ಬಿಗ್‌ಬಾಸ್ ಕನ್ನಡ 11ರಲ್ಲಿ ರೆಸಾರ್ಟ್ ಟಾಸ್ಕ್ ವೇಳೆ ಧನ್‌ರಾಜ್ ಆಕಸ್ಮಿಕವಾಗಿ ಮಾಂಸಾಹಾರ ಸೇವಿಸಿದ ಘಟನೆ ನಡೆದಿದೆ. ಎದುರಾಳಿ ತಂಡಕ್ಕೆ ಅಡುಗೆ ಮಾಡುವಾಗ ಆತುರದಲ್ಲಿ ವೆಜ್ ಮತ್ತು ನಾನ್‌ವೆಜ್ ಸ್ಯಾಂಡ್‌ವಿಚ್‌ಗಳನ್ನು ಗುರುತಿಸದೆ ತಿಂದು, ಬಳಿಕ ತಪ್ಪಿನ ಅರಿವಾಗಿ ದೇವರ ಮುಂದೆ ಕ್ಷಮೆ ಯಾಚಿಸಿದ್ದಾರೆ. ಟಾಸ್ಕ್‌ನಲ್ಲಿ ಚೈತ್ರಾ ತಂಡದವರ ವರ್ತನೆ ವಿವಾದಕ್ಕೆ ಕಾರಣವಾಯಿತು.
ಬಿಗ್‌ಬಾಸ್ ಕನ್ನಡ 11ರ 13ನೇ ವಾರದ ಆರಂಭದಲ್ಲಿ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ನೀಡಲಾಗಿದೆ. ರೆಸಾರ್ಟ್ ಟಾಸ್ಕ್ ನಿಭಾಯಿಸುವಾಗ ಆತುರದಲ್ಲಿ ವೆಜಿಟೇರಿಯನ್ ಧನ್‌ರಾಜ್ ಆಚಾರ್ ಎಡವಟ್ಟು ಮಾಡಿಕೊಂಡಿದ್ದಾರೆ. ಎದುರಾಳಿ ತಂಡಕ್ಕೆ ಅಡುಗೆ ಮಾಡಿ ಕೊಡುತ್ತಿದ್ದಾಗ ತಾವು ಕೂಡ ಕದ್ದು ತಿಂದುಕೊಂಡಿದ್ದಾರೆ.
ಎದುರಾಳಿ ತಂಡದವರು ನೋಡಬಾರದೆಂಬ ಆತುರದಲ್ಲಿ ವೆಜ್ ಸ್ಯಾಂಡ್‌ವಿಚ್ ಮತ್ತು ಚಿಕನ್ ಸ್ಯಾಂಡ್‌ವಿಚ್ ಯಾವುದೆಂದು ಗೊತ್ತಾಗದೆ ತಿಂದಿದ್ದಾರೆ. ಬಳಿಕ ಡೌಟ್ ಬಂದು ಕೇಳಿದಾಗ ಅಡುಗೆ ಮಾಡುತ್ತಿದ್ದ ಭವ್ಯಾ ಚಿಕನ್ ಯಾವುದು? ವೆಜ್ ಯಾವುದು ಎಂದು ಹೇಳಿದರು. ತಕ್ಷಣ ಧನ್‌ರಾಜ್ ಬಾಯಿ ತೊಳೆದುಕೊಂಡು ಹೋಗಿ ದೇವಿಯ ಮುಂದೆ ಹೋಗಿ ಕೈಮುಗಿದು ಕ್ಷಮೆ ಕೇಳಿದ್ದಾರೆ. ಈ ವಾರ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಗಾಗಿ ಮನೆಯ ಕ್ಯಾಪ್ಟನ್ ಭವ್ಯಾ ಗೌಡ ಮತ್ತು ಚೈತ್ರಾ ಕುಂದಾಪುರ ಅವರ ನಾಯಕತ್ವದ ಎರಡು ಟೀಂ ಮಾಡಲಾಗಿದೆ. ಭವ್ಯಾ ಅವರ ಟೀಂ ನಲ್ಲಿ ರಜತ್, ತ್ರಿವಿಕ್ರಮ್, ಧನ್‌ರಾಜ್, ಮೋಕ್ಷಿತಾ ಸದಸ್ಯರು. ಮಂಜು, ಗೌತಮಿ, ಐಶ್ವರ್ಯಾ, ಹನುಮಂತ ಚೈತ್ರಾ ಟೀಂ ನಲ್ಲಿದ್ದಾರೆ.
undefined
bigg boss kannada 11 ಐ ಸೀರಿಯಸ್ಲಿ ಲವ್ ಯೂ ಭವ್ಯಾ ಎಂದ ತ್ರಿವಿಕ್ರಮ್, ಪ್ರೀತಿ ಹೇಳಿಕೊಂಡೇ ಬಿಟ್ಟ ಹೈದ!
ಟಾಸ್ಕ್ ವೇಳೆ ಪ್ರಾಪರ್ಟಿ ಡ್ಯಾಮೇಜ್ ಮಾಡಿದ ಮಂಜು:
ಚೈತ್ರಾ ಟೀಂನವರ ಸೇವೆ ಮಾಡುವ, ಕೇಳಿದ್ದನ್ನು ಮಾಡಿ ಕೊಡುವ ಟಾಸ್ಕ್ ಭವ್ಯಾ ಟೀಂಗೆ ನೀಡಲಾಗಿತ್ತು. ರೆಸಾರ್ಟ್ ಕಿಚನ್ ನಲ್ಲಿ ಏನೇನು ಮೆನು ಇದೆಯೋ ಅದನ್ನು ಮಾಡಬೇಕಿತ್ತು. ಆದರೆ ಚೈತ್ರಾ ಟೀಂನ ವರ್ತನೆಗಳು ವಿಚಿತ್ರವಾಗಿತ್ತು. ಆಹಾರವನ್ನು ವೇಸ್ಟ್ ಮಾಡಿದರು. ಜ್ಯೂಸ್ ಚೆಲ್ಲಿದರು. ಮಾನವೀಯತೆ ಬಿಟ್ಟು ಆಟವಾಡಿದರು. ಮಂಜು ಮತ್ತು ಚೈತ್ರಾ ಆಟವೂ ಅತಿರೇಕವಾಗಿತ್ತು. ಧನ್‌ರಾಜ್ ಜ್ಯೂಸ್ ತೆಗೆದುಕೊಂಡು ಬರುವಾಗ ಮಂಜು ಅದನ್ನು ಒಡೆದು ಹಾಕಿದ್ದು, ಭವ್ಯಾ ಮತ್ತು ತ್ರಿವಿಕ್ರಮ್ ಪ್ರಾಪರ್ಟಿ ಹಾಳು ಮಾಡುವಂತಿಲ್ಲ ಎಂದು ಕೋಪದಿಂದ ಮಂಜು ವಿರುದ್ಧ ಧ್ವನಿ ಎತ್ತಿದರು.
bigg boss kannada 11 ಹನುಮಂತು ಉತ್ತರಕ್ಕೆ ಸೈಲೆಂಟ್ ಆದ ಸುದೀಪ್! ಎಂಡ್‌ನಲ್ಲಿ ಕಿಚ್ಚನ ಕ್ಲಾಸ್
ಬಳಿಕ ಬಿಗ್‌ಬಾಸ್ ಬಟ್ಟೆ ಒಗೆಯುವ ಟಾಸ್ಕ್ ನೀಡಿದರು. ರಜತ್ ಮತ್ತು ತ್ರಿವಿಕ್ರಮ್ ಬಟ್ಟೆ ಒಗೆದರು. ಆದರೆ ಬಟ್ಟೆ ಒಗೆಯುವ ಟಾಸ್ಕ್ ಕಂಪ್ಲೀಟ್ ಮಾಡಲು ಚೈತ್ರಾ ಬಿಡಲಿಲ್ಲ. ಪ್ರತಿಯೊಂದಕ್ಕೂ ಚೈತ್ರಾ ಅಡ್ಡಗಾಲು ಹಾಕಿದ್ದು, ರಜತ್ ಪಿತ್ತ ಒಮ್ಮೆ ನೆತ್ತಿಗೇರಿತ್ತು. ಟಾಸ್ಕ್ ಮುಗಿದ ಬಳಿಕ ಚೈತ್ರಾದು ನರಿ ಬುದ್ದಿ ಎಂದು ರಜತ್ ತಂಡದ ಬಳಿ ಹೇಳಿಕೊಂಡರು.