Bigg Boss Kannada Season 12: ಸ್ಪಂದನಾ ಕಿವಿ ಕಚ್ಚಿದ ಗಿಲ್ಲಿ, ನೋಡಿದೋರಿಗೆ ಅನುಮಾನ ಬರೋದು ಗ್ಯಾರಂಟಿ

Published : Nov 10, 2025, 03:32 PM IST
Ghilli

ಸಾರಾಂಶ

ಬಿಗ್ ಬಾಸ್ ಮನೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಿಲ್ಲಿ ಹಾಗೂ ಸ್ಪಂದನಾ ಇದ್ದು, ಅಲ್ಲಿ ಏನಾಗ್ತಿದೆ ಅಂತ ವೀಕ್ಷಕರು ಪ್ರಶ್ನೆ ಕೇಳಿದ್ದಾರೆ. ವಿಡಿಯೋವನ್ನು ನಾಲ್ಕೈದು ಬಾರಿ ನೋಡಿ ಕ್ಲಾರಿಟಿ ಪಡೆಯುತ್ತಿದ್ದಾರೆ.

ಬಿಗ್ ಬಾಸ್ 12 (Bigg Boss 12) ರ ಸ್ಪರ್ಧಿ ಸ್ಪಂದನಾ ಸೈಲೆಂಟ್ ಆಗಿಯೇ ಆಟ ಮುಂದುವರೆಸಿದ್ದಾರೆ. ಆಗಾಗ ರೆಬಲ್ ಆದ್ರೂ ಮತ್ತೆ ಶಾಂತವಾಗುವ ಸ್ಪಂದನಾ ಸ್ಟ್ರಾಟಜಿ ವರ್ಕ್ ಆಗ್ತಿದೆ. ಬಿಗ್ ಬಾಸ್ ಮನೆಯ ಗ್ಲಾಮರ್ ಗೊಂಬೆ ಸ್ಪಂದನಾ ಅಂದ್ರೆ ತಪ್ಪಾಗೋದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಲುಕ್ ನಲ್ಲಿ ಮಿಂಚುತ್ತಿರುವ ಸ್ಪಂದನಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸ್ಪಂದನಾ ಹಾಗೂ ಗಿಲ್ಲಿ ಏನು ಮಾಡ್ತಿದ್ದಾರೆ ಅನ್ನೋದೇ ವೀಕ್ಷಕರ ಪ್ರಶ್ನೆ.

ಸ್ಪಂದನಾ (Spandana) – ಗಿಲ್ಲಿ (Ghilli) ಏನು ಮಾಡ್ತಿದ್ದಾರೆ? : 

ನೀವು ಮ್ಯೂಟ್ ಮಾಡಿ ವಿಡಿಯೋ ನೋಡಿದ್ರೆ ಕನ್ಫ್ಯೂಸ್ ಆಗೋದು ಗ್ಯಾರಂಟಿ. ಅಲ್ಲೇನು ನಡೀತಾ ಇದೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತೆ. ಗಿಲ್ಲಿ, ರಾಘು ತೊಡೆ ಮೇಲೆ ಮಲಗಿದ್ದು, ಸ್ಪಂದನಾ ತಮ್ಮ ಮುಖವನ್ನು ಗಿಲ್ಲಿ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ. ವಾಸ್ತವದಲ್ಲಿ ಅಲ್ಲಿ ಏನೂ ವಿಶೇಷವಾದದ್ದು ನಡೆಯುತ್ತಿಲ್ಲ. ಸ್ಪಂದನಾ ಡ್ರೆಸ್ ಗೆ ಗಿಲ್ಲಿ ಕಮೆಂಟ್ ಮಾಡ್ತಿದ್ದಾರೆ.

BBK 12 : ಮಾಸ್ಟರ್ ಆನಂದ್ ಪ್ರಕಾರ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗ್ಬೇಕು?

ಸ್ಪಂದನಾ ವಿಶೇಷ ಡ್ರೆಸ್ ಧರಿಸಿ ಗಿಲ್ಲಿ ಇರೋ ಜಾಗಕ್ಕೆ ಬಂದಿದ್ದಾರೆ. ಗಿಲ್ಲಿ ಸ್ಪಂದನಾ ಡ್ರೆಸ್ ನೋಡಿ ಕಮೆಂಟ್ ಮಾಡಿದ್ದಾರೆ. ಡ್ರೆಸ್ ಗೆ ಬೋ ಹಾಕಿಕೊಂಡಿದ್ದೇನೆ ಅಂತ ಸ್ಪಂದನಾ ಹೇಳ್ತಾರೆ. ನಾನು ಗಿಫ್ಟ್, ಇದು ಬೋ ಅಂತ ಸ್ಪಂದನಾ ತಮ್ಮ ಡ್ರೆಸ್ ಬಗ್ಗೆ ಗಿಲ್ಲಿಗೆ ವಿವರಿಸ್ತಾರೆ. ನಿನ್ನ ಡ್ರೆಸ್ ನೋಡಿ ಏನೋ ಹೇಳೋಕೆ ಬಂದೆ, ಏನು ಕೇಳು ಅಂತ ಸ್ಪಂದನಾಗೆ ಗಿಲ್ಲಿ ಹೇಳಿದ್ದಾರೆ. ನನಗೆ ಅಷ್ಟೊಂದು ತಿಳಿಯೋದಿಲ್ಲ ಅಂತ ಸ್ಪಂದನಾ ಹೇಳ್ತಾರೆ. ಆಗ ಗಿಲ್ಲಿ ಬಾ ಕಿವಿಯಲ್ಲಿ ಹೇಳ್ತೇನೆ ಅಂತ ಹತ್ತಿರ ಕರೆದಿದ್ದಾರೆ. ಮಲಗಿದ್ದ ಗಿಲ್ಲಿ ಬಳಿ ಬಗ್ಗಿ ಕಿವಿ ಹತ್ತಿರ ತೆಗೆದುಕೊಂಡು ಹೋಗುವ ಸ್ಪಂದನಾ, ಗಿಲ್ಲಿ ಹೇಳಿದ್ದನ್ನು ಕೇಳಿಸಿಕೊಳ್ತಿದ್ದಾರೆ. ಗಿಲ್ಲಿ, ಸ್ಪಂದನಾ ಕಿವಿಯಲ್ಲಿ ಏನು ಹೇಳಿದ್ರೂ ಗೊತ್ತಿಲ್ಲ. ಅಲ್ಲೇ ಕುಳಿತಿದ್ದ ರಘು ಅವರನ್ನು ಕಣ್ಣು ಮುಚ್ಚದೆ ನೋಡ್ತಿದ್ದಾರೆ. ಈ ವಿಡಿಯೋ ನೋಡಿದ ವೀಕ್ಷಕರು ಶಾಕ್ ಆಗಿದ್ದಾರೆ. ವಿಡಿಯೋ ಕೆಲವೇ ಕ್ಷಣದಲ್ಲಿ ಟ್ರೋಲರ್ ಬಾಯಿಗೆ ಆಹಾರ ಆಗಿದೆ.

ಸಿಂಪಲ್ ಸುನಿ 'ಗತವೈಭವ'ಕ್ಕೆ ಕಿಚ್ಚ ಸುದೀಪ್ ಸಾಥ್; ಇದು ದುಷ್ಯಂತ್-ಆಶಿಕಾ ರೊಮ್ಯಾಂಟಿಕ್ ಫ್ಯಾಂಟಸಿನಾ?

ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಹುಡುಗ್ರ ವಿಷ್ಯಕ್ಕೆ ಅನೇಕ ಬಾರಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ಪಂದನಾ, ಅಭಿಷೇಕ್, ಧ್ರುವಂತ್, ಧನುಷ್ ಜೊತೆ ಇರ್ತಾರೆ, ಕ್ಯಾಮರಾ ಮುಂದೆ ಮಾತ್ರ ಎಲ್ಲರ ಕಣ್ಣಿಗೆ ಕಾಣಿಸಿಕೊಳ್ತಾರೆ ಎನ್ನುವ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಇದಕ್ಕೆ ಸ್ಪಂದನಾ ಸ್ಪಷ್ಟನೆ ಕೂಡ ನೀಡಿದ್ದರು. ಅಭಿಷೇಕ್, ಧನುಷ್ ನನ್ನ ಸ್ನೇಹಿತರು. ನನ್ನ ಬಗ್ಗೆ ತಪ್ಪು ಆರೋಪ ಮಾಡ್ಬೇಡಿ ಎಂದಿದ್ದರು. ಪ್ರತಿ ಬಾರಿ ನಾಮಿನೇಟ್ ಆಗುವ ಸ್ಪಂದನಾ, ಉತ್ತಮ ವೋಟ್ ಪಡೆದು ಮನೆಯಲ್ಲಿ ಉಳಿದುಕೊಳ್ತಿದ್ದಾರೆ. ಈ ವಾರದ ಆಟ ಹೇಗಿರುತ್ತೆ, ಸ್ಪಂದನಾ ಹೇಗೆ ಆಟ ಆಡ್ತಾರೆ ಅನ್ನೋದನ್ನು ಫ್ಯಾನ್ಸ್ ಕಾದು ನೋಡ್ಬೇಕಿದೆ.

ಕರಿಮಣಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ ಸ್ಪಂದನಾ ಈಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕಾಯಿ ಉರುಳಿಸ್ತಿದ್ದಾರೆ. ಇಂಜಿನಿಯರಿಂಗ್ ಮುಗಿದ ಮೇಲೆ ಬಣ್ಣದ ಬದುಕಿಗೆ ಕಾಲಿಟ್ಟ ಅವರು ಸಣ್ಣಪುಟ್ಟ ರೋಲ್ ಮಾಡ್ತಿದ್ದರು. ಕರಿಮಣಿ ಸೀರಿಯಲ್ ಅವರನ್ನು ಕರ್ನಾಟಕದ ಮನೆ ಮನೆ ಗುರುತಿಸುವಂತೆ ಮಾಡಿತ್ತು. ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಸ್ಪಂದನಾಗೆ ಮನೆಯಿಂದ ಹೊರಗೆ ಹೋದ್ಮೇಲೆ ದೊಡ್ಡ ಆಫರ್ ಸಿಗುವ ನಿರೀಕ್ಷೆ ಇದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!