'ತಾನೊಬ್ನೆ ಗಂಡ್ಸು ಅನ್ನೋ ಥರ ವಿನಯ್‌ ಆಡ್ತಾನೆ..' ಬಿಗ್‌ ಬಾಸ್‌ 'ಆನೆ' ವಿರುದ್ಧ ಚಿತ್ರಾಲ್‌ ಗರಂ!

Published : Nov 04, 2023, 12:41 PM IST
'ತಾನೊಬ್ನೆ ಗಂಡ್ಸು ಅನ್ನೋ ಥರ ವಿನಯ್‌ ಆಡ್ತಾನೆ..' ಬಿಗ್‌ ಬಾಸ್‌ 'ಆನೆ' ವಿರುದ್ಧ ಚಿತ್ರಾಲ್‌ ಗರಂ!

ಸಾರಾಂಶ

BBK 10: ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳು ಅಡುತ್ತಿರುವ ಮಾತುಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿನಯ್‌ ಗೌಡ ಈ ವಾರ ಟಾಸ್ಕ್‌ಗಳಲ್ಲಿ ಸ್ತೀ ನಿಂದನೆಯ ರೀತಿಯ ಪದ ಬಳಕೆ ಮಾಡಿರೋದಕ್ಕೆ ಬಿಗ್‌ ಬಾಸ್‌ ಹೋಗುವ ಹಾದಿಯಲ್ಲಿದ್ದು ಕೊನೆಗೆ ನಿರಾಸೆ ಎದುರಿಸಿದ ಬಾಡಿಬಿಲ್ಡರ್‌ ಚಿತ್ರಾಲ್‌ ರಂಗಸ್ವಾಮಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.4): ಬಿಗ್‌ ಬಾಸ್ 10ನೇ ಆವೃತ್ತಿಯ ಈ ವಾರದ ಟಾಸ್ಕ್‌ಗಳು ಸಖತ್‌ ಸದ್ದು ಮಾಡಿವೆ. ಆದರೆ, ಬಿಗ್‌ ಬಾಸ್‌ ಸ್ಪರ್ಧಿಗಳು ಆಡಿರುವ ಒಂದೊಂದು ಮಾತುಗಳು, ಅತಿರೇಕದ ವರ್ತನೆಗೆ ಟೀಕೆ ಕೂಡ ವ್ಯಕ್ತವಾಗಿದೆ. ವಿನಯ್‌ ಗೌಡ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿರುವ ಕುರಿತಾಗಿ ಈಗಾಗಲೇ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ, ಗಾಯಕಿ ಐಶ್ವರ್ಯಾ ರಂಗರಾಜನ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಾಲಿಗೆ ಬಾಡಿ ಬಿಲ್ಡರ್‌ ಚಿತ್ರಾಲ್‌ ರಂಗಸ್ವಾಮಿ ಕೂಡ ಸೇರಿದ್ದಾರೆ. ಚಿತ್ರಾಲ್‌ ರಂಗಸ್ವಾಮಿ ಈ ಬಾರಿಯ ಬಿಗ್‌ಬಾಸ್‌ಗೆ ಹೋಗಬೇಕಿತ್ತಾದರೂ, ಅದಕ್ಕೆ ಬೇಕಾದಷ್ಟು ಮತಗಳು ಸಿಗದ ಕಾರಣ ನಿರಾಸೆ ಅನುಭವಿಸಿ ಹೊರಬರುವಂತಾಗಿತ್ತು. ವಿನಯ್‌ ವರ್ತನೆಯ ಬಗ್ಗೆ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬಿಗ್‌ ಬಾಸ್‌ಗೆ ಹೋಗಲು ಸಾಧ್ಯವಾಗದೇ ಇದ್ದರೂ, ಈ ಶೋನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಳ್ಳಿಮನೆ ಟಾಸ್ಕ್‌ ಸಮಯದಲ್ಲಿ ಯಾರು ಕಳಪೆ ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.

ಬಿಗ್‌ಬಾಸ್‌ನ ಆರಂಭದಲ್ಲಿಯೇ ಸಂಗೀತಾ ಅವರ ವಿರುದ್ಧ ಅವಹೇಳನಕಾರಿಯಾಗಿ ವಿನಯ್‌ ಮಾತನಾಡಿದ್ದರು. ಸಂಗೀತಾ ವಿರುದ್ಧ ಅವರು ಬಳಸಿದ್ದ ಅವಾಚ್ಯ ಶಬ್ದಗಳನ್ನು ಬಿಗ್‌ ಬಾಸ್‌ ಬೀಪ್‌ ಮಾಡಿ ಪ್ರಸಾರ ಮಾಡಿತ್ತು. ಆದರೆ, ಈ ಬಗ್ಗೆ ಸುದೀಪ್‌ ಆಗಲಿ, ಬಿಗ್‌ ಬಾಸ್‌ ಆಗಲಿ ಯಾವುದೇ ಎಚ್ಚರಿಕೆಯನ್ನು ವಿನಯ್‌ ಗೌಡಗೆ ನೀಡಿರಲಿಲ್ಲ. ಇದರ ಪರಿಣಾಮ ಎನ್ನುವಂತೆ ವಿನಯ್‌ ಗೌಡ ಹಳ್ಳಿ ಮನೆ ಟಾಸ್ಕ್‌ನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರ ಬಗ್ಗೆಯೇ ನಿಂದನಾತ್ಮಕವಾಗಿ ಮಾತನಾಡಿರುವುದಕ್ಕೆ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ 'ನನ್ನ ಪ್ರಕಾರ 4 ಕಳಪೆಗಳು' ಎಂದು ಅವರು ಬರೆದುಕೊಂಡಿದ್ದಾರೆ. ಮೊದಲಿಗೆ ವಿನಯ್‌, ಬಳೆ ತೊಡೋರು ಎಂದು ಕೀಳಾಗಿ ಮಾತನಾಡಿದ್ದಕ್ಕೆ, ಊರಲ್ಲಿ ಇವನೊಬ್ನೆ ಗಂಡಸು ಅನ್ನೋ ಥರ ಆಡೋದಕ್ಕೆ..ಈತ ಕಳಪೆ ಎಂದು ಅವರು ಬರೆದಿದ್ದಾರೆ.

ನಾಗಿಣಿ ಸೀರಿಯಲ್‌ ಮೂಲಕ ಪ್ರಸಿದ್ಧಿ ಪಡೆದು ಬಿಗ್‌ ಬಾಸ್‌ ಮನೆಗೆ ಹೋಗಿರುವ ನಮ್ರತಾ ಗೌಡ ಕೂಡ  ಕಳಪೆ. ವೈಯಕ್ತಿಕವಾಗಿ ಆಕೆ ನಿರ್ಧಾರ ಮಾಡೋದಿಲ್ಲ. ಗಂಡ್ಸಾಗಿ ಹೀಗೆ ಕಿರುಚುತ್ತಾರಾ ಅಂತಾ ಕೇಳ್ತಾರೆ ಅಂದ್ರೆ ಏನ್‌ ಅರ್ಥ. . ಕಿರುಚೋದು ಎಲ್ಲರೂ ಒಂದೇ. ಹಾಗೆ ತಾವೊಬ್ಬರೇ ನೀಟ್ ಆಗಿ ಬೆಳೆದಿರೋದು ಅನ್ನೋ ಹಾಗೆ ಆಡ್ತಾರೇ. ಬಳೆ ಬಗ್ಗೆ ವಿನಯ್ ಮಾತನಾಡಿದಾಗ ನಮ್ರತಾ ವಾಯ್ಸ್ ರೈಸ್ ಮಾಡಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇನ್ನು ಸ್ನೇಹಿತ್‌ ಅವರು ಕೂಡ ಕಳಪೆ ಎಂದಿರುವ ಚಿತ್ರಾಲ್‌, ಕಾರ್ತಿಕ್ ಬಗ್ಗೆ ಏನು ಅನ್ನಿಸುತ್ತದೆ ಅದನ್ನು ಅವನಿಗೆ ಹೇಳುವ ಧೈರ್ಯ ಇಲ್ಲದೇ ಎಲ್ಲದನ್ನೂ ವಿನಯ್‌ಗೆ ಒಪ್ಪಿಸೋದು. ಹಾಗೆ ಈತನಿಗೂ  ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ ಎಂದು ಹೇಳಿದ್ದಾರೆ.

ಇಶಾನಿ ಕೂಡ ಕಳಪೆ ಎಂದಿರುವ ಚಿತ್ರಾಲ್‌,  ಆಕೆ ಈವರೆಗೆ ಒಂದೇ ಒಂದು ರಾಪ್‌ ಸಾಂಗ್ ಹಾಡಿಲ್ಲ. ಇನ್ನು ಹೇಳುಕೊಳ್ಳುವಂತಹ ಕಾಂಟ್ರಿಬ್ಯೂಷನ್ ಇಲ್ಲ. ಬಳೆ ಬಗ್ಗೆ ವಿನಯ್ ಮಾತನಾಡಿದಾಗ ಇಶಾನಿ ಕೂಡ ವಾಯ್ಸ್ ರೈಸ್ ಮಾಡಲಿಲ್ಲ ಎಂದಿದ್ದಾರೆ. ಇನ್ನು ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್ ಕೂಡ ಕಳಪೆ. ಆಟಕ್ಕುಂಟು ಲೆಕ್ಕಕ್ಕಿಲ್ಲ" ಎಂದು ಚಿತ್ರಾಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

 

ಸುದೀಪ್ ಸರ್ ಯಾಕೆ ಆ ವ್ಯಕ್ತಿನ ಪ್ರಶ್ನೆ ಮಾಡ್ತಿಲ್ಲ?; Scripted ಬಗ್ಗೆ ಸತ್ಯ ಬಿಚ್ಚಿಟ್ಟ ಕಿರಿಕ್ ಕೀರ್ತಿ

ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ರಿಜೆಕ್ಟ್‌ ಆಗಿದ್ದರ ಬಗ್ಗೆಯೂ ಬೇಸರ ತೋಡಿಕೊಂಡಿದ್ದ ಚಿತ್ರಾಲ್ ರಂಗಸ್ವಾಮಿ, ನನ್ನನ್ನು ಆಯ್ಕೆ ಮಾಡುವ ಸಮಯದಲ್ಲಿ ಅವರು ಹೇಳಿದ್ದೇ ಒಂದು. ಆದರೆ, ಆಮೇಲೆ ಬೇರೆಯದೇ ರೀತಿಯಲ್ಲಿ ನಡೆದುಕೊಂಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದರು. ಶೋ ಆರಂಭವಾದ ಬಳಿಕ ಪ್ರತಿ ವಾರವೂ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

 

35 ಕಂಪನಿ ಇಲ್ವೇ ಇಲ್ಲ, ಹಣ ತಗೊಂಡು ಮೋಸ ಮಾಡಿಲ್ಲ: ವಿನಯ್ ಪತ್ನಿ ಸ್ಪಷ್ಟನೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?