ಡೇಟಿಂಗ್ ಅಂದ್ರೇನು? ಪತ್ನಿ ಮುಂದೆ ಅನುಶ್ರೀಗೆ ಅಜಯ್ ರಾವ್ ಹೇಳಿದ್ರು ಈ ಮಾತು

Published : Nov 05, 2024, 11:05 AM IST
 ಡೇಟಿಂಗ್ ಅಂದ್ರೇನು? ಪತ್ನಿ ಮುಂದೆ ಅನುಶ್ರೀಗೆ ಅಜಯ್ ರಾವ್ ಹೇಳಿದ್ರು ಈ ಮಾತು

ಸಾರಾಂಶ

ಸ್ಯಾಂಡಲ್ವುಡ್ ನಲ್ಲಿ ಕೃಷ್ಣ ಎಂದೇ ಪ್ರಸಿದ್ಧಿ ಪಡೆದಿರುವ ನಟ ಅಜಯ್ ರಾವ್ ವೈಯಕ್ತಿಕ ಜೀವನದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆಂಕರ್ ಅನುಶ್ರೀ ಶೋನಲ್ಲಿ ಪತ್ನಿ ಜೊತೆ ಕಾಣಿಸಿಕೊಂಡ ಅಜಯ್ ರಾವ್, ಅನೇಕ ವಿಷ್ಯಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ.   

ಎಕ್ಸ್ ಕ್ಯೂಸ್ ಮೀ ನಟ ಅಜಯ್ ರಾವ್ (Excuse Me Actor Ajay Rao) ತಮ್ಮ ಪತ್ನಿ ಸಪ್ನ ಅಜಯ್ ರಾವ್ (Sapna Ajay Rao) ಜೊತೆ ನಿರೂಪಕಿ ಅನುಶ್ರೀ (Anchor Anushree) ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಶ್ರೀ ಆಂಕರ್ ಯುಟ್ಯೂಬ್ ಚಾನೆಲ್ ನಲ್ಲಿ ಶೀಘ್ರವೇ ಅವರ ಇಂಟರ್ವ್ಯೂ ಪ್ರಸಾರವಾಗಲಿದೆ. ಅನುಶ್ರೀ ತಮ್ಮ ಇನ್ಸ್ಟಾ ಖಾತೆಯಲ್ಲಿ ಸಂದರ್ಶನದ ಕೆಲ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಅಜಯ್ ಹಾಗೂ ಸಪ್ನ, ಅನುಶ್ರೀ ಜೊತೆ ಜಾಲಿಯಾಗಿ ಮಾತನಾಡ್ತಿರೋದನ್ನು ನಾವು ಕಾಣ್ಬಹುದು.

ಶೋನಲ್ಲಿ ರೋಮ್ಯಾಂಟಿಕ್ ಹಾಡಿಗೆ ಸ್ಟೆಪ್ ಹಾಕ್ತಾರೆ ಜೋಡಿ. ಪತ್ನಿ ಸಪ್ನಗೆ ಹೂಗುಚ್ಚ ನೀಡಿ ಪ್ರಪೋಸ್ ಮಾಡುವ ಕೃಷ್ಣ ಅಲಿಯಾಸ್ ಅಜಯ್ ರಾವ್, ಮುತ್ತಿಡ್ತಾರೆ. ಜೊತೆಗೆ ಸುಂದರ ಹಾಡೊಂದನ್ನು ಹಾಡಿ ಮನರಂಜಿಸ್ತಾರೆ. ಅಜರ್ ರಾವ್ ಗೆ ಬೇರೆ ಯಾವುದೇ ಹುಡುಗಿ ಇಷ್ಟವೇ ಆಗಲ್ವಂತೆ. ಯಾವ್ದೋ ಹುಡುಗಿಗೆ ಲೈನ್ ಹೊಡೆಯೋಣ ಅಂತ ಹುಡುಗಿಯರ ಕಡೆ ನೋಡಿದ್ರೆ, ಅವರೆಲ್ಲರಿಗಿಂತ ಸಪ್ನ ಸುಂದರವಾಗಿದ್ದಾಳೆ ಎನ್ನಿಸುತ್ತೆ ಎನ್ನುತ್ತಲೇ ಪತ್ನಿಯನ್ನು ಎಷ್ಟು ಪ್ರೀತಿ ಮಾಡ್ತೇನೆ ಎಂಬುದನ್ನು ಅಜಯ್ ರಾವ್ ಹೇಳಿದ್ದಾರೆ. ಸಂದರ್ಶನದಲ್ಲಿ ಕೃಷ್ಣನಿಗೆ ಡೇಟಿಂಗ್ ಅಂದ್ರೆ ಏನು ಅಂತ ಅನುಶ್ರೀ ಪ್ರಶ್ನೆ ಕೇಳ್ತಾರೆ. ಇದಕ್ಕೆ ಉತ್ತರಿಸುವ ಅಜಯ್ ರಾವ್, ಕರೆದ್ಕೊಂಡ್ ಹೋಗಿ ಊಟ ಮಾಡೋದು ಎನ್ನುತ್ತಾರೆ. ಈ ಆನ್ಸರ್ ಕೇಳಿ ಅಯ್ಯೋ ಎನ್ನುವ ರಿಯಾಕ್ಷನ್ ನೀಡುವ ಅನುಶ್ರೀ ಮುಂದೆ ಸಪ್ನ ಮದುವೆ ಇಷ್ಯವನ್ನೂ ಬಿಚ್ಚಿಟ್ಟಿದ್ದಾರೆ. ತನಗೆ ಮದುವೆ ಆಗ್ತಿದೆ ಅನ್ನುವ ವಿಷ್ಯ ಮದುವೆಗೆ ಮೂರು ದಿನ ಇರುವಾಗ ಗೊತ್ತಾಗಿತ್ತಂತೆ ಸಪ್ನ ಅವರಿಗೆ. ಇಬ್ಬರು ಮಕ್ಕಳಂತೆ ಇರ್ತೇವೆ ಎನ್ನುವ ಅಜಯ್ ರಾವ್ ಹಾಗೂ ಸಪ್ನ ಜೋಡಿ ಸ್ಯಾಂಡಲ್ವುಡ್ ಪ್ರಸಿದ್ಧ ಜೋಡಿಗಳಲ್ಲಿ ಒಂದು.  

ಬಿಗ್‌ಬಾಸ್‌ ಉರುಳಿಸಿದ ದಾಳಕ್ಕೆ ಈ ವಾರ ಮನೆಯಿಂದ ಹೊರಹೋಗಲು ಬಲಿಷ್ಠ ಸ್ಪರ್ಧಿಗಳೇ

ನಟ ಅಜಯ್ ರಾವ್ ಸ್ಯಾಂಡಲ್ವುಡ್ ಗೆ ಬಂದು ಸುಮಾರು 20 ವರ್ಷ ಕಳೆದಿದೆ. 2003ರಲ್ಲಿ ಕಿಚ್ಚ ಚಿತ್ರದಲ್ಲಿ ಸುದೀಪ್ ಸ್ನೇಹಿತನಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್, ನಾಯಕನಟನಾಗಿ ಎಕ್ಸ್ ಕ್ಯೂಸ್ ಮೀ ಚಿತ್ರದಲ್ಲಿ ನಟಿಸಿದ್ರು. ಈ ಚಿತ್ರ ಕೂಡ 2003ರಲ್ಲಿ ತೆರೆಗೆ ಬಂದಿತ್ತು. ಎಕ್ಸ್ ಕ್ಯೂಸ್ ಮೀ ಚಿತ್ರದಲ್ಲಿ ತಮ್ಮ ನಟನೆ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಅಜಯ್ ರಾವ್, ಸೂರ್ಯ, ತಾಜ್ ಮಹಲ್, ಅಮೃತವಾಣಿ,ಮನದ ಮರೆಯಲ್ಲಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ, ಶೋಕಿವಾಲಾ, ಯುದ್ಧಕಾಂಡ, ದಂಡಯಾತ್ರೆ ಸೇರಿದಂತೆ ಅಜಯ್ ರಾವ್ ಈವರೆಗೆ 34ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಅವರು ಚಿತ್ರ ನಿರ್ಮಾಣದ ಕೆಲಸ ಕೂಡ ಮಾಡ್ತಿದ್ದಾರೆ.

ಹೆಂಡ್ತಿಗೆ ಅವಮಾನ ಮಾಡಲು ರೆಡಿಯಾಗಿದ್ದ ತಾಂಡವ್’ಗೆ ಮುಖಭಂಗ…ನಟಿ ಶ್ರೀದೇವಿಯ

ಅಜಯ್ ರಾವ್ 2014 ಡಿಸೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಜಯ್ ರಾವ್ ಹಾಗೂ ಸಪ್ನ ಒಂದೇ ಊರಿನವರು. ಇಬ್ಬರದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಸಪ್ನ ಅವರನ್ನು ಮದುವೆಯಾಗಿರುವ ಅಜಯ್ ರಾವ್ ಹೊಸಪೇಟೆಗೆ ಭೇಟಿ ನೀಡಿದ್ದಾಗ ಇಬ್ಬರ ಪರಿಚಯವಾಗಿತ್ತು. ಇದು ಸ್ನೇಹಕ್ಕೆ ತಿರುಗಿ, ಪ್ರೇಮವಾಗಿ ಇಬ್ಬರು ಮದುವೆಯಾಗಿದ್ದರು. ಈ ಜೋಡಿಗೆ ಈಗ ಒಂದು ಮುದ್ದಾದ ಮಗುವಿದೆ. ಚೆರಿಷ್ಮಾ ಮಗುವಿನ ಹೆಸರು. ಸ್ಯಾಂಡಲ್ವುಡ್ ನಲ್ಲಿ ಅಜಯ್ ರಾವ್, ಕೃಷ್ಣ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಅಜಯ್ ರಾವ್, ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಸುಂದರ ಮನೆ ಪ್ರವೇಶ ಮಾಡಿದ್ದಾರೆ. ಈ ಗೃಹ ಪ್ರವೇಶ ಸಮಾರಂಭಕ್ಕೆ ತಾರಾಬಳಗವೇ ಬಂದಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?