ಕೊರೋನಾ ವಾರಿಯರ್‌ಗಳಿಗೆ ಹಾಡಿನ ಕೃತಜ್ಞತೆ; ಸುಶೀಲ್ ಸಾಗರ್ ತಂಡದ ವಸಿಷ್ಠ ಸಿಂಹ ಸಾಥ್

By Kannadaprabha NewsFirst Published May 29, 2021, 9:59 AM IST
Highlights

ಈವೆಂಟ್ ಮ್ಯಾನೇಜರ್ ಹಾಗೂ ಸಿನಿಮಾ ನಿರ್ಮಾಣ ವ್ಯವಸ್ಥಾಪಕ ಸುಶೀಲ್ ಸಾಗರ್ ಕೊರೋನಾ ವಾರಿಯರ್‌ಸ್ ಸೇವೆಯನ್ನು ನೆನಪಿಸಿಕೊಳ್ಳುವ ಹಾಡೊಂದನ್ನು ರೂಪಿಸಿದ್ದು, ಅದು ಮೇ.29ರಂದು ಸಂಜೆ 6 ಗಂಟೆಗೆ ಸಿಟಿ ಸವಾರಿ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗುತ್ತಿದೆ.
 

ಸುಶೀಲ್ ಸಾಗರ್ ಅವರಿಗೆ ಇಂಥದ್ದೊಂದು ಯೋಚನೆ ಬಂದಿದ್ದು ಯಾಕೆ ಮತ್ತು ಅದರ ಅಗತ್ಯವೇನು ಎಂಬುದನ್ನು ಅವರು ಇಲ್ಲಿ ಹೇಳಿಕೊಂಡಿದ್ದಾರೆ.

1. ನಾವು ಸ್ನೇಹಿತರು ಸೇರಿ ನೆರವು ಹೆಸರಿನಲ್ಲಿ ಒಂದು ತಂಡ ಮಾಡಿಕೊಂಡಿಕೊಂಡಿದ್ದೇವೆ. ಇದೇ ತಂಡದಿಂದ ಕಳೆದ ಬಾರಿ ಕೊರೋನಾ ಸಂಕಷ್ಟದಲ್ಲಿದ್ದವರಿಗೆ ರೇಷನ್ ವಿತರಣೆ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗಿದ್ವಿ.

2. ಈಗ ಎರಡನೇ ಅಲೆಯಲ್ಲಿ ಪೊಲೀಸರು, ವೈದ್ಯರು, ಬಿಬಿಎಂ ಸಿಬ್ಬಂದಿ, ಆಶಾ ಕಾರ್ಯಕರ್ತರು, ಮಾಧ್ಯಮ... ಹೀಗೆ ಎಲ್ಲ ವರ್ಗದ ಕೊರೋನಾ ವಾರಿಯರ್‌ಸ್ಗಳ ಸೇವೆಯನ್ನು ನೆನಪಿಸಿಕೊಳ್ಳುವ ಹಾಡೊಂದನ್ನು ರೂಪಿಸಿದ್ದೇವೆ.

3. ನನ್ನ ಸ್ನೇಹಿತ ಆಕಾಶ್ ಸಂಗೀತ ನೀಡಲು ಮುಂದೆ ಬಂದ. ಹಾಗೆ ಅಶ್ವಿನ್ ಶರ್ಮ, ಐಶ್ವರ್ಯ ರಂಗನಾಜನ್ ಹಾಗೂ ಆಶಾ ಭಟ್ ಹಾಡಿದರು. ಹಾಡಿಗೆ ಸಾಹಿತ್ಯ ನೀಡಿರುವುದು ಚಂದನ ವಾಹಿನಿಯಲ್ಲಿ ಸುದ್ದಿ ವಾಚಕಿಯಾಗಿದ್ದ ಹಾಗೂ ಹೆಸರಾಂತ ಗಾಯಕಿ ಎಸ್ ರಂಜನಿ. ರಕ್ಷಿತ್ ಸ್ಕ್ರಿಪ್ಟ್ ಬರೆದರೆ, ಪುನೀತ್ ಕ್ಯಾಮೆರಾ ಹಿಡಿದಿದ್ದಾರೆ. ಇವರೆಲ್ಲರ ಶ್ರಮ ಹಾಗೂ ಸಮಯದ ಹೂಡಿಕೆಯಿಂದ ‘ಭರವಸೆಯ ಒಂದು ಬೆಳಕು’ ಹೆಸರಿನಲ್ಲಿ ಹಾಡು ಮೂಡಿ ಬರುತ್ತಿದೆ.

Youtube LIVE : ಜೀವರಕ್ಷಕರ ಹೃದಯಕ್ಕೆ ಎದೆತುಂಬಿದ ಹಾಡು 

4. ಈ ಹಾಡಿನಲ್ಲಿ ನಟ ವಸಿಷ್ಠ ಸಿಂಹ, ಬಿಗ್‌ಬಾಸ್ ಶೋ ಸ್ಪರ್ಧಿಗಳಾದ ಶೈನ್ ಶೆಟ್ಟಿ, ಅನುಪಮಾ ಗೌಡ, ಚೈತ್ರಾ ವಾಸುದೇವನ್, ರಘು ಗೌಡ, ನಟಿ ಹಿತಾ ಚಂದ್ರಶೇಖರ್, ನಟ ಕಿರಣ್ ಶ್ರೀನಿವಾಸ್, ಶ್ವೇತಾ ಪ್ರದೀಪ್, ಗಾಯಕಿ ರಂಜನೀಕೀರ್ತಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ

click me!