
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಇಂದು ಮತ್ತು ನಾಳೆ ನಡೆಯಲಿದೆ. ಬಿಗ್‌ಬಾಸ್ ಪ್ರತಿದಿನ 9.30ಕ್ಕೆ ಪ್ರಸಾರ ಆಗುತ್ತಿತ್ತು. ಶನಿವಾರ ಮತ್ತು ಭಾನುವಾರ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ, ಅಂತಿಮ ಎಪಿಸೋಡ್ಗಳು ಇಂದು ಮತ್ತು ನಾಳೆ ಸಂಜೆ 6 ಗಂಟೆಯಿಂದ ಫಿನಾಲೆ ಆರಂಭ ಆಗಲಿದೆ ಎಂದು ವಾಹಿನಿ ಇದಾಗಲೇ ತಿಳಿಸಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ನೇರಪ್ರಸಾರದಲ್ಲಿ ಇದನ್ನು ವೀಕ್ಷಿಸಬಹುದಾಗಿದೆ. ಈ 11 ಶುರುವಾಗಿ ಇಂದಿಗೆ 117 ದಿನಗಳನ್ನು ಕಳೆದಿವೆ. ಒಟ್ಟು 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಇವರ ಪೈಕಿ ಮೂವರು ವೈಲ್ಡ್ ಕಾರ್ಡ್ ಎಂಟ್ರಿ. ಸದ್ಯ ಆರು ಮಂದಿ ಫೈನಲಿಸ್ಟ್ಗಳು ಇದ್ದಾರೆ.
ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು, ಭವ್ಯಾ ಗೌಡ, ಮೋಕ್ಷಿತಾ ಪೈ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಕಿಶನ್ ಇವರಲ್ಲಿ ಕಿರೀಟ ಯಾರ ತಲೆಯನ್ನು ಏರಲಿದೆ ಎನ್ನುವುದು ಶೀಘ್ರದಲ್ಲಿಯೇ ತಿಳಿಯಲಿದೆ. ಹೆಚ್ಚಿನವರು ಹನುಮಂತನ ಹೆಸರು ಹೇಳುತ್ತಿದ್ದರೆ, ಈ ಬಾರಿಯಾದರೂ ಮಹಿಳೆಯರಿಗೆ ಬಿಗ್‌ಬಾಸ್ ಒಲಿಯಬೇಕು ಎನ್ನುತ್ತಿದ್ದಾರೆ. ಕಳೆದ ಹತ್ತು ಸೀಸನ್ಗಳಲ್ಲಿ ಪುರುಷರು ಗೆದ್ದಿರುತ್ತಾರೆ. ಸುದೀಪ್ ಅವರ ಕೊನೆಯ ಬಿಗ್‌ಬಾಸ್ ಸೀಸನ್ ಇದಾಗಿರುವ ಕಾರಣ, ಮಹಿಳೆಯರಿಗೆ ಆದ್ಯತೆ ಕೊಡಲಿ, ಎಷ್ಟೆಂದರೂ ಇವೆಲ್ಲಾ ಮೊದಲೇ ನಿಗದಿಯಾಗಿರುವ ಕಾರಣ, ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದು ಮತ್ತೆ ಕೆಲ ವೀಕ್ಷಕರ ಅಭಿಮತ. ಇವೆಲ್ಲವುಗಳ ನಡುವೆಯೇ ಬಿಗ್‌ಬಾಸ್ 10ರ ರನ್ನರ್ ಅಪ್, ಡ್ರೋನ್ ಖ್ಯಾತಿಯ ಪ್ರತಾಪ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಪರ್ಧಿಗಳ ಜಗಳ ನಿಲ್ಸೋಕೆ ಹನುಮಂತನ 'ಪುರುಕ್ ಪುರುಕ್' ಅಸ್ತ್ರ! 72 ಹೂಸಿನ ಕಥೆ ಹೇಳಿದ ಧನರಾಜ್
ಇದರಲ್ಲಿ ಡ್ರೋನ್ ಪ್ರತಾಪ್, ಹಲೋ ಡ್ರೋನ್ ಆರ್ಮಿ, ಎಲ್ಲರಿಗೂ ನಮಸ್ಕಾರ. ಈ ಬಾರಿ ನನಗೆ ತುಂಬಾ ಇಷ್ಟವಾಗಿರುವ ಸ್ಪರ್ಧಿ ಹನುಮಂತು. ಈ ಬಾರಿ ಹನುಮಂತು ಬಿಗ್ಬಾಸ್ನಲ್ಲಿ ಗೆಲ್ಲಬೇಕು, ಗೆದ್ದೇ ಗೆಲ್ತಾರೆ. ವೋಟಿಂಗ್ ಪ್ರಕಾರ ಹೋಗಿದ್ದೇ ಆದರೆ ಹನುಮಂತುನೇ ಗೆಲ್ಲೋದು. ಬಡವರ ಮಕ್ಕಳು ಗೆಲ್ಲಬೇಕು, ಅದಕ್ಕಾಗಿ ಹನುಮಂತುಗೆ ವೋಟ್ ಮಾಡಿ, ನಮ್ಮ ಡ್ರೋನ್ ಆರ್ಮಿಯ ಎಲ್ಲರೂ ಅವರಿಗೇ ವೋಟ್ ಮಾಡುವುದು. ನೀವು ವೋಟ್ ಮಾಡಿ ಫೋನ್ ಕುಟ್ಟಿ ಪುಡಿಪುಡಿ ಮಾಡಿ ಎಂದಿದ್ದಾರೆ ಡ್ರೊನ್ ಪ್ರತಾಪ್. ಇವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ತಮ್ಮ ಸಪೋರ್ಟ್ ಹನುಮಂತುಗೆ ಎಂದು ಹೇಳುತ್ತಿದ್ದಾರೆ.
ಇನ್ನು ಕೆಲವರು ಬಡವರ ಮಕ್ಕಳು ಅಂತ ಹೇಳಬೇಡಿ, ಅವ್ರು ಹಾಗೆ ಎಲ್ಲೂ ಹೇಳಿಕೊಂಡಿಲ್ಲ ಎಂದಿದ್ದರೆ, ಮತ್ತೆ ಕೆಲವರು ಹೋದ ಸೀಸನ್ನಲ್ಲಿ ನಿಮಗೆ ಅನ್ಯಾಯ ಆಗಿದೆ, ಈ ಸಲ ಹನುಮಂತು ಗೆಲ್ಲಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ನೀವಿಬ್ಬರೂ ಬಿಡಿಯಪ್ಪಾ, ಸತ್ಯ ದೇವರಿಗೇ ಗೊತ್ತು ಎನ್ನುವ ಮೂಲಕ ಕೊಂಕು ಮಾತುಗಳನ್ನೂ ಆಡಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ 11ರ ವಿನ್ನರ್ ಯಾರು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಹಾಗೆ ನೋಡಿದರೆ ಕೆಲ ದಿನಗಳ ಹಿಂದೆ ವಿಕಿಪಿಡಿಯಾ ಕೂಡ ಎಡವಟ್ಟು ಮಾಡಿ, ಹನುಮಂತುನೇ ಬಿಗ್‌ಬಾಸ್ ವಿನ್ನರ್ ಎಂದು ಘೋಷಿಸಿತ್ತು.
ಬಿಗ್ಬಾಸ್ನಲ್ಲಿ ಇನ್ಮುಂದೆ ಕೇಳಲ್ಲ ಆ ಸುಮಧುರ ದನಿ? ಬೆಂಗಳೂರು ಬಿಡಲು ನಿರ್ಧರಿಸಿದ ಪ್ರದೀಪ್: ಅಷ್ಟಕ್ಕೂ ಆಗಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.