ಜೈದೇವ್​ ಪಾಪದ ಕೃತ್ಯ ಇಷ್ಟುಬೇಗ ಗೌತಮ್​ಗೆ ತಿಳಿಯಿತಾ? ಮನೆಯಿಂದ ದಬ್ಬಿದ ಶಕುಂತಲಾ! ಸೀರಿಯಲ್​ ಮುಗಿಯತ್ತಾ?

By Suchethana D  |  First Published Oct 6, 2024, 8:29 PM IST

ಕೊಲೆ ಪ್ರಯತ್ನ, ಕಿಡ್ನ್ಯಾಪ್​ ಸೇರಿ ಹಲವಾರು ಅಪರಾಧ ಮಾಡಿರುವ ಜೈದೇವ ಬಗ್ಗೆ ಗೌತಮ್​ಗೆ ಇಷ್ಟು ಬೇಗ ತಿಳಿದೇ ಹೋಯ್ತಾ? ಈಗ ಬಿಡುಗಡೆಯಾಗಿರೋ ಪ್ರೊಮೋದಲ್ಲಿ ಏನಿದೆ?
  
 


ಇಬ್ಬರು ಮಧ್ಯವಯಸ್ಕರ ಕಿತ್ತಾಡದ ಮೂಲಕವೇ ಮದುವೆಯಾಗಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿ ತಲುಪಿರುವ ಜೀ ಕನ್ನಡದ ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ.  ಸದಾ ವಿಲನ್​ ಅತ್ತೆಯಂದಿರ ಕೈ ಮೇಲಾಗುವ ಸೀರಿಯಲ್​ಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ ಸೊಸೆ ಭೂಮಿಕಾಳೇ ಅತ್ತೆಗೆ ಟಾಂಗ್​ ಕೊಡುತ್ತಾ ಅವಳನ್ನು ಸೋಲಿಸುತ್ತಿರುವ ಕಾರಣ ಈ ಸೀರಿಯಲ್​ ಹಲವರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಇದೀಗ ಕೆಲವು ಕಂತುಗಳಿಂದ ತನ್ನ ಅತ್ತೆ ವಿಲನ್​ ಎಂದು ತಿಳಿದಿದ್ದರೂ ಅವಳ ಮೋಸದ ಜಾಲದಲ್ಲಿ ಭೂಮಿಕಾ ಸಿಲುಕಿ ಬಿಟ್ಟಿದ್ದಾಳೆ. ಈ ಕುತಂತ್ರಕ್ಕೆ ತನ್ನ ಸ್ವಂತ ತಂಗಿಯನ್ನೇ ಅತ್ತೆ ಬಳಸಿಕೊಳ್ಳುತ್ತಿದ್ದಾಳೆ ಎನ್ನುವುದು ಕೂಡ ಜಾಣೆ ಭೂಮಿಕಾಗೆ ಗೊತ್ತಾಗದೇ ಹೋಗಿ ಬಿಟ್ಟಿದೆ. ಇನ್ನೊಂದೆಡೆ ಕುತಂತ್ರಿ ಮೈದುನ ಜೈದೇವನ ತಂತ್ರವನ್ನೂ ಅವಳು ಅರಿಯುತ್ತಿಲ್ಲ ಎನ್ನುವುದು ವಿಚಿತ್ರ ಎನಿಸುತ್ತಿರುವ ಕಾರಣ ಈ ಸೀರಿಯಲ್​ ಬಗ್ಗೆ ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದರು.
 
ಆದರೆ ಇದೀಗ ಜೈದೇವನ ಎಲ್ಲಾ ಪಾಪದ ಕೃತ್ಯಗಳೂ ಭೂಮಿಕಾಗೆ ಗೊತ್ತಾಗಿದೆ. ಜೈದೇವನ ಪಾಪದ ಕೊಡ ತುಂಬಿದೆ.  ತನ್ನನ್ನು, ಗಂಡನನ್ನು, ಪತ್ನಿ ಮಲ್ಲಿಯನ್ನು ಕೊಲ್ಲಲು ಸಂಚುರೂಪಿಸಿದ್ದು ತಿಳಿದಿದ್ದರೂ ಜೈದೇವನನ್ನು ನಂಬಿ ಅತೀ ಪೆದ್ದು ಎನ್ನುವಂತೆ ಭೂಮಿಕಾ ಮತ್ತು ಗೌತಮ್​ ನಡೆದುಕೊಂಡಿದ್ದು ಯಾಕೋ ಸೀರಿಯಲ್​ ವೀಕ್ಷಕರಿಗೆ ಇಷ್ಟವಾಗಿರಲಿಲ್ಲ.  ಹಾವಿಗೆ ವಿಷ ಇದೆ ಎಂದು ಗೊತ್ತಾದ ಮೇಲೂ ಅದನ್ನು ಮುದ್ದು ಮಾಡುವುದು ಎಷ್ಟು ಸರಿ ಎಂದೇ ಪ್ರೇಕ್ಷಕರು ಹೇಳುತ್ತಿದ್ದರು.  ತಾನು ಒಳ್ಳೆಯವನು ಎನ್ನುವ ಪೋಸ್​ ಕೊಟ್ಟು ಹೆಜ್ಜೆ ಹೆಜ್ಜೆಗೂ ಅಣ್ಣ ಮತ್ತು ಅತ್ತಿಗೆಯನ್ನು ಯಾಮಾರಿಸುತ್ತಿದ್ದಾನೆ ಜೈದೇವ. ಈಗ ಪತ್ನಿಯನ್ನು ಕೊಲ್ಲುವ ಮಟ್ಟಿಗೆ ಬಂದಿದ್ದಾನೆ. ತುಂಬು ಗರ್ಭಿಣಿ ಪತ್ನಿಯನ್ನು ತವರಿಗೆ ಬಿಟ್ಟು ಬರಲು ಹೋಗಿದ್ದ. ಅವಳನ್ನು ಬೇರೆ ಕಾರಿನಲ್ಲಿ ಕುಳ್ಳರಿಸಿ ತಾನು ಗರ್ಲ್​ಫ್ರೆಂಡ್​ ಜೊತೆ ಲಲ್ಲೆ ಹೊಡೆಯುತ್ತಿದ್ದಾಗ ಅದನ್ನು ಮಲ್ಲಿ ನೋಡಿದ್ದಾಳೆ. ಮತ್ತೊಂದು ಕಡೆಯಿಂದ ಗಾಡಿ ಬಂದು ಅವಳಿಗೆ ಗುದ್ದಿದೆ. ಮಗು ಸತ್ತು ಹೋಗಿದೆ. 

ಉಫ್​! ಎಂತೆಂಥ ಲವ್​ ಸಂಬಂಧಗಳು ಇವೆಯಪ್ಪಾ? ಇದು ಪಾಕೆಟಿಂಗ್​ ರಿಲೇಷನ್​ಷಿಪ್​ ಅಂತೆ! ಹಾಗಂದ್ರೆ ಏನ್​ ಗೊತ್ತಾ?

Tap to resize

Latest Videos

undefined

ಇಷ್ಟೆಲ್ಲಾ ನಡುವೆಯೇ ಮಲ್ಲಿಗೆ ಎಚ್ಚರವಾಗಿದ್ದು, ಗಂಡನ ಕಿತಾಪತಿ ಗೊತ್ತಾಗಿದೆ. ಆಕೆ ಆ ವಿಷಯವನ್ನು ಗೌತಮ್​ಗೆ ಹೇಳಲು ಹೋದಾಗ, ಅತ್ತ ಕಡೆಯಿಂದ ಮಲ್ಲಿಯ ತಾತನನ್ನು ಸಾಯಿಸುವ ಬೆದರಿಕೆ ಹಾಕಿದ್ದ ಜೈದೇವ. ಆದ್ದರಿಂದ ಮಲ್ಲಿ ಸುಮ್ಮನಾಗಿದ್ದಳು. ಇತ್ತ ಆನಂದ್​ಗೂ ತನ್ನನ್ನು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದು ಜೈದೇವ್​ ಎನ್ನುವುದು ಪೊಲೀಸರಿಂದ ತಿಳಿದಿದೆ. ಇನ್ನೊಂದೆಡೆ, ಪಾರ್ಥನಿಗೆ ತನ್ನ ಮದುವೆ ದಿನ ಮುಸುಕು ಹಾಕಿಕೊಂಡು ಕೊಲೆ ಮಾಡಲು ಬಂದಿರುವುದು ಕೂಡ ಜೈದೇವನೇ ಎನ್ನುವ ಸತ್ಯ ತಿಳಿದಿಲ್ಲ. ಆದ್ದರಿಂದ ಗೌತಮ್​ ಒಬ್ಬ ಬಿಟ್ಟು ಎಲ್ಲರೂ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ ಭೂಮಿಕಾ ಗೌತಮ್​ಗೆ ಈಗಲೇ ಎಲ್ಲಾ ಹೇಳುವುದು ಬೇಡ, ಸೂಕ್ತ ಸಾಕ್ಷ್ಯಾಧಾರ ಸಹಿತ ತೋರಿಸೋಣ ಎಂದು ಆನಂದ್​ಗೆ ಹೇಳಿದ್ದಾಳೆ.

ಆದರೆ ಇದೀಗ ರಿಲೀಸ್​  ಆಗಿರೋ ಪ್ರೊಮೋದಲ್ಲಿ ಗೌತಮ್​ಗೆ ಎಲ್ಲಾ ವಿಷಯ ಗೊತ್ತಾಗಿರುವ ಹಾಗೆ ತೋರಿಸಲಾಗಿದೆ. ಮಲ್ಲಿ ಇದ್ದರೂ ಇನ್ನೊಬ್ಬಳನ್ನು ಇಟ್ಟುಕೊಂಡಿರುವುದು, ಪಾರ್ಥನ, ಆನಂದ್​ನ ಕೊಲೆ ಪ್ರಯತ್ನ, ಮಲ್ಲಿಯನ್ನು ಆಸ್ಪತ್ರೆಯಲ್ಲಿ ಸಾಯಿಸುವ ಪ್ರಯತ್ನ... ಹೀಗೆ ಎಲ್ಲವನ್ನೂ ಹೇಳಿ ಜೈದೇವ್​ಗೆ ಕಪಾಳಮೋಕ್ಷ ಮಾಡಿದ್ದಾನೆ. ಇದನ್ನು ಕೇಳಿ ಶಕುಂತಲಾ ದೇವಿ ಕೂಡ ಆತನ ಕೆನ್ನೆಗೆ ಹೊಡೆದು ಮನೆಯಿಂದ ಹೊರಕ್ಕೆ ಹಾಕಿದ್ದಾಳೆ. ಯಾರಿಗೂ ನಾನು ಬೇಡವಲ್ಲ, ಇನ್ನು ಬದುಕಿದ್ದು ಏನು ಪ್ರಯೋಜನ ಎಂದು ಮನೆಯಿಂದ ಹೊರಗೆ ಹೋಗುವಾಗ ಬಿದ್ದಿದ್ದಾನೆ ಜೈದೇವ್​. ಆದರೆ ಇದು ಜೈದೇವನ ಕನಸೋ, ಇನ್ನಾರದ್ದು ಕನಸೋ ಅಥವಾ ನಿಜನೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಬಹುತೇಕ ನೆಟ್ಟಿಗರ ಪ್ರಕಾರ ಇದು ಕನಸು ಎನ್ನುವುದು. ಇದು ನನಸಾಗಿ ಬಿಟ್ಟರೆ ಸೀರಿಯಲ್​ ಮುಗಿದಂತೆ ಎನ್ನುವುದು ಅವರ ಅನಿಸಿಕೆ. ಆದರೆ ಟಿಆರ್​ಪಿಯಲ್ಲಿ ಉತ್ತಮ ಸ್ಥಾನ ಹೊಂದಿರೋ ಅಮೃತಧಾರೆಯಂತೂ ಇಷ್ಟು ಬೇಗ ಮುಗಿಸಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಿದ್ದರೆ ಇದೇನು? ನಿಜವೇ ಆಗಿದ್ದರೆ ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ. 

ಬಿಗ್​ಬಾಸ್​​ ಸ್ಪರ್ಧಿಯಾಗಿ ಕತ್ತೆ? ಎರಡು ಕಾಲಿಂದಲ್ಲ ಸ್ವಾಮಿ, ನಿಜವಾಗ್ಲೂ ನಾಲ್ಕು ಕಾಲಿಂದೇ...ವಿಡಿಯೋ ರಿಲೀಸ್​!


click me!