ಗಟ್ಟಿಮೇಳದ ಅದಿತಿ- ಪಾರು ಸೀರಿಯಲ್ ಪ್ರೀತು ದಂಪತಿ ತಮ್ಮ ಮೊದಲ ವರ್ಷದ ಸಂಕ್ರಾತಿ ಹಬ್ಬವನ್ನು ಹೇಗೆ ಆಚರಿಸಿದ್ದಾರೆ? ಇಲ್ಲಿದೆ ವಿಡಿಯೋ...
2024ರ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಮುಗಿದಿದೆ. ಸಂಕ್ರಾಂತಿ ಎಂದರೆ ಭಾರತ ಮಾತ್ರವಲ್ಲದೇ ಕೆಲವು ವಿದೇಶಗಳಲ್ಲಿಯೂ ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ ಉತ್ತರ ಕರ್ನಾಟಕದಲ್ಲಿ ಇದರ ಸೊಗಡೇ ಬೇರೆ. ಉತ್ತರ ಕರ್ನಾಟಕ ಬಹುತೇಕ ಪ್ರದೇಶಗಳಲ್ಲಿ ಮುಖ್ಯವಾಗಿ ಕೃಷಿ ಆಧರಿಸಿದ ಕುಟುಂಬಗಳಲ್ಲಿ ಸಂಕ್ರಾಂತಿಯನ್ನು ನದಿ ಮತ್ತು ಹೊಲಗಳಲ್ಲಿ ಆಚರಿಸುವುದು ವಾಡಿಕೆ. ಬೆಳೆಗಳು ಒಕ್ಕಲುತನಕ್ಕೆ ಬರುವ ಗಳಿಗೆ ಇದಾಗಿದ್ದರಿಂದ ಎಲ್ಲರೂ ಆಯ್ಕೆ ಮಾಡಿಕೊಳ್ಳುವುದು ತಮ್ಮ ತಮ್ಮ ಜಮೀನುಗಳನ್ನೆ. ಕೃಷಿ ಆಧಾರಿತ ಕುಟುಂಬಗಳಲ್ಲಿ ಎತ್ತಿನ ಬಂಡಿಯಲ್ಲಿ ಹೊಲಗಳಿಗೆ ಹೋಗುವುದು ಸಂಪ್ರದಾಯ. ಆದ್ದರಿಂದ ಉತ್ತರ ಕರ್ನಾಟಕದ ಸಂಕ್ರಾಂತಿಗೆ ಬಹಳ ರೀತಿಯ ವಿಶೇಷತೆ ಇದೆ. ಕಟಕ ರೊಟ್ಟಿ, ಕರ್ಚಿಕಾಯಿ, ಹೂರಣದ ಹೋಳಿಗೆ, ಎಳ್ಳು ಹೋಳಿಗೆ, ಗೋಧಿ ಹುಗ್ಗಿ, ಬದನೆ ಕಾಯಿಯ ಮುಳಗಾಯಿ ಪಲ್ಯೆ , ಹೆಸರು ಕಾಳು ಪಲ್ಯೆ, ಬುತ್ತಿ ಮಾಡಿಕೊಂಡು ಮನೆ ಜನರೆಲ್ಲಾ ಎತ್ತಿನ ಬಂಡಿಯಲ್ಲಿ ಹೊಲಕ್ಕೆ ತೆರಳುವುದೇ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ.
ಈಗ ತಮ್ಮ ಮನೆಯಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಯಾವ ರೀತಿಯ ಹಬ್ಬ ಆಚರಿಸಲಾಗಿದೆ ಎಂಬ ಬಗ್ಗೆ ಕಿರುತೆರೆ ನಟಿ, ಅದರಲ್ಲಿಯೂ ಗಟ್ಟಿಮೇಳದ ಅದಿತಿ ಮೂಲಕ ಮನೆಮಾತಾಗಿರುವ ಪ್ರಿಯಾ ಜೆ. ಆಚಾರ್ (Priya J. Achar) ತಿಳಿಸಿದ್ದಾರೆ. 2023ರ ಫೆಬ್ರುವರಿಯಲ್ಲಿ ಪಾರು ಸೀರಿಯಲ್ ಖ್ಯಾತಿಯ ಪ್ರೀತು ಅಂದರೆ ಸಿದ್ದು ಮೂಲಿಮನಿ (Siddu Moolimani) ಅವರ ಜೊತೆ ದಾಂಪತ್ಯ ಜೀವನ ತುಳಿದಿರುವ ಪ್ರಿಯಾ ಅವರಿಗೆ ಇದು ಮದುವೆಯಾದ ಮೇಲೆ ಮೊದಲ ಸಂಕ್ರಾಂತಿ ಸಡಗರ. ಈ ಸಡಗರವನ್ನು ಹೇಗೆ ಆಚರಿಸಲಾಯಿತು ಎಂಬ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಇವರು ಮಾಹಿತಿ ನೀಡಿದ್ದಾರೆ.
ಕೈಯಲ್ಲಿ ಒಂದು ರೂಪಾಯಿನೂ ಇರ್ಲಿಲ್ಲ, ಸಾಲ ತೀರಿಸಲು ತಾಳಿ ಕೊಟ್ಟಿದ್ರು... ಪತ್ನಿ ತ್ಯಾಗ ನೆನೆದು ಪ್ರೇಮ್ ಕಣ್ಣೀರು
ಮನೆಯ ಸದಸ್ಯರ ಪರಿಚಯ ಮಾಡಿರುವ ನಟಿ, ಹಬ್ಬಕ್ಕಾಗಿ ಮಾಡಲಾದ ವಿಶೇಷ ಅಡುಗೆಗಳ ಪರಿಚಯವನ್ನೂ ಮಾಡಿಸಿದ್ದಾರೆ. ಜೊತೆಗೆ ಪತಿ ಸಿದ್ದು ಅವರ ಜೊತೆ ಹಬ್ಬವನ್ನು ಸೆಲೆಬ್ರೇಟ್ ಮಾಡಿರುವ ಬಗೆಯನ್ನು ವಿಡಿಯೋದಲ್ಲಿ ಪರಿಚಯಿಸಿದ್ದಾರೆ. ಅಂದಹಾಗೆ, ಪ್ರಿಯಾ ಆಚಾರ್ ಅವರು ಮೂಲತಃ ದಾವಣಗೆರೆಯವರು. ಸೀರಿಯಲ್ಗೂ ಬರುವ ಜೊತೆಜೊತೆಗೆ ಸೋಷಿಯಲ್ ಮೀಡಿಯಾದಲ್ಲಿನ ರೀಲ್ಸ್ ಮೂಲಕವೂ ಪ್ರಿಯಾ ಸಕತ್ ಫೇಮಸ್. ಒಂದರ್ಥದಲ್ಲಿ ಇದೇ ಅವರಿಗೆ ಕಿರುತೆರೆ ಎಂಟ್ರಿಗೂ ಅವಕಾಶ ಕೊಟ್ಟಿತ್ತು. 'ಗಟ್ಟಿಮೇಳ' ಸೀರಿಯಲ್ ಅವರ ಮೊದಲ ಸೀರಿಯಲ್. ಈ ಮೂಲಕ ಅವರು ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಕನ್ನಡ ಮಾತ್ರವಲ್ಲದೇ ತೆಲಗು ಕಿರುತೆರೆಯಲ್ಲಿಯೂ ಇವರು ಫೇಮಸ್. 'ಆನಂದರಾಗಂ' ಎಂಬ ತೆಲುಗು ಧಾರಾವಾಹಿಯಲ್ಲೂ ಪ್ರಿಯಾ ನಟಿಸಿದ್ದಾರೆ.
ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಪ್ರಿಯಾ ಕಾಣಿಸಿಕೊಂಡಿದ್ದಾರೆ. 'ಧಮಾಕಾ' ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಒಂದು ಕುತೂಹಲದ ಸಂಗತಿ ಎಂದರೆ, ಈ ಚಿತ್ರದಲ್ಲಿ ಸಿದ್ದು ಮೂಲಿಮನಿಗೆ ಪ್ರಿಯಾ ಜೋಡಿಯಾಗಿದ್ದರು. ಇದಾದ ಬಳಿಕ ನಿಜ ಜೀವನದಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಸಿದ್ದು ಮೂಲಿಮನಿ ಅವರ ಕುರಿತು ಹೇಳುವುದಾದರೆ, ಇವರು ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಇವರು ನಟಿಸಿದ್ದ 'ವಿಕ್ರಾಂತ್ ರೋಣ', 'ಓ', 'ಧರಣಿ ಮಂಡಲ ಮಧ್ಯದೊಳಗೆ' ಮುಂತಾದ ಸಿನಿಮಾಗಳು ಹಿಟ್ ಆಗಿದ್ದವು. 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರ ಒಂದರ್ಥದಲ್ಲಿ ಸಿದ್ದು ಅವರಿಗೆ ಬ್ರೇಕ್ ಕೂಡ ಕೊಟ್ಟಿತು. ಇವರಿಬ್ಬರೂ ತಮ್ಮ ಮೊದಲ ಸಂಕ್ರಾಂತಿ ಸಂಭ್ರಮ ಹೇಗೆ ಆಚರಿಸಿಕೊಂಡಿದ್ದಾರೆ ಎನ್ನುವ ವಿಡಿಯೋ ಇಲ್ಲಿದೆ ನೋಡಿ...
ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು