
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ನಟ ಹರೀಶ್ ರಾಜ್, ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ವೀಕ್ಷಕರ ಗಮನ ಸೆಳೆದದ್ದು ಹರೀಶ್ ಅವರ ಪೊಲಿಟಿಷಿಯನ್ ಶೇಷಪ್ಪ ಪಾತ್ರ. ಎಲಿಮಿನೇಟ್ ಆದಾಗಲೂ ಸುದೀಪ್ ಜೊತೆ ವೇದಿಕೆ ಮೇಲೆ ಶೇಷಪ್ಪ ಶೈಲಿಯಲ್ಲಿ ಮಾತನಾಡಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡ ಹಿನ್ನಲೆಯಲ್ಲಿ ಅಭಿಮಾನಿಗಳು ಹೊಸ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.
'ಶೇಷಪ್ಪ ಮತ್ತೆ ಬಂದಿದ್ದಾನೆ. ಶೇಷಪ್ಪನ ಸಂಪೂರ್ಣ ವಿಡಿಯೋ ವೂಟ್‌ನಲ್ಲಿ ನೋಡಿ,' ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಹರೀಶ್ ರಾಜ್ ಡೈಲಾಗ್ ಹೇಳುವಾಗ ಸುದೀಪ್ ಪಕ್ಕದಲ್ಲಿರುವ ಫೋಟೋ ಹಂಚಿಕೊಂಡು, 'ಎಂದೂ ಮರೆಯಲಾಗದ ಕ್ಷಣ. Salute the Hero Who Admires genuine Efforts. ಲವ್ ಯು ಕಿಚ್ಚ,' ಎಂದು ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ನೀಡಿದ ಕಳ್ಳ ಪೊಲೀಸ್ ಟಾಸ್ಕ್‌ನಲ್ಲಿ ಹರಿಶ್ ರಾಜ್ ತಮ್ಮಗೆ ತಾವೇ ಸೃಷ್ಟಿ ಮಾಡಿಕೊಂಡ ಪಾತ್ರ ಶೇಷಪ್ಪ. ನಿಜ ಜೀವನದಲ್ಲಿ ರಾಜಕಾರಣಿಗಳು ಹೇಗೆಲ್ಲಾ ಮಾತನಾಡುತ್ತಾರೆ ಎಂದು ಮಿಮಿಕ್ರಿ ಮಾಡಿ ವೀಕ್ಷಕರನ್ನು ಮನೋರಂಜಿಸುತ್ತಿದ್ದರು. ಬಿಗ್ ಬಾಸ್‌ಗೆ ಮಾತ್ರ ಸೀಮಿತವಾಗಿ ಈ ಪಾತ್ರವನ್ನು ಇಡಬೇಡಿ ನೀವೂ ಸೀರಿಸ್ ಮೂಲಕ ವಿಡಿಯೋ ಹಂಚಿಕೊಂಡು ನಮ್ಮನ್ನು ಮನೋರಂಜಿಸಿ ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಹರೀಶ್ ರಾಜ್ ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡು ತಮ್ಮ ವೈದ್ಯರ ಜೊತೆ ಫೋಟೋ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.