ಈ ಕಿರುತೆರೆಯ ಹುಡುಗ ಸದ್ದಿಲ್ಲದೇ ಒಪ್ಪಿಕೊಂಡ ಸಿನಿಮಾಗಳು ಅರ್ಧಡಜನ್. ಸಿನಿಮಾ ಜೊತೆ ಕಿರುತೆರೆ ಕೂಡ ನಿಭಾಯಿಸುತ್ತಿರುವ ಕಿರಣ್ ಜತೆ ನಾಲ್ಕು ಮಾತು.
ಆರ್ ಕೇಶವಮೂರ್ತಿ
ವೃತ್ತಿಜೀವನ ಹೇಗಿದೆ?
undefined
‘ಕನ್ನಡತಿ’ ಧಾರಾವಾಹಿಯಿಂದ ಸಿಕ್ಕ ಗೆಲುವು ನನ್ನದು. ಸದ್ಯ ಈಗ ಆರು ಚಿತ್ರಗಳು ನನ್ನ ಮುಂದಿವೆ. ಈ ಪೈಕಿ ಎರಡು ತೆಲುಗು. ‘ಮಾಚ್‌ರ್ 22’ ಹಾಗೂ ‘ಅಸತೋಮ ಸದ್ಗಮಯ’ ಚಿತ್ರಗಳಲ್ಲಿ ನನ್ನ ನೋಡಿದವರು ಮಾಸ್ ಲುಕ್ ಇದೆ, ಬಿಗ್ ಸ್ಕ್ರೀನ್‌ಗೆ ಹೊಂದುತ್ತೀರಿ ಅಂದರು.
ರಚಿತಾ ರಾಮ್ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್?
ಆರು ಸಿನಿಮಾಗಳು ಯಾವ್ಯಾವುವು?
‘ಬಹದ್ದೂರ್ ಗಂಡು’, ‘ಬಡ್ಡೀಸ್’, ಮಿಲನ ನಾಗರಾಜ್ ಜತೆ ‘ಚತುಷ್ಪಥ’, ‘ನುವ್ವೆ ನಾ ಪ್ರಾಣಂ’, ‘ವಿಕ್ರಮ್ ಗೌಡ’ ಹಾಗೂ ಇನ್ನೂ ಹೆಸರಿಡದ ಕಾಮಿಡಿ ಸಿನಿಮಾ. ಈಗ ‘ಚತುಷ್ಪಥ’ ಚಿತ್ರದ ಶೂಟಿಂಗ್‌ನಲ್ಲಿದ್ದೇನೆ. ‘ಬಹದ್ದೂರ್ ಗಂಡು’ ಚಿತ್ರಕ್ಕೂ ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದೆ. ಸದ್ಯ ನಂದಿಬೆಟ್ಟದಲ್ಲಿ ಮಿಲನ ನಾಗರಾಜ್ ಜತೆ ‘ಚುತಷ್ಪಥ’ ಚಿತ್ರದ ಶೂಟಿಂಗ್‌ನಲ್ಲಿದ್ದೇನೆ. ‘ಬಡ್ಡೀಸ್’ ಚಿತ್ರದ್ದು ಸ್ನೇಹಕ್ಕೆ ಬೆಲೆ ಕೊಡುವ ಕತೆ. ಗುರುವೇಂದ್ರ ಶೆಟ್ಟಿಚಿತ್ರದ ನಿರ್ದೇಶಕರು.
ಇನ್ನು ಮುಂದೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೇ?
ಸಿನಿಮಾಗಳು ಎಷ್ಟೇ ಬರಲಿ, ನಾನು ಕಿರುತೆರೆ ಬಿಡಲ್ಲ. ಮುಂದೆ ಹೊಸ ಧಾರಾವಾಹಿಗಳಲ್ಲಿ ನಟಿಸುತ್ತೇನೆ.
ಕಿರುತೆರೆಯಲ್ಲಿ ನಿಮ್ಮ ನಟನೆಗೆ ಸಿಕ್ಕ ಪ್ರಶಂಸೆ ಏನು?
ನ್ಯಾಚುರಲ್ ನಟ ಎಂಬುದು. ಅದೇ ರೀತಿಯ ಪಾತ್ರಗಳೂ ನನಗೆ ಬರಲಾರಂಭಿಸಿದವು. ಆದರೆ, ನನಗೆ ಹೆಸರು ತಂದು ಕೊಟ್ಟಿದ್ದು ‘ಕನ್ನಡತಿ’ ಧಾರಾವಾಹಿಯೇ. ಈ ಧಾರಾವಾಹಿಯ ಬರವಣಿಗೆಯ ಶಕ್ತಿ ಪರಮೇಶ್ ಗುಂಡ್ಕಲ್.
ನಿಮ್ಮನ್ನು ನೀವು ಯಾವ ರೀತಿಯ ಪಾತ್ರಗಳಲ್ಲಿ ನೋಡಬೇಕು ಎಂದುಕೊಂಡಿದ್ದೀರಿ?
ನನ್ನ ಸಾಫ್ಟ್ ಕ್ಯಾರೆಕ್ಟರ್ ಅಂತಾರೆ. ಆದರೆ, ನಾನು ಎಲ್ಲವನ್ನೂ ಮಾಡಬೇಕು ಎಂಬುದು. ಆ್ಯಕ್ಷನ್, ಕಾಮಿಡಿ, ಥ್ರಿಲ್ಲರ್ ಕ್ಯಾರೆಕ್ಟರ್‌ಗಳಲ್ಲಿ ಹೆಚ್ಚು ಗುರುತಿಸಿಕೊಳ್ಳುವ ಆಸೆ ಇದೆ.
ಕಿರುತೆರೆಯಲ್ಲಿ ರಾಜ್ ಕಿರಣ್
ಹಿಂದಿಯಲ್ಲಿ ಹೀರೋಸ್, ಲವ್ ಬೈ ಚಾನ್ಸ್, ತು ಇಷ್ಕ್ ಹಾಗೂ ಕ್ರೈಮ್ ಪೆಟ್ರೋಲ್‌ನಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಗುಂಡ್ಯಾನ ಹೆಂಡ್ತಿ, ಕಿನ್ನರಿ, ದೇವತೆ, ಚಂದ್ರಮುಖಿ, ಕನ್ನಡತಿ, ಲೈಫ್ ಸೂಪರ್ ಗುರು (ರಿಯಾಲಿಟಿ ಶೋ)ದಲ್ಲಿ ಅಭಿನಯ ಚಾತುರ್ಯ ತೋರಿಸಿದಿದ್ದಾರೆ.