ಈ ರಾಮ್​ದು ಅತಿಯಾಯ್ತು ಅನ್ನಿಸ್ತಿಲ್ವಾ? ಎಲ್ಲದಕ್ಕೂ ಲಿಮಿಟ್​ ಇದ್ರೆ ಚೆಂದ... ಫ್ಯಾನ್ಸ್​ ಗರಂ

By Suchethana D  |  First Published Jun 11, 2024, 3:51 PM IST

ಸೀತಾರಾಮ ಜೋಡಿಯನ್ನು ಮೆಚ್ಚಿಕೊಳ್ಳುತ್ತಿದ್ದ ಫ್ಯಾನ್ಸ್​ ಈಗ ರಾಮನ ವರ್ತನೆಯಿಂದ ಗರಂ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 


ಸೀತಾರಾಮರ ಜೋಡಿಯನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದಾರೆ. ಸೀತಾ ಮತ್ತು ಸಿಹಿಗಾಗಿ ರಾಮ್​  ತೋರುವ ಪ್ರೀತಿಯನ್ನು ಇಲ್ಲಿಯವರೆಗೂ ಫ್ಯಾನ್ಸ್​ ಕೊಂಡಾಡುತ್ತಲೇ ಬಂದಿದ್ದಾರೆ. ಇದು ಸೀರಿಯಲ್​ ಜೋಡಿ ಎನ್ನುವುದನ್ನೂ ಮರೆತು ನಿಜ ಜೀವನದಲ್ಲಿಯೂ ನೀವಿಬ್ಬರೂ ಒಂದಾಗಿ, ಮದ್ವೆಯಾಗಿ ಎಂದೆಲ್ಲಾ ಸಲಹೆ ಕೊಟ್ಟವರೇ ಹೆಚ್ಚು. ಅಷ್ಟು ಹಿಟ್​ ಆಗಿದೆ ಈ ಜೋಡಿ. ಆದರೆ ಯಾಕೋ ಅಭಿಮಾನಿಗಳು ಕೆಲ ದಿನಗಳ ಎಪಿಸೋಡ್​ನಿಂದ ತುಂಬಾ ಗರಂ ಆದಂತಿದೆ. ಅಷ್ಟಕ್ಕೂ ಸೀತಾರಾಮ ಸೀರಿಯಲ್​ನಲ್ಲಿ ನಿಶ್ಚಿತಾರ್ಥ ಮುಗಿದಿದೆ. ಸೀತಾರಾಮ ಸೀರಿಯಲ್​ನಲ್ಲಿ ಸದ್ಯ ಮದುವೆಯ ಸಡಗರ ಜೋರಾಗಿ ನಡೆಯುತ್ತಿದೆ.  ಇನ್ನೇನಿದ್ದರೂ ಮದುವೆ  ಮಾತ್ರ. ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ಜೋಡಿ ಲವ್​ಬರ್ಡ್ಸ್​ ರೀತಿಯಲ್ಲಿ ಹಾರಾಡುತ್ತಿವೆ. ಅತ್ತ ಚಿಕ್ಕಮ್ಮ ಮಾಡಿದ ಕುತಂತ್ರ ಯಾವುದೂ ವರ್ಕ್​ಔಟ್​ ಆಗಲಿಲ್ಲ. ಈಗ ವಿಲನ್​ ಭಾರ್ಗವಿಗೆ ಬೇರೆ ದಾರಿ ಇಲ್ಲ.ಮದುವೆಯಾದ ಮೇಲೆ ಸೀತಾಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾಳೇ ವಿನಾ ಮದುವೆಯಂತೂ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇತ್ತ ರುದ್ರಪ್ರತಾಪ್​ ಮಾತ್ರ ಸಂಚು ಹೂಡುತ್ತಲೇ ಇದ್ದು ಸೀತಾ-ರಾಮ ಕಲ್ಯಾಣದಲ್ಲಿ ಏನು ಮಾಡುವನೋ ಕಾದು ನೋಡಬೇಕಿದೆ.

ಇದರ ನಡುವೆಯೇ, ರಾಮ್​ ಸದಾ ಸೀತಾಳ ಹಿಂದೆಯೇ ಇರುತ್ತಾನೆ, ಇದು ಯಾಕೋ ಓವರ್​ ಆಗ್ತಿದೆ ಎಂದು ಫ್ಯಾನ್ಸ್​ ಗರಂ ಆಗಿದ್ದಾರೆ. ರಾಮ್​ನನ್ನು ಅತಿಯಾಗಿ ಹೊಗಳಿದ್ದೇ ಹೆಚ್ಚಾಯ್ತೇನೋ... ಎಲ್ಲದ್ದಕ್ಕೂ ಲಿಮಿಟ್​ ಇದ್ರೆ ಚೆಂದ. ಒಂದು ಕಡೆ ಸಿಹಿಯನ್ನು ಅವಳ ವಯಸ್ಸಿಗಿಂತಲೂ ಅತಿಯಾಗಿ ಬಳಸಿಕೊಳ್ತಿದ್ರೆ ಪ್ರೇಕ್ಷಕರು ನೋಡ್ತಾರೆ ಎನ್ನುವ ಕಾರಣಕ್ಕೆ ಏನೇನೋ ತುರುಕುವುದು ಸರಿ ಕಾಣಿಸುವುದಿಲ್ಲ ಎಂದು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ರಾಮ್​ ದೊಡ್ಡ ಬಿಜಿನೆಸ್​ಮನ್​. ಅವನು ಕೆಲಸಕ್ಕೆ ಹೋಗದೇ ಸದಾ ಸೀತಾಳ ಹಿಂದೆ ತಿರುಗುತ್ತಾ ಇರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

Tap to resize

Latest Videos

ಸಿಹಿಯ ಹಿನ್ನೆಲೆ ಕೇಳಲು ರಾಮ್​ ನಿರಾಕರಿಸ್ತಿರೋದಕ್ಕೆ ಇದೇ ಕಾರಣನಾ? ಏನಂತಿದ್ದಾರೆ ನೆಟ್ಟಿಗರು?

ಇದೀಗ ಸೀತಾರಾಮ ಸೀರಿಯಲ್​ ಕುತೂಲಹ ಘಟ್ಟ ತಲುಪಿದೆ. ಸಿಹಿ ಸೀತಮ್ಮನನ್ನು ರೆಡಿ ಮಾಡುತ್ತಿದ್ದಾಳೆ. ತಾನೇ ಅಮ್ಮನ ರೀತಿ ವರ್ತಿಸುತ್ತಿದ್ದಾಳೆ. ಅತ್ತ ರಾಮ್​ ಕೂಡ ಸೀತಾಳ ಮನೆಗೆ ಬರುತ್ತಿದ್ದಾನೆ. ಸಿಹಿ ಮತ್ತು ರಾಮ್​ ಸೇರಿ ಸೀತಾಳಿಗೆ ತಮಾಷೆ ಮಾಡುತ್ತಿದ್ದಾರೆ. ಇದರ ಪ್ರೊಮೋ ರಿಲೀಸ್​ ಆಗಿದೆ. ಈ ಪ್ರೊಮೋ ನೋಡಿದ ನೆಟ್ಟಿಗರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. 

ಅದೇ ಇನ್ನೊಂದೆಡೆ,  ಸಿಹಿಯ ಹುಟ್ಟಿನ ರಹಸ್ಯ ಮಾತ್ರ ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಈಕೆ ಸೀತಾಳ ಮಗಳೇ ಅಲ್ಲ ಎನ್ನುವ ವೀಕ್ಷಕರ ಅನಿಸಿಕೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮ್​  ಜೊತೆಗೆ ಇರುವಾಗಲೇ ಈ ಗುಟ್ಟನ್ನು ಸೀತಾ ಹೇಳುತ್ತಿಲ್ಲಾ ಯಾಕೆ ಎಂದು ಸೀರಿಯಲ್​ ಫ್ಯಾನ್ಸ್​ ಪ್ರಶ್ನೆ ಮಾಡುತ್ತಿರುವ ಹೊತ್ತಲ್ಲೇ ಸಿಹಿಯ ಗುಟ್ಟನ್ನು ವಾಯ್ಸ್​ ಮೆಸೇಜ್​ ಮೂಲಕ ಸೀತಾ ಮಾಡಿ ಕಳುಹಿಸಿದ್ದಾಳೆ. ಮದುವೆಗೂ ಮುನ್ನ ಸಿಹಿಯ ಬಗ್ಗೆ ರಾಮ್​ ತಿಳಿದುಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾಳೆ.  ಆದರೆ ಆ ಗುಟ್ಟು ರಾಮ್​ವರೆಗೆ ತಲುಪಲಿಲ್ಲ. ಹಲವು ಬಾರಿ ಸಿಹಿಯ ರಹಸ್ಯವನ್ನು ರಾಮ್​ ಬಳಿ ಹೇಳಲು ಹೋದಾಗಲೆಲ್ಲಾ ರಾಮ್​ ಅವೆಲ್ಲಾ ನನಗೆ ಬೇಡ ಎನ್ನುತ್ತಲೇ ಬಂದಿದ್ದಾನೆ. ಈ ಗುಟ್ಟು ಕೂಡ ತಿಳಿಯಬೇಕಿದೆ. 

ಮುದ್ದು ಸಿಹಿಯ ಆ್ಯಕ್ಟಿಂಗ್​ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...


click me!