ಮತ್ತೊಂದು ಹಾಟ್​ ವಿಡಿಯೋ ಹರಿಬಿಟ್ಟ ನಿವೇದಿತಾ ಗೌಡ: ಕಮೆಂಟಿಗರ ಸುರಕ್ಷತೆಗೆ 'ಹಿತ ರಕ್ಷಣಾ ವೇದಿಕೆ' ಶುರು!

By Suchethana D  |  First Published Dec 21, 2024, 3:53 PM IST

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರು ಇನ್ನೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಇದನ್ನು ನೋಡಿದವರು ನಿಜಕ್ಕೂ ನಿಮ್ಮ ಮುಖನೇ ನೋಡ್ಬೇಕಾ ಎಂದು ಕೇಳುತ್ತಿದ್ದಾರೆ!
 


ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್​ ಇರೋದ್ರಿಂದ ಸಿನಿಮಾ ತಾರೆಯರಿಗಿಂತಲೂ ಇಂಥ ಹಾಟ್​ ಬ್ಯೂಟಿಗಳಿಗೇ ಹೆಚ್ಚು ಡಿಮಾಂಡ್​ ಎನ್ನುವುದು ಕಮೆಂಟ್​ಗಳಿಂದ ತಿಳಿದು ಬರುತ್ತದೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​. ಮೊಬೈಲ್​ ಅನ್ನು ಸೆಲ್ಫೀ ಮೋಡ್​ನಲ್ಲಿ ಸೊಟ್ಟ ಮೂತಿ ಮಾಡುವುದು, ಅತ್ತ-ಇತ್ತ ತಲೆಯಾಡಿವುದು... ಇಷ್ಟೇ ಸಾಕು ಫೇಮಸ್​ ಆಗಲು. ಇಂಥವರ ವಿಡಿಯೋಗಳೇ ಸಾಕಷ್ಟು ಶೇರ್ ಆಗುತ್ತವೆ. ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.

ಇದೀಗ ಬಿಗ್‌ಬಾಸ್‌ ಖ್ಯಾತಿಯ ನಟಿ ನಿವೇದಿತಾ ಗೌಡ ಕೂಡ ಡಿವೋರ್ಸ್​ ಬಳಿಕ ಇದೇ ಹಾದಿ ಹಿಡಿದಿದ್ದಾರೆ ಎಂಬುದು ಅವರ ಅಭಿಮಾನಿಗಳ ಮಾತು.  ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ನಿವೇದಿತಾ ಅವರು ಎಷ್ಟೇ ಒಳ್ಳೆಯ ರೀಲ್ಸ್​  ಮಾಡಿದರೂ, ಗೊಂಬೆಯಂತೆ ಕಾಣಿಸುವ ವಿಡಿಯೋ ಶೇರ್​ ಮಾಡಿದರೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದ್ದಾರೆ.  ಅದರಲ್ಲಿಯೂ ವಿಚ್ಛೇದನದ ಬಳಿಕ  ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್‌ ಮಟ್ಟಿಗೂ ಬಂದು ನಿಂತಿದ್ದಾರೆ.   

Tap to resize

Latest Videos

undefined

ಬೀಚ್​ನಲ್ಲಿರೋ ನಿವೇದಿತಾ ಗೌಡ ವಿಡಿಯೋ ವೈರಲ್​! ಪೂನಂ ಪಾಂಡೆಗೆ ಹೋಲಿಕೆ ಮಾಡೋದಾ ನೆಟ್ಟಿಗರು?

ಇದೀಗ ಇನ್ನೊಂದು ವಿಡಿಯೋ ಶೇರ್​ ಮಾಡಿದ್ದಾರೆ. ಇದನ್ನು ನೋಡಿದವರು ನೀವು ನಿಜಕ್ಕೂ ಮುಖ ತೋರಿಸಲು ವಿಡಿಯೋ ಮಾಡಿದ್ದಾ ಅಥ್ವಾ...? ಎಂದು ಪ್ರಶ್ನಿಸುತ್ತಿದ್ದಾರೆ. ಇವರ ಈ ವಿಡಿಯೋಗೆ ಥಹರೇವಾರಿ ಕಮೆಂಟ್​ ಸುರಿಮಳೆಯಾಗುತ್ತಿದೆ. ಅದರಲ್ಲಿ ವಿಜೇತ್​ ಎನ್ನುವ ಕಮೆಂಟಿಗರೊಬ್ಬರ ಕಮೆಂಟು ಹೈಲೈಟ್​ ಆಗುತ್ತಿದೆ. ಈ ಹಾಟ್​ ವಿಡಿಯೋ ಸಲುವಾಗಿ ಇಂಥದ್ದೊಂದು ಕಮೆಂಟ್​ ಅನ್ನು ಅವರು ಹಾಕಿದ್ದಾರೆ. ನೂಕು - ನುಗ್ಗಲು ತಡೆಯಲು ಸಾಲು ಸಾಲಾಗಿ ಕಮೆಂಟ್ ಓದಲು ಮತ್ತು ಬರೆಯಲು ಬರಬೇಕಾಗಿ ವಿನಂತಿ... ಇಂತಿ ಕಮೆಂಟ್ ಹಿತ ರಕ್ಷಣಾ ವೇದಿಕೆ ಎಂದು ಬರೆದುಕೊಂಡಿದ್ದಾರೆ! ಈ ಹಿಂದೆ ಏನೂ ಕಮೆಂಟ್​ ಹಾಕಬೇಡ್ರಪ್ಪೋ ಶೆಡ್​ಗೆ ಹೋಗಬೇಕಾದೀತು ಎಂದು ಕೆಲವರು ಬರೆದಿದ್ದರು. ಇದೀಗ ಕಮೆಂಟ್​ ಹಾಕುವವರಿಗೂ ಪದೇ ಪದೇ ಅದನ್ನು ಬರೆದು ಸಾಕಾಗಿದ್ದು, ಕಮೆಂಟ್ ಹಿತ ರಕ್ಷಣಾ ವೇದಿಕೆ ಎಂದು ಬರೆದಿರುವುದು ಎಲ್ಲರ ಗಮನ ಸೆಳೆಯುತ್ತಿದೆ! 

ಆದರೆ ಯಾರು ಏನೇ ಹೇಳಿದ್ರೂ  ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್​ನಲ್ಲಿ ನಿವೇದಿತಾ ಅವರು ಡೀಸೆಂಟ್​ ಆಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್​ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್​ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್​​ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್​ ವಿಡಿಯೋ ಶೇರ್​ ಮಾಡುತ್ತಿದ್ದಾರೆ. 

ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್‌ ಗರಂ...

click me!