Bigg Boss 15 ಕಿರೀಟ ಪಡೆದ ಮಹಿಳೆ ತೇಜಸ್ವಿ ಪ್ರಕಾಶ್; ದೊಡ್ಡ ಮೊತ್ತದ ಬಹುಮಾನ?

Suvarna News   | Asianet News
Published : Jan 31, 2022, 04:46 PM IST
Bigg Boss 15 ಕಿರೀಟ ಪಡೆದ ಮಹಿಳೆ ತೇಜಸ್ವಿ ಪ್ರಕಾಶ್; ದೊಡ್ಡ ಮೊತ್ತದ ಬಹುಮಾನ?

ಸಾರಾಂಶ

ಬಿಗ್ ಬಾಸ್‌ ಸೀಸನ್ 15 ಫಿನಾಲೆ. ದೊಡ್ಡ ಮೊತ್ತದ ಜೊತೆ ಡಿಫರೆಂಟ್ ಆಗಿರುವ ಟ್ರೋಫಿ ಪಡೆದುಕೊಂಡ ತೇಜಸ್ವಿ.... 

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ನೇತೃತ್ವದಲ್ಲಿ ನಡೆಯುವ ಬಿಗ್ ಬಾಸ್ ಸೀಸನ್ 15 (BBK15) ರಿಯಾಲಿಟಿ ಶೋ ನಿನ್ನೆ ಫಿನಾಲೆ ಮುಗಿಸಿದ್ದು, ವಿನ್ನರ್‌ಗಳನ್ನು ಘೋಷಣೆ ಮಾಡಿದ್ದಾರೆ. ಮೊದಲ ಸ್ಥಾನದಲ್ಲಿ ನಟಿ ತೇಜಸ್ವಿ ಪ್ರಕಾಶ್‌ (Tejasswi Prakash), ಎರಡನೇ ಸ್ಥಾನದಲ್ಲಿ ಪ್ರತೀಕ್ ಸೆಹಜ್ಪಾಲ್ (Pratik Sehajpal) ಮತ್ತು ಮೂರನೇ ಸ್ಥಾನವನ್ನು ಕರಣ್ ಕುಂದ್ರಾ (Karan Kundra) ಪಡೆದುಕೊಂಡಿದ್ದಾರೆ. ವಿಜೇತರನ್ನು ಘೋಷಿಸಿದ ಸಲ್ಮಾನ್ ಖಾಸ್ ದೊಡ್ಡ ಮೊತ್ತವಿರುವ ಹಣದ ಬ್ಯಾಗನ್ನು ನಟಿಯ ಕೈಯಲ್ಲಿಟ್ಟಿದ್ದಾರೆ.

ಹೌದು! ತೇಜಸ್ವಿ ಪ್ರಕಾಶ್‌ ಮತ್ತು ಪ್ರತೀಕ್ ಸೆಹಜ್ಪಾಲ್ ಇಬ್ಬರನ್ನೂ ಸಲ್ಮಾನ್ ಹಿಡಿದುಕೊಂಡು ನಿಂತಿದ್ದರು. ಈ ಸೀಸನ್‌ನ ವಿಜೇತರು ಎಂದು ತೇಜಸ್ವಿ ಹೆಸರು ಕೂಗಿದ್ದರೂ  ತೇಜಸ್ವಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವೇದಿಕೆಯ ಪಕ್ಕದಲ್ಲಿರುವ ಪಟಾಕಿಗಳು ಜೋರಾಗಿ ಹೊಡೆಯಲು ಶುರು ಮಾಡಿದಾಗ, ತಮ್ಮ ಕೈ ಎತ್ತಿರುವುದನ್ನು ನೋಡಿ ನಾನು ವಿನ್ನರ್‌ ಎಂದು realise ಮಾಡಿಕೊಂಡು ಆನಂತರ ಶಾಕ್ ಆದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ತೇಜಸ್ವಿ ಯಶಸ್ಸನ್ನು ಬಿಗ್ ಬಾಸ್‌ ಬಾಯ್‌ಫ್ರೆಂಡ್ ಕರಣ್ ಕುಂದ್ರಾ ಸಂಭ್ರಮಿಸಿದ್ದಾರೆ. 

ಕ್ಯಾಮೆರಾ ಎದುರು ಪತಿಗೆ ಒತ್ತಾಯ ಮಾಡಿ ಮುತ್ತಿಟ್ಟ ನಟಿ Rakhi Sawant!

ನಾಲ್ಕನೇ ಸ್ಥಾನವನ್ನು ಶಿಲ್ಪಾ ಶೆಟ್ಟಿ (Shilpa Shetty) ಸಹೋದರಿ ಶಮಿತಾ ಶೆಟ್ಟಿ (Shamitha Shetty) ಪಡೆದುಕೊಂಡಿದ್ದಾರೆ. ಫಿನಾಲೆ ಹಂತದಿಂದ ಕೋರಿಯೋಗ್ರಾಫರ್‌ ನಿಶಾಂತ್ ಭಟ್ (Nishanth bhatt) ಐದನೇ ಸ್ಥಾನ ಪಡೆದುಕೊಂಡು 10 ಲಕ್ಷ ತೆಗೆದುಕೊಂಡಿದ್ದಾರೆ. ಕಡಿಮೆ ಜನಪ್ರಿಯತೆಯಿಂದ ಬಿಗ್ ಬಾಸ್ ಪ್ರವೇಶಿಸಿದ  28 ವರ್ಷದ ನಟಿ ತೇಜಸ್ವಿ ಯಾವುದಕ್ಕೂ ಜಗ್ಗದೇ ಹುಡುಗರ ಸಮಕ್ಕೆ ಆಟವಾಡಿದ್ದಾರೆ. ಈ ವೇಳೆ ನಟ ಕರಣ್ ಕುಂದ್ರಾ ಜೊತೆ ಪ್ರೀತಿಯಲ್ಲಿ ಬಿದ್ದು ಇಬ್ಬರು ಶೋನಲ್ಲಿ ಲವ್ ಮಾಡಲು ಶುರು ಮಾಡಿದ್ದರು. 

ಬಿಗ್ ಬಾಸ್‌ ಓಟಿಟಿ ಸೀಸನ್‌ 1ರಲ್ಲಿ ಪ್ರತೀಕ್ ಸೆಹಜ್ಪಾಲ್ ಎರಡನೇ ಸ್ಥಾನ ಪಡೆದಕೊಂಡಿದ್ದಾರೆ. ಎರಡು ಸಲವೂ ಎರಡನೇ ಸ್ಥಾನ ಪಡೆದುಕೊಂಡಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ, ಸೆಹಜ್ಪಾಲ್ ಅವರಿಗೆ ವಿನ್ನರ್ ಸ್ಥಾನ ಪಡೆಯುವ ಅರ್ಹತೆ ಇದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಇದೇ ಮೊದಲ ಬಾರಿ ಫಿನಾಲೆ ವೇದಿಕೆಯಲ್ಲಿ ಸಿನಿಮಾ ಪ್ರಚಾರ ಮಾಡಲಾಗಿತ್ತು, ಗೆಹರಾಯಿ ಸಿನಿಮಾ ಪ್ರಚಾರ ಮಾಡಲು ದೀಪಿಕಾ ಪಡುಕೋಣೆ (Deepika Padukone), ಅನನ್ಯಾ ಪಾಂಡೆ (Ananya Pandy), ಸಿದ್ಧಾಂತ್ ಮತ್ತು ಕರ್ವಾ ಭಾಗಿಯಾಗಿದ್ದರು.

BB15: ವೇದಿಕೆ ಮೇಲೆ ಕಣ್ಣೀರಿಟ್ಟ ಸಲ್ಮಾನ್ ಖಾನ್‌, ಶೆಹನಾಜ್ ಗಿಲ್‌ ವಿಡಿಯೋ ವೈರಲ್!

ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ (Siddarth Shukla) ಇನ್ನಿಲ್ಲದ ಕಾರಣ ಅವರ ಗರ್ಲ್‌ಫ್ರೆಂಡ್‌ ಶೆಹೆನಾಜ್‌ ಗಿಲ್‌ (Shehnaaz Gill) ಫಿನಾಲೆಯಲ್ಲಿ ಭಾಗಿಯಾಗಿದ್ದರು. ಸಿದ್ಧಾರ್ಥ್‌ಗಾಗಿ ರೊಮ್ಯಾಂಟಿಕ್‌ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಪ್ರೀತಿಯಿಂದ ಶೆಹೆನಾಜ್‌ನ ಬರ ಮಾಡಿಕೊಂಡು ಸಲ್ಲು ತಮ್ಮ ಬಿಬಿ ಜರ್ನಿ ಬಗ್ಗೆ ಮಾತನಾಡಿಸುತ್ತಾರೆ. ಸಲ್ಮಾನ್ ನೋಡುತ್ತಿದ್ದಂತೆ ಶೆಹನಾಜ್ ಭಾವುಕರಾಗಿದ್ದಾರೆ, ಸಮಾಧಾನ ಮಾಡಲು ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡಿದ್ದಾರೆ. ಶುಕ್ಲಾ ವಿಡಿಯೋ ನೋಡಿ ಸಲ್ಮಾನ್  ಕಣ್ಣೀರಿಟ್ಟಿದ್ದಾರೆ. 'ನಾನು ಸದಾ ಸಿದ್ಧಾರ್ಥ್‌ ತಾಯಿ ಜೊತೆ ಮಾತನಾಡುವೆ. ನಿನಗೆ ಬ್ರೈಟ್ ಆ್ಯಂಡ್ ಬ್ಯೂಟಿಫುಲ್ ಜೀವನ ಇದೆ. ಸದಾ ಕೆಲಸ ಮಾಡು ಸಂತೋಷವಾಗಿರು. ನಿನಗೆ ದೊಡ್ಡ ಫ್ಯೂಚರ್ ಎಂದು ಆಗಾಗ ಹೇಳುತ್ತಿರುತ್ತಾರೆ,' ಎಂದು ಶೆಹೆನಾಜ್ ಮಾತನಾಡಿದ್ದಾರೆ. 

ರಾಖಿ ಸಾವಂತ್ (Rahki Sawant) ತಮ್ಮ ಪತಿ ಜೊತೆ ಭಾಗವಹಿಸಿ ವೇದಿಕೆ ಮೇಲೆ ಪುಷ್ಪ ಚಿತ್ರದ ಊ ಅಂಟಾವ ಹಿಂದಿ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಪ್ಯಾಪರಾಜಿಗಳು ಫೋಟೋಗೆ ಪೋಸ್‌ ಕೊಡಲು ಕೇಳಿದಾಗ ಪತಿ ನಿರಾಕರಿಸಿದ್ದರು. ಒತ್ತಾಯ ಮಾಡಿ ಲಿಪ್‌ಲಾಕ್‌ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗತ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!