ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಎರಡು ಸೀರಿಯಲ್ಗಳು ಈ ವಾರ ಮುಗಿಯಲಿವೆ. ಹಾಗಿದ್ದರೆ ಆ ಧಾರಾವಾಹಿಗಳು ಯಾವುವು?
ಧಾರಾವಾಹಿಗಳು ಇಂದು ಜನಮನ ಗೆದ್ದುಬಿಟ್ಟಿವೆ. ಪ್ರತಿ ದಿನ ಊಟವಾದ್ರೂ ಬಿಡ್ತಾರೆ ಸೀರಿಯಲ್ಗಳನ್ನು ಬಿಡಲ್ಲ ಎನ್ನುವ ಮನಸ್ಥಿತಿ ಹಲವರದ್ದು. ಅದರಲ್ಲಿಯೂ ಹೆಚ್ಚಿನ ಮಹಿಳೆಯರು ಧಾರಾವಾಹಿಗಳಿಗೆ ಎಡಿಕ್ಟ್ ಆಗಿಬಿಟ್ಟಿದ್ದಾರೆ. ಸೀರಿಯಲ್ಗಳನ್ನು ಚ್ಯೂಯಿಂಗ್ಗಮ್ನಂತೆ ಎಳೆಯುತ್ತಾರೆ, ಇದ್ದಲ್ಲೇ ಇರುತ್ತದೆ. ಒಂದು ಗಂಟೆಯಲ್ಲಿ ಹೇಳಬೇಕಿರೋ ವಿಷಯವನ್ನು ಐದಾರು ವರ್ಷ ಮಾಡುತ್ತಾರೆ... ಹೀಗೆ ದಿನನಿತ್ಯವೂ ಬೈದುಕೊಳ್ಳುತ್ತಲೇ ಒಂದು ದಿನವನ್ನೂ ಮಿಸ್ ಮಾಡದೇ ನೋಡುವ ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಇದೀಗ ಸೋಷಿಯಲ್ ಮೀಡಿಯಾ ಸಕತ್ ಆ್ಯಕ್ಟೀವ್ ಆಗಿರುವ ಹೊತ್ತಿನಲ್ಲಿ ಧಾರಾವಾಹಿಗಳ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೇರಾನೇರವಾಗಿಯೇ ಹೇಳುತ್ತಾರೆ. ಕೆಲವೊಮ್ಮೆ ನಿರ್ದೇಶಕರಿಗೆ ಬುದ್ಧಿ ಹೇಳುವುದೂ ಇದೆ. ಕೆಲವು ಸೀರಿಯಲ್ಗಳನ್ನು ಹಾಡಿ ಹೊಗಳಿದರೆ, ಮತ್ತೆ ಕೆಲವು ಸೀರಿಯಲ್ಗಳನ್ನು ಬೇಗ ಮುಗಿಸಿ ಎಂದು ತಕರಾರು ಮಾಡುತ್ತಾರೆ. ಇನ್ನು ಕೆಲವು ನೆಗೆಟಿವ್ ರೋಲ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಆದ್ದರಿಂದ ಧಾರಾವಾಹಿಗಳು ಎಷ್ಟೋ ಮನೆಗಳಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ, ಜೀವನದ ಒಂದು ಭಾಗವೇ ಆಗಿದೆ. ಅಲ್ಲಿ ನಡೆಯುತ್ತಿರುವ ಘಟನೆಗಳು ತಮ್ಮದೇ ಏನೋ ಎನ್ನುವಂತೆ ನೋಡುವ ದೊಡ್ಡ ಪ್ರೇಕ್ಷಕವರ್ಗವಿದ್ದು, ಇದೇ ಕಾರಣಕ್ಕೆ ಮನೆಮನೆಯ ಕಥೆಯ ರೀತಿಯಲ್ಲಿ ಸೀರಿಯಲ್ಗಳನ್ನು ಎಳೆದುಕೊಂಡು ಹೋಗುವುದು ನಿರ್ದೇಶಕರಿಗೆ ತಿಳಿದಿದೆ. ಕೆಲವು ಸೀರಿಯಲ್ಗಳನ್ನು ಬೇಗ ಮುಗಿಸುವಂತೆ ಒತ್ತಾಯಿಸಿದರೆ, ಇನ್ನು ಕೆಲವು ಸೀರಿಯಲ್ಗಳು ಮುಗಿದು ಹೋದರೆ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಪ್ರೇಕ್ಷಕರು. ಇದೀಗ ಜೀ ಕನ್ನಡ ತನ್ನ ಎರಡು ಸೀರಿಯಲ್ಗಳನ್ನು ಮುಗಿಸುತ್ತಿದೆ. ಪ್ರತಿನಿತ್ಯ 6 ಮತ್ತು 6.30ಕ್ಕೆ ಪ್ರಸಾರ ಆಗ್ತಿರೋ ಹಿಟ್ಲರ್ ಕಲ್ಯಾಣ ಮತ್ತು ಪಾರು ಸೀರಿಯಲ್ಗಳು ಶೀಘ್ರದಲ್ಲಿಯೇ ಮುಗಿಯಲಿವೆ. ಈ ಸೀರಿಯಲ್ಗಳ ಜಾಗಕ್ಕೆ, ಸತ್ಯ ಮತ್ತು ಶ್ರೀರಸ್ತು ಶುಭಮಸ್ತು ಸೀರಿಯಲ್ಗಳು ಕ್ರಮವಾಗಿ 6 ಮತ್ತು 6.30ಕ್ಕೆ ಬರಲಿವೆ. 18ನೇ ತಾರೀಖಿನಿಂದ ಈ ಬದಲಾವಣೆ ಆಗಲಿದೆ. ಇದಾಗಲೇ ಇದರ ಪ್ರೊಮೋ ಅನ್ನು ಜೀ ವಾಹಿನಿ ಬಿಡುಗಡೆ ಮಾಡಿದ್ದು, ಹಿಟ್ಲರ್ ಕಲ್ಯಾಣ ಮತ್ತು ಪಾರು ಸೀರಿಯಲ್ಗಳ ಅಂತಿಮ ಸಂಚಿಕೆಗಳು ಆರಂಭವಾಗಲಿರುವುದಾಗಿ ಹೇಳಿದೆ.
ಸೇರಿಗೆ ಸವಾಸೇರ್: ಒಂದೇ ತಾಯಿ ಹೊಟ್ಟೆ ಹುಟ್ಟಿದವರಲ್ಲಿ ಅದೆಷ್ಟು ವ್ಯತ್ಯಾಸ? ನಿಜ ಜೀವನದಲ್ಲೂ ಹೀಗೆ ಅಲ್ವಾ?
ಹಿಟ್ಲರ್ ಕಲ್ಯಾಣದ ಕುರಿತು ಹೇಳುವುದಾದರೆ, ಅಂತರಾ ಹೆಸರು ಹೇಳಿಕೊಂಡು ಬಂದಿರುವ ಪ್ರಾರ್ಥನಾ ಇಲ್ಲಿಯವರೆಗೆ ಎಜೆಯನ್ನೇ ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಎಜೆಗೆ ಮನೆಯವರೆಲ್ಲರೂ ಈಕೆ ಪ್ರಾರ್ಥನಾನೇ ವಿನಾ ಅಂತರಾ ಅಲ್ಲ ಎಂದು ಹೇಳಿದರೂ ಎಜೆ ಕೇಳುವ ಸ್ಥಿತಿಯಲ್ಲಿ ಇಲ್ಲ. ಮಿಸ್ಟರ್ ಪರ್ಫೆಕ್ಟ್ ಎಂದೇ ಹೇಳಲಾಗುವ ಎಜೆಗೆ ಇಷ್ಟೂ ಗೊತ್ತಾಗುತ್ತಿಲ್ವಾ ಎಂದು ಹಲವರು ನೆಟ್ಟಿಗರು ದಿನವೂ ಕಾಲೆಳೆಯುತ್ತಿದ್ದರು. ಬೇಗ ಗೊತ್ತಾಗುವಂತೆ ಮಾಡ್ರಪ್ಪ ಎಂದು ಕಮೆಂಟ್ ಹಾಕಲಾಗುತ್ತಿತ್ತು. ಈ ಸೀರಿಯಲ್ನಲ್ಲಿ ಎಜೆ ಮತ್ತು ಲೀಲಾ ಜೋಡಿಯನ್ನು ಫ್ಯಾನ್ಸ್ ತುಂಬಾ ಮೆಚ್ಚಿಕೊಂಡಿದ್ದಾರೆ. ಇವರಿಬ್ಬರನ್ನೂ ಬೇಗ ಒಂದು ಮಾಡಿ ಪ್ರಾರ್ಥನಾಳನ್ನು ಜೈಲಿಗೆ ಅಟ್ಟಿ ಎಂದು ಹೇಳಲಾಗುತ್ತಿದೆ. ಸದ್ಯ ವಿಶ್ವರೂಪ್ ಕಾಣೆಯಾಗಿದ್ದು, ಆತನ ಹುಡುಕಾಟ ನಡೆದಿದೆ. ಕೆಲವು ಸಂಚಿಕೆಗಳಿಂದ ಎಜೆ ತಾಯಿ ಮಿಸ್ ಆಗಿದ್ದು, ಅವಳೆಲ್ಲಿ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ. ಇದೀಗ ಶೀಘ್ರವೇ ಎಲ್ಲದಕ್ಕೂ ಉತ್ತರ ಸಿಗಲಿದೆ.
ಅದೇ ರೀತಿ ಇನ್ನೊಂದು ಸೀರಿಯಲ್ ಪಾರು. ಇದರಲ್ಲಿ ಪಾರು ತನ್ನದೇ ಮಗುವನ್ನು ಜನನಿಗೆ ಕೊಟ್ಟಿದ್ದಾಳೆ. ಮಗು ಬೆಳೆದು ದೊಡ್ಡದಾಗಿದ್ದರೂ ಜನನಿಗೆ ವಿಷಯ ಗೊತ್ತಿಲ್ಲ. ಪಾರು ತನ್ನ ಮಗುವಿನ ಮೇಲೆ ಪ್ರೀತಿ ತೋರುವುದು ಈಕೆಗೆ ಸಹಿಸಲು ಆಗುತ್ತಿಲ್ಲ. ಸದಾ ಪಾರು ಮೇಲೆ ದ್ವೇಷ ಸಾಧಿಸ್ತಿರೋ ಜನನಿಯನ್ನು ಒಂದುಮಾಡಲು ಅತ್ತೆ ಅಖಿಲಾಂಡೇಶ್ವರಿ ನೋಡುತ್ತಿದ್ದಾರೆ. ಮಗುವಿನ ವಿಷಯ ಜನನಿಗೆ ಗೊತ್ತಾಗತ್ತಾ? ಇಬ್ಬರೂ ಒಂದಾಗುತ್ತಾರಾ ಎನ್ನುವುದು ಈಗಿರುವ ಕುತೂಹಲ. ಈ ಎರಡು ಸೀರಿಯಲ್ಗಳು ಮುಗಿಯುತ್ತಿರುವುದಕ್ಕೆ ಇದರ ಫ್ಯಾನ್ಸ್ ಬೇಸರ ಹೊರಹಾಕುತ್ತಿದ್ದಾರೆ. 18ರಿಂದ ರಾತ್ರಿ 9.30ಕ್ಕೆ ಶ್ರಾವಣಿ ಸುಬ್ರಮಣ್ಯ ಎನ್ನುವ ಹೊಸ ಸೀರಿಯಲ್ ಪ್ರಸಾರ ಆಗ್ತಿದೆ.
ಲೈಂಗಿಕ ದೌರ್ಜನ್ಯ ಆರೋಪಿ ಜೊತೆ ಮಗು ಬಯಸಿದ್ದ ದೀಪಿಕಾ: ಹಳೆಯ ವಿಡಿಯೋದಲ್ಲಿ ನಟಿ ಹೇಳಿದ್ದೇನು?