
ಗಿಣಿರಾಮ, ನಾಗಕನ್ನಿಕೆ, ಸರಯೂ, ನೇತ್ರಾವತಿ, ಅವನು ಮತ್ತೆ ಶ್ರಾವಣಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿ, ಗಿಣಿರಾಮದ ಆಯಿಸಾಹೇಬ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಚೈತ್ರಾ ರಾವ್ ಅವರು ಇತ್ತೀಚೆಗೆ ತಮ್ಮ ಹೆಡ್ ಶೇವ್ ಮಾಡಿ ಫೋಟೊ ಪೋಸ್ಟ್ ಮಾಡಿದ್ದರು, ಈ ಬಗ್ಗೆ ಹಲವರು ಹಲವು ಪ್ರಶ್ನೆಗಳನ್ನು ಕೇಳಿದ್ದು, ಈ ಬಗ್ಗೆ ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದು, ತಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ನೋವು, ಹೋರಾಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ್ದಾರೆ.
ನಟಿ ಚೈತ್ರಾ ರಾವ್ ಕಳೆದ ಜನವರಿಯಲ್ಲಿ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಕೂದಲಿಗೂ ಕತ್ತರಿ ಹಾಕಬೇಕಾಯಿತು ಹಾಗೂ ಜೊತೆಗೆ ನಟನೆಯಿಂದ ಕೂಡ ದೂರ ಉಳಿದಿದ್ದರು. ಈ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕರುಳಿನ ಬಳಿ ಒಂದು ಗೆಡ್ಡೆ ಕಾಣಿಸಿಕೊಂಡಿದ್ದು, ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು, ಪರೀಕ್ಷೆಗೆ ಕಳುಹಿಸಿದಾಗ ಅವರಿಗೆ ಕ್ಯಾನ್ಸರ್ ಆಗಿರುವುದು ತಿಳಿದು ಬಂದಿದೆ. ಕರುಳಿನ ಸರ್ಜರಿಯನ್ನು ಮಣಿಪಾಲದಲ್ಲಿ ಮಾಡಿಸಿದ್ದು, ಅದರಿಂದ ಗುಣಮುಖರಾದ ಬಳಿಕ, ನಟಿ ಶಂಕರದಲ್ಲಿ ಕ್ಯಾನ್ಸರ್ ಗೆ ಟ್ರೀಟ್ ಮೆಂಟ್ ಪಡೆದುಕೊಂಡಿದ್ದಾರೆ. ಆ ಸಮಯದಲ್ಲಿ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ತುಂಬಾನೆ ಕುಗ್ಗಿ ಹೋಗಿರುವ ಕಾರಣ ಹಾಗೂ ಮಾರಕ ಕಾಯಿಲೆಯ ಬಗ್ಗೆ ಅರಗಿಸಿಕೊಳ್ಳಲು ಕಷ್ಟವಾದ ಕಾರಣ, ಆ ಬಗ್ಗೆ ಯಾರಿಗೂ ಹೇಳಿರಲಿಲ್ಲ ಎಂದು ನಟಿ ತಿಳಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಮತ್ತೆ ಕಾಣಿಸಿಕೊಂಡ ಓವರಿ ಕ್ಯಾನ್ಸರ್
ಜನವರಿಯಿಂದ ನಟಿ ಕೋಲನ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು, ಆಗಸ್ಟ್ ತಿಂಗಳಲ್ಲಿ ಚಿಕಿತ್ಸೆ, ಕೀಮೊ ಥೆರಪು ಬಳಿಕ ಕೊಲನ್ ಕ್ಯಾನ್ಸರ್ ನಿಂದ ಮುಕ್ತರಾಗಿದ್ದರು, ಆದರೆ ಅದಾಗಲೇ ಕ್ಯಾನ್ಸರ್ ಓವರಿಗೆ ತಲುಪಿ ಅದರಲ್ಲೂ ಕ್ಯಾನ್ಸರ್ ಆಗಿತ್ತು. ಇದರಿಂದ ಗರ್ಭಕಂಠ ಹಾಗೂ ಗರ್ಭ ಕೋಶ ಎರಡನ್ನೂ ಕೂಡ ತೆಗೆಯಬೇಕಾಯಿತು. ಮೊದಲನೇ ಸರ್ಜರಿ ನಡೆದಾಗ ಅಷ್ಟೊಂದು ಗೊತ್ತಾಗಲಿಲ್ಲ, ಆದರೆ ಎರಡನೇ ಸರ್ಜರಿ ನಡೆದ ಮೇಲೆ ಶಾರೀರಿಕವಾಗಿ ನಾನು ತುಂಬಾ ಕುಗ್ಗಿ ಹೋದೆ ಎಂದು ತಮ್ಮ ಹೋರಾಟದ ಬಗ್ಗೆ ತಿಳಿಸಿದ್ದಾರೆ ನಟಿ.
ಎರಡನೇ ಬಾರಿ ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡ ಚೈತ್ರಾ ರಾವ್
ಮೊದಲನೇ ಬಾರಿ ಕ್ಯಾನ್ಸರ್ ಹಾಗೂ ಕೀಮೋ ಥೆರಪಿ ನಡೆದಾಗ ಕೂದಲು ಉದುರುವ ಸಮಸ್ಯೆ ಬರಲಿಲ್ಲವಂತೆ, ಆದರೆ ಎರಡನೇ ಬಾರಿ ಕ್ಯಾನ್ಸರ್ ಭಾಧಿತರಾದಾಗ, ಸಿಕ್ಕಾಪಟ್ಟೆ ಕೂದಲು ಉದುರಲು ಶುರುವಾಗಿ, ಮನೆ ಪೂರ್ತಿಯಾಗಿ ಕೂದಲು ತುಂಬಿಕೊಂಡಿತು, ಹಾಗಾಗಿ, ಹೆಡ್ ಶೇವ್ ಮಾಡಿರುವುದಾಗಿ ನಟಿ ನಗುತ್ತಲೇ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನಾನು ಶೀಘ್ರದಲ್ಲಿ ಗುಣಮುಖಳಾಗುತ್ತೇನೆ ಎನ್ನುವ ಭರವಸೆ ನನಗಿದೆ. ಆದರೆ ಇನ್ನೂ ತುಂಬಾ ತುಂಬಾ ನಡೆಯಬೇಕಾಗಿದೆ ಎಂದಿರುವ ನಟಿ, ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಸೇರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ನಟಿ ಸೋಶಿಯಲ್ ಮೀಡಿಯಾದ್ಲಲಿ ವಿಡೀಯೋ ಪೋಸ್ಟ್ ಮಾಡುತ್ತಿದ್ದಂತೆ, ನಟಿಯರಾದ ನಯನಾ ನಾಗರಾಜ್, ಚಿತ್ಕಳಾಅ ಬಿರಾದಾರ್, ಸುಷ್ಮಾ ನಾಣಯ್ಯ, ನಾರಾಯಣಸ್ವಾಮಿ ಸೇರಿ ಹಲವಾರು ನಟ, ನಟಿಯರು ಅಭಿಮಾನಿಗಳು ಕಾಮೆಂಟ್ ಮಾಡಿ, ಸ್ಟ್ರಾಂಗ್ ಆಗಿರುವಂತೆ ಹಾಗೂ ಆದಷ್ಟು ಬೇಗನೆ ಗುಣಮುಖರಾಗಿ, ಮತ್ತೆ ತೆರೆ ಮೇಲೆ ಮಿಂಚುವಂತೆ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.