
ಅಣ್ಣ-ತಂಗಿ ಮಧ್ಯೆ ಬಿಗ್ ಫೈಟ್?
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli actor Nataraj) ಮತ್ತು ರಕ್ಷಿತಾ ಶೆಟ್ಟಿ (Rakshita Shetty) ನಡುವೆ ಒಂದು ಬಾಂಡಿಂಗ್ ಶುರುವಾಗಿತ್ತು. ಇವರಿಬ್ಬರನ್ನೂ ದೊಡ್ಮೆನೆಯ ಅಣ್ಣ ತಂಗಿ ಅಂತ ವೀಕ್ಷಕರು ಕೂಡ ಇಷ್ಟ ಪಡಲಿಕ್ಕೆ ಶುರುಮಾಡಿದ್ರು. ಆದ್ರೆ ಈ ಬಾರಿ ರಕ್ಷಿತಾ, ಗಿಲ್ಲಿಯನ್ನ ನಾಮಿನೇಟ್ ಮಾಡಿದ್ದು, ಈ ಅಣ್ಣ ತಂಗಿ ನಡುವೆನೇ ಫೈಟ್ ಶುರುವಾಗಿದೆ.
ಗಿಲ್ಲಿಯನ್ನ ನಾಮಿನೇಟ್ ಮಾಡಿದ ರಕ್ಷಿತಾ; ದೊಡ್ಮನೆಯ ಅಣ್ಣ ತಂಗಿ ನಡುವೆ ಗುದ್ದಾಟ..!
ಯೆಸ್ ಈ ಸಾರಿ ಬಿಗ್ಬಾಸ್ ಮನೆಯಲ್ಲಿ ಜನರ ಮೆಚ್ಚುಗೆ ಪಡೆದಿರೋ ಇಬ್ಬರು ಸ್ಪರ್ಧಿಗಳು ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ. ಇಬ್ಬರೂ ಎಲ್ಲರನ್ನೂ ನಗಿಸೋ ಚಿನಕುರಳಿಗಳು, ಜೊತೆಗೆ ಸ್ಪರ್ಧಿಗಳಿಗೆ ಅಲ್ಲೇ ಟಕ್ಕರ್ ಕೊಡೋ ಪಂಟರ್ಗಳು ಕೂಡ.
ಅಸಲಿಗೆ ಅಶ್ವಿನಿ - ಜಾಹ್ನವಿ, ರಕ್ಷಿತಾಳಜೊತೆ ಜಗಳಕ್ಕೆ ನಿಂತಾಗ, ರಕ್ಷಿತಾ ಪರ ಗಟ್ಟಿಯಾಗಿ ನಿಂತುಕೊಂಡಿದ್ದು ಗಿಲ್ಲಿ. ಸೋ ಗಿಲ್ಲಿಗೆ ಆ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಕೂಡ ಸಿಕ್ಕಿತ್ತು.
ಮುಂದೆ ಗಿಲ್ಲಿ, ರಕ್ಷಿತಾ ನಡುವೆ ಒಳ್ಳೆ ಬಾಂಡಿಂಗ್ ಬೆಳೆದಿತ್ತು. ಆದ್ರೆ ಕಳೆದ ವಾರದಿಂದ ಎಲ್ಲವೂ ಬದಲಾಗಿದೆ. ಕಳೆದ ವಾರ ರಕ್ಷಿತಾಗೆ ಚಪ್ಪಾಳೆ ಸಿಕ್ಕಿದೆ. ಕಿಚ್ಚನ ಚಪ್ಪಾಳೆ ಪಡೆದ ಮೇಲೆ ರಕ್ಷಿತಾ ವರಸೆಯೇ ಬದಲಾಗಿದೆ. ಅದ್ರಲ್ಲೂ ಈ ವಾರ ಗಿಲ್ಲಿಯನ್ನ ನಾಮಿನೇಟ್ ಮಾಡಿದ್ದಾಳೆ
ಅಸಲಿಗೆ ಜಾಹ್ನವಿ, ಗಿಲ್ಲಿ - ಕಾವ್ಯಾ ಜೊತೆ ಮಾತನಾಡೋವಾಗ ಌಂಕರಿಂಗ್ ಬಗ್ಗೆ ಚರ್ಚೆ ಮಾಡಿದ್ರು. ಆಗ ಗಿಲ್ಲಿ ಆಡಿದ ಮಾತನ್ನಿಟ್ಟುಕೊಂಡು ಗಿಲ್ಲಿನ ನಾಮಿನೇಟ್ ಮಾಡಿದ್ರು. ಇದರಿಂದ ಇನ್ಫ್ಲೂಯನ್ಸ್ ಆದ ರಕ್ಷಿತಾ ಕೂಡ ಗಿಲ್ಲಿನ ನಾಮಿನೇಟ್ ಮಾಡಿದ್ದಾರೆ.
ತಾನು ಏನು ಮಾತನಾಡಿದ್ದೀನಿ ಅನ್ನೋದು ಗೊತ್ತಿಲ್ಲದೇ ನಾಮಿನೇಟ್ ಮಾಡಿದಕ್ಕೆ ರಕ್ಷಿತಾ ಮೇಲೆ ಗಿಲ್ಲಿ ಕೂಡ ಗರಂ ಆಗಿದ್ದಾನೆ. ಅಲ್ಲಿಗೆ ಗಿಲ್ಲಿ ಅಂಡ್ ರಕ್ಷಿತಾ ನಡುವಿನ ಸ್ನೇಹ ಮುರಿದು ಬಿದ್ದಿದೆ. ಬಿಗ್ ಬಾಸ್ ಮನೆಯಲ್ಲಿ ಯಾವ ಸ್ನೇಹವೂ ಹೆಚ್ಚು ಬಾಳಲ್ಲ ಅನ್ನೋದು ಮತ್ತೆ ಪ್ರೂವ್ ಆಗಿದೆ.
ಇನ್ನೂ ಈ ವಾರ ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಬಿಗ್ಬಾಸ್ ಮನೆ ರೆಸಾರ್ಟ್ ಆಗಿ ಬದಲಾಗಿದ್ದು, ಹಿಂದಿನ ಸೀಸನ್ ಸ್ಪರ್ಧಿಗಳು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸೀಸನ್ನ ಸ್ಪರ್ಧಿಗಳು ಇವರನ್ನ ಉಪಚರಿಸಬೇಕಿದ್ದು, ಎಲ್ಲರಿಗೂ ಸಖತ್ ಕಾಟ ಕೊಟ್ಟಿದ್ದಾರೆ.
ಒಟ್ಟಾರೆ ಫಿನಾಲೆ ಹತ್ರ ಬರ್ತಾ ಬರ್ತಾ ಬಿಗ್ ಬಾಸ್ ಆಟ ರಂಗೇರ್ತಾ ಇದೆ. ಈ ವಾರ ದೊಡ್ಮನೆಯ ಗೇಮ್ ಮತ್ತಷ್ಟು ಇಂಟರೆಸ್ಟಿಂಗ್ ಆಗಿದೆ. ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.