ಸಿಟ್ಟು ಬಂದ್ರೆ ಗಂಡ ದಡಬಡ ಅಂತ ಮನೆಯಿಂದ ಹೊರ ಹೋಗ್ಬೇಕು, ಸುಖ ಸಂಸಾರಕ್ಕೆ ಹರೀಶ್ ಈ ಸೂತ್ರ ವರ್ಕ್ ಔಟ್ ಆಗುತ್ತಾ?

Published : Oct 12, 2023, 11:47 AM ISTUpdated : Oct 12, 2023, 11:50 AM IST
ಸಿಟ್ಟು ಬಂದ್ರೆ ಗಂಡ ದಡಬಡ ಅಂತ ಮನೆಯಿಂದ ಹೊರ ಹೋಗ್ಬೇಕು, ಸುಖ ಸಂಸಾರಕ್ಕೆ ಹರೀಶ್ ಈ ಸೂತ್ರ ವರ್ಕ್ ಔಟ್ ಆಗುತ್ತಾ?

ಸಾರಾಂಶ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಹರೀಶ್​ ಹಿರಿಯೂರು ಅವರು ಸುಖ ಸಂಸಾರಕ್ಕೆ 13ನೇ ಸೂತ್ರದ ಕುರಿತು ಹೇಳಿದ್ದಾರೆ.  ಅವರು ಹೇಳಿದ್ದೇನು?   

ಗಂಡ- ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವ ನಾಣ್ಣುಡಿ ಇದೆ. ಆದರೆ ಇಂದು ಚಿಕ್ಕಪುಟ್ಟ ಜಗಳವಾದರೂ ಅದು ಕೋರ್ಟ್​ ಮೆಟ್ಟಿಲವರೆಗೆ ಹೋಗಿ ಕೊನೆಗೆ ವಿಚ್ಛೇದನವರೆಗೆ ಅನ್ನುವಂತಾಗಿದೆ. ಸುಖ ಸಂಸಾರಕ್ಕೆ 12 ಸೂತ್ರಗಳು ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಸೂತ್ರಗಳು ಎಷ್ಟೇ ಇದ್ದರೂ ಇಂದು ಬಹುತೇಕ ಸಂಸಾರಗಳು ಛಿದ್ರ ಆಗುತ್ತಿರುವುದೇ ಹೆಚ್ಚು. ಚಿಕ್ಕ ಪುಟ್ಟ ವಿಷಯಗಳಿಗೂ ಜಗಳವಾಗಿ ಅದು ವಿಚ್ಛೇದನ ತಲುಪುತ್ತಿರುವುದು ಇತ್ತೀಚಿಗೆ ಮಾಮೂಲಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಗಂಡ-ಹೆಂಡತಿ (Husband and Wife) ಜಗಳ ಇಂದು  ಕೋರ್ಟ್​ ಕೇಸ್​ ಹಾಕುವವರೆಗೆ, ವಿಚ್ಛೇದನ ಪಡೆಯುವವರೆಗೆ ಎನ್ನುವ ಮಾತು ಈಗ ಸರ್ವಸತ್ಯವಾಗಿಬಿಟ್ಟಿದೆ. ತಪ್ಪು ಗಂಡಂದೋ, ಹೆಂಡತಿಯದ್ದೋ ಒಟ್ಟಿನಲ್ಲಿ ಸಂಸಾರ, ದಾಂಪತ್ಯಕ್ಕೆ ಇರುವ ಮಹತ್ವದ ಅರ್ಥವೇ ಇಂದು ಬದಲಾಗಿರುವುದಂತೂ ದಿಟ. ಕೋರ್ಟ್​ಗಳಲ್ಲಿ ದಾಖಲಾಗುವ ಒಂದೊಂದು ಡಿವೋರ್ಸ್​  ಕೇಸ್​ಗಳನ್ನು ಪರಿಶೀಲಿಸಿದರೆ ತೀರಾ ಕ್ಷುಲ್ಲಕ ಕಾರಣಕ್ಕೆ ಕೇಸ್​ ಹಾಕಿರುವುದನ್ನು ನೋಡಬಹುದು. ಒಂದು ಕಡೆ ಕೆಲವು ವರ್ಗಗಳಲ್ಲಿ ಮದುವೆಯಾಗಲು ಹೆಣ್ಣುಮಕ್ಕಳೇ ಸಿಗದ ಸ್ಥಿತಿ ಇರುವಾಗ, ಅದೇ ಇನ್ನೊಂದೆಡೆ ದಾಂಪತ್ಯದಲ್ಲಿ ಬಿರುಕುಗಳು ಹೆಚ್ಚುತ್ತಿವೆ. 
 
ಇದು ದಾಂಪತ್ಯದ ಕಲಹದ ಮಾತಾದರೆ, ಇನ್ನು ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್​, ಮೀಮ್ಸ್​ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್​ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್​ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್​ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್​, ಮೀಮ್ಸ್​ಗಳು ಸಕತ್​ ವೈರಲ್​ ಆಗುತ್ತವೆ.  

Viral Video: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...

ಇದೀಗ ಕಾಮಿಡಿ ಕಿಲಾಡಿಯ ಸೀಸನ್​ 4ರ ವಿಜೇತ ಹರೀಶ್​ ಹಿರಿಯೂರು (Harish Hiriyuru) ಅವರು ತಮ್ಮ ಎಂದಿನ ಹಾಸ್ಯದ ರೂಪದಲ್ಲಿಯೇ ಸುಖ ಸಂಸಾರಕ್ಕೆ 12ನೇ ಸೂತ್ರದ ಬದಲು 13ನೇ ಸೂತ್ರದ ಕುರಿತು ಹೇಳಿದ್ದಾರೆ. ಇದನ್ನು ಮಾಡಿದರೆ ಸಂಸಾರದಲ್ಲಿ ಯಾವುದೇ ಜಗಳ ಬರುವುದೇ ಇಲ್ಲ ಎನ್ನುವುದು ಅವರ ಮಾತು. ಅಷ್ಟಕ್ಕೂ ಅವರು ಹೇಳಿರೋದು ಏನೆಂದರೆ, ಗಂಡ ಹೆಂಡ್ತಿ ಅಂದ್ಮೇಲೆ ಜಗಳ ಇದ್ದೇ ಇರುತ್ತದೆ, ಅವಳು ಬೈಯೋದು, ಇವನು ಬೈಯೋದು ಎಲ್ಲವೂ ಮಾಮೂಲು. ಅದಕ್ಕೇ ಗಂಡಸರು ಸಮಾಧಾನದಿಂದ ಇರಬೇಕು. ಗಂಡಸರು ಸಿಟ್ಟಿಗೆದ್ರೆ ಕೆಲ್ಸ ಆಗಲ್ಲ. ಹೆಂಡ್ತಿ ಅಂತೂ ಸಿಟ್ಟಿಗೆದ್ದಿರ್ತಾಳೆ. ಅದಕ್ಕೆ ಗಂಡ ಸಿಟ್ಟಿಗೇಳ್ಬಾರ್ದು. ಸೀದಾ ಮನೆ ದಡಬಡ ಎಂದು ಮನೆಗೆ ಹೋಗಬೇಕು. ಆ ಕಡೆ ಕ ಕಡೆ ನೋಡಿ, ಏನೇ ಅಂತ ಸಿಟ್ಟಿನಿಂದ ನೋಡಿ ಆಮೇಲೆ ಕಾಲು ಹಿಡಿದುಕೊಂಡು ಬಿಡಿ. ಅಲ್ಲಿಗೆ ಮುಗೀತು, ನಿಮ್ಮ ಕೆಲ್ಸ ಪಾಸೇ. 

ಇದನ್ನು ಕೇಳಿದ ಹಲವರು ಹೌದೌದು ಎನ್ನುತ್ತಿದ್ದಾರೆ. 12 ಸೂತ್ರಗಳ ಸಕ್ಸಸ್​ ಆಗದಿದ್ದರೆ, 13ನೇ ಸೂತ್ರ ಗ್ಯಾರೆಂಟಿ ಸಕ್ಸಸ್​ ಆಗುತ್ತದೆ ಎಂದಿದ್ದಾರೆ. ಇನ್ನು ಹಲವರು ಏನೇ ಆಗ್ಲಿ ಗಂಡಸರೇ ತಲೆ ಬಾಗಲೇಬೇಕಾದುದು ಅನಿವಾರ್ಯ ಎಂದಿದ್ದರೆ, ಇನ್ನು ಕೆಲವರು ಪತ್ನಿಯರಿಗೂ ಒಂದಿಷ್ಟು ಬುದ್ಧಿಮಾತು ಹೇಳಿ, ಪತಿನೇ ಪ್ರತಿ ಸಲ ತಲೆಬಾಗಬೇಕು ಎಂದ್ರೆ ಹೇಗೆ ಎಂದೂ ಪ್ರಶ್ನಿಸಿದ್ದಾರೆ. ಈ ಹಿಂದೆ, ಮಿಸ್ಟರ್​ ಯೂನೀಕ್​ ಹೆಸರಿನಲ್ಲಿ ಇರುವ ಇನ್​ಸ್ಟಾಗ್ರಾಮ್​ನಲ್ಲಿ (Instragram) ಪತಿ-ಪತ್ನಿಗೆ ಒಂದಿಷ್ಟು ಟಿಪ್ಸ್​ ನೀಡಲಾಗಿತ್ತು.  - ನೀನು ಬಹಳ ದಪ್ಪ ಇದ್ದಿ ಎಂದೂ, ತುಂಬಾ ಸಣ್ಣಕೆ ಇದ್ದೀ ಎಂದೂ  ದೇಹದ ಬಗ್ಗೆ ಮಾತನಾಡಬೇಡಿ,  ನಿಮ್ಮ ಪತ್ನಿ ಮಾಡುವ ಅಡುಗೆಗಳನ್ನು ಅಕ್ಕಪಕ್ಕದ ಅಥವಾ ಇನ್ಯಾರದ್ದೋ ಮನೆಯವರ ಜೊತೆ ಹೋಲಿಕೆ ಮಾಡಿ ಹೀಯಾಳಿಸಬೇಡಿ,  ಯಾವುದೋ ಕಾರಣಕ್ಕೆ ಜಗಳವಾಗಾದ ನಿನ್ನದ್ಯಾಕೋ  ಅತಿರೇಕ ಆಯ್ತು ಅನ್ನೋ ಪದ ಬಳಸಬೇಡಿ,  ಪದೇ ಪದೇ ನಮ್ಮ ಕುಟುಂಬಕ್ಕೆ ಹೊಂದ್ಕೊ ಹೊಂದ್ಕೋ ಎಂದು ಪತ್ನಿ ಮೇಲೆ ಒತ್ತಡ ಹಾಕಬೇಡಿ,  ಪತ್ನಿಯ ತವರು ಮನೆಯವರನ್ನು ಹೀಯಾಳಿಸುವುದಾದರೆ, ಕೆಟ್ಟದ್ದಾಗಿ ಮಾತನಾಡಬೇಡಿ,  ನೀವು ಹೇಳಿದ ಯಾವುದೋ ಒಂದು ಚಿಕ್ಕ ಕೆಲ್ಸ ಪತ್ನಿ ಮಾಡದೇ ಇದ್ದಾಗ  ಬೆಳಿಗ್ಗೆಯಿಂದ ಮನೆಯಲ್ಲಿ ಇದ್ದು ಏನ್​ ಮಾಡ್ತಿದ್ದೆ ಅನ್ನೋದನ್ನು ಮಾಡಬೇಡಿ, ಪತ್ನಿಯನ್ನು ಬೇರೆಯವರ ಮುಂದೆ ಬೈಬೇಡಿ ಎಂದು ಗಂಡಸರಿಗೆ ಬುದ್ಧಿಮಾತು ಹೇಳಲಾಗಿತ್ತು. 

ಜೋಡಿ ನಂ.1 ವೇದಿಕೆಯಲ್ಲಿ ಪತ್ನಿಗೆ ದುಬಾರಿ ಗಿಫ್ಟ್​ ಕೊಟ್ಟ ನಟ ಶಶಿ: ಲಾವಣ್ಯ ಭಾವುಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?