
ಸ್ಯಾಂಡಲ್‌ವುಡ್ ಹಾಗು ಕಿರುತೆರೆ ಖ್ಯಾತ ನಟಿ ಅನುಪಮಾ ಗೌಡ (Anupama Gowda) ಅವರ ಸಂದರ್ಶನವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಬ್ರೇಕಪ್ ಆದ ಬಳಿಕ ಅನುಪಮಾ ಗೌಡ ಖಿನ್ನತೆಗೆ ಜಾರಿದ್ದರು. ಈ ಬಗ್ಗೆ ಸ್ವತಃ ನಟಿ ಅನುಪಮಾ ಗೌಡ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ ನಟಿ ಅನುಪಮಾ 'ನಾನು ನನ್ನ ವೈಯಕ್ತಿಕ ಸಮಸ್ಯೆಯಿಂದ ನೊಂದು ಖಿನ್ನತೆಗೆ ಹೋಗಿಬಿಟ್ಟಿದ್ದೆ. ಆಗ ನನಗೆ ಲೈಫ್ ಲೀಡ್ ಮಾಡುವುದಕ್ಕೆ ಯಾವುದೇ ಭರವಸೆಯೇ ಇರಲಿಲ್ಲ.
ನಾನು ಜೀವನ ಇಷ್ಟೇ ಎಂದು ಅಂದುಕೊಂಡಿದ್ದೆ. ಎಲ್ಲವೂ ಮುಗಿದು ಹೋಯ್ತು. ಇನ್ನೇನಿದ್ದರೂ ಸಾವು ಮಾತ್ರ ನನ್ನ ಸಮಸ್ಯೆಗೆ ಪರಿಹಾರ ಎಂದು ನಿರ್ಧಾರ ಮಾಡಿ ಆತ್ಮಹತ್ಯೆಗೂ ಯತ್ನಿಸಿದ್ದೆ. ಆದರೆ, ನಾನು ಸಾಯಲಿಲ್ಲ. ನನ್ನ ಸ್ನೇಹಿತರಿಂದ ನಾನು ಸಾವನ್ನು ಗೆದ್ದು ಬಂದು ಮತ್ತೆ ಒಳ್ಳೆಯ ಜೀವನ ಪ್ರಾರಂಭಿಸಿದೆ. ನನಗೆ ನಿಜವಾಗಿಯೂ ಆಗ ಅಂಥ ಸ್ನೇಹಿತೆ ಸಿಗದಿದ್ದರೆ, ನಾನು ನನ್ನ ಜೀವನವನ್ನು ಮತ್ತೊಮ್ಮೆ ಪ್ರಯತ್ನಿಸಿ ಕೊನೆಗಾಣಿಸಿಕೊಳ್ಳುತ್ತಿದ್ದೆ ಎಂದೇ ಅನ್ನಿಸುತ್ತಿದೆ.
ಭಾಷೆ ಬಗ್ಗೆ ಮತ್ತೆ 'ಕಿರಿಕ್' ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ; ಎಲ್ಲೇ ಹೋದ್ರೂ ಬೆಂಬಿಡದ ವಿವಾದ!
ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಅಷ್ಟು ವರುಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು. ಅದನ್ನು ಎದುರಿಸಲು ನನಗೆ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ತಕ್ಷಣಕ್ಕೆ ನನಗೆ ತೋಚಿದ್ದು ಸಾವೇ ಇಲ್ಲದಕ್ಕೂ ಪರಿಹಾರ ಎಂದು ಮಾತ್ರ. ಅದಕ್ಕೇ ಆತ್ಮಹತ್ಯೆಗೆ ಪ್ರಯತ್ನಿಸಿ ಸೋತೆ. ಅದನ್ನು ಸೋಲು ಎನ್ನುವುದಕ್ಕಿಂತ ಗೆಲುವು ಎನ್ನಬೇಕು. ನಾನು ಸಾವನ್ನು ಗೆದ್ದೆ ಎಂದೇ ಹೇಳಲು ಇಷ್ಟಪಡುತ್ತೇನೆ.
ಅಷ್ಟೊಂದು ಸತ್ಯವಂತರಾಗ್ಬೇಡಿ ಆ್ಯಂಕರ್ ಅನುಶ್ರೀ; ಈ ಕಾಮೆಂಟ್‌ಗೆ ಅವ್ರನ್ನ ಸುಮ್ನೆ ಬಿಡಲ್ಲ ಬಿಡಿ!
ಆ ಸಮಯದಲ್ಲಿ, ಅಂದರೆ ನಾನು ಅಕ್ಷರಶಃ ಖಿನ್ನತೆಗೆ ಜಾರಿದ್ದ ವೇಳೆಯಲ್ಲಿ ನನ್ನನ್ನು ಕಾಪಾಡಿದ್ದು ನನ್ನ ಆತ್ಮೀಯ ಸ್ನೇಹಿತೆ ಹಾಗೂ ನನ್ನ ಗ್ರೇಟ್ ಫ್ರೆಂಡ್ಸ್ ಸರ್ಕಲ್ ಮಾತ್ರ. ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಲವ್ ಮಾಡುತ್ತಿದ್ದೆ ನಾನು. ಆದರೆ ಕಷ್ಟದ ಸಮಸಯದಲ್ಲಿ ಕೈ ಹಿಡಿದಿದ್ದು ಲವರ್ ಅಲ್ಲ, ಬದಲಿಗೆ ಫ್ರೆಂಡ್ಸ್. 'ಪ್ರೇಮಕ್ಕಿಂತ ಸ್ನೇಹ ದೊಡ್ಡದು' ಎಂಬ ಸತ್ಯವನ್ನು ನಾನು ಜೀವನದಲ್ಲಿ ಮೊದಲ ಬಾರಿಗೆ ಕಂಡುಕೊಂಡೆ. 'ಪ್ರೀತಿ ಕೆಲವೊಮ್ಮೆ ಸಾವಿಗೆ ಕಾರಣವಾದರೆ ಸ್ನೇಹ ಬದುಕಿಸಲು ಬಯಸುತ್ತದೆ'. ಈ 'ಲೈಫ್ ಟ್ರುಥ್' ಅನ್ನು ನಾನೆಂದಿಗೂ ಮರೆಯಲಾರೆ' ಎಂದಿದ್ದಾರೆ ನಟಿ ಅನುಪಮಾ ಗೌಡ.
'ಪೋರ್ನ್ ಮೂವಿ'ನಲ್ಲಿ ನಟಿಸ್ತೀರಾ ಅಂತ ಕೇಳಿದ್ದ ಅವ್ನು; ಹಿಗ್ಗಾಮುಗ್ಗಾ ಬೆಂಡೆತ್ತಿದ್ರು ಬೆಂಕಿ ತನಿಷಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.