ಖಡಕ್‌ ಬಂಗಾರಮ್ಮ, ಸಾಫ್ಟ್‌ ಅಶೋಕ ಇಬ್ರೂ ಹುಟ್ಟಿದ್ದು ಇವತ್ತೇ! ಇಬ್ಬರೂ ತಾರೆಯರ ಇಂಟರೆಸ್ಟಿಂಗ್‌ ವಿಷ್ಯ ಇಲ್ಲಿದೆ

Published : Oct 04, 2024, 02:21 PM IST
ಖಡಕ್‌ ಬಂಗಾರಮ್ಮ, ಸಾಫ್ಟ್‌ ಅಶೋಕ ಇಬ್ರೂ ಹುಟ್ಟಿದ್ದು ಇವತ್ತೇ! ಇಬ್ಬರೂ ತಾರೆಯರ ಇಂಟರೆಸ್ಟಿಂಗ್‌ ವಿಷ್ಯ ಇಲ್ಲಿದೆ

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಖಡಕ್‌ ಬಂಗಾರಮ್ಮ, ಸೀತಾರಾಮ ಸೀರಿಯಲ್‌ ಸಾಫ್ಟ್‌ ಅಶೋಕ ಇಬ್ರೂ ಹುಟ್ಟಿದ್ದು ಇವತ್ತೇ! ಇಬ್ಬರೂ ತಾರೆಯರ ಇಂಟರೆಸ್ಟಿಂಗ್‌ ವಿಷ್ಯ ಇಲ್ಲಿದೆ  

ಬಂಗಾರಮ್ಮ- ಸಿಂಗಾರಮ್ಮ ಎಂದರೆ ಪುಟ್ಟಕ್ಕನ ಮಕ್ಕಳು ನೆನಪಿಗೆ ಬರುತ್ತದೆ. ಆಗ ಬಂಗಾರಮ್ಮನಾಗಿ ಮಿಂಚಿದ್ದ, ಒಳ್ಳೆಯ ಅತ್ತೆಯಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾಕೆ, ಈಗ ಫುಲ್‌ ಉಲ್ಟಾ ಆಗಿ ರೌಡಿ ಸಿಂಗಾರಮ್ಮ ಆಗಿದ್ದಾಳೆ. ತುಂಬಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಿಂಗಾರಮ್ಮನ ಎಂಟ್ರಿಯಾಗಿದ್ದಕ್ಕೆ ಸೀರಿಯಲ್‌ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ಅವಶ್ಯಕತೆಯೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಸೀರಿಯಲ್‌ ಇನ್ನಷ್ಟು ವರ್ಷ ಎಳೆಯಲು ಇಂಥ ಕಥೆಗಳ ಅವಶ್ಯಕತೆ ಬಂದೇ ಬರುತ್ತದೆ. ಅದೇನೇ ಇದ್ದರೂ ಡಬಲ್‌ ರೋಲ್‌ನಲ್ಲಿ ಮಿಂಚುತ್ತಿರೋ ಸುಂದರಿ ಬಂಗಾರಮ್ಮನ ನೋಡುವುದೇ ಒಂದು ಸೊಗಸು. ಬಂಗಾರಮ್ಮನ ಗತ್ತು ಎಂದರೆ ವೀಕ್ಷಕರಿಗೆ ಅಷ್ಟೇ ಇಷ್ಟ.  ಉಮಾಶ್ರೀ ಲೀಡ್ ರೋಲ್‌ನಲ್ಲಿ ಇರುವಾಗ ಅವರ ಅಭಿನಯಕ್ಕೆ ತಕ್ಕಂತೆ ವಿಲನ್‌ ಆಗಿ ಮಿಂಚುತ್ತಿರೋ  ಸದಾ ಬಂಗಾರವನ್ನು ಧರಿಸಿಕೊಂಡು ಶ್ರೀಮಂತರ ಮನೆಯ ಒಡತಿಯಾಗಿರೋ ಈ ಪಾತ್ರ ಮಾಡುತ್ತಿರುವವರ ನಿಜವಾದ ಹೆಸರು ಮಂಜು ಭಾಷಿಣಿ. 

ಇನ್ನು ಅಶೋಕ. ನಮಗೂ ಇಂಥ ಗಂಡನೇ ಸಿಗಲಪ್ಪ ಎಂದು ಯುವತಿಯರೆಲ್ಲರೂ ಹಾರೈಸುವ ಪಾತ್ರ ಇದು. ಹೌದು. ಸೀತಾರಾಮ ಸೀರಿಯಲ್‌ನ ಅಶೋಕನ ಪಾತ್ರಕ್ಕೆ ಮನಸೋಲದವರೇ ಇಲ್ಲ. ರಾಮನ ಗೆಳೆಯನಾಗಿ, ಹಠಮಾರಿ ಪ್ರಿಯಾಳ ಪತಿಯಾಗಿ ನಟಿಸುತ್ತಿರುವ ಅಶೋಕ್‌ ಎಲ್ಲರ ನೆಚ್ಚಿನ ನಾಯಕ. ಇದ್ದರೆ ಇಂಥ ಗೆಳೆಯ ಇರಬೇಕು, ಇಂಥ ಪತಿ ಇರಬೇಕು ಎನ್ನು ಕ್ಯಾರೆಕ್ಟರ್‌ ಈ ಅಶೋಕ್‌. ಸೀತಾರಾಮ ಕಲ್ಯಾಣದ ಅಶೋಕ ಎಂದರೆ ಬಹುತೇಹ ಮಹಿಳೆಯರ ಕ್ರಷ್​. ಇಂಥದ್ದೇ ಕೇರಿಂಗ್​ ಗಂಡ ತಮಗೂ ಸಿಕ್ಕರೆ ಎಷ್ಟು ಚೆನ್ನ ಎಂದು ಅಂದುಕೊಳ್ಳುತ್ತಲೇ ಅದರ ಬಗ್ಗೆ ಥಹರೇವಾರಿ ಕಮೆಂಟ್ಸ್​ ಸುರಿಮಳೆ ಸೋಷಿಯಲ್​ ಮೀಡಿಯಾದಲ್ಲಿ ಆಗುತ್ತಲೇ ಇರುತ್ತದೆ. ಪ್ರಿಯಾಳಂಥ ಮೊಂಡು ಪತ್ನಿಯನ್ನು ಸಂಭಾಳಿಸುವಲ್ಲಿ ಅಶೋಕ್​ದು ಎತ್ತಿದ ಕೈ. ಮಹಿಳೆಯರೇ ಬೇಗ ಏಳಬೇಕು, ಇಂತಿಷ್ಟು ಕೆಲಸ ಹೆಂಡತಿಯಾದವಳೇ ಮಾಡಬೇಕು... ಎಂಬೆಲ್ಲಾ ಸಿದ್ಧಸೂತ್ರಗಳನ್ನು ಬದಿಗಿಟ್ಟು ಗಂಡಸರು ಇವೆಲ್ಲಾ ಯಾಕೆ ಮಾಡಬಾರದು ಎಂದುಪ್ರಶ್ನಿಸುತ್ತಲೇ ಲಲನೆಯರಿಗೆಲ್ಲಾ ಹತ್ತಿರ ಆಗ್ತಿರೋ ಕ್ಯಾರೆಕ್ಟರ್​ ಇದು. ಹೀಗೆ ಮಹಿಳಾ ಅಭಿಮಾನಿಗಳ ಮನಸ್ಸನ್ನು ಕದ್ದು ಗೆದ್ದಿರುವ ಅಶೋಕ್​ ನಿಜವಾದ ಹೆಸರು ಅಶೋಕ್​ ಶರ್ಮಾ. 

ಇಂದು ಅಂದರೆ ಅಕ್ಟೋಬರ್‌ 4 ಈ ಇಬ್ಬರು ತಾರೆಯರ ಜನ್ಮದಿನ. ಇವರಿಬ್ಬರೂ ಜೀ ಕನ್ನಡ ವಾಹಿನಿ ವಿಶೇಷ ಶುಭಾಶಯ ಕೋರಿದೆ. ಇನ್ನು ಮಂಜು ಭಾಷಿಣಿ ಕುರಿತು ಹೇಳುವುದಾದರೆ, ಇವರು, 1997ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ `ಭೂಮಿ ತಾಯಿ' ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ. ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ನಂತರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಅಮ್ಮಾವ್ರ ಗಂಡ, ಗಂಡ ಹೆಂಡತಿ, ರಾಜ್‌ ದಿ ಶೋ ಮ್ಯಾನ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಂತರ ಕಿರುತೆರೆಯತ್ತ ವಾಲಿದರು. 'ಸಿಲ್ಲಿ ಲಲ್ಲಿ' ಧಾರಾವಾಹಿಯ ಲಲಿತಾಂಬಾ ಆಗಿ ಜನಮನ ಗೆದ್ದರು.  ಅದರಲ್ಲಿ ಲಲಿತಾಂಬಾಳ ಫೆವರೆಟ್‌ ಡೈಲಾಗ್‌ 'ನಾನು ಸಮಾಜಸೇವಕಿ ಲಲಿತಾಂಬಾ, ನನ್ನ ನಂಬಿ ಪ್ಲೀಸ್' ಅನ್ನೋದು ಸಕತ್‌ ವೈರಲ್‌ ಆಗಿತ್ತು.  ಇದಕ್ಕೂ ಮೊದಲು ಅವರು ಕಿರುತೆರೆ ಪ್ರವೇಶಿಸಿದ್ದು ಗಿರೀಶ್ ಕಾರ್ನಾಡ್ ಅವರ 'ಅಂತರಾಳ' ಧಾರಾವಾಹಿ ಮೂಲಕ. ಟಿ.ಎನ್ ಸೀತಾರಾಂ ಅವರ 'ಮಾಯಾಮೃಗ' ಇವರಿಗೆ ಬ್ರೇಕ್‌ ಕೊಟ್ಟಿತು.  

ಶ್ರೀರಸ್ತು ಶುಭಮಸ್ತು ಲೇಡಿ ವಿಲನ್​ ದೀಪಿಕಾ ಬರ್ತ್​ಡೇ ಸೆಲಬ್ರೇಷನ್​ ಹೀಗಿತ್ತು ನೋಡಿ...

 ಇವರು ನಟಿ ಮಾತ್ರವಲ್ಲ, ಕಂಪೆನಿಯೊಂದರ ಒಡತಿ ಕೂಡ  ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ವಿದೇಶಗಳಿಗೆ ಹೋಗಬೇಕಾಗಿ ಬರುವುರಿಂದ ಕೆಲ ಕಾಲ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದರು.  ಬಳಿಕ  'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇವರ ಹಾಸ್ಯ ನೋಡಿದ್ದ ವೀಕ್ಷಕರು ಈಗ ವಿಲನ್‌ ಆಗಿ, ಗಂಭೀರ ಪಾತ್ರದಲ್ಲಿ ಮೆಚ್ಚಿಕೊಳ್ಳುತ್ತಿದ್ದಾರೆ. 

ಇನ್ನು ಅಶೋಕ್​ ಅವರ ಕುರಿತು ಹೇಳುವುದಾದರೆ, ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್, ಬಳಿಕ ಹಣಕ್ಕಾಗಿ ಆಕ್ರೆಸ್ಟ್ರಾ ಗಾಯಕರಾದರು, ಬಳಿಕ ಕೀಬೋರ್ಡ್ ಕಲಿತು, ಮಕ್ಕಳಿಗೆ ಹೇಳಿಯೂ ಕೊಡುತ್ತಿದ್ದರು, ಅದಾದ ಬಳಿಕ ನಿರೂಪಕರಾಗಿಯೂ ಅಶೋಕ್ ಗುರುತಿಸಿಕೊಂಡಿದ್ದಾರೆ. ಸುವರ್ಣ, ರಾಜ್ ಮ್ಯೂಸಿಕ್ ನಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವ ಕೂಡ ಇವರಿಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಖಾಸಾ ದೋಸ್ತ್ ಆಗಿರುವ ಅಶೋಕ್ ಶರ್ಮಾ, ಇವರಿಬ್ಬರ ಸ್ನೇಹ 20 ವರ್ಷಗಳಷ್ಟು ಹಳೆಯದ್ದೆಂದು ಹೇಳುತ್ತಾರೆ. ಯಶ್ ಅಭಿನಯದ ಮಿ, ಆಂಡ್ ಮಿಸಸ್ ರಾಮಾಚಾರಿಯಿಂದ ಹಿಡಿದು ಕೆಜಿಎಫ್ ವರೆಗೂ ಹಲವು ಸಿನಿಮಾಗಳಲ್ಲಿ ಸಹ ಅಶೋಕ್ ನಟಿಸಿದ್ದಾರೆ. 

ಪ್ರೆಗ್ನೆಂಟ್​ ಆಗ್ತಾಳೆ, ಮಗು ಬೀಳಿಸ್ತಾಳೆ, ಕಂಕುಳ ಕೂದ್ಲು ತೋರಿಸ್ತಾಳೆ... ಕಾರಣ ಕೇಳಿದ್ರೆ ಗಂಡಸ್ರು ಸುಸ್ತಾಗ್ತೀರಾ!

 ಅಶೋಕ್‌ ಅವರು ರೀಲ್‌ ಲೈಫ್‌ನಲ್ಲಿ ಪ್ರಿಯಾ ಜೊತೆ ಮದ್ವೆಯಾಗಿದ್ದರೂ, ರಿಯಲ್‌ ಲೈಫ್‌ ಮದುವೆ ಇನ್ನೂ ಸಸ್ಪೆನ್ಸ್‌ ಆಗಿದೆ.  ಪೂಜಾ ಎನ್ನುವವರ ಜೊತೆ ಮದುವೆಯಾಗಿದೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಗೊತ್ತಿಲ್ಲ, ಈ ಬಗ್ಗೆ ನಟ ಕೂಡ ಎಲ್ಲಿಯೂ ಬಹಿರಂಗಪಡಿಸಲಿಲ್ಲ.   ನಟಿಸ್ತಿರೋರು ಅಶೋಕ್ ಶರ್ಮಾ (Ashok Sharma) ಅವರು ಇದಾಗಲೇ ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವಲಕ್ಕಿ ಪವಲಕ್ಕಿ, ವಾತ್ಸಲ್ಯ, SSLC ನನ್ ಮಕ್ಕಳು, ಮರಳಿ ಮನಸಾಗಿದೆ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಅಶೋಕ್ ಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟಿದ್ದು ಸೀತಾ ರಾಮ ಸೀರಿಯಲ್  ಅಶೋಕ್ ಪಾತ್ರ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!