
ಜೀ ಕನ್ನಡ ವಾಹಿನಿಯ ಟಾಪ್ ರೇಟೆಡ್ ಧಾರಾವಾಹಿ 'ಗಟ್ಟಿಮೇಳ' ಪ್ರಮುಖ ಪಾತ್ರಧಾರಿ ರಕ್ಷ್ ರಿಯಲ್ ಲೈಫ್ ಪಾರ್ಟನರ್ ಜೊತೆ ಫೋಟೋ ಹಂಚಿಕೊಂಡು, ವೆಡ್ಡಿಂಗ್ ಆ್ಯನಿವರ್ಸರಿಗೆ ಶುಭ ಹಾರೈಸಿದ್ದಾರೆ. ನಟ ರಕ್ಷ್ ಅಪರೂಪಕ್ಕೊಂದು ಫೋಟೋ ಹಂಚಿಕೊಳ್ಳುವುದೇಕೆಂದೂ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ರಕ್ಷ್ ಪೋಸ್ಟ್:
'ಹ್ಯಾಪಿ ಆ್ಯನಿವರ್ಸರಿ ಅನು. ನನ್ನ ಜೀವನದ ಸ್ಪೆಷಲ್ ವ್ಯಕ್ತಿ ನೀನು, ನನ್ನ ಕೊನೆಯುಸಿರಿರೋವರೆಗೂ ನೀನೇ ಸ್ಪೆಷಲ್. ಈ ಪ್ಯಾಂಡಮಿಕ್ ಸಂಕಷ್ಟದಲ್ಲಿ ಸಿಲುಕಿರುವ ಪ್ರತಿಯೊಬ್ಬರ ಬಗ್ಗೆಯೂ ನಾವಿಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ಸೋಂಕು ತಗುಲಿರುವವರು ಒಳ್ಳೆಯ ಚಿಕಿತ್ಸೆ ಪಡೆದು, ಆದಷ್ಟು ಬೇಗ ಅವರ ಕುಟುಂಬ ಸೇರಿಕೊಳ್ಳಲಿ. ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಜಿಸಿ. ಏನೇ ಆದರೂ ಭಗವಂತನ ಮೇಲೆ ಭಾರ ಹಾಕಿ, ಆತ ನಿಮ್ಮನ್ನು ಕಾಪಾಡುತ್ತಾನೆ,' ಎಂದು ರಕ್ಷ್ ಬರೆದುಕೊಂಡಿದ್ದಾರೆ.
ರಸ್ತೆ ಅಪಘಾತ ಕುರಿತು ಜಾಗೃತಿ ಕಾರ್ಯಕ್ರಮ; 'ಗಟ್ಟಿಮೇಳ' ವೇದಾಂತ್ ನೋಡಿ ತಲೆ ಸುತ್ತು ಬಿದ್ದ ಜನರು!
ಲಕ್ಷ್ಮಿ ಬಾರಮ್ಮ ಚಿನ್ನು, ನಟಿ ನಿಶಾ ಸೇರಿದಂತೆ ಅನೇಕ ಸಿನಿ ಸ್ನೇಹಿತರು ಕಾಮೆಂಟ್‌ನಲ್ಲಿ ಶುಭ ಹಾರೈಸಿದ್ದಾರೆ. ಅಲ್ಲದೆ 'ಸರ್ ನೀವು ಪತ್ನಿ ಜೊತೆ ಹೆಚ್ಚಾಗಿ ಫೋಟೋ ಹಂಚಿಕೊಳ್ಳುವುದಿಲ್ಲ ಯಾಕೆ? ವರ್ಷಕ್ಕೊಂದು ಮಾತ್ರ, ಎನಿದರ ಹಿಂದಿನ ಐಡಿಯಾ?' ಎಂದೂ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.