ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಅದರಲ್ಲಿ ತಪ್ಪುಗಳನ್ನು ಕಂಡುಹಿಡಿದು ಸಕತ್ ಕಮೆಂಟ್ ಮಾಡುತ್ತಿದ್ದಾರೆ ಅಭಿಮಾನಿಗಳು. ಅವರು ಹೇಳ್ತಿರೋದೇನು?
ಸೀರಿಯಲ್ ಎಂದ ಮೇಲೆ ತಮ್ಮ ಅನುಕೂಲಕ್ಕೆ ಹಾಗೂ ದೃಶ್ಯಗಳಿಗೆ ಸರಿಯಾಗಿ ಕೆಲವೊಂದು ಎಡವಟ್ಟುಗಳು ಅಥವಾ ಹೀಗೆಲ್ಲಾ ನಿಜ ಜೀವನದಲ್ಲಿ ನಡೆಯತ್ತಾ ಎನ್ನುವಂಥ ದೃಶ್ಯಗಳು ಇರುವುದು ಸಹಜವೇ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಿಯೂ ವೀಕ್ಷಕರು ಹೀಗೆಯೇ ಹೇಳುತ್ತಿದ್ದಾರೆ. ಅಷ್ಟಕ್ಕೂ ಭಾಗ್ಯಳ ಮನೆ ಎರಡು ಪಾಲಾಗಿದೆ. ಹೆತ್ತ ಮಗನನ್ನೇ ಪಕ್ಕದ ಮನೆಯವರೇ ಎಂದು ಸಂಬೋಧಿಸುತ್ತಿದ್ದಾಳೆ ಕುಸುಮಾ. ಮನೆಯೊಳಕ್ಕೆ ಗೆರೆ ಎಳೆದಿರುವ ಕುಸುಮಾ, ಒಂದು ಕಡೆ ಮಗ ತಾಂಡವ್ನನ್ನು ಇರಿಸಿ ಇನ್ನೊಂದು ಕಡೆ ಉಳಿದ ಎಲ್ಲಾ ಸದಸ್ಯರನ್ನೂ ಇಟ್ಟುಕೊಂಡಿದ್ದಾಳೆ. ಈಗ ತಾಂಡವ್ ಒಬ್ಬಂಟಿಯಾಗಿದ್ದಾನೆ. ಆದರೆ ಆಕಾಶ-ಭೂಮಿ ಒಂದು ಮಾಡಿಯಾದರೂ ಭಾಗ್ಯಳನ್ನು ಮನೆಯಿಂದ ಹೊರಕ್ಕೆ ಹಾಕಬೇಕು ಎನ್ನುವುದು ತಾಂಡವ್ ಶಪಥ. ಸದ್ಯ ಅಮ್ಮ ಕುಸುಮಾ ಎದುರು ಎಲ್ಲವೂ ಠುಸ್ ಆಗಿದೆ. ಆದರೆ ಇದೀಗ ಯುಗಾದಿ ದಿನವೇ ಗಂಡ-ಹೆಂಡತಿ ನಡುವೆ ಭರ್ಜರಿ ಪ್ರತಿಜ್ಞೆ ಆಗಿದೆ. ಇಬ್ಬರೂ ಪ್ರತಿಜ್ಞೆ ಮಾಡಿದ್ದು, ಗೆಲುವು ಯಾರದ್ದು, ಹೇಗೆ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ, ನಮಗೆ ಮಗನಿಗಿಂತಲೂ ಸೊಸೆಯೇ ಮೇಲು ಎಂದು ಕುಸುಮಾ ಮತ್ತು ಅವರ ಮನೆಯವರು ಭಾಗ್ಯಳ ಪರ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಕುಸುಮಾಳನ್ನು ಹೊರಗೆ ಹಾಕುವ ಪಣ ತೊಟ್ಟ ಮಗ ತಾಂಡವ್ಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ತಾಂಡವ್ಗೆ ಬುದ್ಧಿ ಕಲಿಸಲು, ತಮ್ಮ ಸೊಸೆ ಭಾಗ್ಯಳನ್ನು ಉಳಿಸಿಕೊಳ್ಳಲು ಇದಲ್ಲದೇ ಬೇರೆ ಮಾರ್ಗವಿಲ್ಲ ಎಂದು ಈ ಮಾರ್ಗವನ್ನು ತನ್ನದಾಗಿಸಿಕೊಂಡಿದ್ದಾಳೆ.
ಇನ್ನು ಅಡುಗೆಗೆ ಹೊಸಬಳನ್ನು ಕರೆತಂದಿದ್ದಾನೆ ತಾಂಡವ್. ಆದ್ರೆ ಸೀರಿಯಲ್ನಲ್ಲಿ ಒಂದು ಎಡವಟ್ಟು ಮಾಡಲಾಗಿದೆ ಎಂಬುದು ಭಾಗ್ಯಲಕ್ಷ್ಮಿ ಅಭಿಮಾನಿಗಳ ಅಭಿಮತ. ಅದೇನೆಂದರೆ. ಭಾಗ್ಯ ಯುಗಾದಿ ಹಬ್ಬಕ್ಕೆಂದು ಅಡುಗೆ ಮಾಡಿದ್ದಾಳೆ. ಆದರೆ ಕೇಸರಿಬಾತ್ ಮತ್ತು ಉಪ್ಪಿಟ್ಟಿನ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದು ಇಟ್ಟಿದ್ದಳು. ಹಸಿದು ಬಂದಿರೋ ಮಗ ಗುಂಡಾ ತಿಂಡಿ ಪರಿಮಳ ನೋಡಿ ಅದನ್ನು ತೆಗೆಯಲು ಹೋದಾಗ, ಅದು ಬಿದ್ದು ಎಲ್ಲಾ ಚೆಲ್ಲಿ ಹೋಗಿದೆ. ಸಾಲದು ಎನ್ನುವುದಕ್ಕೆ ಚೆಲ್ಲಿರುವುದನ್ನು ಗುಂಡಾ ಎತ್ತಿ ಪಾತ್ರೆಗೆ ಹಾಕಿದ್ದಾನೆ. ಇದರ ಪ್ರೊಮೋ ನೋಡಿದ ಭಾಗ್ಯಲಕ್ಷ್ಮಿ ಫ್ಯಾನ್ಸ್, ಯಾರಾದ್ರೂ ತಲೆ ಇರೋರು ಪಾತ್ರೆಗಳನ್ನು ಹೀಗೆ ಒಂದರ ಮೇಲೆ ಒಂದು ಇಡ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು, ಕೆಳಗೆ ಚೆಲ್ಲಿರುವ ಊಟವನ್ನು ಪಾತ್ರೆಯೊಳಗೆ ಹಾಕ್ತಿರೋದನ್ನು ನೋಡ್ತಾನೇ ಇದ್ದ ಭಾಗ್ಯ ಆಮೇಲೆ ಏಕೆ ಹಾಕಿದೆ ಎಂದು ಕೇಳಿದ್ದಾಳೆ. ಇಂಥ ಎಡವಟ್ಟುಗಳು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಜಗಳ ಮಾಡದೆಯೂ ಕುತಂತ್ರಿ ಅತ್ತೆ-ನಾದಿನಿಯರನ್ನು ಮಟ್ಟ ಹಾಕ್ಬೋದಾ? ಭೇಷ್ ಭೇಷ್ ಎಂದ ಫ್ಯಾನ್ಸ್
ಇನ್ನು ಸೀರಿಯಲ್ ವಿಷ್ಯಕ್ಕೆ ಬರೋದಾದ್ರೆ, ಅಡುಗೆ ಎಲ್ಲಾ ಚೆಲ್ಲಿ ಹೋಗಿದೆ. ಅತ್ತ ತಾಂಡವ್ಗೆ ರೂಪ ಬಗೆಬಗೆ ಅಡುಗೆ ಮಾಡಿಕೊಟ್ಟಿದ್ದಾಳೆ. ಮಕ್ಕಳನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ತಾಂಡವ್ ಮಕ್ಕಳಿಗೆ ಇಷ್ಟವಾಗಿರೋ ಅಡುಗೆಯನ್ನೇ ಮಾಡಿಸಿದ್ದಾನೆ. ತುಂಬಾ ಹಸಿವಾಗಿದೆಯಲ್ಲಾ, ನಿಮ್ಮ ಅಮ್ಮ ಇಷ್ಟು ಬೇಗ ಅಡುಗೆ ಮಾಡಲ್ಲ, ಬೇಗ ಬನ್ನಿ ಎಂದು ಮಕ್ಕಳಿಗೆ ಕರೆಯುತ್ತಿದ್ದಾನೆ. ಈ ಗೆರೆ ದಾಟಿ ಬನ್ನಿ ಸಾಕು ಎನ್ನುತ್ತಿದ್ದಾರೆ. ಮಕ್ಕಳು ಗೆರೆಯವರೆಗೆ ಬಂದಿದ್ದು, ಅದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ ಮಕ್ಕಳು ಗೆರೆ ದಾಟುವುದಿಲ್ಲ, ಅಪ್ಪನನ್ನು ಬೈದು ವಾಪಸ್ ಬರುತ್ತಾರೆ ಎನ್ನುವುದು ಸೀರಿಯಲ್ ಪ್ರೇಮಿಗಳ ಅಭಿಮತ.
ಅದೇ ಇನ್ನೊಂದೆಡೆ ಇತ್ತ ಮಕ್ಕಳು ಹಸಿದುಕೊಂಡಿದ್ದಾಳೆ ಎಂದು ಭಾಗ್ಯಳ ಬಳಿ ಅಡುಗೆ ಮಾಡಲು ಹೇಳಿದ್ದಾಳೆ ಅತ್ತೆ. ಹಬ್ಬದ ಅಡುಗೆ ಎಲ್ಲಾ ಚೆಲ್ಲಿ ಹೋಗಿದೆ. ಮಕ್ಕಳಿಗೆ ಹಸಿವಾಗಿದೆ. ಈ ಸಂದರ್ಭದಲ್ಲಿ ಭಾಗ್ಯ ಒಬ್ಬಳೇ ಅಡುಗೆ ಮಾಡಬೇಕಾ? ಭಾಗ್ಯಳ ಅಮ್ಮ, ಅತ್ತೆ, ತಂಗಿ ಪೂಜಾ ಎಲ್ಲಾ ಷೋಪೀಸ್ ಗೊಂಬೆಗಳಾ ಎನ್ನುವುದು ಸೀರಿಯಲ್ ಪ್ರೇಮಿಗಳ ಪ್ರಶ್ನೆ. ಅಡುಗೆ ಮಾಡುವುದು ಎಂದರೆ ಅದು ಸೊಸೆಯದ್ದು ಮಾತ್ರ ಕೆಲಸನಾ? ಅದರಲ್ಲಿಯೂ ಸದಾ ಸೊಸೆಯ ಪರವಾಗಿ ನಿಂತು ಮಗನನ್ನೇ ಎದುರು ಹಾಕಿಕೊಂಡಿರೋ ಕುಸುಮಾ ಅಂತ ಅತ್ತೆನೂ ಅಡುಗೆ ಮಾಡುವುದನ್ನು ಬಿಟ್ಟು ಹೊರಗಡೆ ಬಂದು ಅಡುಗೆ ಮಾಡು ಎಂದು ಭಾಗ್ಯಂಗೇ ಆರ್ಡರ್ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ ಫ್ಯಾನ್ಸ್.
ಅವಿಯ ಬೆನ್ನಲ್ಲೇ ಅಭಿಯೂ ಅಮ್ಮಾ ಹೇಳುವ ಟೈಮ್ ಬಂದೇ ಬಿಡ್ತಾ? ಏನಿದು ಶ್ರೀರಸ್ತು ಶುಭಮಸ್ತು ಟ್ವಿಸ್ಟ್?