ಬಿಗ್​ಬಾಸ್​ ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

By Suchethana D  |  First Published May 14, 2024, 7:19 PM IST

ಬಿಗ್​ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ ಅವರ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ವಿಶೇಷ ಉಡುಗೊರೆ ನೀಡಿದ್ದಾರೆ. ವಿಡಿಯೋ ವೈರಲ್​ ಆಗಿದೆ. 
 


ಬಿಗ್​ಬಾಸ್​ ಸೀಸನ್​ 10ನಲ್ಲಿ ಅಕ್ಕ-ಅಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​. ನಿನ್ನೆ ಅಂದರೆ ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಧ್ಯರಾತ್ರಿ ಸಂಗೀತಾ ಅವರ ಕುಟುಂಬಸ್ಥರು ವಿಶೇಷವಾಗಿ ಅಲಂಕರಿಸುವ ಮೂಲಕ ಸರ್​ಪ್ರೈಸ್​ ನೀಡಿದ್ದರು.  ಹುಟ್ಟುಹಬ್ಬದ ಸಂಭ್ರಮದಲ್ಲಿ  ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.  ನಿನ್ನೆಗೆ ಸಂಗೀತಾ ಅವರಿಗೆ  28 ವರ್ಷಗಳು ತುಂಬಿದವು. ಹುಟ್ಟುಹಬ್ಬಕ್ಕೆ ಸಂಗೀತ ನೀಲಿ ಬಣ್ಣದ ಗೌನ್ ಡ್ರೆಸ್ ಧರಿಸಿದ್ದು ಮುದ್ದಾಗಿ ಕಾಣಿಸುತ್ತಿದ್ದರು. 

ಬಿಗ್​ಬಾಸ್​ ದೀದಿ ಸಂಗೀತಾ ಅವರಿಗೆ ಡ್ರೋನ್​ ಪ್ರತಾಪ್​ ವಿಶೇಷ ಗಿಫ್ಟ್​ ನೀಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಸಂದರ್ಭದಲ್ಲಿ ಸಂಗೀತಾ ಪ್ರತಾಪ್ ಗೆ ಅರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು.   ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ʼ‘ನನಗೆ ಪ್ರತಾಪ್​ ತುಂಬ ಇಷ್ಟ’ʼ ಎಂದು ಅವರು ಕನ್ಫೆಷನ್​ ರೂಮ್​ನಲ್ಲಿ ಹೇಳಿದ್ದರು. ದಿನದಿಂದ ದಿನಕ್ಕೆ ಈ ಅಕ್ಕ-ತಮ್ಮ ನಡುವಿನ ನಡುವೆ ಬಾಂಧವ್ಯ ಹೆಚ್ಚಾಗಿತ್ತು. ನೇರ ನಡೆ-ನುಡಿಯಿಂದಲೇ ಬಿಗ್‌ ಬಾಸ್‌ ಮನೆಯಲ್ಲಿ‌ ಗಮನ ಸೆಳೆದಿರುವ ಸಂಗೀತಾ ಪ್ರತಾಪ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದು ಹಲವರಿಗೆ ಅಚ್ಚರಿಯನ್ನೂ ತಂದಿತ್ತು. 

Tap to resize

Latest Videos

ಖುಷಿಯಾಗಿದ್ರೆ ಓವರ್​ಆ್ಯಕ್ಟಿಂಗ್​ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್​ ಅಂತೀರಾ: ಆ್ಯಂಕರ್​ ಅನುಶ್ರೀ ಬೇಸರ

 ಇನ್ನು ಸಂಗೀತಾ ಅವರ ಹುಟ್ಟುಹಬ್ಬದ ಕುರಿತು ಹೇಳುವುದಾದರೆ,  ಹುಟ್ಟು ಹಬ್ಬದ ಶುಭ ದಿನದಂದು ಸಂಗೀತ ಶೃಂಗೇರಿ ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ. ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಅಪ್ಪು ಸಮಾಧಿ ದರ್ಶನ ಪಡೆಯಲು ಬಂದ ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ನಿಮ್ಮಈ ಪ್ರೀತಿಯ 'ಅಪ್ಪು'ಗೆ ನನ್ನ ಸದಾ ಕಾಯುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕ್ಯಾಪ್ಶನ್ ಬರೆದು ಸೋಶಿಯಲ್ ಮೀಡಿಯಾದಲ್ಲಿ ಸಂಗೀತ ಫೋಟೋ ಹಂಚಿಕೊಂಡಿದ್ದಾರೆ. 

ಸಂಗೀತ ಕ್ಲೋಸ್ ಫ್ರೆಂಡ್ಸ್ ಮತ್ತು ಅಣ್ಣ ಸಂತೋಷ್ ಮತ್ತು ಅತ್ತಿಗೆ ಸುಚಿ ಮಧ್ಯರಾತ್ರಿ ಸುಂದರವಾಗಿ ಡೆಕೊರೇಟ್ ಮಾಡಿದ್ದ ಸ್ಥಳಕ್ಕೆ ಸಂಗೀತಾ ಅವರನ್ನು ಕರೆದೊಯ್ಡು ಸರ್ಪ್ರೈಸ್ ನೀಡಿದ್ದರು. ಸಂಗೀತಾ ಇಂಥಹ ಸುಂದರ ಮೆಮೊರಿ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಸಿಂಹಿಣಿಯಂತೆ ಮಿಂಚಿ ಟಾಪ್ 3 ಆಗಿ ಹೊರಹೊಮ್ಮಿದ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಸಹಸ್ಪರ್ಧಿಗಳು ಹಾಗೂ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಸಹ ಶುಭ ಕೋರಿದ್ದಾರೆ. 

ನಟರಾದ ಧನುಷ್​- ಕಾರ್ತಿಕ್​ ಕುಮಾರ್​ ಒಂದೇ ರೂಮ್​ನಲ್ಲಿ ಮಾಡ್ತಿದ್ದೇನು? ಮಾಜಿ ಪತ್ನಿಯಿಂದ ಶಾಕಿಂಗ್​ ಹೇಳಿಕೆ!

 
 
 
 
 
 
 
 
 
 
 
 
 
 
 

A post shared by Prathap N M (@droneprathap)

click me!