
ಈ ಶುಕ್ರವಾರ ನವೆಂಬರ್ 27ರಂದು OTTಯಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಬರೋಬ್ಬರಿ 5 ಹೊಸ ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳು OTTಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿವೆ. ಇವುಗಳಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಕ್ರೈಂನಿಂದ ಕೂಡಿದ ದೃಶ್ಯಗಳನ್ನು ನೋಡಬಹುದು. ಈ ಪಟ್ಟಿಯಲ್ಲಿ ಅಜಯ್ ದೇವಗನ್ ಅವರ ಹೊಸ ಕ್ರೈಂ ಥ್ರಿಲ್ಲರ್ ಸಿನಿಮಾದ ಹೆಸರೂ ಸೇರಿದೆ. ಹಾಗಾದರೆ ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗ, ಸೀರೀಸ್ ಯಾವುವು ನೋಡೋಣ.
ರಾಜಕೀಯ ಹಿನ್ನೆಲೆಯುಳ್ಳ ಡ್ರಾಮಾ ಸೀರಿಸ್ 'ಢಾಯಿ ಚಾಲ್' ನವೆಂಬರ್ 27ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಂಜ್ ವಾಚ್ ಮಾಡಬಹುದು. ಸತೀಶ್ ನಾಯರ್ ಮತ್ತು ನವ ನಿರ್ಮಾಣ್ ಸಿಂಗ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸೀರಿಸ್‌ನ ಕಥೆ ವಿದ್ಯಾರ್ಥಿ ರಾಜಕೀಯದ ಸುತ್ತ ಸುತ್ತುತ್ತದೆ. ಗಗನ್ ಅರೋರಾ, ಆದಿಲ್ ಖಾನ್, ಅಂಜಲಿ ತತ್ರಾರಿ, ಅಂಕಿತ್ ಸಿಚಾವ್, ರಾಜೇಶ್ ಕುಮಾರ್ ಮತ್ತು ಪರಿತೋಷ್ ಸ್ಯಾಂಡ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
2. ದೃಶ್ಯಂ: ದಿ ಕನ್‌ಕ್ಲೂಷನ್ (Drishyam: The Conclusion)
ಅಜಯ್ ದೇವಗನ್ ಮತ್ತು ಜಯದೀಪ್ ಅಹ್ಲಾವತ್ ಅಭಿನಯದ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ಇದೀಗ OTTಯಲ್ಲೂ ಅಬ್ಬರಿಸಲು ಬರುತ್ತಿದೆ. ಈ ಸಿನಿಮಾವನ್ನು ನವೆಂಬರ್ 27ರಿಂದಲೇ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಕ್ರೈಂ ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್‌ನಿಂದ ಕೂಡಿದ ದೃಶ್ಯಗಳು ಈ ಸಿನಿಮಾದಲ್ಲಿವೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಅಭಿಮಾನಿಗಳು ಸಾಕಷ್ಟು ಮೆಚ್ಚಿಕೊಂಡಿದ್ದರು.
3. ಹನುಮಾನ್ ಅಂಶ್ (Hanuman Ansh)
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆ ಮಾಡಿದ ಬಳಿಕ 'ಹನುಮಾನ್ ಅಂಶ್' ಸಿನಿಮಾ ಇದೀಗ OTTಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ಈ ಸಿನಿಮಾವನ್ನು ನವೆಂಬರ್ 27ರಿಂದ ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು. ಇದರಲ್ಲಿ ನೀಮ್ ಕರೋಲಿ ಬಾಬಾ ಅವರ ಜೀವನದ ಕಥೆಯನ್ನು ತೋರಿಸಲಾಗಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದರು. ಇದೀಗ ಸೋನಿ ಲಿವ್‌ನಲ್ಲಿಯೂ ಬಿಡುಗಡೆಯಾಗುತ್ತಿದೆ.
4. ದಿ ಚೈಲ್ಡ್ (The Child)
ನಿಮಗೆ ಡ್ರಾಮಾ ಕಥಾಹಂದರವುಳ್ಳ ಸಿನಿಮಾಗಳನ್ನು ನೋಡುವ ಆಸಕ್ತಿ ಇದ್ದರೆ, ಈ ಸಿನಿಮಾ ಮಿಸ್ ಮಾಡದೆ ನೋಡಿ. ಈ ಸಿನಿಮಾ ಕೂಡ ಇದೇ ಶುಕ್ರವಾರ ಅಂದರೆ ನವೆಂಬರ್ 27ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ತಾರಾಗಣದ ಬಗ್ಗೆ ಹೇಳುವುದಾದರೆ, ಬೆಲೆನ್ ಕ್ಯೂಸ್ಟಾ ಮತ್ತು ಕಾರಾ ಎಲೆಹಾಲ್ದೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಲವು ಕುತೂಹಲಕಾರಿ ತಿರುವುಗಳು ಮತ್ತು ಅನಿರೀಕ್ಷಿತ ಘಟನೆಗಳನ್ನು ನೋಡಬಹುದು.
5. ಟೈಸನ್ ಫ್ಯೂರಿ (Tyson Fury)
ಹೊಸ ಡಾಕ್ಯುಮೆಂಟರಿ ಸಿನಿಮಾ 'ಟೈಸನ್ ಫ್ಯೂರಿ' ಕೂಡ ಇದೇ ಶುಕ್ರವಾರ OTTಯಲ್ಲಿ ಬಿಡುಗಡೆಯಾಗಿ ಸದ್ದು ಮಾಡಲಿದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಟೈಸನ್ ಫ್ಯೂರಿ ಜೊತೆಗೆ ಅವರ ಪತ್ನಿ ಪ್ಯಾರಿಸ್ ಫ್ಯೂರಿ ಮತ್ತು ತಂದೆ ಜಾನ್ ಫ್ಯೂರಿ ಅವರ ನೈಜ ಜೀವನದ ಸಂದರ್ಶನಗಳೂ ಸೇರಿವೆ. ನಿಮಗೆ ಡಾಕ್ಯುಮೆಂಟರಿ ಸಿನಿಮಾಗಳನ್ನು ನೋಡುವ ಆಸಕ್ತಿ ಇದ್ದರೆ, ಈ ಸಿನಿಮಾವನ್ನು ನಿಮ್ಮ ವಾಚ್‌ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.