
ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಟಿ.ಎನ್. ಸೀತಾರಾಮ್, ‘ಒಂದು ವಾರದ 5 ಎಪಿಸೋಡ್‌ಗಳನ್ನು ಒಟ್ಟಿಗೇ ಜೂ.4ರಂದು ಬಿಡುಗಡೆ ಮಾಡುತ್ತಿದ್ದೇವೆ. ಅದಕ್ಕೂ ಮೊದಲು ಈ ಧಾರಾವಾಹಿಯ ಮುಖ್ಯ ಕಲಾವಿದರ ಜೊತೆಗೆ ಆನ್‌ಲೈನ್ ಸಂವಾದ ಇರುತ್ತದೆ. ಈ ವಾರ ನನ್ನ ಜೊತೆಗೆ ಮಾಳವಿಕಾ, ಅವಿನಾಶ್, ಎಂ.ಡಿ. ಪಲ್ಲವಿ, ಮಂಜುಭಾಷಿಣಿ ಸಂವಾದದಲ್ಲಿರುತ್ತಾರೆ. ಪ್ರತೀ ವಾರ ಐದು ಎಪಿಸೋಡ್‌ಗಳ ಪ್ರಸಾರವಿದ್ದು, ಅದಕ್ಕೂ ಮೊದಲು ಆ ಭಾಗದಲ್ಲಿ ಕಾಣಿಸಿಕೊಳ್ಳುವ ಮುಖ್ಯ ಕಲಾವಿದರ ಜೊತೆಗೆ ಆನ್‌ಲೈನ್ ಸಂವಾದ ಇರುತ್ತದೆ. ಈಗಿನ ಕಾಲಕ್ಕೆ ಸರಿಹೊಂದುವ ಹಾಗೆ ಸಂಭಾಷಣೆಗಳನ್ನು ಕೊಂಚ ಎಡಿಟ್ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಈಗಾಗಲೇ ಡಿಡಿ1, ಚಂದನ, ಈಟಿವಿಯಲ್ಲಿ 2 ಬಾರಿ ಮಾಯಾಮೃಗ ಪ್ರಸಾರವಾಗಿದೆ. ಜೀ ಕನ್ನಡದಲ್ಲಿ ಮಾಯಾಮೃಗದ 50ಕ್ಕೂ ಹೆಚ್ಚು ಎಪಿಸೋಡ್‌ಗಳು ಪ್ರಸಾರವಾಗಿದೆ.
40ನೇ ವರ್ಷದಲ್ಲಿ ಸನ್ಯಾಸ ತೊರೆದು ಗ್ರಹಸ್ಥರಾದ ಸ್ವಾಮಿಗಳ ಮಗಳು ಕಿರುತೆರೆಗೆ ಎಂಟ್ರಿ
ಆ ಸೀರಿಯಲ್ ಮಾಡುವ ಹೊತ್ತಿಗೆ ಕಷ್ಟ ಇತ್ತು. ಕೈಯಲ್ಲಿ ಹಣ ಸಾಕಷ್ಟಿರಲಿಲ್ಲ. ಆದರೆ ಇದನ್ನೆಲ್ಲ ಮೀರಿಸುವ ಉತ್ಸಾಹ ಇತ್ತು. ಸೀರಿಯಲ್‌ನಿಂದ ಸೀರಿಯಲ್‌ಗೆ ಮುಂದೆ ಹಾಯುತ್ತಾ ಟ್ರೈನ್ ಜರ್ನಿಯಂತೆ ಬಹಳ ಮುಂದೆ ಬಂದು ಬಿಟ್ಟಿದ್ದೇವೆ. ಈಗ ತಿರುಗಿ ನೋಡಿದರೆ ಮನಸ್ಸಿಗೆ ಬಹಳ ಖುಷಿ ಎನಿಸುತ್ತದೆ. ಜನರೂ ಈ ಸೀರಿಯಲ್ ಅನ್ನು ನೋಡುತ್ತಾ ಆ ವೇಳೆ ಘಟಿಸಿದ ಕೆಲವು ಸಂಗತಿಗಳನ್ನು ನೆನಪಿಸಿಕೊಂಡು ಖುಷಿ ಪಡುತ್ತಾರೆ.- ಟಿ.ಎನ್. ಸೀತಾರಾಮ್, ನಿರ್ದೇಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.