ಗಿಲ್ಲಿ- ಕಾವ್ಯಾ ಜೋಡಿ ಜಟಾಪಟಿಗೆ ರಿಯಲ್ ರೀಸನ್ ಏನು? ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ?

Published : Dec 11, 2025, 12:49 PM IST
BBK 12 gilli nata kavya shaiva

ಸಾರಾಂಶ

'ಸ್ನೇಹ ಅಂತ ಒಳಗೊಳಗೆ ಸ್ಕೀಮ್ ಹಾಕ್ತಾರೋ' ಎಂದು ಕಾವ್ಯಾ ಅವರನ್ನು ಗಿಲ್ಲಿ ರೇಗಿಸಲು ಆರಂಭಿಸಿದರು. ಅಲ್ಲಿಂದ ಮಾತಿಗೆ ಮಾತು ಬೆಳೆಯಿತು. 'ಜೊತೆಯಲ್ಲಿ ಇದ್ದವರನ್ನು ಹಾಳು ಭಾವಿಗೆ ತಳ್ಳಬಾರ್ದು.. ಬೆನ್ನಿಗೆ ಚೂರಿ ಹಾಕಿದ್ದೀರಿ. ನಾನು ಜಂಟಿಯಾಗಿ ಬರಬಾರದಿತ್ತು. ಸಿಂಗಲ್ ಆಗಿ ಇರುತ್ತೇನೆ ಎನ್ನಬೇಕಿತ್ತು. 

ಕಾವ್ಯಾ ಮತ್ತು ಗಿಲ್ಲಿ ನಟ ಗಲಾಟೆ

Bigg Boss Kannada Season 12: ಬಿಗ್ ಬಾಸ್ ಕನ್ನಡ ಶೋ ಶುರು ಆದಾಗಿನಿಂದಲೂ ಗಿಲ್ಲಿ ನಟ (Gilli Nata Nataraj) ಮತ್ತು ಕಾವ್ಯಾ ಶೈವ (Kavya Shaiva) ಅವರು ಒಳ್ಳೆಯ ಸ್ನೇಹಿತರಾಗಿಯೇ ಇದ್ದರು. ಮೊದಲು ಅವರು ಜಂಟಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ಒಂಟಿ-ಜಂಟಿ ಥೀಮ್ ಮುಗಿದರೂ ಕೂಡ ಕಾವ್ಯಾ ಮತ್ತು ಗಿಲ್ಲಿ ನಟ ಪರಸ್ಪರ ಕ್ಲೋಸ್ ಆಗಿಯೇ ಇದ್ದರು.

ಆದರೆ ಈಗ ಬಿಗ್ ಬಾಸ್ ಆಟದಲ್ಲಿ ಒಂದು ಟ್ವಿಸ್ಟ್ ನೀಡಲಾಗಿದೆ. 'ಕ್ಯಾವ್ಯಾ ಅವರನ್ನು ಅಳಿಸಬೇಕು' ಎಂದು ಗಿಲ್ಲಿಗೆ ಬಿಗ್ ಬಾಸ್ ಒಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಹಾಗಾಗಿ ಗಿಲ್ಲಿ ನಟ ನಟರಾಜ್ ಅವರು ಚುಚ್ಚು ಮಾತುಗಳನ್ನು ಆಡುವ ಮೂಲಕ ಕಾವ್ಯಾ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಈ ಮೊದಲು ಕಾವ್ಯಾ ನೋಡಿದಾಗಲೆಲ್ಲ ಗಿಲ್ಲಿ ನಟ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ಆದರೆ ಯಾವತ್ತೂ ವ್ಯಂಗ್ಯ ಮಾಡುತ್ತಿರಲಿಲ್ಲ.

'ಸ್ನೇಹ ಅಂತ ಒಳಗೊಳಗೆ ಸ್ಕೀಮ್ ಹಾಕ್ತಾರೋ'

ಆದರೆ ಡಿಸೆಂಬರ್ 10ರ ಸಂಚಿಕೆಯಲ್ಲಿ ಅವರು ಕಾವ್ಯಾ ಬಗ್ಗೆ ಹೀನಾಯವಾಗಿ ಮಾತಾಡಿದರು. ಕಾವ್ಯಾ ಅವರನ್ನು ನೋಡಿದ ತಕ್ಷಣ 'ಸ್ನೇಹ ಅಂತ ಒಳಗೊಳಗೆ ಸ್ಕೀಮ್ ಹಾಕ್ತಾರೋ' ಎಂದು ಕಾವ್ಯಾ ಅವರನ್ನು ಗಿಲ್ಲಿ ರೇಗಿಸಲು ಆರಂಭಿಸಿದರು. ಅಲ್ಲಿಂದ ಮಾತಿಗೆ ಮಾತು ಬೆಳೆಯಿತು. 'ಜೊತೆಯಲ್ಲಿ ಇದ್ದವರನ್ನು ಹಾಳು ಭಾವಿಗೆ ತಲ್ಲಬಾರ್ದು.. ಬೆನ್ನಿಗೆ ಚೂರಿ ಹಾಕಿದ್ದೀರಿ. ನಾನು ಜಂಟಿಯಾಗಿ ಬರಬಾರದಿತ್ತು. ಸಿಂಗಲ್ ಆಗಿ ಇರುತ್ತೇನೆ ಎನ್ನಬೇಕಿತ್ತು. ಯಾಕಾದರೂ ಸಹವಾಸ ಮಾಡಿದೆನೋ ಅನಿಸುತ್ತಿದೆ. ನೋಡೋಕೆ ಕಿರಿಕಿರಿ ಆಗುತ್ತಿದೆ. ಆ ಮುಖ ನೋಡಲು ಇಷ್ಟ ಇಲ್ಲ ನನಗೆ. ಗೊತ್ತಿರುವವರೇ ಹೀಗೆಲ್ಲ ಮಾಡೋದು' ಎಂದು ಗಿಲ್ಲಿ ಅವರು ಚುಚ್ಚಿ ಮಾತನಾಡಿದರು.

ಸ್ಪಂದನಾ ಲಕ್ಕಿ ಅಲ್ಲ, ನೀನೇ ನಿಜವಾಗಿಯೂ ಲಕ್ಕಿ

ಜೊತೆಗೆ, 'ಫ್ರೀ ಪ್ರಾಡಕ್ಟ್.. 50 ಸಲ ಕನ್ನಡಿ ನೋಡಿಕೊಳ್ಳುತ್ತಾಳೆ ಸುಂದರಿ ಥರ. ಯಾಕೆ ನನ್ನ ನಾಮಿನೇಟ್ ಮಾಡಿದೆ? ಇದನ್ನೇನಾ ನೀನು ಎಷ್ಟು ವರ್ಷ ಜೀವನದಲ್ಲಿ ಕಲಿತಿರೋದು. ನಿಜ ಹೇಳ್ಬೇಕು ಅಂದ್ರೆ ಸ್ಪಂದನಾ ಲಕ್ಕಿ ಅಲ್ಲ, ನೀನೇ ನಿಜವಾಗಿಯೂ ಲಕ್ಕಿ. ಸ್ಪಂದನಾಗಿಂತ ಮುಂಚೆ ನೀನೇ ಹೋಗುತ್ತೀಯ. ನೀನು ಏನೂ ಮಾಡುತ್ತಿಲ್ಲ. ಹೋಗು.. ಫ್ರೀ ಪ್ರಾಡಕ್ಟ್ ನೀನು. ವೇಸ್ಟ್ ಬಾಡಿ.. ಮನೆಯಿಂದ ಹೊರಗೆ ಹೋಗು' ಎಂದು ಗಿಲ್ಲಿ ನಟ ಅವರು ಕಾವ್ಯಾ ಶೈವ ಅವರನ್ನು ಹೀಯಾಳಿಸಿದ್ದಾರೆ.

'ಇಷ್ಟೆಲ್ಲಾ ಕೊಳಕು ಯೋಚನೆ ನಿನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀಯಾ ಅಂದರೆ ಮೊದಲೇ ಹೇಳಬೇಕಿತ್ತು. ನಿಜವಾಗಿಯೂ ಸೀರಿಯಸ್ ಆಗಿ ಮಾತನಾಡುತ್ತಾ ಇದ್ದೀಯಾ? ನನ್ನ ಮೇಲೆ ಆಣೆ ಮಾಡಿ ಹೇಳು' ಎಂದು ಕಾವ್ಯಾ ಕೇಳಿದರು. ಆಗಲೂ ಗಿಲ್ಲಿ ಸೀರಿಯಸ್ ಆಗಿ ಮಾತನಾಡಿದರು. ಅದರಿಂದ ಕಾವ್ಯಾ ಅವರಿಗೆ ನೋವಾಯಿತು. ಸ್ಪಂದನಾ ಬಳಿ ತಮ್ಮ ನೋವನ್ನು ಹಂಚಿಕೊಂಡು ಕಾವ್ಯಾ ಕಣ್ಣೀರು ಹಾಕಿದರು. ಆದರೂ ಕೂಡ ಗಿಲ್ಲಿ ಅವರು ಸೀಕ್ರೆಟ್ ಟಾಸ್ಕ್ ಕಾರಣದಿಂದಲೇ ಈ ರೀತಿ ಮಾಡಿರಬಹುದು ಎಂಬ ಅನುಮಾನ ಕಾವ್ಯಾ ಅವರಿಗೆ ಇದ್ದೇ ಇದೆ. ಮುಂದೇನಾಗುತ್ತೆ ಎಂಬ ಕುತೂಹಲ ಸಕಲ ಬಿಗ್ ಬಾಸ್ ಪ್ರಿಯರಲ್ಲಿ ಮೂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೌತೆಕಾಯಿ - ಸಕ್ಕರೆ ತಿಂದ್ರೆ ಕಲ್ಲಂಗಡಿ ಟೇಸ್ಟ್, ಸೆಟ್ ನಲ್ಲಿ ರಾಘು ಮೇಲೆ ಝಾನ್ಸಿ ಪ್ರಯೋಗ
ಹೆಣ್ಣು ಹುಲಿ ಸುಷ್ಮಾ ರಾಜ್ ಹೊಟ್ಟೆ ಮೇಲೆ ಮರಿ ಹುಲಿ, ಭಿನ್ನವಾಗಿ ನಡೆದ ಪ್ರೆಗ್ನೆನ್ಸಿ ಫೋಟೋ ಶೂಟ್