ಯುಟ್ಯೂಬ್‌ನಿಂದ ಸೀಮಾ ಹೈದರ್‌ಗೆ ಸಿಕ್ಕಿತು ಮೊದಲ ಸಂಬಳ

By Suvarna News  |  First Published Nov 4, 2023, 4:07 PM IST

ಸೀಮಾ ಹೈದರ್ ಹಾಗೂ ಸಚಿನ್ ಸದಾ ಸುದ್ದಿಯಲಿರುವ ಜೋಡಿ. ಈಗಾಗಲೇ ಅನೇಕರ ಮನಸ್ಸು ಗೆದ್ದಿರುವ ಸೀಮಾ ಸಚಿನ್ ಯುಟ್ಯೂಬ್ ನಲ್ಲೂ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಅವರ ಮೊದಲ ಗಳಿಕೆ ಹಣ ಬಂದಿದ್ದು, ಸೀಮಾ ಮುಖದಲ್ಲಿ ನಗು ಮೂಡಿದೆ.
 


ಕಳೆದ ಕೆಲ ತಿಂಗಳಿಂದ ಪಾಕಿಸ್ತಾನದ ಸೀಮಾ ಹೈದರ್ ಸುದ್ದಿಯಲ್ಲಿದ್ದಾರೆ. ಭಾರತದ ಸೊಸೆ ಎಂದೇ ಸೀಮಾ ಹೈದರ್ ರನ್ನು ಕರೆಯಲಾಗುತ್ತಿದೆ. ಸೀಮಾ ಮಾಡಿದ ಕೆಲಸವೆಲ್ಲ ಸುದ್ದಿಯಾಗ್ತಿದೆ. ಸೀಮಾ ಕರ್ವಾ ಚೌತ್ ವ್ರತ ಮಾಡಿದ್ದರು. ಸಚಿನ್ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ಕರ್ವಾ ಚೌತ್ ವ್ರತಕೈಗೊಂಡಿದ್ದ ಸೀಮಾ, ಭಾರತದಲ್ಲಿ ಇದು ತನ್ನ ಮೊದಲ ಕರ್ವಾ ಚೌತ್ ಎಂದಿದ್ದರು. ಸೀಮಾ ಇದಕ್ಕೆ ಮೊದಲು ಪಾಕಿಸ್ತಾನದಲ್ಲೇ ಸಚಿನ್ ಹೆಸರಿನಲ್ಲಿ ಕರ್ವಾ ಚೌತ್ ಮಾಡಿದ್ದರು.

ಭಾರತ (India) ಕ್ಕೆ ಬಂದ ನಂತ್ರ ಸೀಮಾ (Seema) ಹಾಗೂ ಸಚಿನ್ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರ ಕರ್ವಾ ಚೌತ್ (Karva Chauth)  ವ್ರತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೀಮಾ ಹಾಗೂ ಸಚಿನ್ ಯುಟ್ಯೂಬ್ ಚಾನೆಲ್ ನಡೆಸ್ತಿದ್ದಾರೆ. ಇದೇ ಯುಟ್ಯೂಬ್ ಚಾನೆಲ್ ಇವರ ಗಳಿಕೆಗೆ ಈಗ ದಾರಿಯಾಗಿದೆ.

Tap to resize

Latest Videos

ಮುಕೇಶ್‌ ಅಂಬಾನಿ ಮೊದಲ ಬಾಸ್ ಮಗ, ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಹೈಯೆಸ್ಟ್ ಸ್ಯಾಲರಿ ಪಡೆಯೋ ಉದ್ಯೋಗಿ!

ಯುಟ್ಯೂಬ್ ಮೂಲಕ ಸೀಮಾ ಹೈದರ್ – ಸಚಿನ್ ಗಳಿಸಿದ ಹಣ ಎಷ್ಟು? : ಟಿವಿ ಚಾನೆಲ್ ಒಂದರಲ್ಲಿ ಮಾತನಾಡಿದ ಸೀಮಾ ಹೈದರ್ ಖುಷಿಯಾಗಿದ್ದಾರೆ. ತಮ್ಮ ಖುಷಿಗೆ ಯುಟ್ಯೂಬ್ ಚಾನೆಲ್ ಗಳಿಕೆ ಕಾರಣ ಎಂದಿದ್ದಾರೆ. ಮೊದಲ ಬಾರಿ ಸೀಮಾ ಹೈದರ್ ಗೆ ಯುಟ್ಯೂಬ್ ನಿಂದ 45 ಸಾವಿರ ರೂಪಾಯಿ ಸಿಕ್ಕಿದೆ. ತಿಂಗಳ ಕೊನೆಯಲ್ಲಿ ಯುಟ್ಯೂಬ್ ಹಣವನ್ನು ನೀಡುತ್ತದೆ. ಸೀಮಾ – ಸಚಿನ್ ದಂಪತಿಗೂ ಅಕ್ಟೋಬರ್ ತಿಂಗಳಲ್ಲಿ 45 ಸಾವಿರ ರೂಪಾಯಿ ಸಿಕ್ಕಿದೆ. ಇದಕ್ಕಿಂತ ಮೊದಲು ಈ ದಂಪತಿ ಯುಟ್ಯೂಬ್ ನಲ್ಲಿ ವೀವ್ ಸಂಖ್ಯೆ ಕಡಿಮೆ ಇತ್ತು. ಆದ್ರೆ ಈಗ ಹೆಚ್ಚಾಗಿದ್ದು, ಹಣ ಸಿಕ್ಕಿದೆ ಎಂದು ಸೀಮಾ ಹೇಳಿದ್ದೆ. ಮುಂದಿನ ದಿನಗಳಲ್ಲೂ ಯುಟ್ಯೂಬ್ ಮೂಲಕ ಹಣ ಗಳಿಸೋದಾಗಿ ಸೀಮಾ ಭರವಸೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಂತ್ರ ಸೀಮಾ ಯುಟ್ಯೂಬ್ ಚಾನೆಲ್ ಬಗ್ಗೆ ಹೇಳಿದ್ದರು. ನಮ್ಮ ಜೀವನ ನಡೆಸಲು ಯಾವುದೇ ಆರ್ಥಿಕ ಮೂಲವಿಲ್ಲ. ಯುಟ್ಯೂಬ್ ಚಾನೆಲ್ ಶುರು ಮಾಡಿದ್ದು, ಅದಕ್ಕೆ ಜನರು ಸಹಾಯ ಮಾಡ್ಬೇಕೆಂದು ಕೇಳಿದ್ದರು. ಜನರು ಸೀಮಾ ಮಾತಿಗೆ ಸ್ಪಂದಿಸಿದ್ದಾರೆ. ಸೀಮಾ ಯುಟ್ಯೂಬ್ ಒಳ್ಳೆ ಗಳಿಕೆ ಶುರು ಮಾಡ್ತಿದೆ. ಇದು ದಂಪತಿ ಜೀವನಕ್ಕೆ ನೆರವಾಗಲಿದೆ.

ಧಂತೇರಸ್: ಈ ವಸ್ತುವನ್ನು ಕುಬೇರನಿಗೆ ಅರ್ಪಿಸಿದ್ರೆ ಮನೆಯಲ್ಲಿ ಹಣದ ಸಮಸ್ಯೆಯೋ ಇರೋಲ್ಲ!

ಸೀಮಾ, ರೀಲ್ಸ್ (Reels) ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನೇಪಾಳದಲ್ಲಿಯೂ (Nepal) ಅವರು ರೀಲ್ಸ್ ಮಾಡಿದ್ದರು. ಸೀಮಾ ವಿಡಿಯೋದಲ್ಲಿ ಸಚಿನ್ ಕಾಣಿಸಿಕೊಳ್ತಾರೆ. ನೇಪಾಳದಲ್ಲೂ ಸೀಮಾ ಮಾಡಿದ್ದ ರೀಲ್ಸ್ ನಲ್ಲಿ ಸಚಿನ್ ಇದ್ರು. ಈಗ ಸೀಮಾ ಸಂಪೂರ್ಣ ಯುಟ್ಯೂಬರ್ ಆಗಿದ್ದಾರೆ. 

ಪಾಕಿಸ್ತಾನದಿಂದ ಬಂದಾಗ ಸೀಮಾ ಹಾಗೂ ಸಚಿನ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈಗ ಸೀಮಾ ತಮ್ಮದೇ ಮನೆ ಹೊಂದಿದ್ದಾರೆ. ಜನರ ಸಹಾಯದಿಂದ ಮನೆ ಮಾಡಿರೋದಾಗಿ ಸೀಮಾ ಹೇಳಿದ್ದಾರೆ. ಕರ್ವಾ ಚೌತ್ ಸಮಯದಲ್ಲಿ ಯುಟ್ಯೂಬ್ ನಿಂದ ಬಂದ ಹಣದಿಂದ ಸಚಿನ್, ಸೀಮಾಗೆ ಉಡುಗೊರೆ ನೀಡಿದ್ದಾರಂತೆ.  ಸೀಮಾಗೆ ಕರ್ವಾ ಚೌತ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಪಾಕಿಸ್ತಾನದಲ್ಲಿ ಕರ್ವಾ ಚೌತ್ ಭಿನ್ನವಾಗಿ ಆಚರಿಸ್ತಾರೆ ಎಂದ ಸೀಮಾ, ಮೊದಲ ಮದುವೆಯಲ್ಲಿ ಖುಷಿ ಇರಲಿಲ್ಲ. ಮೊದಲ ಮದುವೆ ಅಂತ್ಯವಾದ ಕೆಲವೇ ತಿಂಗಳಲ್ಲಿ ಸಚಿನ್ ಸಿಕ್ಕಿದ್ದರು. ಅವರು ನನ್ನನ್ನು ತುಂಬಾ ಪ್ರೀತಿ ಮಾಡ್ತಾರೆ ಎಂದು ಸೀಮಾ ಹೇಳಿದ್ದಾರೆ.

ಯುಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ (Instagram) ರೀಲ್ಸ್ ಮೂಲಕ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಯುಟ್ಯೂಬ್ ನಲ್ಲಿ ಸಬ್ಸ್ಕ್ರೈಬ್ ಹೆಚ್ಚಾದಂತೆ, ವೀವ್ಸ್ ಜಾಸ್ತಿಯಾದಂತೆ ಹಣ ಬರಲು ಶುರುವಾಗುತ್ತದೆ. ಯುಟ್ಯೂಬ್ ಚಾಲೆನ್ ಶುರು ಮಾಡಿದ ನಂತ್ರ 1,000 ಚಂದಾದಾರರು ಮತ್ತು 4,000 ವೀಕ್ಷಣಾ ಗಂಟೆಗಳ ಪಡೆದ ಮೇಲೆ ನೀವು ಹಣಗಳಿಕೆಗೆ ಅರ್ಜಿ ಸಲ್ಲಿಸಬಹುದು.  
 

click me!