
ನಟಿ ಗೌತಮಿ ಜಾಧವ್-ಅಭಿಷೇಕ್ ಕಾಸರಗೋಡು ದಂಪತಿ ಜೊತೆಗೆ ಅವರ ಕುಟುಂಬ ನಿಂತಿಲ್ವಾ? ಏನು ಸಮಸ್ಯೆ ಆಗಿದೆ ಎಂಬ ಪ್ರಶ್ನೆ ಕಾಡಿದೆ. ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಆರಂಭವಾದಾಗಿನಿಂದಲೂ ಗೌತಮಿ ಅವರ ಪತಿಯ ತಂದೆ ಗಣೇಶ್ ಕಾಸರಗೋಡು ಅವರು ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ ಆಗಿದ್ದ ಅವರು ಸೊಸೆಯ ವಿಚಾರದಲ್ಲಿ ಮೌನ ತಾಳಿದ್ದರು. ಆದರೆ ಗೌತಮಿ ಎಲಿಮಿನೇಟ್ ಆದ ದಿನದಿಂದ ಅವರು ಪರೋಕ್ಷವಾಗಿ ಹಾಕುತ್ತಿದ್ದ ಪೋಸ್ಟ್ ವೀಕ್ಷಕರಿಗೆ ಸಾಕಷ್ಟು ಅನುಮಾನ ಮೂಡಿಸಿತ್ತು.
ಇದು ನಮ್ಮ ಹ್ಯಾಪಿ ಕುಟುಂಬ!
ಗೌತಮಿ ಜಾಧವ್ ಕುಟುಂಬದಲ್ಲಿ ಬಿರುಗಾಳಿ, ಸುಂಟರಾಗಳಿ ಎನ್ನುವಂತಹ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಹುಶಃ ಗಣೇಶ್ ಕಾಸರಗೋಡು ಅವರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಪತ್ನಿ, ಎರಡನೇ ಮಗ-ಸೊಸೆ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, “ಬಿರುಗಾಳಿನೂ ಇಲ್ಲ, ಸುಂಟರಗಾಳಿನೂ ಇಲ್ಲ, ಇದು ನಮ್ಮ ಹ್ಯಾಪಿ ಕುಟುಂಬ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಗಣೇಶ್ ಕಾಸರಗೋಡು ಅವರ ಈ ರೀತಿಯ ಪೋಸ್ಟ್‌ಗಳು ಸಾಕಷ್ಟು ಅನುಮಾನ ಮೂಡಿಸುತ್ತಿವೆ. ಈ ಬಗ್ಗೆಯೇ ಕಾಮೆಂಟ್ ಬರುತ್ತಿದ್ದು, ಅದಕ್ಕೆ ಗಣೇಶ್ ಅವರ ಉತ್ತರಗಳು ಇನ್ನಷ್ಟು ಗೊಂದಲ ಮೂಡಿಸುತ್ತಿವೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಮದುವೆ ವಾರ್ಷಿಕೋತ್ಸವದ ದಿನವೇ ತಾಯಿಯಾಗಿ ಬಡ್ತಿ ಪಡೆದ ಶ್ರೀಮತಿ ಹರಿಪ್ರಿಯಾ ವಸಿಷ್ಠ ಸಿಂಹ!
ಆ ರೀತಿ ಪೋಸ್ಟ್ ಯಾಕೆ?
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಇರುವಾಗ ಗೌತಮಿ ಜಾಧವ್ ಅವರು ಎಲಿಮಿನೇಟ್ ಆಗಿದ್ದರು. ಆಗ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸೋಶಿಯಲ್ ಮೀಡಿಯಾದಲ್ಲಿ “ಅನ್ಯಾಯದ ಬೇಡಿಕೆ ಪ್ರಾರ್ಥನೆಯನ್ನು ಮುಲಾಜಿಲ್ಲದೆ ಧಿಕ್ಕರಿಸುವ, ತಿರಸ್ಕರಿಸುವ ಅಮ್ಮ ವನದುರ್ಗೆಗೆ ನಮೋ ನಮಃ” ಎಂದು ಹೇಳಿದ್ದರು. ಗಣೇಶ್ ಕಾಸರಗೋಡು ಅವರು ಇದ್ದಕ್ಕಿದ್ದಂತೆ ಯಾಕೆ ಈ ಥರ ಪೋಸ್ಟ್ ಹಂಚಿಕೊಂಡರು ಎಂಬ ಪ್ರಶ್ನೆ ಬಂದಿದ್ದರು. ಇವರ ಪೋಸ್ಟ್‌ಗೆ ಅನೇಕರು ಸೊಸೆ ಬಗ್ಗೆ ಹಾಕಿರುವ ಪೋಸ್ಟ್ ಎಂದು ಪ್ರಶ್ನೆ ಮಾಡಿದ್ದುಂಟು, ಅದಕ್ಕೆ ಗಣೇಶ್ ಅವರು ಉತ್ತರ ಕೊಟ್ಟಿರಲಿಲ್ಲ.
ಗೌತಮಿ ಜಾಧವ್ ಏನು ಹೇಳಿದ್ದಾರೆ?
ಇನ್ನು ಈ ಬಗ್ಗೆ ನ್ಯಾಶನಲ್ ಟಿವಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಗೌತಮಿ ಜಾಧವ್ ಅವರು ಪ್ರತಿಕ್ರಿಯೆ ನೀಡಿದ್ದು, “ನನಗೂ ಸರ್ಪ್ರೈಸ್ ಆಗಿದ್ದುಂಟು, ಯಾಕೆ ಅವರು ಈ ಥರ ಪೋಸ್ಟ್ ಹಾಕಿದ್ದಾರೆ ಎನ್ನೋದು ಗೊತ್ತಿಲ್ಲ. ನನ್ನ, ಅವರ ಮಧ್ಯೆ ಎಲ್ಲವೂ ಸರಿಯಾಗಿದೆಯೋ ಇಲ್ಲವೋ ಎನ್ನುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಕುಟುಂಬದ ವಿಷಯ ಮನೆಯ ನಾಲ್ಕು ಗೋಡೆ ಮಧ್ಯೆಯೇ ಇರಬೇಕು. ಈ ಮಾತನ್ನು ನಂಬಿರುವ ನಾನು ಇದನ್ನು ಪಾಲಿಸ್ತೀನಿ” ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಗಣೇಶ್ ಕಾಸರಗೋಡು ಅವರು ಪರೋಕ್ಷವಾಗಿ ಏನನ್ನೋ ಹೇಳಲು ಹೊರಟು, ಸೋಶಿಯ್ ಮೀಡಿಯಾ ಪೋಸ್ಟ್ ಹಾಕುತ್ತಲೇ ಇದ್ದರು.
ಮಾವನ ಮತ್ತೊಂದು ಪೋಸ್ಟ್ ಏನು?
“ಶ್ರಮ ಅರ್ಥವಾದರೆ ತಂದೆ ಅರ್ಥ ಆಗುತ್ತಾನೆ. ಕರುಣೆ ಅರ್ಥವಾದರೆ ಅಮ್ಮ ಅರ್ಥ ಆಗುತ್ತಾಳೆ. ತಂದೆ-ತಾಯಿಯನ್ನು ಬಿಟ್ಟು ಪತ್ನಿಯ ಬಾಲ ಹಿಡಿದು ಹೋಗುವ ನಿಯತ್ತೇ ಇಲ್ಲದೆ ಗಂಡು ಮಕ್ಕಳಿಗೆ ಅರ್ಪಣೆ” ಎಂದು ಗಣೇಶ್ ಕಾಸರಗೋಡು ಅವರು ಬರೆದುಕೊಂಡಿದ್ದರು. ಗಣೇಶ್ ಕಾಸರಗೋಡು ಪೋಸ್ಟ್ ನೋಡಿ ಅನೇಕರು “ನೀವು ಗೌತಮಿ ಜಾಧವ್- ಅಭಿಷೇಕ್ ಬಗ್ಗೆ ಮಾತನಾಡಿದ್ದೀರಿ ಅಲ್ಲವೇ?” ಎಂದು ಊಹಿಸಿ, ಪ್ರಶ್ನೆ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.