
ಆನಂದ್ ಜೇವೂರ್,
ತುಂಬಾ ಬೇಜಾರದಲ್ಲಿದ್ದಾಗ, ಒಂಟಿತನ ಕಾಡಿದಾಗ ಸಾಮಾನ್ಯವಾಗಿ ನಾವು ಹಾಡು ಕೇಳ್ತಾ ಇರ್ತೇವೆ, ಹೊರಗಿದ್ರೆ ಫೋನ್‌ನಲ್ಲಿ, ಮನೆಯಲ್ಲಾದರೆ ಟಿವಿಯಲ್ಲಿ. ಏನಿಲ್ಲವೆಂದರೂ, ನಮಗೆ ಇಷ್ಟವಾಗುವ ಹಾಡು ನಾವೇ ಹಾಡುತ್ತೇವೆ. ಫೋನ್‌ನಲ್ಲಾದರೆ ನಮಗೆ ಬೇಕಾದ ಹಾಡು ಆಯ್ಕೆ ಮಾಡಬಹುದು. ಆದರೆ ಟಿವಿಯಲ್ಲಿ ಬರುತ್ತಿರುವ ಹಾಡನ್ನು ಕೇಳಬೇಕು. ಆದರೂ ಟಿವಿ ಹಾಡುಗಳು ಯಾವತ್ತೂ ಬೇಡ ಅನ್ನಿಸಲ್ಲ. ಯಾಕಂದ್ರೆ ವೀಕ್ಷಕರ ಅಭಿರುಚಿ ಏನು ಅಂತ ಅವ್ರಿಗೂ ಗೊತ್ತಿರುತ್ತೆ. ಹೀಗೆ ಒಬ್ಬ ಯಂಗ್, ಎನರ್ಜಿಟಿಕ್ ಆಗಿರುವ, ತಮ್ಮ ಕಲರ್ಫುಲ್ ಮಾತುಗಳಿಂದ ಎಲ್ಲರಿಗೂ ಹತ್ತಿರವಾಗುವ ಯಾವ ಸಮಯದಲ್ಲಿ ಜನರಿಗೆ ಯಾವ ರೀತಿಯ ಹಾಡುಗಳು ಇಷ್ಟ ಆಗುತ್ತೆ ಅನ್ನೋ ಜ್ಞಾನ ಇರುವ ನಿರೂಪಕ ಒಬ್ಬರು ಇದ್ದಾರೆ. ಅವರೇ, ಸುಬ್ರಹ್ಮಣ್ಯ ತಿಲಕ್ ಅಲಿಯಾಸ್ V.J ಸುಬ್ಬು(Subramanya Tilak).
ಬೆಂಗಳೂರು ಮೂಲದವರಾಗಿರುವ ಇವರು ಶಂಕರಪ್ಪ ಹಾಗೂ ಸುಧಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಿರಿಯವರು. ಕ್ಯಾಂಬ್ರಿಜ್ ಸ್ಕೂಲ್ ಅಲ್ಲಿ ಶಾಲಾ ಶಿಕ್ಷಣ ಪಡೆದು, ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಪೂರೈಸಿದ ಇವರು, ನಂತರ ಡಿಪ್ಲೋಮಾ ಇನ್ ಮಾಸ್ ಕಮ್ಯುನಿಕೇಷನ್, ಎಂಬಿಎ ಇನ್ ಡಿಜಿಟಲ್ ಮಾರ್ಕೆಟಿಂಗ್, PGDM in Journalism, advertising & Public relation ಕೋರ್ಸ್‌ಗಳನ್ನೂ ಪೂರ್ಣಗೊಳಿಸಿದ್ದಾರೆ. ಅವರ ಕಲರ್‌ಫುಲ್ ಲೈಫ್ ಜರ್ನಿ ಅವರದ್ದೇ ಪದಗಳಲ್ಲಿ ಓದುವ.
ನಾನು ಚಿಕ್ಕವಯಸ್ಸಿನಿಂದಲೂ ತುಂಬಾ ಮಾತನಾಡುತ್ತಿದ್ದೆ. ಒಂದು ದಿನ ನನ್ನ ಆಂಟಿ ಬಂದು, ನೀನು ಚೆನ್ನಾಗಿ ಮಾತಾಡ್ತೀಯಾ. ಮುಂದೆ ಒಂದೊಳ್ಳೆ ಆರ್‌ಜೆ ಆಗು ಎಂದು ಶುಭ ಹಾರೈಸಿದ್ದರು. ಶಾಲೆಗೆ ಹೊರಡುವಾಗ, ಸಂಚರಿಸುವಾಗ, ಸ್ನಾನ ಮಾಡುವಾಗ ಹೀಗೆ ಪ್ರತಿದಿನ, ದೈನಂದಿನ ಚಟುವಟಿಕೆಗಳನ್ನು ಮಾಡುತ್ತಿರುವಾಗ ನನಗಿಷ್ಟವಾದ ಹಾಡುಗಳನ್ನು ಗುನುಗುತ್ತಾ ಇರುತ್ತಿದ್ದೆ. ಅದರೊಂದಿಗೆ ಆರ್‌ಜೆಗಳು ಮಾತನಾಡುವ ಹಾಗೆ ಕನ್ನಡಿ ಮುಂದೆ ನಿಂತು ಮಿಮಿಕ್ ಮಾಡುತ್ತಿದ್ದೆ. ಇವೆಲ್ಲವೂ ನನ್ನ ಭವಿಷ್ಯವನ್ನು ರೂಪಿಸುತ್ತಿದ್ದ ವಿಷಯಗಳು ಅಂತ ನನಗೆ ಆಗ ಅನಿಸಿರಲಿಲ್ಲ. ಕಾಲೇಜಿನಲ್ಲಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದೆ, ರೇಡಿಯೋ ಜಾಕಿಯಾಗಿ ಕಾಲೇಜು ರೇಡಿಯೋದಲ್ಲಿಯೂ ಕೆಲಸ ಮಾಡಿದ್ದೇನೆ.
Pizza ತಿನ್ನಲು ಹೋಗಿ ಅಪಾಯಿಂಟ್ಮೆಂಟ್ ಕಥೆ
ಇಂಜಿನಿಯರಿಂಗ್ ಎರಡನೇ ವರ್ಷದಲ್ಲಿ ಇದ್ದಾಗ ಒಮ್ಮೆ ಸ್ನೇಹಿತರೊಂದಿಗೆ ಪಿಜ್ಜಾ ತಿನ್ನೋಕೆ ಹೋಗಿದ್ದೆ. ಅಲ್ಲೇ ಪಕ್ಕದಲ್ಲಿ ಲೋಕಲ್ ಟಿವಿ ಚಾನೆಲ್ ಒಂದರಲ್ಲಿ ನಿರೂಪಣೆಗೆ ಆಡಿಷನ್ ನಡೀತಿತ್ತು. ಹೋಗಿ ರಿಜಿಸ್ಟರ್ ಮಾಡಿದ್ದು ಮಾತ್ರವಲ್ಲ, ಅಲ್ಲೇ ನನ್ನನ್ನು ಅಪಾಯಿಂಟ್ಮೆಂಟ್ ಸಹ ಮಾಡಿ ಬಿಟ್ಟರು. ಆಗ ತಿಂಗಳಿಗೆ ₹300 ಕೊಡುತ್ತಿದ್ದರು. ಇಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ಬಳಿಕ ಒಂದು ಇಂಗ್ಲಿಷ್ ಚಾನಲ್ ನಲ್ಲೂ ಕೆಲಸ ಮಾಡಿದ್ದೇನೆ. ಎಲ್ಲ ಅನುಭವದಿಂದ ಸುಲಭವಾಗಿ ಉದಯ ಮ್ಯೂಸಿಕ್ ಚಾನಲ್‌ನೊಳಗೆ ಕಾಲಿಟ್ಟ ನಾನು, ಈಗಲೂ ಅದರಲ್ಲೇ ನಾಲ್ಕು ವರ್ಷದ ಯಶಸ್ವಿಯಾಗಿ ಪ್ರಯಾಣ ಮಾಡುತ್ತಿದ್ದೇನೆ. ಪ್ರತಿದಿನ ಸಂಜೆ 6 ಗಂಟೆಗೆ "Happy Hours" ಕಾರ್ಯಕ್ರಮ ನಿರೂಪಿಸುವ ಇವರು, ಇದುವರೆಗೆ ಚಂದನವನದ 100ಕ್ಕೂ ಅಧಿಕ ಕಲಾವಿದರ ಸಂದರ್ಶನ ನಡೆಸಿದ್ದಾರೆ.
ನನಗೂ ಮದುವೆಯಾಗೊ ಆಸೆಯಾಗಿದೆ ಎಂದ ಅನುಶ್ರೀ; ಹಸೆಮಣೆ ಏರಲು ಸಜ್ಜಾದ್ರಾ ಖ್ಯಾತ ನಿರೂಪಕಿ?
ದೊರೆತ ಪ್ರಶಸ್ತಿ
ಇಂಜಿನಿಯರಿಂಗ್ ಕಲಿಯುತ್ತಿರುವಾಗಲೇ i3 ಅನ್ನೋ ಒಂದು ಪ್ಲಾಟ್ಫಾರ್ಮ್ ನಲ್ಲಿ ಕೇವಲ ಮೂರು ತಿಂಗಳಲ್ಲಿ 12 ಇಂಟರ್ನ್ಯಾಷನಲ್ ಸೋಶಿಯಲ್ ಇಂಪಾಕ್ಟಿಂಗ್ ಪ್ರಾಜೆಕ್ಟ್ಸ್ ಮಾಡಿ, ಅದರಲ್ಲಿ ಹೊಸದಾಗಿ ಎರಡು ಪ್ರಾಜೆಕ್ಟ್‌ಗಳನ್ನು ಶುರು ಮಾಡಿ ಸರಿಸುಮಾರು ಒಂದು ಲಕ್ಷ ಜನರಿಗೆ ಇಂಪ್ಯಾಕ್ಟ್ ಮಾಡಿದ್ದಕ್ಕೆ "TRUE IUIT" ಪ್ರಶಸ್ತಿ ದೊರೆತಿದ್ದು, ಅದರೊಂದಿಗೆ ಒಂದು ಪ್ರೈವೇಟ್ ಇನ್ಸ್ಟಿಟ್ಯೂಟ್ ನಿಂದ ಇಂಡಿಯಾಸ್ ಬೆಸ್ಟ್ ಮೋಟಿವೇಷನಲ್ ಸ್ಪೀಕರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶಾರ್ಟ್ ಮೂವಿ ಲೈಫ್
ಲೈಫ್ ಅನ್ನೋದು ಒಂದು ಶಾರ್ಟ್ ಮೂವಿ ಇದ್ದಂಗೆ, ಅದರಲ್ಲಿ ಇರೋದು ಇಬ್ಬರೇ ಆಡಿಯನ್ಸ್, ಒಬ್ಬರು ನಾವು ಇನ್ನೊಬ್ಬ, ಮೇಲ ಗಡೆ ಕುತಿರೋನು.
ನಮ್ಮ ಇಬ್ಬರಿಗೂ ಶಾರ್ಟ್ ಮೂವಿ ಇಷ್ಟ ಆದ್ರೆ ಸಾಕು. ಬೇರೆಯವರೆಲ್ಲ ನಮ್ ಶಾರ್ಟ್ ಮೂವಿ ನೋಡಿ ಏನ ಅನ್ಕೋತಾರೋ ಅನ್ನೋ ಯೋಚನೆ ಬೇಡ. ನಮ್ಮ ಲೈಫಲ್ಲಿ ಮನಸ್ಸಿನ ಮನಸ್ಸಿನ ಒಳಗಡೆ ಪಾರಿವಾಳ ಹೇಳುತ್ತಿರುತ್ತದೆ, ನಾವು ಏನು ಮಾಡಬೇಕು ಅಂತ ಅದರಲ್ಲಿ ನಂಬಿಕೆ ಇಟ್ಟು ಮುಂದೆ ಹೆಜ್ಜೆ ಇಡಬೇಕು.
ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಜಾಹ್ನವಿ ಈಗ 'ರಾಜಾರಾಣಿ 2' ನಿರೂಪಕಿ!
ಕೊನೆ ತುತ್ತು
ಎಲ್ಲರಿಗೂ ಒಂದು ಮಾತು ಹೇಳೋಕೆ ಇಷ್ಟ ಪಡ್ತೇನೆ. ನಿಮ್ಮದೇ ಆದಂತಹ ಒಂದು ವಿಭಿನ್ನ ಆಸೆಗಳನ್ನು ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಪ್ರತಿಭೆಯ ಮೇಲೆ ಕೆಲಸ ಮಾಡಿ ಮತ್ತು ಅವಕಾಶಗಳು ಯಾವಾಗ ಬೇಕಾದರೂ ಬರಬಹುದು. ಅದಕ್ಕೆ ಸದಾಕಾಲ ಸಿದ್ಧರಾಗಿರಬೇಕು. ಜನರು ಏನಂದುಕೊಳ್ಳುತ್ತಾರೆ ಅನ್ನುವುದನ್ನು ಬಿಟ್ಟು ನಿಮ್ಮ ಗುರಿ ಕಡೆಗೆ ಗಮನವಿರಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.