ಕಪ್ಪು ಹಚ್ಚಿದಷ್ಟೂ ಎಲ್ಲಾ ಕಡೆ ಬೆಳ್ಳಗಾಗತ್ತೆ- ಶೂಟಿಂಗ್​ನಲ್ಲಿ ದೃಷ್ಟಿ ಪಡೋ ಕಷ್ಟ ನೋಡಿ!

Published : Apr 27, 2025, 07:43 PM ISTUpdated : Apr 28, 2025, 09:44 AM IST
 ಕಪ್ಪು ಹಚ್ಚಿದಷ್ಟೂ ಎಲ್ಲಾ ಕಡೆ ಬೆಳ್ಳಗಾಗತ್ತೆ- ಶೂಟಿಂಗ್​ನಲ್ಲಿ ದೃಷ್ಟಿ ಪಡೋ ಕಷ್ಟ ನೋಡಿ!

ಸಾರಾಂಶ

ಜೀ ಕನ್ನಡದ 'ದೃಷ್ಟಿ' ಧಾರಾವಾಹಿಯಲ್ಲಿ ನಟಿ ಅರ್ಪಿತಾ ಮೋಹಿತೆ ಕಪ್ಪು ಮೈಬಣ್ಣದ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಕಿರುಕುಳಕ್ಕೊಳಗಾದ ಪಾತ್ರದಲ್ಲಿ ಮಿಂಚುತ್ತಿರುವ ಅವರು, ಎರಡು ಗಂಟೆಗಳ ಕಾಲ ಮೇಕಪ್‌ ಮಾಡಿಸಿಕೊಳ್ಳುತ್ತಾರೆ. ಚಿತ್ರೀಕರಣದ ವೇಳೆ ಬೆವರಿನಿಂದ ಮೇಕಪ್‌ ಹಾಳಾಗುವುದರಿಂದ ಪದೇ ಪದೇ ಕಪ್ಪು ಬಣ್ಣ ಹಚ್ಚಬೇಕಾಗುತ್ತದೆ. ಅಸಲಿ ಬಣ್ಣ ಗೊತ್ತಾಗಬಾರದೆಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನೂ ಅಳಿಸಿದ್ದಾರೆ.

 ದೃಷ್ಟಿ ಎಂದರೆ ಸಾಕು... ಸೀರಿಯಲ್​ ಪ್ರಿಯರಿಗೆ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ದೃಷ್ಟಿಬೊಟ್ಟು ನಾಯಕಿ ಕಣ್ಮುಂದೆ ಬರುತ್ತಾಳೆ. ಒಮ್ಮೊಮ್ಮೆ ತೀರಾ ಕಪ್ಪು ಬಣ್ಣ ಬಳಿದುಕೊಂಡು ಕಾಣಿಸಿಕೊಳ್ಳುವ ನಾಯಕಿ ಈಕೆ. ಸದ್ಯ ತನ್ನ ಗಂಡನ ಅಕ್ಕನಿಂದ ಕಿರುಕುಳ ಅನುಭವಿಸುತ್ತಾ, ಅಕ್ಕನ ಮಾತನ್ನೇ ಕೇಳಿಕೊಂಡಿರೋ ತಮ್ಮ ಅರ್ಥಾತ್​ ಪತಿಯಿಂದಲೂ ನಿಂದನೆಗೆ ಒಳಗಾಗ್ತಿದ್ದಾಳೆ ದೃಷ್ಟಿ. ಅಂದಹಾಗೆ,  ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ  ಅರ್ಪಿತಾ ಮೋಹಿತೆ. ಈಕೆ ಕಿರುತೆರೆಗೆ ಹೊಸ ಎಂಟ್ರಿ. ಇನ್ನು ದತ್ತಾ ಭಾಯಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್​ ಸೂರ್ಯ. ಇಲ್ಲಿ ಇವರದ್ದು ರಗಡ್​ ಅವತಾರ.  ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

ನಿಜ ಜೀವನದಲ್ಲಿ ಹಾಲು ಬಿಳುಪಿನ ನಟಿ ಅರ್ಪಿತಾ ಈ ಸೀರಿಯಲ್​ನಲ್ಲಿ ಮುಖ ಮಾತ್ರವಲ್ಲದೇ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಎರಡು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿರುವುದಾಗಿ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದರು. ಮುಖಕ್ಕೆ ಮ್ಯಾಚ್​ ಆಗುವಂಥ ಕಪ್ಪು ಬಣ್ಣ ಕೈ-ಕಾಲುಗಳಿಗೂ ಹಚ್ಚಬೇಕು. ಇದರಿಂದ ಎರಡು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದರು.  ಇದೀಗ ಶೂಟಿಂಗ್​ ಸಮಯದಲ್ಲಿ ಅವರು ಪಡುವ ಕಷ್ಟದ ವಿಡಿಯೋ ಒಂದು ವೈರಲ್​ ಆಗಿದೆ. ಸಾಮಾನ್ಯವಾಗಿ ನಟ-ನಟಿಯರ ಮೇಕಪ್​ ಹಾಳಾಗುತ್ತದೆ ಎಂದು ಆಗಾಗ್ಗೆ ಬಂದು ಅವರು ಸುಂದರವಾಗಿ ಕಾಣಿಸಲಿ ಎಂದು ಟಚ್​ಅಪ್​  ಕೊಡುವುದು ಉಂಟು. ಆದರೆ ದೃಷ್ಟಿ ವಿಷ್ಯದಲ್ಲಿ ಹಾಗಲ್ಲ. ಎಷ್ಟೇ ಕಪ್ಪು ಹಚ್ಚಿದ್ರೂ ಬೆವರಿ ಅವರ ಅಸಲಿ ರೂಪ ಬಿಳಿ ಬಣ್ಣ ಕಾಣುವ ಕಾರಣ, ಪದೇ ಪದೇ ಕಪ್ಪನ್ನು ಹಚ್ಚಬೇಕಾಗುತ್ತದೆ. ಅದನ್ನು ಈ ವಿಡಿಯೋದಲ್ಲಿ ನೋಡಬಹುದು.

ನನ್ನ ಇತಿಹಾಸ ಗೊತ್ತಿದ್ರೂ ಮದ್ವೆಗೆ ಒಪ್ಪಿದ್ದಾಳೆ! ಮತ್ತೊಂದು ಮದ್ವೆಗೆ ರೆಡಿಯಾದ ದೃಷ್ಟಿಬೊಟ್ಟು ನಟ ವಿಜಯ್ ಸೂರ್ಯ​ ಹೇಳಿದ್ದೇನು?

ದೃಷ್ಟಿ ಅಮ್ಮನ ಮನೆಗೆ ಬಂದ ಖುಷಿಯಲ್ಲಿ ಅಪ್ಪ ಮತ್ತು ತಮ್ಮನನ್ನು ಹಿಡಿದು ತಿರುಗುತ್ತಾಳೆ. ಆಗ   ಹೊಟ್ಟೆ ಮತ್ತು ಬೆನ್ನ ಭಾಗ ನಟಿಯ ಅಸಲಿ ರೂಪ ಅಂದರೆ ಬಿಳಿ ಬಣ್ಣದಲ್ಲಿ ಕಾಣಿಸುತ್ತದೆ. ಬೆನ್ನು ಕಾಣಿಸಬಾರದು ಎಂದು ಕೂದಲು ಮುಚ್ಚಿದ್ದರೂ ಅಸಲಿ ರೂಪ ಕಾಣಿಸುತ್ತದೆ. ಅದಕ್ಕಾಗಿಯೇ ಕ್ಯಾಮೆರಾಮೆನ್​ ಪದೇ ಪದೇ ಕಪ್ಪು ಹಚ್ಚಲು ಹೇಳುವುದನ್ನು ನೋಡಬಹುದು. ಮೇಕಪ್​ ಆರ್ಟಿಸ್ಟ್​ ಒಂದು ಚಾಕ್​ಪೀಸ್​ ತೆಗೆದುಕೊಂಡು ಕಪ್ಪು ಬಣ್ಣ ಬಳಿಯುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಅನ್ನು ಡಿವಿಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ.

ಅಂದಹಾಗೆ, ಬೆಂಗಳೂರಿನ ಅರ್ಪಿತಾ ಮೋಹಿತೆ ಬಿಕಾಂ  ಮುಗಿಸಿದ್ದಾರೆ.  ನನಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದವು. ಈಗ ದೃಷ್ಟಿಬೊಟ್ಟುಗೆ ಆಯ್ಕೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ಇಷ್ಟೇ ಅಲ್ಲದೇ,  ಇನ್ನೊಂದು ಇಂಟರೆಸ್ಟಿಂಗ್​ ವಿಷಯವನ್ನೂ ಅವರು ಹೇಳಿದ್ದರು. ಅದೇನೆಂದರೆ, ತಾವು ಹೀಗೆಯೇ ಎಂದು ಅಭಿಮಾನಿಗಳ ಮನಸ್ಸಿನಲ್ಲಿ ತಳವೂರಬೇಕು. ನನ್ನ ಅಸಲಿ ಬಣ್ಣ ಏನು ಎನ್ನುವುದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಇನ್​ಸ್ಟಾಗ್ರಾಮ್​  ಖಾತೆಯನ್ನೂ ನಟಿ ಡಿಲೀಟ್​  ಮಾಡಿದ್ದಾರಂತೆ!  

ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ