ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

Suvarna News   | Asianet News
Published : Aug 29, 2021, 03:10 PM ISTUpdated : Aug 29, 2021, 03:16 PM IST
ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

ಸಾರಾಂಶ

ತಂದೆ ಸೆಂಟ್ರಲ್ ಗೌರ್ಮೆಂಟ್‌ ಕೆಲಸದಲ್ಲಿದ್ದರೂ ಪುಟ್‌ಪಾತ್‌ನಲ್ಲಿ ಅಂಗಡಿಯಿಟ್ಟು ಗಿಡಗಳನ್ನು ಮಾರುತ್ತಿದ್ದ ನಯನಾ ನಾಗರಾಜ್‌ ತಮ್ಮ ಜೀವನದ ಕಹಿ ಘಟನೆಗಳನ್ನು ಮಿನಿ ಸೀಸನ್‌ನಲ್ಲಿ ಹಂಚಿಕೊಂಡಿದ್ದಾರೆ.   

'ಗಿಣಿರಾಮ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ನಟಿ ನಯನ ನಾಗರಾಜ್‌ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ಟಾಸ್ಕ್‌ಗಳನ್ನು ಜಯ ಸಾಧಿಸುತ್ತಿರುವ ನಟ ನಯನಾ ತಮ್ಮ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. 

'ಕಲಾವಿದರು ಎಂದರೆ ಹೈಫೈ ಲೈಫ್ ಎಂದುಕೊಳ್ಳುತ್ತಾರೆ. ಮುಖಕ್ಕೆ ಬಣ್ಣ ಹಾಕುವ ಹಾಗೆ ಬದುಕು ಕೂಡ ಕಲರ್‌ಫುಲ್ ಆಗಿರುತ್ತದೆ ಎಂದು ಜನ ಅಂದುಕೊಳ್ಳುತ್ತಾರೆ. ಆದರದು ಸತ್ಯವಲ್ಲ. ನಾನು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗಿ. ನಮಗೆ ಯಾವ ಮಟ್ಟಕ್ಕೆ ಕಷ್ಟ ಇತ್ತು ಅಂದ್ರೆ ನನ್ನ ಅಕ್ಕನ ಸ್ಕೂಲ್ ಫೀಸ್‌ ಕಟ್ಟಿದರೆ ನನಗೆ ಸ್ಕೂಲ್‌ ಫೀಸ್‌ ಕಟ್ಟೋಕೆ ಆಗುತ್ತಿರಲಿಲ್ಲ. ಮೂರನೇ ಕ್ಲಾಸ್‌ವರೆಗೂ ಹೀಗೆ ಮ್ಯಾನೇಜ್ ಆಯ್ತು. ಅದಾದ ಮೇಲೆ ಅಪ್ಪ ಕೆಲಸದಿಂದ ವಿಆರ್‌ಡಿ ತೆಗೆದುಕೊಂಡರು. ಹತ್ತನೇ ಕ್ಲಾಸ್‌ವೆರೆಗೂ ಬೇರೆಯವರು ನಮ್ಮ ಸ್ಕೂಲ್ ಫೀಸ್‌ ನೀಡುತ್ತಿದ್ದರು. ವರ್ಷಕ್ಕೆ ಒಂದೇ ಹೊಸ ಬಟ್ಟೆ. ಹುಟ್ಟುಹಬ್ಬಕ್ಕೆ ಇಲ್ಲವಾದರೆ ದೀಪಾವಳಿ ಹಬ್ಬಕ್ಕೆ. ಥಿಯೇಟರ್‌ನಲ್ಲಿ ನನಗೆ ಇಂಟ್ರೆಸ್ಟ್‌ ಇತ್ತು. ನನ್ನ ಫ್ರೆಂಡ್ ಜೊತೆ ಬಾಟಲ್ ಬ್ರಶ್ ಅಂತ ಕಂಪನಿ ಶುರು ಮಾಡಿದೆ. ಕೃಷ್ಣರಾವ್ ಪಾರ್ಕ್ ಮತ್ತು ಜಯನಗರ ಪಾರ್ಕ್, ಲಾಲ್‌ಬಾಗ್ ಫುಟ್‌ಪಾತ್‌ನಲ್ಲಿ ನಾನು ಅಂಗಡಿಗಳನ್ನು ಇಟ್ಟು 100, 50, 25 ರೂ. ಗಿಡಗಳನ್ನು ಮಾರಿದ್ದೇವೆ. ವರ್ಟಿಕಲ್ ಗಾರ್ಡನ್ ಮಾಡೋಕೆ ಹೋಗಿ ನಾನು ನನ್ನ ಸ್ನೇಹಿತ 1 ಲಕ್ಷ ಕಳೆದುಕೊಂಡೆವು. ಕಸ್ಟಮರ್ 7 ಸಾವಿರ ಕೊಟ್ಟು ಜೂ ಎಂದುಬಿಟ್ಟ. ಬಿಕ್ಕಿಬಿಕ್ಕಿ ಅತ್ತಿದ್ದೆ ಅಪ್ಪ ಈ ಬಿಸಿನೆಸ್‌ ಬಿಟ್ಟು ಬಿಡು ಅಂತ ಹೇಳಿದ್ರು' ಎಂದು ನಯನಾ ತಮ್ಮ ಜೀವನ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಅಪ್ಪನ ಹುಡುಕುತ್ತಿರುವೆ, ಸಾಯುವ ಮುನ್ನ ಒಮ್ಮೆಯಾದರೂ ನೋಡಬೇಕು: ನಟಿ ವೈಷ್ಣವಿ

'ಮೊದಲ ಬಾರಿ ಕ್ಯಾಮೆರಾ ಫೇಸ್ ಮಾಡಿದ್ದು ಶಾಂತಂ ಪಾಪಂನಲ್ಲಿ. ಬಳಿಕ ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಪ್ರಾಜೆಕ್ಟ್ ಸಿಕ್ಕಿತು. 2018ರಲ್ಲಿ ಅಕ್ಕ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಕಾಲು ಮುರಿದುಕೊಂಡೆ. ಅಲ್ಲಿಂದ ಅವಕಾಶ ಕಳೆದುಕೊಂಡೆ. ನಾಲ್ಕು ತಿಂಗಳು ಬೆಡ್‌ರೆಸ್ಟ್‌.  ಪಾಪಾ ಪಾಂಡು ಸೀರಿಯಲ್‌ನಲ್ಲಿ ನಟಿಸಿದ್ದೀನಿ. ಇದಾದ ನಂತರ ಗಿಣಿರಾಮ ಧಾರಾವಾಹಿಗೆ ಆಯ್ಕೆಯಾದೆ. ಈಗಲೂ ರಂಗಭೂಮಿ ಆಸಕ್ತಿ ಇದೆ. ನಾನು ಈವರೆಗೂ 100ಕ್ಕೂ ಹೆಚ್ಚಿನ ಆಡಿಷನ್‌ಗಳನ್ನು ಮಾಡಿರಬಹುದು. ನಾನು ಹೆಚ್ಚು ರಿಜೆಕ್ಟ್‌ ಆಗಿರುವುದು ನನ್ನ ಹಲ್ಲುಗಳಿಂದ. ಆದರೆ ಎಲ್ಲರಿಗೂ ನಾನು ಹೇಳೋಕೆ ಇಷ್ಟ ಪಡೋದು ಏನು ಅಂದ್ರೆ ಮೊದಲು ನಿಮ್ಮನ್ನ ನೀವು ಅಪ್ರಿಷಿಯೇಟ್ ಮಾಡಿಕೊಳ್ಳಿ. ನಿಮ್ಮ ಮೇಲೆ ನಿಮಗೆ ಗೌರವ ಹಾಗೂ ನಂಬಿಕೆ ಇಲ್ಲ ಅಂದ್ರೆ ಯಾರೂ ಏನೂ ಮಾಡೋಕೆ ಆಗಲ್ಲ' ಎಂದು ನಯನ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?