'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ಡಾಲಿ ಮತ್ತು ಚಿಟ್ಟೆ ಬಗ್ಗೆ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ವಸಿಷ್ಠ ಸಿಂಹ ಮತ್ತು ಬಡವ ರಾಸ್ಕಲ್ ತಂಡ ಭಾಗಿಯಾಗಿದ್ದರು. ಈ ವೇಳೆ ಧನಂಜಯ್ ಗಳಿಸಿರುವ ಸ್ನೇಹ ಮತ್ತು ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ. ಈ ತಂಡಕ್ಕೆ ಹತ್ತಿರವಾಗಿರುವ ಜನರೆಲ್ಲರನ್ನೂ ವೇದಿಕೆಗೆ ಕರೆಸಿ ಮಾತನಾಡಿಸಿದ್ದಾರೆ. ಈ ವೇಳೆ ವಿಡಿಯೋ ಮೂಲಕ ಶಿವಣ್ಣ ಇವರಿಬ್ಬರ ಬಗ್ಗೆ ಮಾತನಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ 'ಟಗರು' ಸಿನಿಮಾ ಧನಂಜಯ್‌ಗೆ ಡಾಲಿ ಎಂಬ ಬಿರುದು ನೀಡಿತ್ತು. ವಸಿಷ್ಠ ಸಿಂಹಗೆ ಚಿಟ್ಟೆ ಎಂಬ ಬಿರುದು ನೀಡಿತ್ತು. ಇಬ್ಬರಿಗೂ ಸಿನಿ ಜರ್ನಿಯಲ್ಲಿ ದೊಡ್ಡ ಬ್ರೇಕ್ ಕೊಟ್ಟಂತ ಸಿನಿಮಾ ಟಗರು. ಬಿಯರ್ ಬಾಟಲ್ ಹಿಡಿದುಕೊಂಡು ಇಬ್ಬರು ಇಡೀ ಕರ್ನಾಟಕವನ್ನು ಅಲುಗಾಡಿಸಿದ್ದರು. ನನಗೆ ಇವರಿಬ್ಬರೂ ತುಂಬಾನೇ ಲಕ್ಕಿ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ಡಾಲಿ ಬಗ್ಗೆ ಮಾತು:
'ನನ್ನ ಜೊತೆ ಆಕ್ಟ್ ಮಾಡುವುದಕ್ಕೂ ಮುಂಚೆಯಿಂದ ನನಗೆ ಅವರು ಗೊತ್ತು.ನನಗೆ ಅವರು ತುಂಬಾನೇ ಇಷ್ಟ. ತುಂಬಾ Handsome ಆಗಿ ಇದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಆಕ್ಟರ್ ಆಗುತ್ತಾರೆಂಬ ನಂಬಿಕೆ ಇತ್ತು. ನಮ್ಮ ಸ್ನೇಹದ ಬಗ್ಗೆ ಹೇಳಬೇಕು ಅಂದ್ರೆ ತುಂಬಾ ಒಳ್ಳೆಯ ವ್ಯಕ್ತಿ, ತುಂಬಾ ಓದಿದ್ದಾರೆ ತಿಳಿದವರು ಅದೇ ನನಗೆ ಖುಷಿ ಆಗುತ್ತೆ. ಫ್ಯಾಮಿಲಿಗೆ ತುಂಬಾ ಅಟ್ಯಾಚ್ ಆದವರು ಧನಂಜಯ್. ಯಾರು ಫ್ಯಾಮಿಲಿಗೆ ತುಂಬಾ ಅಟ್ಯಾಚ್ ಆಗಿರುತ್ತಾರೋ ಅವರು ನ್ಯಾಚುರಲಿ ಫ್ರೆಂಡ್ಲಿ ಆಗಿರುತ್ತಾರೆ' ಎಂದು ಶಿವಣ್ಣ ಡಾಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮಂಡಿಯೂರಿ ಗುಲಾಬಿ ಕೊಟ್ಟು ಅಮೃತಾಗೆ ಧನಂಜಯ್‌ಗೆ ಪ್ರಪೋಸ್!ವಸಿಷ್ಠ ಬಗ್ಗೆ ಮಾತು:
'ಟಗರು ಮಾಡಿದಾಗ ವಸಿಷ್ಠ ಚಿಟ್ಟೆ ಅಂತ ಒಂದು ಪಾತ್ರ ಮಾಡಿದ್ದಾರೆ. ಕವಚ ಸಿನಿಮಾದಲ್ಲೂ ಇನ್ನೊಂದು ಬ್ಯೂಟಿಫುಲ್ ರೋಲ್ ಮಾಡಿದ್ದಾರೆ. ಪ್ರತಿಯೊಂದು ಸಿನಿಮಾ ನೋಡುವಾಗ ವಸಿಷ್ಠ ತುಂಬಾನೇ ಡಿಫರೆಂಟ್ ಆಗಿರುತ್ತಾರೆ. Actor with all type of caliber ಅಂದ್ರೆ ನೆಗೆಟಿವ್ ಮಾಡಬಹುದು ಪಾಸಿಟಿವ್ ಮಾಡಬಹುದು ಅವರಿಗೆ ಎರಡು ಸ್ಟೈಲ್ ಮುಖ ಇದೆ. ಅವರು ತುಂಬಾ ಒಳ್ಳೆಯ ವ್ಯಕ್ತಿತ್ವದವರು. ಡಾಲಿ ಮತ್ತು ಚಿಟ್ಟೆ ನೀವು ಇಬ್ಬರೇ ಫ್ರೆಂಡ್ಸ್ ಅಲ್ಲ ನಾನು ನಿಮಗೆ ಫ್ರೆಂಡ್' ಎಂದಿದ್ದಾರೆ ಶಿವಣ್ಣ.
Golden Gang: ಗಣಿ ಜೊತೆ ಮಾತನಾಡೋಕೆ ಮೋಹಕ ತಾರೆ ರಮ್ಯಾ ಬರ್ತಿದ್ದಾರೆ?'ಶಿವಣ್ಣ ತುಂಬಾ ದೊಡ್ಡ ಮನುಷ್ಯರು. ನನ್ನ ಇಡೀ ಬದುಕಲ್ಲಿ ನೋಡಿರುವುದರಲ್ಲಿ he is the best. ಅವರ ಜೊತೆಗೆ ಇದ್ದುಬಿಡೋಣ ಅನ್ಸುತ್ತೆ. ಒಂದು ಸಲ ತಬ್ಬಿಕೊಳ್ಳೋಣ ಅನ್ಸುತ್ತೆ. ಟಗರು ಡಬ್ಬಿಂಗ್ ಮಾಡಿ ಫೋನ್ ಮಾಡಿದ್ರು ಸಖತ್ ಆಗಿ ಮಾಡಿದ್ಯಾ ಮಾ ತುಂಬಾ ಚೆನ್ನಾಗಿ ಆಗುತ್ತೆ ಈ ಸಿನಿಮಾ ನಿನಗೆ ಅಂತ. ಇಡೀ ಕರ್ನಾಟಕ ಕರೆದುಕೊಂಡು ಸುತ್ತಾಡಿಸಿಕೊಂಡು ಬಂದ್ರು. ಯಾರೇ ನನ್ನನ್ನು unlucky ಅಂದ್ರೂ ಶಿವಣ್ಣ ಮಾತ್ರ ನಮ್ಮ ಪ್ರೀ ರಿಲೀಸ್ ಈವೆಂಟ್‌ಯಿಂದ ಹಿಡಿದು ಇಲ್ಲಿವರೆಗೂ ಧನು ನನಗೆ ಲಕ್ಕಿ ಆರ್ಟಿಸ್ಟ್ ಅಂತಿದ್ದಾರೆ. ಅಂದ್ರೆ ಹಿಂದೆ ಏನೋ ಇತ್ತಲ್ವಾ ಅದು ಅವರಿಗೆ ಗೊತ್ತಿದೆ ಅದಿಕ್ಕೆ ಲಕ್ಕಿ ಲಕ್ಕಿ ಅಂತ ಹೇಳ್ತಿದ್ದಾರೆ' ಎಂದು ಧನಂಜಯ್ ಹೇಳಿದ್ದಾರೆ.
'ಅಷ್ಟು ದೊಡ್ಡ ನಟನಾದರೂ ಒಬ್ಬ ಹೊಸ ಕಲಾವಿನದ ಲಕ್ಕಿ ಚಾರ್ಮ್ ಲಕ್ಕಿ ಆರ್ಟಿಸ್ಟ್ ಒಬ್ಬ ಫ್ರೆಂಡ್ ಅಂತ ಹೇಳುವ ವ್ಯಕ್ತಿತ್ವ ಅವರಿಗಿದೆ. ಆ ವ್ಯಕ್ತಿತ್ವಕ್ಕೆ ಏನ್ ಹೇಳೋದು?ಎಲ್ಲೇ ಮಾತನಾಡಿಸಿದರೂ ಶಿವಣ್ಣ ಈ ನಾಲ್ಕು ಸಿನಿಮಾಗಳ ಆದ ಮೇಲೂ ವಸಿಷ್ಠ ನಮ್ ಲಕ್ಕಿ ಆರ್ಟಿಸ್ಟ್ ಅಂತಾರೆ. ಅಷ್ಟು ಹುರಿದುಂಬಿಸುವುದು ಇದ್ಯಲ್ಲ ಅದು ಅಗತ್ಯನೇ ಇಲ್ಲ ಆದರೂ ನಟರಾಗಿ ನಾನು ಶಿವಣ್ಣಗೆ ಎಷ್ಟು ಫ್ಯಾನೋ ಅದನ್ನು ಮೀರಿ ದಾಟಿ ನಾಲ್ಕು ವರ್ಷ ಜರ್ನಿ ಸೂಪರ್ ಅವರ ವ್ಯಕ್ತಿತ್ವ ಗ್ರೇಟ್' ಎಂದು ವಸಿಷ್ಠ ಹೇಳಿದ್ದಾರೆ.