
ಮಾವನ ಮನೆಯಲ್ಲಿ ಎಂಜಾಯ್ ಮಾಡ್ತಿರೋ ಭದ್ರನಿಗೆ ಇಂದು ಶಾಕಿಂಗ್ ಸುದ್ದಿ ಸಿಗೋ ಸಾಧ್ಯತೆ ದಟ್ಟವಾಗಿದೆ. ಕಳ್ಳನ್ನ ಬಗಲಲ್ಲಿ ಕಟ್ಟಿಕೊಂಡು ಭದ್ರ ಊರೆಲ್ಲ ಅಲಿತಿದ್ದಾನೆ. ತನ್ನ ಅಪ್ಪ ಶಿವರಾಮೇಗೌಡನನ್ನು ಜೈಲಿಗೆ ಕಳುಹಿಸಿದ್ದು ಯಾರು ಎನ್ನುವ ಪ್ರಶ್ನೆಗೆ ಈವರೆಗೂ ಅವನಿಗೆ ಉತ್ತರ ಸಿಕ್ಕಿಲ್ಲ. ಒಂದು ಹುಡುಗಿ ಫೋನ್ ಮಾಡಿದ್ಲು ಅನ್ನೋದು ಸ್ಪಷ್ಟವಾಗಿತ್ತು. ಈಗ ವಿದ್ಯಾ ತಂದೆ ಚೆಲುವನೇ ವಿದ್ಯಾ ಬಾಳಿಗೆ ಕೊಳ್ಳಿ ಇಟ್ಟಂತಿದೆ. ವಿದ್ಯಾ ಹಾಗೂ ಭದ್ರನ ಬಂಧಕ್ಕೆ ಚೆಲುವನೇ ಕಿಚ್ಚು ಹಚ್ಚಿದಂತಿದೆ.
ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರ ಆಗ್ತಿರುವ ಮುದ್ದು ಸೊಸೆ (Muddu Sose) ಸೀರಿಯಲ್ ನಲ್ಲಿ ಮದುವೆ ಆದ್ರೂ ಭದ್ರ ಇನ್ನೂ ಬ್ರಹ್ಮಚಾರಿ. ಏನೇ ಮಾಡಿದ್ರೂ ವಿದ್ಯಾಗೆ ಭದ್ರನ ಮನಸ್ಥಿತಿ ಅರ್ಥ ಆಗ್ತಿಲ್ಲ. ಆಷಾಡಕ್ಕೆ ಅಂತ ಮಾವನ ಮನೆಗೆ ಬಂದ ಭದ್ರ ಇನ್ನೂ ಇಲ್ಲೇ ಉಳಿದಿದ್ದಾನೆ. ಮಾವ- ಅತ್ತೆ ಜೊತೆ ಲೈಫ್ ಎಂಜಾಯ್ ಮಾಡ್ತಿದ್ದಾನೆ. ವಿದ್ಯಾ ಮನಸ್ಸು ಕದಿಯುವ ಎಲ್ಲ ಪ್ರಯತ್ನ ನಡೆಸ್ತಿದ್ದಾನೆ. ಆದ್ರೆ ವಿದ್ಯಾ ಯಾಕೋ ಎಳಸಿನಂತೆ ಆಡ್ತಿದ್ದಾಳೆ. ಈ ಮಧ್ಯೆ ಭದ್ರನ ಸಿಐಡಿ ಕೆಲ್ಸ ಮುಂದುವರೆದಿದೆ. ಲೋಕಿ ಬಾಯಿ ಬಿಡಿಸುವಂತೆ ಕ್ವಾಟ್ಲೆಗೆ ಕೆಲ್ಸ ಕೊಟ್ಟಿದ್ದ ಭದ್ರ. ಆದ್ರೆ ಲೋಕಿ ನಾಟಕವನ್ನು ಕ್ವಾಟ್ಲೆ ನಂಬಿದ್ದು, ಅವನನ್ನು ಬಿಟ್ಟು ಕಳಿಸೋ ಆಲೋಚನೆಯಲ್ಲಿ ಇದ್ದಾನೆ.
ವಿದ್ಯಾಗೆ ಗೌರವ ನೀಡುವ ಭದ್ರ, ಅವಳ ಜೊತೆ ಯಾವ್ದೆ ಕಾರಣಕ್ಕೂ ಜಗಳ ಆಡ್ಬಾರದು ಅಂದ್ಕೊಂಡಿದ್ದ. ಆದ್ರೆ ಅಪ್ಪನ ವಿಷ್ಯ ಬಂದಾಗ ಭದ್ರ, ಭದ್ರಕಾಳಿ ಆಗ್ತಾನೆ. ಯಾರೋ ಕುಡಿದು ಬಂದು ಶಿವರಾಮೇಗೌಡನ ಬಗ್ಗೆ ಹೇಳ್ತಿದ್ದಂತೆ ಅವನಿಗೇ ನಾಲ್ಕು ಬಾರಿಸಿದ್ದ ಭದ್ರ, ವಿದ್ಯಾ ಮೇಲೆ ಕೂಗಾಡಿ ಮೊದಲ ತಪ್ಪು ಮಾಡಿದ್ದ. ಅದಕ್ಕೆ ಪ್ರಾಯಶ್ಚಿತ ಅನ್ನೋ ಹಾಗೆ, ವಿದ್ಯಾಗೆ ಮೀನೂಟ ಮಾಡಿ ತಿನ್ನಿಸಿದ್ದಾನೆ. ಇನ್ನೇನು ಎಲ್ಲ ಸರಿ ಆಯ್ತು, ಭದ್ರನ ಫಸ್ಟ್ ನೈಟ್ ಸುಸೂತ್ರವಾಗಿ ನಡೆಯುತ್ತೆ ಅಂದ್ಕೊಂಡವರಿಗೆ ಮತ್ತೊಂದು ಶಾಕ್ ಆಗಿದೆ.
ಭದ್ರನ ಮನೆಗೆ ಸ್ಪೇಷಲ್ ಗೆಸ್ಟ್ : ಸದ್ಯ ಮುದ್ದು ಸೊಸೆ ಧಾರಾವಾಹಿಗೆ ಜೀವದ ಗೆಳೆಯದ ಸ್ಪೇಷಲ್ ಎಂಟ್ರಿ ಆಗಿದೆ. ಭದ್ರನ ಮಾವನ ಮನೆಗೆ ಬಿಗ್ ಬಾಸ್ ಖ್ಯಾತಿಯ ಧನರಾಜ್ ಹಾಗೂ ಹನುಮಂತ ಲಮಾಣಿ ಬಂದಿದ್ದಾರೆ. ಚೆಲುವನ ಮನೆಯಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಲಾಗಿದೆ. ಧನರಾಜ್ ಹಾಗೂ ಹನುಮಂತನನ್ನು ವೆಲ್ ಕಂ ಮಾಡ್ಕೊಂಡ ಭದ್ರ, ಪಾರ್ಟಿ ಎಂಜಾಯ್ ಮಾಡ್ತಿದ್ದಾನೆ. ಕುಡಿದು ಟೈಟ್ ಆಗಿ ಹನುಮಂತ ಹಾಗೂ ಧನರಾಜ್ ಮಲಗಿದ್ರೆ ಚೆಲುವ ಮಾತ್ರ ಬಾಯಿಗೆ ಬಂದಿದ್ದೆಲ್ಲ ಮಾತನಾಡ್ತಿದ್ದಾನೆ. ಕುಡಿದ ಮತ್ತಿನಲ್ಲಿ ಯಾವ ಗುಟ್ಟು ಹೊರ ಬರಬಾರದಿತ್ತೋ ಅದನ್ನೇ ಹೇಳ್ಬಿಟ್ಟಿದ್ದಾನೆ.
ದೂರವಾಗ್ತಾರಾ ವಿದ್ಯಾ- ಭದ್ರ? : ಚೆಲುವ ಕುಡಿದು, ಶಿವರಾಮೇಗೌಡ ಜೈಲಿಗೆ ಹೋಗ ವಿಷ್ಯ ಹೇಳಿದ್ದಾನೆ. ಫೋನ್ ಮಾಡಿದ್ದು ಅವಳೇ, ನನ್ನ ಮಗಳು ವಿದ್ಯಾ ಅಂತ ಚೆಲುವ ಹೇಳಿದ್ದಾನೆ. ಇದನ್ನು ಕೇಳಿದ ಭದ್ರನ ಮುಖ ಗಂಟಿಕ್ಕಿದೆ. ಭದ್ರ ಮುಂದೇನು ಮಾಡ್ತಾನೆ? ಗೆಳೆಯರು ವಿದ್ಯಾ ಮತ್ತು ಭದ್ರನನ್ನು ಒಂದು ಮಾಡ್ತಾರಾ ಕಾದು ನೋಡ್ಬೇಕಿದೆ.
ಪ್ರೋಮೋ ನೋಡಿದ ಫ್ಯಾನ್ಸ್, ಇದು ಕನಸು. ಇಷ್ಟು ಬೇಗ ಭದ್ರನಿಗೆ ಸತ್ಯ ಗೊತ್ತಾಗೋದಿಲ್ಲ ಅಂತಿದ್ದಾರೆ. ಹಾಗೇ ಧನರಾಜ್ ಹಾಗೂ ಹನುಮಂತನನ್ನು ಸೀರಿಯಲ್ ನಲ್ಲಿ ನೋಡಿ ಖುಷಿಯಾಗಿದ್ದಾರೆ. ಹನುಮಂತ ಹಾಗೂ ಧನರಾಜ್ ಸೆಟ್ ಗೆ ಬಂದ ವಿಡಿಯೋವನ್ನು ಭದ್ರ ಅಲಿಯಾಸ್ ತ್ರಿವಿಕ್ರಮ್ ಈ ಹಿಂದೆಯೇ ಪೋಸ್ಟ್ ಮಾಡಿದ್ರು. ಆದ್ರೆ ಇಬ್ಬರು ಸೀರಿಯಲ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಐಡಿಯಾ ಫ್ಯಾನ್ಸ್ ಗೆ ಇರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.