ಬಿಗ್ ಬಾಸ್ 15 ಫಿನಾಲೆ ವೇದಿಕೆಯಲ್ಲಿ ಕಾಣಿಸಿಕೊಂಡ ಶೆಹನಾಜ್ ಗಿಲ್. ಭಾವುಕರಾದ ಸಲ್ಮಾನ್ ಖಾನ್..
ಹಿಂದಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 15 ಇಂದು ಮುಕ್ತಾಯವಾಗಲಿದೆ. ಒಬ್ಬ ವಿನ್ನರ್ ಘೋಷಣೆ ಮಾಡುವ ಮೂಲಕ ಟ್ರೋಫಿ ಮತ್ತು ದೊಡ್ಡ ಮೊತ್ತದ ಹಣವನ್ನು ಅವರ ಕೈಯಲ್ಲಿಟ್ಟು ಸಲ್ಲು ಬಾಯ್ ಮುಂದಿನ ಸೀಸನ್‌ಗೆ ಕಾಲಿಡುತ್ತಾರೆ. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅತ್ತಿದ್ದಾರೆ. ಪಕ್ಕದಲ್ಲಿ ಶೆಹೆನಾಜ್ ಗಿಲ್ ಕಾಣಿಸಿಕೊಂಡಿದ್ದಾರೆ ಹೀಗಾಗಿ ವೀಕ್ಷಕರಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗಿದೆ.
ಹೌದು! ಬಿಗ್ ಬಾಸ್ ಸೀಸನ್ 15ರ ಫಿನಾಲೆ ವೇದಿಕೆ ಪ್ರತಿ ಸೀಸನ್‌ನ ವಿಜೇತರನ್ನು ಕರೆಸಿ ಮಾತನಾಡಿಸುತ್ತಾರೆ ಕುಣಿಸುತ್ತಾರೆ. ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಪರವಾಗಿ ಅವರ ಪ್ರೇಯಸಿ ಶೆಹನಾಜ್ ಗಿಲ್ ಆಗಮಿಸಿದ್ದಾರೆ. ಆಕೆಯನ್ನು ಬರ ಮಾಡಿಕೊಂಡ ಸಲ್ಮಾನ್ ಖಾನ್ ಕಾರ್ಯಕ್ರಮದ ಬಗ್ಗೆ ಮಾತನಾಡಿಸುತ್ತಾರೆ ಆಗ ಇದ್ದಿಕ್ಕಿದ್ದಂತೆ ಶೆಹನಾಜ್ ಆಳುವುದಕ್ಕೆ ಶುರು ಮಾಡುತ್ತಾರೆ.
ಜೋರಾದ ಚಪ್ಪಾಳೆಯೊಂದಿಗೆ ಶೆಹನಾಜ್‌ನ ಬರ ಮಾಡಿಕೊಂಡ ಸಲ್ಮಾನ್ ಮತ್ತು ಬಿಗ್ ಬಾಸ್ ಟೀಂ ಆಕೆಗೆ ಮಾತನಾಡಲು ಮೈಕ್ ಕೊಡುತ್ತಾರೆ. ಮಾತನಾಡಲು ಶುರು ಮಾಡಿದ ಶೆಹನಾಜ್ 'ನಿಮ್ಮನ್ನು ನೋಡಿ ಮಾತನಾಡಲು ಶುರು ಮಾಡಿದರೆ ನನಗೆ ಅಳುಬರುತ್ತದೆ' ಎಂದಿದ್ದಾರೆ. ಅದನ್ನು ಕೇಳಿ ಸಲ್ಮಾನ್‌ಗೆ ಬೇಸರವಾಗುತ್ತದೆ, ಆಕೆಯನ್ನು ಸಮಾಧಾನ ಮಾಡಲು ತಬ್ಬಿಕೊಳ್ಳುತ್ತಾರೆ ಆದರೆ ದುಖಃ ತಡೆದುಕೊಳ್ಳಲಾಗದೆ ಸಲ್ಮಾನ್ ಖಾನ್ ಕೂಡ ಅಳುತ್ತಾರೆ.
Salaman khan: ಪಂಜಾಬ್‌ನ ಕತ್ರೀನಾ ಕೈಫ್, ಸಿದ್ಧಾರ್ಥ್ ಶುಕ್ಲನ ಗರ್ಲ್‌ಫ್ರೆಂಡ್‌ನ ಹೊಗಳಿದ ಸಲ್ಲುಸಿದ್ಧಾರ್ಥ್ಗಾಗಿ ಶೆಹನಾಜ್ 'Tu Yahin Hai' ವಿಡಿಯೋಗೆ ಡ್ಯಾನ್ಸ್ ಮಾಡಿದ್ದಾರೆ. ಇರು ರೆಕಾರ್ಡೆಡ್ ಡ್ಯಾನ್ಸ್ ಆಗಿದ್ದು ವೀಕ್ಷಕರಿಗೆ ಇಂದು ಫಿನಾಲೆ ದಿನ ತೋರಿಸಲಾಗುತ್ತದೆ. ಎಷ್ಟೇ ಬಿಗ್ ಬಾಸ್ ಸೀಸ್‌ನಗಳು ಬರಲಿ ಹೋಗಲಿ ಯಾರೂ ಕೂಡ ಸಿದ್ಧಾರ್ಥ್‌ನ ಮರೆಯುವುದಿಲ್ಲ. ಸಿದ್ ಮತ್ತು ಶೆಹನಾಜ್ ನಡುವಿದ್ದ ಪ್ರೀತಿ ಸಣ್ಣ ಪುಟ್ಟ ಜಗಳ ಮತ್ತು ಹಾಸ್ಯ ವಿಡಿಯೋಗಳು ಈಗಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ಪ್ರತಿಕ್, ಶಮಿತಾ ಶೆಟ್ಟಿ, ನಿಶಾಂತ್ ಭಟ್ ಮತ್ತು ರಶ್ಮಿ ದೇಸಾಯಿ ಸೀಸನ್ 15ರ ಟಾಪ್ 5 ಫೈನಲಿಸ್ಟ್ ಆಗಿದ್ದರು. ಫಿನಾಲೆ ಹಿಂದಿನ ದಿನ ರಶ್ಮಿ ದೇಸಾಯಿ ಎಲಿಮಿನೇಟ್ ಆಗಿದ್ದಾರೆ. ರಶ್ಮಿ ಹೊರ ಬಂದ ನಂತರ ಶಮಿತಾ ಮತ್ತು ತೇಜಸ್ವಿ ನಡುವೆ ಜೋರಾದ ಜಗಳ ನಡೆದಿದೆ. ಶಮಿತಾ ನೀನು ಆಂಟಿ ಎಂದು ನ್ಯಾಷನಲ್ ಟಿವಿಯಲ್ಲಿ ರಶ್ಮಿ ಕರೆದಿದ್ದಾರೆ. ಹೀಗಾಗಿ ಇಬ್ಬರ ನಡುವೆ ದೊಡ್ಡ ಜಗಳ ಶುರುವಾಗಿದೆ ಮನೆಯಲ್ಲಿ ಕೇವಲ ನಾಲ್ಕು ಸದಸ್ಯರಿರುವ ಕಾರಣ ಯಾರೂ ಜಗಳ ಬಿಡಿಸಲು ಹೋಗಲಿಲ್ಲ.
ಶಮಿತಾ ಶೆಟ್ಟಿ ಈ ಟ್ರೋಫಿ ಪಡೆಯಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ನಟ್ಟಿಗರು ಆಗ್ರಹಿಸುತ್ತಿದ್ದಾರೆ. ಶ್ರಮದಿಂದ ಆಟವಾಡಿ ವಿನ್ನರ್ ಟ್ರೋಫಿ ಪಡೆಯಬೇಕು ಆದರೆ ಶಮಿತಾ ಗೆದ್ದರೆ ಅದು ಹಣದಿಂದ ಮತ್ತು influenceನಿಂದ ಎಂದು ಚರ್ಚೆ ಮಾಡುತ್ತಿದ್ದಾರೆ. ರಾಖಿ ಸಾವಂತ್ ಕೂಡ ಬಿಗ್ ಬಾಸ್ ಟೀಂ ಮೇಲೆ ಬೇಸರ ವ್ಯಕ್ತ ಪಡಿಸಿದ್ದರು.