ವೀಕೆಂಡ್ ಕುರ್ಚಿಯಲ್ಲಿ ಭಾರತದ ಮೈಕೆಲ್ ಜಾಕ್ಸನ್; 'ನಾನು ಲುಂಗಿ ಹಾಕಲ್ಲ' ಎಂದಿದ್ದೇಕೆ ಪ್ರಭುದೇವ?

Published : Mar 29, 2023, 01:30 PM ISTUpdated : Mar 29, 2023, 01:31 PM IST
ವೀಕೆಂಡ್ ಕುರ್ಚಿಯಲ್ಲಿ ಭಾರತದ ಮೈಕೆಲ್ ಜಾಕ್ಸನ್; 'ನಾನು ಲುಂಗಿ ಹಾಕಲ್ಲ' ಎಂದಿದ್ದೇಕೆ ಪ್ರಭುದೇವ?

ಸಾರಾಂಶ

ನಾನು ಯಾವಾಗಲು ಲುಂಗಿ ಹಾಕಲ್ಲ ಎಂದು ಖ್ಯಾತ ಡಾನ್ಸರ್ ಪ್ರಭುದೇವ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹೇಳಿದ್ದಾರೆ. 

ವೀಕೆಂಡ್ ವಿತ್ ರಮೇಶ್ ಸೀಸನ್-5 ಅದ್ದೂರಿಯಾಗಿ ಪ್ರಾರಂಭವಾಗಿದೆ.  ಮೊದಲ ಸಾಧಕಿಯಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿದ್ದರು. 2ನೇ ಅತಿಥಿ ಯಾರು ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಇದೀಗ ಆ ಕುತೂಹಲಕ್ಕೂ ತೆರೆಬಿದ್ದಿದೆ. ವೀಕೆಂಡ್ ಕುರ್ಚಿಯಲ್ಲಿ ಈ ಬಾರಿ ಕುಳಿತಿರುವುದು ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ. ಈ ಬಾರಿಯ ವೀಕೆಂಡ್ ವಿತ್ ರಮೇಶ್ ಸಂಚಿಕೆಯಲ್ಲಿ ಸಾಧಕರ ಸೀಟಿನಲ್ಲಿ ಪ್ರಭುದೇವ ಇದ್ದಾರೆ. ಸದ್ಯ ಪ್ರಭುದೇವ ಅವರ ಪ್ರೋಮೋ ರಿಲೀಸ್ ಆಗಿದೆ. ಕರ್ನಾಟಕ ಮೂಲದ ಪ್ರಭುದೇವ ಪರಭಾಷೆಗಳಲ್ಲಿ ಖ್ಯಾತಿಗಳಿಸಿದ್ದಾರೆ. ಹಾಗಾಗಿ ಪ್ರಭುದೇವ ಅವರ ಬಗ್ಗೆ ತಿಳಿದುಕೊಳ್ಳಲು ಕನ್ನಡ ಅಭಿಮಾನಿಗಳು ಕಾತರರಾಗಿದ್ದಾರೆ. 

ಪ್ರಭುದೇವ ಯಾವೆಲ್ಲ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ, ಅವರ ಜೀವನ ಹೇಗಿದೆ ಎಂದು ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಸದ್ಯ ರಿಲೀಸ್ ಆಗಿರು ಪ್ರೋಮೋದಲ್ಲಿ ಪ್ರಭುದೇವ ಬಾಲ್ಯದ ಸ್ನೇಹಿತರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್ ಕೂಡ ವೀಕೆಂಡ್ ಟೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ಬಗ್ಗೆ ಮಾತನಾಡಿದ್ದಾರೆ. ಎಂಟ್ರಿ ಕೊಟ್ಟ ಪ್ರಭುದೇವ ಸ್ನೇಹಿತರು ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸ್ನೇಹಿತರು ಲುಂಗಿಯಲ್ಲಿ ಕಾಣಿಸಿಕೊಂಡಿದ್ದರು. ಪ್ರಭುದೇವ ಲುಂಗಿ ಘಟನೆ ಬಹಿರಂಗ ಪಡಿಸಿದರು. 

ಅಪ್ಪ ನಿಧನರಾದಾಗ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ರಮ್ಯಾ

ಲುಂಗಿ ಧರಿಸಲ್ಲ ಎಂದು ಪ್ರಭುದೇವ ಹೇಳಿದ್ದಾರೆ. ಲುಂಗಿ ಧರಿಸಿ ಮಲಗಿದ್ದೆ ಬೆಳಗ್ಗೆ ನೋಡಿದ್ರೆ ಲುಂಗಿ ಇರ್ರಿಲ್ಲ ಅಲ್ಲಿಂದ ಲುಂಗಿ ಧರಿಸಲ್ಲ ಎಂದು ಪ್ರಭುದೇವ ಹೇಳಿದ್ದಾರೆ. ವೀಕೆಂಡ್ ವೇದಿಕೆಯಲ್ಲಿ ಗೋಲಿ ಆಡಿದ್ದಾರೆ, ಡಾನ್ಸ್ ಮಾಡಿದ್ದಾರೆ ರಮೇಶ್ ಅರವಿಂದ್ ಜೊತೆ ಕುಣಿದಿದ್ದಾರೆ. ಪ್ರೋಮೋ ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಡಾನ್ಸರ್ ಅಂದ್ಮೇಲೆ ವೀಕೆಂಡ್ ಟೆಂಟ್‌ನಲ್ಲಿ ಡಾನ್ಸ್ ಮಾಡಿಸದೆ ಕಳುಹಿಸಲು ಸಾಧ್ಯನೆ ಇಲ್ಲ. ಪ್ರಭುದೇವ ಮಸ್ತ್ ಡಾನ್ಸ್ ಮಾಡಿದ್ದಾರೆ.

ಎಲ್ಲಾ ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ; ಟ್ರೋಲ್‌ಗೆ ರಮ್ಯಾ ಪ್ರತಿಕ್ರಿಯೆ

ಮೊದಲ ಸಂಚಿಕೆಯಲ್ಲಿ ರಮ್ಯಾ ಇಂಗ್ಲಿಷ್‌ನಲ್ಲೇ ಹೆಚ್ಚಾಗಿ ಮಾತನಾಡಿದ್ದರು ಎನ್ನುವ ಟೀಕೆ ವ್ಯಕ್ತವಾಗಿತ್ತು. ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಸದ್ಯ ರಿಲೀಸ್ ಆಗಿರುವ ಪ್ರಭುದೇವ ಸಂಚಿಕೆಯಲ್ಲಿ ಕನ್ನಡ ಮಾತನಾಡಿದ್ದಾರೆ. ಈ ಸಂಚಿಕೆಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ಕಾದುನೋಡಬೇಕಿದೆ. ಪ್ರಭುದೇವ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!