
ಇದೀಗ ಕನ್ನಡ ಕಿರುತೆರೆಯ ನಟ-ನಟಿಯರು ಬೆಳ್ಳಿಪರದೆಯ ಮೇಲೆ ಮಿಂಚುವುದು ಸಾಮಾನ್ಯವಾಗಿದೆ. ಇದಾಗಲೇ ಹಲವಾರು ನಟರು ಬೆಳ್ಳಿಪರದೆಗೆ ಕಾಲಿಟ್ಟಿದ್ದಾರೆ. ಇದೀಗ ಈ ಸಾಲಿಗೆ ಸೇರುತ್ತಿದ್ದಾರೆ ಜನಮನ ಗೆದ್ದ ಗಟ್ಟಿಮೇಳ ಧಾರಾವಾಹಿಯ ನಾಯಕ ವೇದಾಂತ್. ಇವರ ನಿಜವಾದ ಹೆಸರು ರಕ್ಷ್ ರಾಮ್ (Rakksh Raam). ಗಟ್ಟಿಮೇಳ ಮಾತ್ರವಲ್ಲದೇ 'ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕವೂ ಮಿಂಚಿದ್ದಾರೆ ರಕ್ಷ್. ಇದೀಗ ಇವರು ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಹೆಸರು ಬರ್ಮ. ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕಮರ್ಷಿಯಲ್ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಚೇತನ್ ಕುಮಾರ್, ಬರ್ಮ ಚಿತ್ರವನ್ನು ನಿರ್ದೇಶಿಸಿದ್ದಾರೆ.
ವರಮಹಾಲಕ್ಷ್ಮಿ ಹಬ್ಬವಾದ ಇಂದು ಈ ಸಿನಿಮಾದ ಘೋಷಣೆ ಮಾಡಲಾಗಿದೆ. ಈ ಸಿನಿಮಾದಲ್ಲಿ ರಕ್ಷ್ ನಾಯಕ ನಟರಾಗಿ ಮಿಂಚಲಿದ್ದಾರೆ. ಇದರ ಶೀರ್ಷಿಕೆ ಇಂದು ಅನಾವರಣಗೊಳಿಸಿರುವ ಚೇತನ್ ಕುಮಾರ್ (Chetan Kumar) ಅವರು ಬರ್ಮ ಶಬ್ದಕ್ಕೆ ಅರ್ಥವನ್ನೂ ನೀಡಿದ್ದಾರೆ. ಸಂಸ್ಕೃತ ಭಾಷೆಯಲ್ಲಿ ಬರ್ಮ ಎಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ ಎಂದಿದ್ದಾರೆ. . 'ಆಯುಧ ಬಳಸುವುದು ಬರೀ ಆಡಂಬರ ಅಲ್ಲ. ಅದೊಂದು ಆಚರಣೆ' ಎಂಬ ಅಡಿಬರಹ ಚಿತ್ರಕ್ಕಿದೆ. ಈ ಮೂಲಕ ಇದೊಂದು ಆಕ್ಷನ್ ಎಂಟರ್‌ಟೇನರ್ ಚಿತ್ರ ಎನ್ನುವುದನ್ನು ಚೇತನ್ ಕುಮಾರ್ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.
ಜೊತೆಜೊತೆಯಲಿ 'ಅನು' ಹಾಟ್ ವಿಡಿಯೋ ವೈರಲ್: ಉಫ್ ನಿಜಕ್ಕೂ ನೀವು ಅವ್ರೇನಾ ಕೇಳಿದ ಫ್ಯಾನ್ಸ್
ಅಂದಹಾಗೆ ನಟರಾಗಿರುವ ಚೇತನ್ ಕುಮಾರ್ ಅವರು ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಾಯಕರಾಗಿ ನಟಿಸಿದ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ‘ಜೇಮ್ಸ್’ ಭರ್ಜರಿ ನಿರೀಕ್ಷೆ ಮೂಡಿಸಿತ್ತು. ಈ ಸಿನಿಮಾ ರಿಲೀಸ್ ಆದ ಬಳಿಕ ಚೇತನ್ ಅವರು ಬ್ರೇಕ್ ಪಡೆದಿದ್ದರು. ಈಗ ಅವರು ಬರ್ಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಅಷ್ಟಕ್ಕೂ ಚೇತನ್ ಕುಮಾರ್ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತದೆ. ಈ ಚಿತ್ರದಲ್ಲೂ ಅದು ಮುಂದುವರಿಯಲಿದೆ ಎಂಬ ನಿರೀಕ್ಷೆ ಇದೆ. ನಟ ಚೇತನ್ ಕುಮಾರ್‌ಗೆ ಹೆಸರು ತಂದುಕೊಟ್ಟಿದ್ದು ಬಹದ್ದೂರ್ ಸಿನಿಮಾ. ಆ ಚಿತ್ರದಲ್ಲಿ ನಟ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಧ್ರುವ ಸರ್ಜಾ ಜೊತೆ ಭರ್ಜರಿ ಸಿನಿಮಾ ಮಾಡಿದರು. ಆ ಚಿತ್ರವೂ ಹಿಟ್ ಆಗಿತ್ತು. ಬಳಿಕ ಶ್ರೀಮುರಳಿ ಜತೆಗೆ ಭರಾಟೆ ಸಿನಿಮಾ ಮಾಡಿದರು.
ಬರ್ಮ ಚಿತ್ರ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಮೂಡಿ ಬರಲು ಪ್ರಯತ್ನ ನಡೆದುತ್ತಿದೆ. ಈ ಹಿಂದೆ ಬಹದ್ದೂರ್, ಭರ್ಜರಿ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ, ಬರ್ಮ ಚಿತ್ರದಲ್ಲೂ ಸಂಗೀತದ ಕೈಚಳಕ ತೋರಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಈ ಸಿನಿಮಾ ಘೋಷಣೆ ಆದ ದಿನವೇ ಚಿತ್ರದ ಆಡಿಯೋ ರೈಟ್ಸ್ ಸಹ ಮಾರಾಟವಾಗಿದೆ. ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಮೊದಲು ಚೇತನ್ ಹಾಗೂ ಹರಿಕೃಷ್ಣ ಅವರು ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಮೂರನೇ ಬಾರಿಗೆ ಈ ಜೋಡಿ ಒಂದಾಗಿದೆ. ಮುಂದಿನ ತಿಂಗಳಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಕನ್ನಡ ಬರಿಯಲು ಕಲಿತಿದ್ದಾರೆ ಪೂಜಾ ಗಾಂಧಿ ಅಮ್ಮ: ನಟಿಯ ಪೋಸ್ಟ್ಗೆ ಭೇಷ್ ಭೇಷ್ ಅಂತಿರೋ ಕನ್ನಡಿಗರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.