ಸುದೀಪ್​ - ನನ್ನದು ಫಸ್ಟ್​ ಲವ್​... ಆ ಆ್ಯಕ್ಸಿಡೆಂಟ್​ ಲೈಫನ್ನೇ ಬದಲಿಸಿಬಿಟ್ಟಿತು: ಸೀತಾರಾಮ ಶ್ಯಾಮ್ ಓಪನ್ ಮಾತು

By Suchethana D  |  First Published Dec 25, 2024, 2:37 PM IST

ಸುದೀಪ್​ ಅವರ ಮ್ಯಾಕ್ಸ್ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ತಿರೋ ಸೀತಾರಾಮ ಸಿರಿಯಲ್​ ಡಾ.ಮೇಘಶ್ಯಾಮ್​ ಉರ್ಫ್​ ನಾಗಾರ್ಜುನ ಮನದ ಮಾತು ಕೇಳಿ...
 


ಸೀತಾರಾಮ ಸಿರಿಯಲ್​ನಲ್ಲಿ ಡಾ.ಮೇಘಶ್ಯಾಮ್​ ಪಾತ್ರ ಸದ್ಯ ಮರೆಯಾಗಿದೆ. ಸಿಹಿಯ ಸಾವಿನ ಜೊತೆಯಲ್ಲಿಯೇ ಈ ಪಾತ್ರವೂ ತಾತ್ಕಾಲಿಕ ಅಂತ್ಯಕಂಡಿದೆ. ಆದರೆ ಮೇಘಶ್ಯಾಮ್​ ಮತ್ತು ಸಿಹಿಯ ಬಾಂಡಿಂಗ್​ ಬಗ್ಗೆ ಮೆಚ್ಚಿಕೊಳ್ಳದ ವೀಕ್ಷಕರೇ ಇಲ್ಲ. ಸಿಹಿಯ ಅಪ್ಪ ತಾನು ಎಂದು ಆರಂಭದಲ್ಲಿ ತಿಳಿಯದಿದ್ದರೂ ಸಿಹಿಯನ್ನು ನೋಡಿದಾಗ ಆತನ ಮನಸ್ಸಿನಲ್ಲಿ ಆಗುತ್ತಿದ್ದ ತಳವಳವನ್ನು ತೋರಿಸುವ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದರು. ಕೊನೆಗೆ ಸಿಹಿ ತನ್ನ ಮಗಳು ಎಂದು ತಿಳಿದಾಗ, ರಾಮ್​ ವಿರುದ್ಧ ಕಾನೂನು ಸಮರ ಸಾರಿದ ಸಂದರ್ಭದಲ್ಲಿ ಮೇಘಶ್ಯಾಮ್​ನನ್ನು ಹೊಗಳುತ್ತಿದ್ದ ವೀಕ್ಷಕರೇ ತಿರುಗಿ ಬಿದ್ದರು. ಆಗ ಹೀರೋ ಆಗಿದ್ದ ಡಾ.ಶ್ಯಾಮ್​  ಕೊನೆಗೆ ವಿಲನ್​ ಆಗಿಬಿಟ್ಟ. ಒಟ್ಟಿನಲ್ಲಿ ಈ ಪಾತ್ರಕ್ಕೆ ಜೀವ ತುಂಬಿದ ನಟನ ನಿಜವಾದ ಹೆಸರು ನಾಗಾರ್ಜುನ ಉರ್ಫ್​ ಅರ್ಜುನ. ಇದೀಗ ಸುದೀಪ್​ ಅವರ ಮ್ಯಾಕ್ಸ್ ಚಿತ್ರದಲ್ಲಿ ನಟಿಸುತ್ತಿರುವ ನಾಗಾರ್ಜುನ ಅವರು ಪಂಚಮಿ ಟಾಕ್ಸ್​ ಯೂಟ್ಯೂಬ್​ ಚಾನೆಲ್​ ಜೊತೆ ಒಂದಿಷ್ಟು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

'ನನ್ನದು ಮತ್ತು ಸುದೀಪ್​ ಅವರದ್ದು ಒಂದು ರೀತಿಯ ಫಸ್ಟ್​ ಲವ್​ ಇದ್ದಂತೆ. ಮೊದಲ ಬಾರಿಗೆ ಅವರನ್ನು ನೋಡಿದಾಗ ಪ್ರೀತಿ ಹುಟ್ಟಿತ್ತು. ಅಂಥ ವ್ಯಕ್ತಿತ್ವ ಅವರದ್ದು. ಹಾಗೆ ನೋಡಿದರೆ ನನ್ನದು ಇದು ನಾಲ್ಕನೆಯ ಸಿನಿಮಾ. ಕನಕ, ಸುಬ್ಬಲಕ್ಷ್ಮಿ ಸಂಸಾರ, ಅಕ್ಕ, ಮಗಳು ಜಾನಕಿ, ಜೀವ ಹೂವಾಗಿದೆ, ಮತ್ತೆ ಮಾಯಾಮೃಗ, ಸೀತಾರಾಮ ಮುಂತಾದ ಸೀರಿಯಲ್​ಗಳಲ್ಲಿ ನಟಿಸಿದ್ದರೂ ಈ ಮೊದಲು ಸಿನಿಮಾಗಳಲ್ಲಿಯೂ ನಟಿಸಿದ್ದೆ. ಆದರೆ ಅವು ತೆರೆ ಕಾಣಲಿಲ್ಲ. ಅದೊಂದು ದಿನ ನಾನು ಶೂಟಿಂಗ್​ ಮುಗಿಸಿ ಬರುತ್ತಿದ್ದ ಸಂದರ್ಭದಲ್ಲಿ ಮ್ಯಾಕ್ಸ್​ ಚಿತ್ರಕ್ಕೆ ಆಯ್ಕೆಯಾಗಿರುವ ವಿಷಯ ತಿಳಿಯಿತು. ಇದು ಅದೃಷ್ಟ ಅಂತಾರಲ್ಲ, ಹಾಗೆ ಅದೃಷ್ಟ ನನ್ನನ್ನು ಅರಸಿ ಬಂದಿತ್ತು. ಯಾರೋ ಮಾಡಬೇಕಿದ್ದ ಪಾತ್ರ ನನಗೆ ಸಿಕ್ಕಿತ್ತು. ಶೂಟಿಂಗ್​ಗೆ ಎರಡು ದಿನ ಇರುವಾಗಲೇ ನನಗೆ ಆಯ್ಕೆಯಾದ ವಿಷಯ ತಿಳಿದಿತ್ತು. ಸ್ಟೋರಿ ಎಲ್ಲಾ ಕೇಳಿದ ಮೇಲೆ ತುಂಬಾ ಹಿಡಿಸಿ ಅದನ್ನು ಒಪ್ಪಿಕೊಂಡೆ' ಎಂದು ಮ್ಯಾಕ್ಸ್​ ಚಿತ್ರದಲ್ಲಿ ಸಿಕ್ಕ ಅವಕಾಶದ ಕುರಿತು ನಟ ಮಾತನಾಡಿದ್ದಾರೆ. 

Tap to resize

Latest Videos

undefined

ಉಪೇಂದ್ರ ಇರೋ ಕಡೆ ಬಿಗ್​ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್​ ಮಾತು ಕೇಳಿ...

 ಸುದೀಪ್​ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತುಂಬಾ ಒಳ್ಳೆಯ ವ್ಯಕ್ತಿತ್ವ ಅವರದ್ದು, ಅವರ ಆರಾ ಹಾಗಿದೆ. ಅಷ್ಟು ದೊಡ್ಡ ಸ್ಟಾರ್​ ಆದರೂ ಜ್ಯೂನಿಯರ್​ ನಟರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಹೇಗೆ ಆ್ಯಕ್ಟ್​ ಮಾಡಬೇಕು ಎಂದು ಹೇಳಿಕೊಡುತ್ತಾರೆ. ದೊಡ್ಡ ಸ್ಟಾರ್​ ಆದರೂ ಒಬ್ಬ ವ್ಯಕ್ತಿ ಹೇಗೆ ಇರಬೇಕು ಎನ್ನುವುದಕ್ಕೆ ಇವರು ಉದಾಹರಣೆ. ನಾವೂ ಮುಂದೆ ಕಿರಿಯರ ಜೊತೆ ಹೇಗೆಲ್ಲಾ ನಡೆದುಕೊಳ್ಳಬೇಕು ಎನ್ನುವ ಪಾಠ ಇವರಿಂದ  ಕಲಿಯಬೇಕು' ಎಂದಿದ್ದಾರೆ ನಾಗಾರ್ಜುನ. ಮೊದಲಿಗೆ ಹುಡುಗಾಟದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ ತಮಗೆ ಅಪಘಾತವೊಂದು ಹೇಗೆ ಪಾಠ ಕಲಿಸಿತು ಎಂದು ತಿಳಿಸಿದ್ದಾರೆ. 'ಸ್ನೇಹಿತನ ಜೊತೆ ಟೂರ್​ನಿಂದ ವಾಪಸ್​ ಬರುತ್ತಿದ್ದ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಆತನನ್ನು ನಾನು ಕಳೆದುಕೊಂಡೆ. ಆಗಲೇ ಈ ಕೋತಿ ಬುದ್ಧಿ ಬಿಟ್ಟು ಸೀರಿಯಸ್​ ಆಗಬೇಕು ಎನ್ನುವ ಪಾಠವನ್ನು ಕಲಿತೆ. ಅಲ್ಲಿಯವರೆಗೆ ಯಾವುದರ ಬಗ್ಗೂ ಹೆಚ್ಚು ಸೀರಿಯಸ್​ ಆಗಿರದ ನನಗೆ ಪಾಠ ಕಲಿಸಿದ್ದೇ ಈ ಅಪಘಾತ' ಎಂದು ಹೇಳಿದ್ದಾರೆ. 

ಇನ್ನು ನಟನ ಕುರಿತು ಹೇಲುವುದಾದರೆ,  24ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟನಿಗೆ ಈಗ 34 ವರ್ಷ ವಯಸ್ಸು.  ಆರು ವರ್ಷಗಳ ಹಿಂದೆ ಸಿಂಚನಾ ಎನ್ನುವವರ ಜೊತೆ ಮದುವೆಯಾಗಿದ್ದು, ಅವರಿಗೆ ಮಗು ಕೂಡ ಇದೆ.  ಕನಕ ಎಂಬ ಸೀರಿಯಲ್​ ಮೂಲಕ ಕಿರುತೆರೆಗೆ ಪದಾರ್ಪಣೆ. ಬಳಿಕ ಸ್ವಲ್ಪ ಗ್ಯಾಪ್​ ತೆಗೆದುಕೊಂಡು,  ಮಗಳು ಜಾನಕಿಯಲ್ಲಿ  ಆನಂದ್ ಬೆಳಗೂರು ಪಾತ್ರದಲ್ಲಿ ಕಾಣಿಸಿಕೊಂಡರು.  ಸುಬ್ಬಲಕ್ಷ್ಮೀ ಸಂಸಾರ ಸೀರಿಯಲ್​ನಲ್ಲಿ  ಅರುಣ್ ಪ್ರಸಾದ್ ಆಗಿ,  ಮತ್ತೆ ಮಾಯಾಮೃಗದಲ್ಲಿ ಡಾ. ಶಂಕರ್ ದತ್ತ ಆಗಿ ನಟಿಸಿ ಬಳಿಕ ಸೀತಾರಾಮದಲ್ಲಿ ಡಾ.ಮೇಘಶ್ಯಾಮ್​ ಆಗಿ ಮಿಂಚಿದರು.  ಕೆಲ ಸಿನಿಮಾಗಳಲ್ಲಿಯೂ ನಟಿಸಿರುವ ಇವರು, ಕೆಜಿಎಫ್-2ನಲ್ಲಿ ಸಿಬಿಐ ಆಫೀಸರ್ ಆಗಿ ನಟಿಸಿದ್ದರು. ಈಗ ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್   ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಉಳಿದ ಸಿನಿಮಾಗಳಲ್ಲೂ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಿಗ್​ಬಾಸ್​ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್​: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...

click me!