವಾದ ಕಾರಣ ನಾನು ನನ್ನ ನೋಡಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ನಾನು ಖುಷಿಯಿಂದ ಮಾಡುತ್ತಿದ್ದ ಡ್ಯಾನ್ಸ್ ಕೂಡ ಮಾಡೋಕೆ ಮನಸ್ಸು ಬರಲಿಲ್ಲ. ಛೇ ಈಗ ನಾನು ಹೀಗೆ ಕಾಣಬೇಕು, ಹಾಗೆ ಇರಬೇಕು ಎಂದೆಲ್ಲಾ ಸ್ವತಃ ನನ್ನನ್ನು ನಾನೇ ಮತ್ತೊಬ್ಬರಿಗೆ ಹೋಲಿಸಿಕೊಳ್ಳಿತ್ತಿದ್ದೆ. ತುಂಬಾನೇ ಬೇಜಾರು ಆಗುತ್ತಿತು. ಕೆಲವೊಮ್ಮೆಇದರಿಂದ ನನಗೆ ಬೇಸತ್ತು ಜೀವನವೇ ಸಾಕು ಎನಿಸುತ್ತಿತ್ತು,' ಎಂದಿದ್ದಾರೆ.
ಸ್ಪೂರ್ತಿ ಯಾರು?
'ಒಂದು ದಿನ ನಾನು ತೀರ್ಮಾನಿಸಿದೆ. ನಾನು ಬದಲಾಗಲೇ ಬೇಕು. ಫಿಟ್ ಆಗಲೇಬೇಕು ಎಂದು. ರಾತ್ರೋರಾತ್ರಿ ಯಾವ ಬದಲಾವಣೆ ಆಗುವುದಿಲ್ಲ. ನಾನು ಡ್ಯಾನ್ಸ್ ಮಾಡಲು ಪ್ರಾರಂಭಿಸಿದೆ. ಸರಿಯಾದ ಸಮಯದಲ್ಲಿ ತಿನ್ನುತ್ತಿದ್ದೆ. ಸರಿಯಾದ ಕ್ರಮದಲ್ಲಿ ವರ್ಕೌಟ್ ಪ್ರಾರಂಭಿಸಿದೆ. ಎಷ್ಟೇ ಕಷ್ಟ ಆದರೂ ನಾನು ನಿಲ್ಲಿಸಲಿಲ್ಲ. ದಿನಾ ಕನ್ನಡಿ ಮುಂದೆ ನಿಂತು ನಾನು ಬ್ಯೂಟಿಫುಲ್ ಎಂದು ಹೇಳಿಕೊಳ್ಳಲು ಆರಂಭಿಸಿದೆ. ಇದನ್ನು ಯಾರು ಓದುತ್ತಿದ್ದೀರಾ ನೀವೂ ಬ್ಯೂಟಿಫುಲ್. ಎಲ್ಲರಿಗೂ ಅವಕಾಶವಿರುತ್ತದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು. ನಮ್ಮನ್ನು ನಾವು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕು. ಇಂದು ನಾನು ನನ್ನ ತ್ವಚೆಯ ಬಣ್ಣದಲ್ಲಿ ತುಂಬಾ ಕಂಫರ್ಟಬಲ್ ಆಗಿದ್ದೀನಿ. ನೀವು ಪಾಸಿಟಿವ್ ಹಾಗೂ ಕಂಫರ್ಟಬಲ್ ಆಗಿದ್ದೀರಾ ಅಲ್ವಾ?' ಎಂದು ತಮ್ಮ ಟ್ರಾನ್ಸಫಾರ್ಮೇಷನ್ ಜರ್ನಿ ಬಗ್ಗೆ ಬರೆದು ಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.