ಕನ್ನಡಿಗರ ಕಣ್ಮಣಿ ಡಾ.ಬ್ರೋ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮ್ಯಾಚ್ ಅಪ್ಡೇಟ್ ನೀಡಲಿದ್ದಾರೆ.
ಅರ್ಚಕರ ಮಗನಾಗಿ ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗನೊಬ್ಬ ಇಂದು ಯೂಟ್ಯೂಬ್ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾನೆ ಎಂದರೆ ಸುಲಭದ ಮಾತಲ್ಲ. ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಹಲವು ಸಮಯದಲ್ಲಿ ಸಾವಿನ ಭಯವನ್ನೂ ಬಿಟ್ಟು ಸಾವಿನ ಬಾಯೊಳಗೇ ಹೋಗುವ ಧೈರ್ಯ ತೋರಿಸುತ್ತಾ ಹೋದ ಕಡೆಗಳಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾದವರೇ ಡಾ. ಬ್ರೋ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ನಮಸ್ಕಾರ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
ತಾಲಿಬಾನ್, ಪಾಕಿಸ್ತಾನದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ. ಮೊನ್ನೆಯಷ್ಟೇ ಸೋಮಾಲಿಯಾಕ್ಕೂ ಹೋಗಿ ಅಲ್ಲಿ ಕಡಲ್ಗಳ್ಳರನ್ನೂ ಮಾತನಾಡಿಸಿ ಬಂದಿದ್ದಾರೆ.
undefined
ಸೋಮಾಲಿಯಾ ಕಡಲ್ಗಳ್ಳರ ಮನೆಯಲ್ಲಿ ಡಾ.ಬ್ರೋ! ಇರೋದ್ ಒಂದೇ ಹೃದಯ, ಎಷ್ಟ್ ಅಂತ ಗೆಲ್ತಿಯಾ ದೇವ್ರು ಎಂದ ಫ್ಯಾನ್ಸ್
ಇದೀಗ ಇವರು ಬಿಗ್ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ ಇವರು ಮಾಡುತ್ತಿದ್ದ ಯುಟ್ಯೂಬ್ಗಳಲ್ಲಿನ ಕಮೆಂಟ್ಗಳಲ್ಲಿ ದಯವಿಟ್ಟು ಬಿಗ್ಬಾಸ್ ಮನೆಗೆ ಹೋಗಬೇಡಿ ಎನ್ನುವ ಕಮೆಂಟ್ಗಳೇ ತುಂಬಿ ಹೋಗಿದ್ದುದು ಅಚ್ಚರಿಯ ವಿಷಯ. ಆದರೂ ಇವರ ಫ್ಯಾನ್ಸ್ ಬಿಗ್ಬಾಸ್ ಮನೆಯೊಳಕ್ಕೆ ಹೋಗಿಬಿಟ್ಟರೆ ಎನ್ನುವ ಆತಂಕ ಹೊರಹಾಕುತ್ತಲೇ ಇದ್ದರು. ಇವರ ಕೋಟ್ಯಂತರ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಡಾ.ಬ್ರೋ ಬಿಗ್ಬಾಸ್ಗೆ ಹೋಗುತ್ತಿಲ್ಲ, ಬದಲಿಗೆ ಅವರು ಟಿ.ವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಸ್ಟಾರ್ಟ್ಸ್ಪೋರ್ಟ್ಸ್ ಕನ್ನಡ ಚಾನೆಲ್ನಲ್ಲಿ!
ಹೌದು. ಈ ಕುರಿತು ಖುದ್ದು ಚಾನೆಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಷಯ ತಿಳಿಸಿದೆ. ನಾಳೆ ಅಂದರೆ ಭಾನುವಾರ ಭಾರತ vs ಆಸ್ಟ್ರೇಲಿಯಾ ಮ್ಯಾಚ್ ನಡೆಯಲಿದೆ. ವಿಶ್ವಕಪ್ನ ಮೊದಲ ಭಾರತದ ಮ್ಯಾಚ್ ಇದು. ಚೆನ್ನೈನಲ್ಲಿ ಈ ಪಂದ್ಯ ನಡೆಯುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ಈ ಮ್ಯಾಚ್ನ ಪ್ರಸಾರದ ಹಕ್ಕನ್ನು ಹೊಂದಿದೆ. ಕನ್ನಡದಲ್ಲೂ ಕಾಮೆಂಟರಿ ಪ್ರಸಾರ ಕಾಣಲಿದೆ. ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಾ.ಬ್ರೋ. ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ಮಾಹಿತಿ ನೀಡಿದೆ. ‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ಯಾಪ್ಶನ್ ನೀಡಿದೆ.
ಇದರಲ್ಲಿ ಗಗನ್ ಅವರು, ‘ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಬಂದಿದ್ದೇನೆ. ಹೊಸ ಮಿಷನ್ಗೆ ಹೋಗ್ತಾ ಇದೀನಿ’ ಎಂದು ಹೇಳುವ ಮೂಲಕ, ಚೆನ್ನೈಗೆ ಭೇಟಿ ಕೊಟ್ಟಿದ್ದಾರೆ. ಸ್ಟೇಡಿಯಂ ಹೊರಗಡೆಯಿಂದ ಕೆಲವೊಂದು ವಿಡಿಯೋ ಮಾಡಿ ಅದನ್ನು ಶೇರ್ ಮಾಡಿದ್ದಾರೆ. ‘ನಾನು ಗಂಟುಮೂಟೆ ಹೊತ್ತುಕೊಂಡು ಎಲ್ಲೆಲ್ಲಿ ಮ್ಯಾಚ್ ನಡೆಯುತ್ತದೆಯೋ ಅಲ್ಲಿಗೆ ಹೋಗ್ತೀನಿ’ ಎಂದಿದ್ದಾರೆ ಗಗನ್.
ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್