ಸರ್ಕಾರಿ ಶಾಲೆಗೆ ಹೊಸ ಮೆರಗು ನೀಡಿದ 'ಕನ್ನಡತಿ' ನಟ ಕಿರಣ್ ರಾಜ್

Published : Jun 04, 2022, 06:46 PM IST
ಸರ್ಕಾರಿ ಶಾಲೆಗೆ ಹೊಸ ಮೆರಗು ನೀಡಿದ 'ಕನ್ನಡತಿ' ನಟ ಕಿರಣ್ ರಾಜ್

ಸಾರಾಂಶ

ಕನ್ನಡತಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ನಟ ಕಿರಣ್ ರಾಜ್. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಕಿರಣ್ ರಾಜ್ ಸಾಮಾಜಿಕ ಕಾರ್ಯಗಳ ಮೂಲಕವೂ ಜನಪ್ರಿಯರಾಗಿದ್ದಾರೆ. ಕೊರೊನಾ ಕಾಲದಲ್ಲಿ ಇವರು ಮಾಡಿದ್ದ ಸಮಾಜಮುಖಿ ಕೆಲಸಗಳು ಅಷ್ಟಿಷ್ಟಲ್ಲ. ಮಂಗಳಮುಖಿಯರು ಸಹ ಕಿರಣ್ ರಾಜ್ ಸಹಾಯ ನೆನೆದು ಭಾವುಕರಾಗಿದ್ದರು.  

ಕನ್ನಡತಿ ಧಾರಾವಾಹಿ(Kannadathi Serial) ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ನಟ ಕಿರಣ್ ರಾಜ್(Kiran Raj). ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಕಿರಣ್ ರಾಜ್ ಸಾಮಾಜಿಕ ಕಾರ್ಯಗಳ ಮೂಲಕವೂ ಜನಪ್ರಿಯರಾಗಿದ್ದಾರೆ. ಕೊರೊನಾ ಕಾಲದಲ್ಲಿ ಇವರು ಮಾಡಿದ್ದ ಸಮಾಜಮುಖಿ ಕೆಲಸಗಳು ಅಷ್ಟಿಷ್ಟಲ್ಲ. ಮಂಗಳಮುಖಿಯರು ಸಹ ಕಿರಣ್ ರಾಜ್ ಸಹಾಯ ನೆನೆದು ಭಾವುಕರಾಗಿದ್ದರು.

ನಟ ಕಿರಣ್ ರಾಜ್ ತನ್ನ ಕಿರಣ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶೀತಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಮಕ್ಕಳ ಮನವಿ ಸ್ವೀಕರಿಸಿದ್ದ ನಟ ಕಿರಣ್ ರಾಜ್ ಶಾಲೆಯ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು. ತನ್ನ ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಈ ಕೆಲಸಕ್ಕೆ ಮುಂದಾಗಿದ್ದರು.

ಮಕ್ಕಳಿಗೆ ಶಾಲೆ ಮುಖ್ಯ‌. ದಿನದ ಹೆಚ್ಚಿನ ಭಾಗವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಅಂತಹ ಶಾಲೆ ಉತ್ತಮ ವ್ಯವಸ್ಥೆಯಲ್ಲಿರಬೇಕು ಎಂಬ ಆಶಯದಿಂದ ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಯನ್ನು ದುರಸ್ತಿ ಮಾಡಿ, ಸುಣ್ಣಬಣ್ಣದಿಂದ ಅಲಂಕರಿಸಿ ಕೊಟ್ಟಿದೆ. ಇದೀಗ ಹಳೆ ಶಾಲೆಗೆ ಹೊಸ ರೂಪ ಬಂದಿದೆ. ಸುಂದರವಾಗಿ ಕಂಗೊಳಿಸುತ್ತಿರುವ ಶಾಲೆಗೆ ಕಿರಣ್ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಶಾಲೆಯನ್ನು ವೀಕ್ಷಿಸಿ, ಮಕ್ಕಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋವನ್ನು ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಕನ್ನಡತಿ ಹೀರೋ ಕಿರಣ್ ರಾಜ್ ಬಳಿ ಇರೋ Mobile ಯಾವುದು? ಇದ್ರಲ್ಲಿ ಒಂದೇ ಒಂದು Selfie ಇಲ್ಲ ಯಾಕೆ?

ಕಿರಣ್ ರಾಜ್ ಮಾದರಿ ಕೆಲಸಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂಸ್ಥೆಯ ಸೇವೆಯನ್ನು ಕಂಡು ತಾವು ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಕೆಲವು ಸ್ವಯಂಸೇವಕರು ಮುಂದೆ ಬಂದಿರುವುದು ವಿಶೇಷ. ಇನ್ನು ರವಿ, ಮಣಿಕಂಠ (ಕಿರಣ್ ರಾಜ್ ಫೌಂಡೇಶನ್), ರೋಹಿತ್, ಜಾನ್ಸನ್, ಭೀಮೇಶ್, ಕಾವ್ಯ, ಮೇಘನಾ,‌ ಸಂತೋಷ್, ಜಿತೇಂದ್ರ, ಶಶಿಧರ್, ಯುಕ್ತ, ವಿಭಾ ಮುಂತಾದವರು ಪ್ರಮುಖ ‌ಸ್ವಯಂಸೇವಕರು ಈ ಕಾರ್ಯ ಮಾಡಿದ್ದಾರೆ.

Kannadathi: ಭುವಿ ಅಮ್ಮಮ್ಮ ಮಧ್ಯೆ ಸಿಕ್ಕಾಕ್ಕೊಂಡ ಹರ್ಷನ್ನ ದೇವ್ರೇ ಕಾಪಾಡ್ಬೇಕು!

ಕಿರಣ್ ರಾಜ್ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾರೆ ಮಾರ್ಚ್ 22 ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದರು. ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಜೊತೆ ತೆರೆಹಂಚಿಕೊಂಡಿದ್ದರು. ಈ ಸಿನಿಮಾ ಬಳಿಕ ಅಸತೋಮ ಸದ್ಗಮಯ ಸಿನಿಮಾ ಮೂಲಕ ಮತ್ತೆ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ರಾಧಿಕಾ ಚೇತನ್ ಮತ್ತು ಸುಕ್ರುತ ನಾಗ್ ಕಾಣಿಸಿಕೊಂಡಿದ್ದರು. ಕನ್ನಡ ಸಿನಿಮಾ ಬಳಿಕ ತೆಲುಗು ಸಿನಿಮಾದಲ್ಲೂ ಮಿಂಚಿದ್ದಾರೆ. ಇನ್ನು ಧಾರಾವಾಹಿಗಳ ಬಗ್ಗೆ ಹೇಳುವುದಾದರೆ ಕಿನ್ನರಿಯಲ್ಲಿ ಮಿಂಚಿದ್ದ ಕಿರಣ್ ರಾಜ್ ಬಳಿಕ ಕನ್ನಡತಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?