ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ: ಚೈತ್ರಾರ ಮಾತು ಕೇಳಿ ಖುದ್ದು ಸುದೀಪ್​ ಶಾಕ್​!

Published : Oct 06, 2024, 07:48 PM IST
ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ: ಚೈತ್ರಾರ ಮಾತು ಕೇಳಿ ಖುದ್ದು ಸುದೀಪ್​ ಶಾಕ್​!

ಸಾರಾಂಶ

ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ, ಅದೂ ಬಿಗ್​ಬಾಸ್​ ಮನೆಯಲ್ಲಂತೆ! ಚೈತ್ರಾ ಹೀಗೆ ಹೇಳುತ್ತಿದ್ದಂತೆಯೇ ಸುದೀಪ್​ ಹೇಳಿದ್ದೇನು ಕೇಳಿ...  

ಚೈತ್ರಾ ಕುಂದಾಪುರ ಎಂದರೆ ಮಾತು, ಮಾತು ಎಂದ್ರೆ ಚೈತ್ರಾ... ಇದು ಇವರಿಗೆ ಇರುವ ಬಹುದೊಡ್ಡ ಬಿರುದು. ಇದರಾಚೆ ಕೆಲವೊಂದು ಕಾಂಟ್ರವರ್ಸಿಗಳು, ಜೈಲು ಅದೂ ಇದೂ ಇತ್ಯಾದಿ. ಆದರೆ ಚೈತ್ರಾರಿಗೇ ಮಾತು ಕಲಿಸೋದು ಅಂದ್ರೆ ಏನು? ಇಷ್ಟೊಂದು ರಿಸ್ಕ್​ ತಗೊಂಡ್ರಾ ಬಿಗ್​ಬಾಸ್​ ಸ್ಪರ್ಧಿ ರಂಜಿತ್​? ಹೀಗೊಂದು ಪ್ರಶ್ನೆ ಹುಟ್ಟುಹಾಕಿರೋದು ಈಗ ರಿಲೀಸ್​ ಆಗಿರೋ ಪ್ರೊಮೊ. ಇದರಲ್ಲಿ ಚೈತ್ರಾ ಕುಂದಾಪುರ್​, ನಾನು ಈಗ ತಾನೇ ಮಾತಾಡೋದನ್ನ ಕಲೀತಿದ್ದೀನಿ ಸರ್​ ಎಂದ್ರು. ಹೀಗೆ ಹೇಳ್ತಾ ಇದ್ದಂತೆ ಎಲ್ಲರೂ ಓಓಓಓಓಓಓ ಗಾಡ್​ ಎಂದು ರಾಗ ಎಳೆದ್ರು. 

ಹೀಗೆ ಹೇಳ್ತಾ ಇದ್ದಂತೆಯೇ ಸುದೀಪ್​ ಅವರು ಸ್ಪೆಕ್ಟ್​ ತೆಗೆದು, ಒಂದು ನಿಮಿಷ ತಾಳಿ, ಏನು ಹೇಳಿದ್ರೀ ನೀವು ಎಂದು ಪ್ರಶ್ನಿಸಿದ್ರು. ಅದಕ್ಕೇ ಚೈತ್ರಾ. ಹೌದು ಸರ್​, ಇಲ್ಲಿ ಕುಳಿತುಕೊಂಡು ರಂಜಿತಣ್ಣ,  ಶಿಶಿರಣ್ಣ ಅವ್ರೆಲ್ಲಾ ಹೇಗೆ  ಮಾತಾಡೋದು ಎಂದು ಹೇಳಿಕೊಡ್ತಾ ಇದ್ದಾರೆ ಎಂದ್ರು. ರಂಜಿತ್​, ನಿಮಗೆ ಇಷ್ಟು ಧೈರ್ಯವೇ? ಅಥ್ವಾ ಊಟ-ಹಸಿವು ಹೀಗೆ ಮಾಡಿಸ್ತಾ ಇದ್ಯಾ ಎಂದು ಪ್ರಶ್ನಿಸಿದ್ರು. ಹೋಗಿ ಹೋಗಿ ನೀವು ಚೈತ್ರಾ ಅವರಿಗೆ ಮಾತನಾಡುವುದನ್ನು ಕಲೀಸೋದಾ ಎಂದು ಪ್ರಶ್ನಿಸಿದ್ರು! ಇದನ್ನು ಕೇಳಿ ರಂಜಿತ್​ ಪಾಪ ಸುಸ್ತಾಗಿ, ಇಲ್ಲ ಇಲ್ಲಾ ಆ ರೀತಿ ಇಲ್ಲ ಎಂದರು.

ಬಿಗ್​ಬಾಸ್​​ ಸ್ಪರ್ಧಿಯಾಗಿ ಕತ್ತೆ? ಎರಡು ಕಾಲಿಂದಲ್ಲ ಸ್ವಾಮಿ, ನಿಜವಾಗ್ಲೂ ನಾಲ್ಕು ಕಾಲಿಂದೇ...ವಿಡಿಯೋ ರಿಲೀಸ್​!

ಒಟ್ಟಿನಲ್ಲಿ, ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ ಮನೆಯಲ್ಲಿ ಮಾತನಾಡಲು  ಕಲಿಯುತ್ತಿದ್ದಾರೆ ಎನ್ನುವುದು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ಟಾಪಿಕ್​ ಆಗಿದೆ. ಅದರ ಜೊತೆಗೆ ಸುದೀಪ್​ ಅವರು  ಬರಿಗಾಲಲ್ಲಿ ಬಂದು ನಿಂತುಕೊಂಡೇ ನಿರೂಪಣೆ ಮಾಡಿರುವುದು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.  ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.  ಸುದೀಪ್‌ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್‌ ಲುಕ್ ಕೊಡುತ್ತಿತ್ತು. ಶನಿವಾರ ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್‌ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ ಆರ್ನಮೆಂಟ್ಸ್ ಧರಿಸಿದ್ದರು. ಇನ್ನು ವಿಜಯದಶಮಿ ಆಚರಣೆಯಲ್ಲಿ ಕೇಸರಿ ಬಣ್ಣ ಇದ್ದಿದರಿಂದ ಕೇಸರಿ ಬಣ್ಣದ ಮಿಂಚುವ ಟಾಪ್ ಹಾಗೂ ತಿಳಿ ಕೇಸರಿ ಬಣ್ಣದ ಶಾಲು ಧರಿಸಿದ್ದರು. ಜೊತೆಗೆ, ಬಿಳಿ ಬಣ್ಣದ ಪ್ಯಾಂಟ್ ಧರಿಸಿ ಬಂದಿದ್ದರು. ಇನ್ನು ಅವರ ಮೂಡ್‌ನಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿರಲಿಲ್ಲ. 

ಈಗಾಗಲೇ ನಿನ್ನೆ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರ ವಿರುದ್ಧ ಖಡಕ್ ಆಗಿಯೇ ಮಾತನಾಡಿದ್ದರು. ಕಳೆದೊಂದು ವಾರ ಬಿಗ್ ಬಾಸ್ ಮನೆಯಲ್ಲಿದ್ದ ವಕೀಲಸಾವ್ ಜಗದೀಶ್ ಅವರು ಬಿಗ್‌ಬಾಸ್ ಗೆ ಅವಾಜ್ ಹಾಕಿ ಇಡೀ ಬಿಗ್ ಬಾಸ್ ಮನೆಯನ್ನೇ ಉಡಾಯಿಸ್ತೀನಿ, ಶೋ ನಡೆಸಲು ಬಿಡಲ್ಲ ಎಂದು ಅವಾಜ್ ಹಾಕಿದ್ದರು. ಈ ಬಗ್ಗೆಯೂ ಜಗದೀಶ್ ಅವರನ್ನು ಪ್ರಶ್ನಿಸಿದ ಕಿಚ್ಚ ಸುದೀಪ್, ಬಿಗ್ ಬಾಸ್ ಬೇಕು ಅಂತ ನೀವೇ ಒಳಗೆ ಬಂದಿದ್ದೀರಿ. ಈಗ ಅವರನ್ನೇ  ನೀವು ಕೆಳಗಿಟ್ಟು ಬಿಟ್ರೆ, ಶೋ ನಡೆಸಲು ಬಿಡಲ್ಲ ಎಂದು ಚಾಲೆಂಜ್‌ ಮಾಡಿದ್ರೆ ಎಂದು ಪ್ರಶ್ನೆ ಮಾಡಿದ್ದಾರೆ. 

BBK11: ನವರಾತ್ರಿಗೆ ಡ್ರೆಸ್ ಬಣ್ಣ ಬದಲಿಸಿದ ಕಿಚ್ಚ ಸುದೀಪ; ಆದ್ರೆ ಮೂಡ್ ಮಾತ್ರ ಬದಲಾಗಲಿಲ್ಲ!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕ್ಯಾಪ್ಟನ್ ಗಿಲ್ಲಿ ನಟ ಹೇಳಿದ ಈ ರೂಲ್ಸ್ ಮನೆಯಲ್ಲಿ ಎಷ್ಟು ಜನ ಫಾಲೋ ಮಾಡ್ತಾರೆ?
Karna Serial ನಿಧಿ ಸೀರಿಯಲ್​ ಬಿಟ್ಟು ಅವರೆ ಮೇಳದಲ್ಲಿ ಇದೇನಿದು ಹೊಸ ಬಿಜಿನೆಸ್​? ಗ್ರ್ಯಾಂಡ್​ ಓಪನಿಂಗ್​!