ಯಪ್ಪೋ.. ಇವ್ರೆಂಥಾ ಡೇಂಜರ್ ಅಜ್ಜಿಯರು! Lakshmi Nivasa Serial ವಿಲನ್‌ ಇವ್ರ ಕಣ್ಣು ಮುಂದೆ ಬಂದ್ರೆ ಅಧೋಗತಿ!

Published : Jan 26, 2026, 03:13 PM IST
lakshmi nivasa serial

ಸಾರಾಂಶ

Lakshmi Nivasa Serial Episode: ಧಾರಾವಾಹಿಗಳನ್ನು ನೋಡುವ ವರ್ಗವೇ ಬೇರೆ ಇದೆ. ಇತ್ತೀಚೆಗೆ ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿದ ಇಬ್ಬರು ಅಜ್ಜಿಯಂದಿರು ವಿಲನ್‌ ಪಾತ್ರಧಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದನ್ನು ನೀವು ವಿಡಿಯೋ ನೋಡಿ ಆನಂದಿಸಬೇಕು. 

'ಲಕ್ಷ್ಮೀ ನಿವಾಸ'ದ ವಿಲನ್‌ಗೆ ( Lakshmi Nivasa Serial ) ಅಜ್ಜಿಯಂದಿರ 'ಬೈಗುಳ' ಸಿಕ್ಕಿದೆ. ಹೌದು, ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ. ಕನ್ನಡ ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳು ಎಷ್ಟು ಜನಪ್ರಿಯವಾಗುತ್ತವೆ ಎಂದರೆ, ಅಲ್ಲಿನ ಪಾತ್ರಗಳು ಪ್ರೇಕ್ಷಕರ ಮನೆಯ ಸದಸ್ಯರು ಎಂಬಂತೆ ಸ್ವೀಕರಿಸುತ್ತಾರೆ.

ಅಜ್ಜಿಯಂದಿರ ನಿಷ್ಕಲ್ಮಶ ಪ್ರೀತಿ

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಕೂಡ ಅಂತಹದ್ದೇ ಒಂದು ಕ್ರೇಜ್ ಸೃಷ್ಟಿಸಿದೆ. ಆದರೆ ಇತ್ತೀಚೆಗೆ ಈ ಧಾರಾವಾಹಿಯ ಬಗ್ಗೆ ಸುದ್ದಿಯಾದದ್ದು ಅದರ ಕಥೆಗಾಗಿ ಅಲ್ಲವೇ ಅಲ್ಲ, ಬದಲಿಗೆ ಈ ಸೀರಿಯಲ್‌ ನೋಡಿದ ಇಬ್ಬರು ಅಜ್ಜಿಯಂದಿರ ನಿಷ್ಕಲ್ಮಶ (ಮತ್ತು ಅಷ್ಟೇ ಖಾರವಾದ) ಪ್ರತಿಕ್ರಿಯೆಗಾಗಿ!

ಕೆಟ್ಟ ಪದ ಬಳಕೆ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಇಬ್ಬರು ಅಜ್ಜಿಯಂದಿರು ಟಿವಿಯಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ನೋಡುತ್ತಾ ವಿಲನ್ ಪಾತ್ರಕ್ಕೆ ಮನಬಂದಂತೆ ಬೈದಿದ್ದಾರೆ. ನೀಲು ಪಾತ್ರಧಾರಿ ಸಿದ್ದೇಗೌಡನನ್ನು ಮುಗಿಸಲು ಸಂಚು ಮಾಡುತ್ತಿದ್ದಳು. ಇದನ್ನು ನೋಡಿ ಅಜ್ಜಿಯಂದಿರು ಸಿಟ್ಟಾಗಿದ್ದಾರೆ. ಈ ಧಾರಾವಾಹಿಯ ಕ್ರೂರ ವಿಲನ್ ಪಾತ್ರದ ವರ್ತನೆ ನೋಡಿ ಈ ಅಜ್ಜಿ ಸಿಟ್ಟಿಗೆದ್ದಿದ್ದಾರೆ. ಬಳಸಬಾರದ ಕೆಲವು 'ಕೆಟ್ಟ' ಪದಗಳನ್ನು ಬಳಸಿ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ವಿಲನ್‌ಗೆ ಸಿಕ್ಕ ಪ್ರಶಸ್ತಿ

ಟಿವಿಯಲ್ಲಿ ತೋರಿಸುವ ನಟನೆಯೇ ನಿಜವೆಂದು ನಂಬಿದಾಗ... ಈ ಘಟನೆಯು ನಿಜಕ್ಕೂ ನಮಗೆ ಎರಡು ವಿಷಯಗಳನ್ನು ತಿಳಿಸುತ್ತದೆ. ಮೊದಲನೆಯದಾಗಿ, ಆ ಅಜ್ಜಿಯಂದಿರ ಮುಗ್ಧತೆ. ಅವರು ತೆರೆಯ ಮೇಲೆ ನಡೆಯುತ್ತಿರುವುದು ಬರಿ ನಟನೆ ಎಂಬುದನ್ನು ಮರೆತು, ಅದು ನಿಜ ಜೀವನದಲ್ಲಿ, ನಮ್ಮ ಅಕ್ಕ ಪಕ್ಕ ನಡೆಯುತ್ತಿದೆ ಎಂಬಂತೆ ಭಾವುಕರಾಗಿದ್ದಾರೆ. ವಿಲನ್‌ ಪಾತ್ರಧಾರಿಗಳನ್ನು ನೋಡಿ ವೀಕ್ಷಕರಿಗೆ ಸಿಟ್ಟು ಬಂದರೆ, ನಿಜಕ್ಕೂ ಆ ನಟನಿಗೆ ಪ್ರೇಕ್ಷಕರಿಂದ ಸಿಗುವ ನಿಜವಾದ ಪ್ರಶಸ್ತಿ ಎಂದು ಭಾವಿಸಬೇಕು. ಅಲ್ಲಿಗೆ ಆ ವಿಲನ್‌ಗಳ ಪಾತ್ರ ಅಷ್ಟು ನೈಜವಾಗಿ ಮೂಡಿಬಂದಿದೆ ಎಂದರ್ಥ.

ನಕ್ಕು ನಕ್ಕು ಸುಸ್ತಾದ ವೀಕ್ಷಕರು

ನೆಟ್ಟಿಗರು ಈ ವಿಡಿಯೋಗೆ "ಅಜ್ಜಿಯಂದಿರ ಎಮೋಷನ್, ಬೈಗುಳ ನೋಡಿ ನಗು ತಡೆಯಲಾಗುತ್ತಿಲ್ಲ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಧಾರಾವಾಹಿಗಳು ಕೇವಲ ಮನರಂಜನೆಯಲ್ಲ, ಅವು ಇಂದಿಗೂ ವೀಕ್ಷಕರ ಜೀವನದೊಂದಿಗೆ ಎಷ್ಟು ಆಳವಾಗಿ ಬೆರೆತುಹೋಗಿವೆ, ಜನರು ಧಾರಾವಾಹಿ ಪಾತ್ರಗಳನ್ನು ವೈಯಕ್ತಿಕವಾಗಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಈ 'ಬೈಗುಳದ ವಿಡಿಯೋ' ನಿಜಕ್ಕೂ ಒಂದು ಉದಾಹರಣೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Brahmagantu Serial; ಇದು ಕನಸಲ್ಲ, ಸತ್ಯ; ದೀಪಾ-ಚಿರಾಗ್‌ ಬಾಳಲ್ಲಿ ಅನುರಾಗ; ಪ್ರೇಕ್ಷಕರಿಗೆ ಬೇಸರ!
Shivarajkumar: ಶಿವರಾಜ್‌ಕುಮಾರ್ 'ಸರ್ವೈವರ್' ಟೀಸರ್ ರಿಲೀಸ್, ಸಾಕ್ಷ್ಯಚಿತ್ರ ಬಿಡುಗಡೆಗೆ ಸಿದ್ಧತೆ