ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!

Published : Oct 12, 2023, 11:41 AM ISTUpdated : Oct 12, 2023, 11:46 AM IST
ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!

ಸಾರಾಂಶ

ಜೋಡಿ ನಂ. 1 ವೇದಿಕೆಯಲ್ಲಿ ನಟ ಶಶಿ ಹೆಗ್ಡೆ ಅವರು ಪತ್ನಿ ಲಾವಣ್ಯ ಅವರಿಗೆ ವಿಶೇಷ ಗಿಫ್ಟ್​ ನೀಡಿದ್ದಾರೆ. ಇದನ್ನು ನೋಡಿ ಲಾವಣ್ಯ ಭಾವುಕರಾಗಿದ್ದಾರೆ.   

ಪತಿ ಪತ್ನಿಗೆ ಹಾಗೂ ಪತ್ನಿ ಪತಿಗೆ ಏನೇ ಉಡುಗೊರೆ ತಂದುಕೊಟ್ಟರೂ ಅದು ಇಬ್ಬರನ್ನೂ ಖುಷಿಯಲ್ಲಿ ತೇಲಿಸುವುದು ಸಹಜವೇ. ಅವರವರ ಅಂತಸ್ತು, ಅವರವರ ಶ್ರೀಮಂತಿಕೆಗೆ ತಕ್ಕಂತೆ ಉಡುಗೊರೆಯ ಬೆಲೆಯಲ್ಲಿ ಹೆಚ್ಚೂ ಕಡಿಮೆ ಆಗಬಹುದು. ಅದು ಒಂದು ರೂಪಾಯಿಯ ಉಡುಗೊರೆಯೇ ಆಗಿರಬಹುದು ಇಲ್ಲವೇ ಲಕ್ಷ-ಕೋಟಿಗಳಲ್ಲೇ ಬೆಲೆ ಬಾಳಬಹುದು. ಆದರೆ ಪ್ರೀತಿಯಿಂದ ಕೊಡುವ ಉಡುಗೊರೆ ಎಂದಿಗೂ ಅತ್ಯಮೂಲ್ಯವಾದದ್ದೇ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂ.1ನಲ್ಲಿ ಕ್ಯೂಟ್​ ಜೋಡಿ ಎನಿಸಿಕೊಂಡಿರುವ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರ ಉಡುಗೊರೆಯ ಎಪಿಸೋಡ್​ಗೆ ಪ್ರೇಕ್ಷಕರು ಭಾವುಕರಾಗಿದ್ದಾರೆ.  

ಸರ್​ಪ್ರೈಸ್​ ಗಿಫ್ಟ್​ ಎಂದ್ರೆ ಇಷ್ಟ ಅಂದಿದ್ಯಲ್ಲಾ, ಅದಕ್ಕಾಗಿ ನಿನಗಾಗಿ ತೆಗೆದುಕೊಂಡು ಬಂದಿದ್ದೇನೆ ಎಂದು ಶಶಿ ಅವರು ಲಾವಣ್ಯ ಅವರಿಗೆ ಮೊದಲು ಒಂದು ಉಡುಗೊರೆ ಕೊಡುತ್ತಾರೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಇಬ್ಬರೂ ತೆಗೆದುಕೊಂಡ ಮೊದಲ ಸೆಲ್ಫಿ ಇದ್ದುದನ್ನು ನೋಡಿ ಲಾವಣ್ಯ ಭಾವುಕರಾಗಿದ್ದಾರೆ. ಇದಾದ ಬಳಿಕ ಶಶಿ ಅವರು, ಸೀರೆಯೊಂದನ್ನು ಪತ್ನಿಗೆ ಉಡುಗೊರೆ ನೀಡಿದ್ದಾರೆ. ಇದು ಸಾಮಾನ್ಯ ಸೀರೆಯಲ್ಲ, ಬದಲಿಗೆ ತಮ್ಮ  ಅಮ್ಮ ಅವರ ಮದುವೆ ಉಟ್ಟಿದ್ದ ಸೀರೆ ಎನ್ನುತ್ತಾರೆ.  ಈ ಸೀರೆಯಲ್ಲಿ ನಿನ್ನನ್ನು ನೋಡಬೇಕು ಎನ್ನುವ ಆಸೆ ಎಂದಾಗ ಲಾವಣ್ಯ ಭಾವುಕರಾಗುತ್ತಾರೆ. ಇದಕ್ಕೆ ಕಾರಣವೂ ಇದೆ. ಶಶಿ ಅವರ ತಾಯಿ ಇಂದು ಬದುಕಿಲ್ಲ. ಆದ್ದರಿಂದ ಅಮ್ಮನ ಸೀರೆಯನ್ನು ಪತ್ನಿಗೆ ಉಡುಗೊರೆ ನೀಡುವ ಮೂಲಕ, ಪತ್ನಿಯಲ್ಲಿ ಅಮ್ಮನನ್ನು ಕಂಡಿದ್ದಾರೆ.  ಕೊನೆಯಲ್ಲಿ ಸ್ವಲ್ಪ ದುಬಾರಿ ಎನ್ನುವ ಗಿಫ್ಟ್​ ನೀಡಿದ್ದಾರೆ. ಅದು ಬೈಕ್​. ಇವರಿಬ್ಬರೂ ಬೈಕ್​ನಲ್ಲಿ ಕುಳಿತುಕೊಂಡಿದ್ದು, ಅದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

ಅಂದಹಾಗೆ ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಖುಷಿ ಖುಷಿಯಿಂದ ಇಬ್ಬರೂ ಮದುವೆಯಾಗಿದ್ದಾರೆ. ಈ ಹಿಂದಿನ ಎಪಿಸೋಡ್​ನಲ್ಲಿ  ಜೀ ಕನ್ನಡ ವಾಹಿನಿ ಶಶಿ ಅವರಿಗೆ  ಅವರ ತಾಯಿಯ ಫೋಟೋವನ್ನೂ ಸೇರಿಸಿ ಫ್ಯಾಮಿಲಿ ಫೋಟೋವನ್ನು ಉಡುಗೊರೆಯಾಗಿ ನೀಡಿ ಸರ್​ಪ್ರೈಸ್​ ನೀಡಿತ್ತು.

ಆ ಎಪಿಸೋಡ್​ನಲ್ಲಿ ಮದುವೆ ಮತ್ತು ಫಸ್ಟ್​ನೈಟ್​ ಬಗ್ಗೆ ಶಶಿ ಅವರು ಮಾತನಾಡಿದ್ದರು.  ಫಸ್ಟ್ ನೈಟ್‌ನಲ್ಲಿ ಈಕೆಯ  ಕಸಿನ್ಸ್  ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು,  ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್‌ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು.  ಅದೇ ರೀತಿ  ಹನಿಮೂನ್‌ಗೆ ಮಾಲ್ದೀವ್ಸ್‌ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ  ಬೇಸರ ವ್ಯಕ್ತಪಡಿಸಿದ್ದರು. 
 

ಮರುಜನ್ಮ ಪಡೆದ ಪತ್ನಿಗೆ ಜೋಡಿ ನಂ.1 ವೇದಿಕೆಯಲ್ಲಿ ಸೀರೆ ಕೊಟ್ಟು ಕಣ್ಣೀರು ತರಿಸಿದ 'ಅಮೃತಧಾರೆ' ಆನಂದ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?