ಡೀಸೆಂಟ್ ಆಗಿದ್ದ ಕನ್ನಡತಿಯಲ್ಲೂ ಶುರುವಾಗಿದೆ ರೊಮ್ಯಾನ್ಸ್‌ ಕಚಗುಳಿ

By Suvarna News  |  First Published Jun 5, 2022, 1:07 PM IST

ಕನ್ನಡ ಸೀರಿಯಲ್‌ಗಳಲ್ಲೀಗ ಹೈ ವೋಲ್ಟೇಜ್ ಲವ್ ಟ್ರೆಂಡ್ ಆಗ್ತಿದೆ. ಯಾವ ಸೀರಿಯಲ್‌ ನೋಡಿದ್ರೂ ಪ್ರೀತಿಯಲ್ಲಿ ಬಿದ್ದಿರುವ, ವಿರಹದಲ್ಲಿ ಒದ್ದಾಡುವ ನಾಯಕ, ನಾಯಕಿ. ಜನ ಇದನ್ನು ಸಖತ್ತಾಗಿ ಎನ್‌ಜಾಯ್ ಮಾಡ್ತಿದ್ದಾರೆ.


ಕನ್ನಡದಲ್ಲಿ ಸದ್ಯಕ್ಕೆ ಬಹಳ ಜನಪ್ರಿಯವಾಗ್ತಿರೋ ಸೀರಿಯಲ್‌(Serial) ಗಳಲ್ಲೆಲ್ಲ ನಾಯಕಿ ನಾಯಕಿ ರೊಮ್ಯಾನ್ಸ್ ಸೀನ್‌ಗಳು ಭಲೇ ಜನಪ್ರಿಯ ಆಗ್ತಿವೆ. ಜನ ರೊಮ್ಯಾಂಟಿಕ್ ಸೀನ್‌(Romantic scene)ಗಳನ್ನು ಮಜವಾಗಿ ಎನ್‌ಜಾಯ್(Enjoy) ಮಾಡ್ತಿದ್ದಾರೆ. ಸಣ್ಣ ತುಂಟಾಟ, ತರಲೆ, ಯಾವುದೋ ಆಕಸ್ಮಿಕ ಘಟನೆಯಲ್ಲಿ ಒಂದಾಗುವ ಜೀವಗಳು.. ಈ ಕಾಂಸೆಪ್ಟ್(Cocept) ಇದೀಗ ಸೀರಿಯಲ್ ಲೋಕದಲ್ಲಿ ಜನಪ್ರಿಯ ಆಗ್ತಿದೆ.

'ಗಟ್ಟಿಮೇಳ'(Gattimela)ದಲ್ಲಿ ವೇದಾಂತ್ ಮತ್ತು ಅಮೂಲ್ಯ ರೊಮ್ಯಾಂಟಿಕ್ ಸೀನ್‌ಗಳು (Romantic Scenes) ಹುಟ್ಟುಹಾಕಿದ ಕ್ರೇಜ್(Craze) ಸಣ್ಣದಲ್ಲ. ಈ ಕ್ಯೂಟ್ ಕಪಲ್‌ನ(Cute Couple) ಯಾವ ಥರ ನೋಡೋಕೆ ಇಷ್ಟ? ತುಂಟಾಟದಲ್ಲೋ, ಕೋಳಿ ಜಗಳದಲ್ಲೋ, ರೊಮ್ಯಾಂಟಿಕ್ ಆಗಿಯೋ ಅಥವಾ ಈ ಎಲ್ಲಾ ರೀತಿಯಲ್ಲಾ? ಅನ್ನೋ ಪ್ರಶ್ನೆಯನ್ನು ಚಾನೆಲ್ ಸೋಷಿಯಲ್ ಮೀಡಿಯಾ(Social Media)ದಲ್ಲಿ ಜನರ ಮುಂದಿಟ್ಟಿತ್ತು. ಅದಕ್ಕೆ ಜನ ಕಮೆಂಟ್ ಮಾಡಿರೋ ರೀತಿ ನೋಡಿದ್ದರೆ, ಸೀರಿಯಲ್‌ ನೋಡೋ ಹೆಚ್ಚಿನವರಿಗೆ ತುಂಟಾಟ, ಹುಸಿಮುನಿಸು, ಕಳ್ಳಾಟ, ತರಲೆ ಹಾಗೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಹೀರೋ ಹೀರೋಯಿನ್‌(Hero, Horoine)ನ ನೋಡೋಕೆ ಇಷ್ಟ ಅಂತ ಗೊತ್ತಾಗುತ್ತೆ. ಅದೇ ಥರ ಸಣ್ಣ ಕಾಮಿಡಿ ತಂದು, ಅದಕ್ಕೆ ಒಂದು ಡ್ರಾಮಾ ಬೆರೆಸಿ, ಈ ಜೋಡಿಯನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ 'ಗಟ್ಟಿಮೇಳ'(Gattimela) ಸೀರಿಯಲ್. ಇದರಲ್ಲೀಗ ಹೀರೋ ವೇದಾಂತ್ (Vedanth) ಗೆ ರೌಡಿ ಬೇಬಿ, ತರ್ಲೆ ಹುಡುಗಿ, ಆದ್ರೆ ಮನಸ್ಸು ತುಂಬ ಒಳ್ಳೆತನಗಳೇ ತುಂಬಿರುವ ಅಮೂಲ್ಯ(Amulya) ಮೇಲೆ ಬೆಟ್ಟದಷ್ಟು ಪ್ರೀತಿ. ಇವರಿಬ್ಬರ ಪ್ರೀತಿ ಎಲ್ಲರಿಗೂ ಇಷ್ಟವಾಗ್ತಿದೆ. ಅದಕ್ಕೆ ಈ ಸೀರಿಯಲ್‌ ಹೆಚ್ಚಿನ ಸಲ ಟಿಆರ್‌ಪಿ(TRP)ಯಲ್ಲಿ ಮೊದಲೆರಡು ಸ್ಥಾನಗಳಿಗೆ ಫೈಟ್(First) ಮಾಡ್ತಿದೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Zee Kannada (@zeekannada)

 

'ಕನ್ನಡತಿ'(Kannadathi) ಸೀರಿಯಲ್‌ ಡೀಸೆಂಟ್ ಲವ್(Decent Love) ಗೆ ಫೇಮಸ್. ಹನಿ ಹನಿ ಮಳೆ ಥರ ಹರ್ಷ ಮತ್ತು ಭುವಿಯ ಪ್ರೀತಿ. ಫುಲ್ ಸೀರಿಯಸ್(Full Serial), ತುಂಬ ಡೀಸೆಂಟು ಹುಡುಗಿ ಭುವಿ, ಅವಳಿಗಾಗಿ ಕಂಪ್ಲೀಟ್ ಚೇಂಜ್ ಆಗಿರೋ ಹರ್ಷ ಆಗಾಗ ಭುವಿಯ ಜೊತೆ ರೊಮ್ಯಾಂಟಿಕ್ ಸೀನ್‌ನಲ್ಲಿ ಕಾಣಿಸಿಕೊಳ್ಳೋದನ್ನು ಜನ ಯಾವ ಮಟ್ಟಿಗೆ ಹಚ್ಕೊಂಡಿದ್ದಾರೆ ಅಂದರೆ ರಿಯಲ್‌ ಲೈಫ(Real Life)ಲ್ಲೂ ನೀವಿಬ್ರೂ ಮದುವೆ ಆಗಿ ಅಂತ ಪೋರ್ಸ್(Force) ಮಾಡ್ತಿದ್ದಾರೆ. ಸೀರಿಯಲ್ ನ ಸೀರಿಯಲ್‌ ಥರ ನೋಡಿ ಇವ್ರು ಎಷ್ಟು ಹೇಳಿದ್ರೂ ಅರ್ಥ ಮಾಡ್ಕೊಳ್ಳೋದಕ್ಕೆ ರೆಡಿ ಇಲ್ಲ. ಆ ಲೆವೆಲ್‌ಗೆ ಜನ ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಈ ಸೀರಿಯಲ್‌ನಲ್ಲೋ ಪದೇ ಪದೇ ಇವ್ರಿಬ್ರಿಗೆ ಕಷ್ಟದ ಮೇಲೆ ಕಷ್ಟ ಕೊಡೋ ಸೀನ್‌ಗಳೇ ಬರ್ತಿವೆ. ಅದನ್ನು ಕಂಡು ಫ್ಯಾನ್ಸ್‌ಗೆ ಅಸಹನೆ. ಕೊನೆಗೂ ಈ ಸೀರಿಯಲ್‌ನಲ್ಲಿ ಹವಿ ಮದುವೆ ಹತ್ತಿರ ಬರ್ತಿದೆ. ಆದರೆ ವರು ಇವರಿಬ್ಬರ ಮಧ್ಯೆ ನಿಂತಿದ್ದಾಳೆ. ಮದುವೆ ಮುರಿಯಲು ಅವಳ ಪ್ಲಾನ್ ಏನು, ಅದನ್ನು ಹರ್ಷ ಭುವಿ ಹೇಗೆ ಗೆಲ್ತಾರೆ ಅನ್ನೋದು ಸದ್ಯದ ಕುತೂಹಲ.

Kannadathi: ಹಣೆಬರಹ ಬದಲಾಯ್ಸಿ ಹರ್ಷನ ಜೊತೆ ಹಸೆಮಣೆ ಏರ್ತಾಳಂತೆ ವರೂ, ಏನ್ ಹೆದ್ರಿಸ್ತೀರಾ ಗುರೂ!

'ಲಕ್ಷಣ'(Lakshana) ಧಾರಾವಾಹಿಯಲ್ಲಿ ಭೂಪತಿ ಮತ್ತು ಲಕ್ಷಣ ನಡುವೆ ಲೈಟಾಗಿ ರೊಮ್ಯಾನ್ಸ್ ಶುರುವಾಗಿದೆ. ಶುರು ಶುರುವಲ್ಲಿ ಲಕ್ಷಣ ಮೇಲೆ ರೇಗಾಡಿದ್ರೂ ಈಗೀಗ ಅವಳಿಲ್ಲ ಅಂದರೆ ಕೈಕಾಲೇ ಆಡದ ಹಾಗಾಗಿದೆ ಭೂಪತಿಗೆ. ಅದು ಇಬ್ಬರ ನಡುವಿನ ಪ್ರೀತಿಯಿಂದ ಹುಟ್ಟಿರೋ ಅನಿವಾರ್ಯತೆ. ಈ ಸನ್ನಿವೇಶದಲ್ಲೇ ಆಕಸ್ಮಿಕ ಅನ್ನೋ ಹಾಗೆ ರೊಮ್ಯಾಂಟಿಕ್ ಸೀನ್‌ಗಳು ಬೆಂಗಳೂರು ಮಳೆ ರೀತಿ ಬಂದು ಹೋಗುತ್ತಿರುತ್ತವೆ.

'ಕನ್ಯಾಕುಮಾರಿ'(Kanyakumari) ಯಲ್ಲಿ ಕನ್ನಿಕಾ ಮತ್ತು ಚರಣ್ ಅವರನ್ನು ದೂರ ಮಾಡಿ ಚರಣ್‌ನ ತಾನು ಮದುವೆ ಆಗಬೇಕು ಅನ್ನೋ ಯಾಮಿನಿ ಪ್ಲಾನೇ ಈ ಜೋಡಿಯನ್ನು ಮತ್ತೆ ಮತ್ತೆ ಹತ್ತಿರಕ್ಕೆ ತರ್ತಿದೆ. ಕನ್ನಿಕಾ ಚರಣ್ ಬಳಿ ಹೋಗಿ, 'ನನ್ನ ತಬ್ಕೊಳ್ಳಿ' ಅಂತ ಬಾಯ್ಬಿಟ್ಟು ಹೇಳೋದು ಕೊಂಚ ಆಡ್ ಅನಿಸಿದ್ರೂ ಇದನ್ನೂ ಜನ ಎನ್‌ಜಾಯ್ ಮಾಡದೇ ಇಲ್ಲ. ಆದರೆ ಪ್ರೀತಿ, ರೊಮ್ಯಾಂಟಿಕ್ ದೃಶ್ಯಗಳು ಸೂಕ್ಷ್ಮ ಆದಷ್ಟು, ಮಾತು ಕಮ್ಮಿಯಾಗಿ ಭಾವನೆ ಹೆಚ್ಚಾದಷ್ಟೂ ಅದಕ್ಕಿರುವ ಪ್ರಭಾವ ಜಾಸ್ತಿ. ಅದನ್ನು ಈ ಸೀರಿಯಲ್ ರೈಟಿಂಗ್ ಟೀಮ್ ಅರ್ಥ ಮಾಡ್ಕೊಳ್ಬೇಕು.

Kanyakumari serial: ತಮ್ಮನಿಗೆ ತಾಳಿ ಮಹತ್ವ ಹೇಳ್ತಿದ್ದಾಳೆ ಕನ್ನಿಕಾ, ಕಟ್ಟಿದ ತಾಳಿ ತೆಗೆದಿಟ್ಟರೆ ಏನಾಗುತ್ತೆ?

"ದೊರೆಸಾನಿ'(Doresani)  ಯಲ್ಲಿ ಪ್ರೀತಿ ಅಪ್ಪನ ಪ್ರೀತಿಯಲ್ಲಿ ಕೊಚ್ಕೊಂಡು ಹೋಗೋ ಸ್ಥಿತಿಯಲ್ಲಿದೆ. 'ಪುಟ್ಟಕ್ಕನ ಮಕ್ಕಳು'(Puttakkana Makkalu) ಸೀರಿಯಲ್‌ನಲ್ಲೂ ಸ್ನೇಹ-ಕಂಠಿ ನಡುವಿನ ರೊಮ್ಯಾಂಟಿಕ್ ಸೀನ್‌ಗಳ ಬದಲಾಗಿ ವಿಷ, ನಂಜುಗಳ ಡ್ರಾಮಾಗಳೇ ಹೆಚ್ಚಾಗ್ತಿವೆ.

ಎನೀವೇ ರೊಮ್ಯಾಂಟಿಕ್ ಸೀರಿಯಲ್‌ಗಳು ಇವತ್ತಿನ ಟ್ರೆಂಡ್. ಆ ಸಬ್ಜೆಕ್ಟ್ ಮೇಲೆ ಬಂದ್ರೆ ಸೀರಿಯಲ್ ಗೆಲ್ಲೋ ಚಾನ್ಸ್(Chance) ಕೊಂಚ ಜಾಸ್ತಿನೇ ಅನ್ನಬಹುದು.

Lakshana: ಕೋಟ್ಯಧಿಪತಿ ಮಗಳಾಗಿ ಮೆರೆದ ಶ್ವೇತಾ ಬೀದಿಗೆ ಬಿದ್ದಿದ್ದಾಳೆ, ಇನ್ಮೇಲೆ ಲೈಫ್ ಹೇಂಗೋ!

click me!